Home
ಸುದ್ದಿಜಾಲ

ಭಾರತದಲ್ಲಿ ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್, ಡಾಗರ್ ಸ್ಮಾರ್ಟ್‌‌ವಾಚ್‌ ಲಾಂಚ್‌; ಬೆಲೆ ಎಷ್ಟು?

ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿಗೆ ಆಕರ್ಷಿತವಾಗುತ್ತಿವೆ. ಇತರೆ ವಾಚ್‌ಗಳಿಗಿಂತ ಈ ವಾಚ್‌ಗಳು ವಿಶೇಷ ಆಕರ್ಷಕ ಶೈಲಿ ಹಾಗೂ ಉತ್ತಮ ಕಾರ್ಯಕ್ಷಮತೆ ಹೊಂದಿರುವುದರಿಂದ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದು, ಇದರ ನಡುವೆ ಫೈರ್‌ಬೋಲ್ಟ್ ಹೊಸ ಎರಡು ಸ್ಮಾರ್ಟ್‌ಗಳನ್ನು ಅನಾವರಣ ಮಾಡಿದೆ. ಈ ವಾಚ್‌ ಗಳು ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಪಡೆದುಕೊಂಡಿವೆ.

ಭಾರತದಲ್ಲಿ ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್, ಡಾಗರ್ ಸ್ಮಾರ್ಟ್‌‌ವಾಚ್‌ ಲಾಂಚ್‌

ಹೌದು, ಭಾರತದಲ್ಲಿ ಫೈರ್‌ಬೋಲ್ಟ್ ಸಂಸ್ಥೆಯು ಸ್ಟಾರ್‌ಡಸ್ಟ್ ಹಾಗೂ ಡಾಗರ್ (Fire-Boltt Stardust and Dagger) ಎಂಬ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಲಾಗಿದ್ದು, ಈ ವಾಚ್‌ಗಳು ಭಿನ್ನ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ಗ‌ಳಲ್ಲಿ ಯಾವೆಲ್ಲಾ ಫೀಚರ್ಸ್‌ಗಳು ವಿಶೇಷ ಎನಿಸಿವೆ, ಬ್ಯಾಟರಿ ಬ್ಯಾಕಪ್‌ ಎಷ್ಟು? ಹಾಗೂ ಭಾರತದಲ್ಲಿ ಈ ವಾಚ್‌ಗಳ ಬೆಲೆ ಎಷ್ಟು?, ಇವುಗಳನ್ನು ಖರೀದಿಸುವುದು ಎಲ್ಲಿ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್ ಹಾಗೂ ಡಾಗರ್ ವಿನ್ಯಾಸ

ಫೈರ್ ಬೋಲ್ಟ್ ತನ್ನ ಸ್ಮಾರ್ಟ್‌ವಾಚ್‌ ವಿಭಾಗದಲ್ಲಿನ ಪೋರ್ಟ್‌ಫೋಲಿಯೊವನ್ನು ಭಾರತದಲ್ಲಿ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವ ಮೂಲಕ ವಿಸ್ತರಿಸಿದೆ. ಅದರಲ್ಲಿ ಫೈರ್ ಬೋಲ್ಟ್ ಸ್ಟಾರ್‌ಡಸ್ಟ್ ಆಯತಾಕಾರದ ವಿನ್ಯಾಸದೊಂದಿಗೆ 1.95 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 320x385 ಪಿಕ್ಸೆಲ್‌ಗಳ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಡಾಗರ್ 1.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯೊಂದಿಗೆ ದುಂಡಾದ ವಿನ್ಯಾಸವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್, ಡಾಗರ್ ಸ್ಮಾರ್ಟ್‌‌ವಾಚ್‌ ಲಾಂಚ್‌

ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್, ಡಾಗರ್ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌

ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್ ಬ್ಲೂಟೂತ್ ಕರೆಯನ್ನು ಬೆಂಬಲಿಸಲಿದ್ದು, 108 ಸ್ಪೋರ್ಟ್ಸ್‌ ಮೋಡ್‌ಗಳೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ ಆರೋಗ್ಯ ಫೀಚರ್ಸ್‌ಗಳಾದ SpO2 ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು ಇನ್ನೂ ಹಲವಾರು ಅನೇಕ ಆರೋಗ್ಯ ಸಂಬಂಧಿ ವಿಷಯಗಳನ್ನು ಟ್ರ್ಯಾಕ್‌ ಮಾಡಲಿದೆ. ಜೊತೆಗೆ ಅಲಾರಾಂ ಟೈಮರ್, ಸ್ಟಾಪ್‌ವಾಚ್ ಮತ್ತು ಹೆಚ್ಚಿನ ಆಪ್‌ಗಳ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.

