Home
ಸುದ್ದಿಜಾಲ

ಫೈರ್-ಬೋಲ್ಟ್ ಫೈರ್‌ಪಾಡ್ಸ್ ಅರೆಸ್ ಲಾಂಚ್‌! 40ಗಂಟೆಯ ಬ್ಯಾಕಪ್‌, ಫೈರ್‌ಚಾರ್ಜ್ ತಂತ್ರಜ್ಞಾನ

ಫೈರ್-ಬೋಲ್ಟ್ (Fire Boltt) ಈಗಾಗಲೇ ಸಾಕಷ್ಟು ಸ್ಮಾರ್ಟ್‌ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಧರಿಸಬಹುದಾದ ಡಿವೈಸ್‌ಗಳ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿದೆ. ಈ ನಡುವೆ ಫೈರ್‌ಪಾಡ್ಸ್ ಅರೆಸ್ ಅನ್ನು ಲಾಂಚ್‌ ಮಾಡಿದೆ. ಕಳೆದ ತಿಂಗಳು ಫೈರ್ ಪಾಡ್ಸ್ ಔರಾ ಇಯರ್‌ಬಡ್ಸ್‌ ಅನ್ನು ಲಾಂಚ್ ಮಾಡಿದ್ದನ್ನು ಈಗ ನೆನಪಿಸಿಕೊಳ್ಳಬಹುದು.

ಹೌದು, ಫೈರ್-ಬೋಲ್ಟ್ ಸ್ಮಾರ್ಟ್‌ ಡಿವೈಸ್‌ಗಳಿಗೆ ವಿಶೇಷ ಬೇಡಿಕೆ ಇದೆ. ಈ ಸಾಲಿಗೆ ಈಗ ವಿಶೇಷವಾಗಿ ಫೈರ್‌ಪಾಡ್ಸ್ ಅರೆಸ್ ಇಯರ್‌ಬಡ್ಸ್‌ (Fire Boltt FirePods Ares) ಸೇರಿಕೊಳ್ಳಲಿದ್ದು, ಇದು ಫೈರ್‌ಪಾಡ್ಸ್ (FirePods) ಸರಣಿಯ ಸುಧಾರಿತ ಫೀಚರ್ಸ್‌ ಹೊಂದಿರುವ ಬಡ್ಸ್‌ ಆಗಿದೆ. ಹಾಗೆಯೇ ಇದು ಇಎನ್‌ಸಿ ಫೀಚರ್ಸ್‌, ಫೈರ್‌ಚಾರ್ಜ್ ತಂತ್ರಜ್ಞಾನದೊಂದಿಗೆ ಕಾಣಿಸಿಕೊಂಡಿವೆ. ಹಾಗಿದ್ರೆ, ಈ ಇಯರ್‌ಬಡ್ಸ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಫೈರ್-ಬೋಲ್ಟ್ ಫೈರ್‌ಪಾಡ್ಸ್ ಅರೆಸ್ ಲಾಂಚ್‌! 40ಗಂಟೆಯ ಬ್ಯಾಕಪ್‌...

ಬೋಲ್ಟ್ ಫೈರ್‌ಪಾಡ್ಸ್ ಅರೆಸ್ ಇಯರ್‌ಬಡ್ಸ್‌ ಫೀಚರ್ಸ್: ಈ ಇಯರ್‌ಬಡ್ಸ್‌ 13 ಎಂಎಂ ಡೈನಾಮಿಕ್ ಡ್ರೈವರ್‌ಗಳೊಂದಿಗೆ ಓಪನ್‌ ಫಿಟ್ ಇಯರ್‌ಬಡ್ಸ್‌ ಆಗಿವೆ. ಇದರೊಂದಿಗೆ ಮತ್ತು ಎನ್ವಿರಾನ್ಮೆಂಟಲ್ ನಾಯ್ಸ್‌ ಕ್ಯಾನ್ಸಲೇಷನ್ (ENC) ಸೌಲಭ್ಯದೊಂದಿಗೆ ಬಳಕೆದಾರರು ಫೋನ್‌ ಕರೆಯಲ್ಲಿರುವಾಗ ಅಥವಾ ಮೀಟಿಂಗ್‌ನಲ್ಲಿ ಇರುವಾಗ ಹೊಸ ಅನುಭವ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ 40ms ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಹೊಂದಿದ್ದು, ಯಾರೆಲ್ಲಾ ಗೇಮಿಂಗ್ ಪ್ರಿಯರಿದ್ದಾರೋ ಅವರು ಈ ಇಯರ್‌ಬಡ್ಸ್‌ ಮೂಲಕ ನೈಜ ಅನುಭವ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಸ್ಮಾರ್ಟ್ ಟಚ್ ಕಂಟ್ರೋಲ್‌ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಮ್ಯೂಸಿಕ್‌, ಕರೆ ಹಾಗೂ ಇನ್ನಿತರೆ ಕಾರ್ಯಚಟುವಟಿಕೆಯನ್ನು ಕಂಟ್ರೋಲ್‌ ಮಾಡಬಹುದಾಗಿದೆ.

ಬ್ಲೂಟೂತ್ ಆವೃತ್ತಿ 5.3 ಅನ್ನು ಹೊಂದಿದ್ದು, ಸೂಪರ್ ಸಿಂಕ್ ತಂತ್ರಜ್ಞಾನದ (Super Sync technology) ಮೂಲಕ ಸಂಬಂಧಿತ ಡಿವೈಸ್‌ ಅನ್ನು ಚಿಟಿಕೆ ಒಡೆಯುವುದರ ಒಳಗಾಗಿ ಕನೆಕ್ಟ್‌ ಮಾಡಬಹುದಾಗಿದೆ. ಇದರೊಂದಿಗೆ ಈ ಸ್ಮಾರ್ಟ್‌ ಇಯರ್‌ಬಡ್ಸ್‌ನಲ್ಲಿ ಎಐ ವಾಯ್ಸ್‌ ಅಸಿಸ್ಟೆಂಟ್‌ (AI Voice Assistant) ಆಯ್ಕೆಯನ್ನೂ ಸಹ ನೀಡಲಾಗಿದ್ದು, ಆಡಿಯೋ ಆಪ್‌ ಆಗಿರುವ ಬೋಲ್ಟ್ ಪ್ಲೇ ಆಪ್‌ ಮೂಲಕ ಉತ್ತಮ ಅನುಭವ ಪಡೆದುಕೊಳ್ಳಬಹುದು.

ಈ ಫೈರ್‌ಪಾಡ್ಸ್ ಅರೆಸ್‌ ಫೈರ್‌ಚಾರ್ಜ್ ತಂತ್ರಜ್ಞಾನದೊಂದಿಗೆ (Firecharge technology) ಕಾಣಿಸಿಕೊಂಡಿದ್ದು, 40 ಗಂಟೆಗಳ ಸಂಯೋಜಿತ ಪ್ಲೇಟೈಮ್ ಅನ್ನು ಪಡೆದುಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ. ಇದಕ್ಕಾಗಿ ಟೈಪ್-ಸಿ ಪೋರ್ಟ್ ಆಯ್ಕೆ ನೀಡಲಾಗಿದೆ. ವಿವರವಾಗಿ ತಿಳಿಸುವುದಾದರೆ 10 ನಿಮಿಷಗಳ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಟೈಮ್ ಅನ್ನು ಈ ವಾಚ್‌ ನೀಡಲಿದೆ. ಇನ್ನು ಈ ವಾಚ್‌ IPX4 ಸ್ಪ್ಲಾಶ್ ಪ್ರತಿರೋಧವನ್ನು ಹೊಂದಿದೆ.