ಫೈರ್-ಬೋಲ್ಟ್ ಡಾಗರ್ ಸ್ಮಾರ್ಟ್‌ವಾಚ್‌ ಸಹ ಬ್ಲೂಟೂತ್ ಕಾಲ್‌ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಕ್ವಿಕ್‌ ಡಯಲ್ ಪ್ಯಾಡ್, ಕಾಂಟಾಕ್ಟ್‌ ಸಿಂಕ್ ಮತ್ತು ಕರೆ ಇತಿಹಾಸವನ್ನು ವೀಕ್ಷಣೆ ಮಾಡುವ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗೆಯೇ SpO2 ಮಾನಿಟರ್, ಹೃದಯ ಬಡಿತ ಮಾನಿಟರ್, ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ಇನ್ನೂ ಹಲವಾರು ಆರೋಗ್ಯ ಸಂಬಂಧಿ ವಿಷಯಗಳ ಮೇಲೆ ಇದು ಕೇಂದ್ರೀಕರಿಸಿದೆ.

ಈ ಎರಡೂ ಸ್ಮಾರ್ಟ್‌ವಾಚ್‌ಗಳು ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್, ಹವಾಮಾನ ನವೀಕರಣ ಮತ್ತು ಇನ್ನೂ ಹೆಚ್ಚಿನ ಫೀಚರ್ಸ್‌ಗಳನ್ನು ಹೊಂದಿರುವುದು ವಿಶೇಷ ಎನಿಸಿದೆ.

ಭಾರತದಲ್ಲಿ ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್, ಡಾಗರ್ ಸ್ಮಾರ್ಟ್‌‌ವಾಚ್‌ ಲಾಂಚ್‌

ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್, ಡಾಗರ್‌ ವಾಚ್‌ಗಳ ಬ್ಯಾಟರಿ ಸಾಮರ್ಥ್ಯ

ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್‌ಅನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ ಐದು ದಿನಗಳ ಕಾಲ ಬಳಕೆ ಮಾಡಬಹುದಾಗಿದೆ. ಹಾಗೆಯೇ ಡಾಗರ್‌ ಸ್ಮಾರ್ಟ್‌ವಾಚ್‌ 400mAH ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಈ ಮೂಲಕ ಒಂದು ಪೂರ್ಣ ಚಾರ್ಜ್‌ನಲ್ಲಿ 15 ದಿನಗಳ ಕಾಲ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ 30 ದಿನಗಳ ಸ್ಟ್ಯಾಂಡ್‌ಬೈ ಟೈಮ್‌ ನೀಡಲಿದ್ದು, ವಿಶೇಷ ಎನಿಸಿದೆ.

ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್, ಡಾಗರ್‌ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ

ಫೈರ್‌ ಬೋಲ್ಟ್ ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್‌ಗೆ 2,499 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಡಾಗರ್ ಸ್ಮಾರ್ಟ್‌ವಾಚ್‌ಗೆ 3,499 ರೂ. ಗಳ ಬೆಲೆ ಇದೆ. ಇನ್ನು ಫೈರ್‌ ಬೋಲ್ಟ್ ಡಾಗರ್ ಬೂದು, ಕಪ್ಪು ಮತ್ತು ಹಸಿರಿನ ಮೂರು ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಂಡರೆ, ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್‌ ಬೂದು, ಕಪ್ಪು ಮತ್ತು ಗುಲಾಬಿ ಬಣ್ಣದ ಮೂರು ಆಯ್ಕೆಗಳಲ್ಲಿ ಕಾಣಿಸಿಕೊಂಡಿದೆ.

ಇದರೊಂದಿಗೆ ಈ ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್‌ ಅನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಬಹುದಾಗಿದ್ದು, ಡಾಗರ್ ಸ್ಮಾರ್ಟ್‌ವಾಚ್‌ ಅನ್ನು ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ ಫೈರ್‌ಬೋಲ್ಟ್‌ನ ಅಧಿಕೃತ ಸೈಟ್‌ ಮೂಲಕವೂ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.

Best Mobiles in India

English summary
fire-Boltt has expanded its wearable portfolio with the launch of Stardust and Dagger smartwatches in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+