ಬೋಲ್ಟ್ ಫೈರ್‌ಪಾಡ್ಸ್ ಅರೆಸ್ ಇಯರ್‌ಬಡ್ಸ್‌ ಬೆಲೆ ಹಾಗೂ ಲಭ್ಯತೆ: ಈ ಇಯರ್‌ಬಡ್ಸ್‌ ಗೆ ಲಾಂಚ್‌ನ ಕೊಡುಗೆ ಭಾಗವಾಗಿ 799ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಬಡ್ಸ್‌ ಅನ್ನು ಖರೀದಿ ಮಾಡಿದರೆ 1-ವರ್ಷದ ಖಾತರಿ ಸಹ ಸಿಗಲಿದೆ. ಈ ಬಡ್ಸ್‌ ಅನ್ನು ನೀವು ಫೈರ್-ಬೋಲ್ಟ್ ನ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದು. ಈ ಬಡ್ಸ್‌ನೀಲಿ, ಕಪ್ಪು, ಗುಲಾಬಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ ಇರಲಿದೆ.

ಫೈರ್-ಬೋಲ್ಟ್ ಫೈರ್ ಪಾಡ್ಸ್ ಔರಾ: ಈ ಸ್ಮಾರ್ಟ್‌ವಾಚ್‌ ಅನ್ನು ಕೆಲವೇ ವಾರಗಳ ಹಿಂದಷ್ಟೇ ಲಾಂಚ್‌ ಮಾಡಲಾಗಿದೆ. ಈ ಬಡ್ಸ್‌ 10mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಇನ್-ಇಯರ್ ಶೈಲಿ ಪಡೆದುಕೊಂಡಿದೆ. ಇದೆಲ್ಲಕ್ಕಿಂತ ಮಿಗಿಲಾಗಿ 3D ಸರೌಂಡ್ ಬೇಸ್‌ ಎಫೆಕ್ಟ್‌ಗಳೊಂದಿಗೆ ರಿಚ್ ಬೇಸ್‌ ಆಯ್ಕೆ ಪಡೆದುಕೊಂಡಿದ್ದು, ಸಿನಿಮಾ ಹಾಗೂ ಹಾಡುಗಳನ್ನು ಇಷ್ಟಪಡುವವರಿಗೆ ಅತ್ಯುತ್ತಮ ಆಯ್ಕೆ ಆಗಿದೆ.

ಫೈರ್-ಬೋಲ್ಟ್ ಫೈರ್‌ಪಾಡ್ಸ್ ಅರೆಸ್ ಲಾಂಚ್‌! 40ಗಂಟೆಯ ಬ್ಯಾಕಪ್‌...

ಇದರೊಂದಿಗೆ ಈ ಇಯರ್‌ಬಡ್ಸ್‌ ಕ್ವಾಡ್ ಮೈಕ್ ಎಐ-ಇಎನ್‌ಸಿಯೊಂದಿಗೆ ಕಾಣಿಸಿಕೊಂಡಿದ್ದು, ಕರೆಗಳ ಸಮಯದಲ್ಲಿ ಎನ್ವಿರಾನ್ಮೆಂಟಲ್ ನಾಯ್ಸ್‌ ಕ್ಯಾನ್ಸಲೇಷನ್ ಫೀಚರ್ಸ್‌ ಮೂಲಕ ನೀವು ಕರೆಯಲ್ಲಿ ಉತ್ತಮವಾಗಿ ತೊಡಗಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ 40 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದ್ದು, 10 ನಿಮಿಷಗಳ ಚಾರ್ಜ್ ನಲ್ಲಿ 100 ನಿಮಿಷಗಳ ಪ್ಲೇಟೈಮ್ ನೀಡಲಿದೆ ಎಂದು ಕಂಪೆನಿ ಹೇಳಿದೆ. ಇದರ ಬೆಲೆ 999 ರೂ.ಗಳಾಗಿದೆ.

Best Mobiles in India

English summary
Fire Boltt FirePods Ares Earbuds have been launched. It comes with ENC features, FireCharge technology.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+