Home
ಸುದ್ದಿಜಾಲ

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ ವಾಚ್‌ಗೆ ಬರೋಬ್ಬರಿ 83% ಡಿಸ್ಕೌಂಟ್!

ಸ್ಮಾರ್ಟ್‌ವಾಚ್‌ಗಳು ಇಂದು ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಭಾವ ಬೀರಿವೆ. ಅದರಲ್ಲೂ ಸುಧಾರಿತ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ಗಳು ಒಂದಕ್ಕೊಂದು ಭಿನ್ನವಾಗಿದ್ದು, ಬಳಕೆದಾರರಿಗೆ ಸಾಕಷ್ಟು ಅನುಕೂಲ ನೀಡುತ್ತಿವೆ. ಹಾಗೆಯೇ ಸ್ಮಾರ್ಟ್‌ಫೋನ್‌ ನಷ್ಟೇ ಸರಿಸಮಾನವಾಗಿ ಸೌಲಭ್ಯ ನೀಡುತ್ತಿವೆ.

ಹೌದು, ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ನೀವು ಕೇವಲ 1000 ರೂ.ಗಳಿಂದ ಲಕ್ಷ ಬೆಲೆ ಬಾಳುವ ಸ್ಮಾರ್ಟ್‌ವಾಚ್‌ಗಳನ್ನು ಖರೀದಿ ಮಾಡಬಹುದು. ಆದರೆ, ಎಲ್ಲರಿಗೂ ಇದು ಸಾಧ್ಯವಿಲ್ಲ. ಅದರಲ್ಲೂ ಕೆಲವರು ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮವಾದ ವಾಚ್‌ ಖರೀದಿ ಮಾಡಲು ಆಫರ್ ಗೋಸ್ಕರ ಕಾಯುತ್ತಿರುತ್ತಾರೆ. ಆ ಕಾಲ ಇಂದು ಕೂಡಿ ಬಂದಿದೆ. ಯಾಕೆಂದರೆ ಈ ಫೈರ್ ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ (Fire-Boltt Ninja Calling Pro Plus) ಗೆ 83% ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ.

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ ವಾಚ್‌ಗೆ ಬರೋಬ್ಬರಿ 83% ಡಿಸ್ಕೌಂಟ್!

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ ಡಿಸ್‌ಪ್ಲೇ ವಿವರ : ಈ ಅತ್ಯುತ್ತಮ ಸ್ಮಾರ್ಟ್‌ವಾಚ್‌ 83 ಇಂಚಿನ ಸ್ಕ್ವೇರ್ ಆಕಾರದ IPS 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಹೊಂದಿದ್ದು, ಇದು 240 x 280 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಇದರೊಂದಿಗೆ ಸ್ಮಾರ್ಟ್ ವಾಚ್‌ನ ಮಲ್ಟಿ ಟಚ್ ಡಿಸ್‌ಪ್ಲೇ 217 ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದುಕೊಂಡಿದೆ. ಹಾಗೆಯೇ ಇದು 100+ ವಾಚ್‌ ಫೇಸ್‌ಗಳನ್ನು ಹೊಂದಿದೆ.

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ ಫೀಚರ್ಸ್: 120 ಸ್ಪೋರ್ಟ್ಸ್ ಮೋಡ್‌ಗಳೊಂದಿಗೆ ಈ ಸ್ಮಾರ್ಟ್‌ವಾಚ್‌ ಪೆಡೋಮೀಟರ್, ಹೃದಯ ಬಡಿತ ಮಾನಿಟರ್, SpO2 (ರಕ್ತ ಆಮ್ಲಜನಕ) ಮಾನಿಟರ್, ಕ್ಯಾಲೋರಿ ಕೌಂಟರ್, ಸ್ಟೆಪ್ ಕೌಂಟರ್ ಹಾಗೂ ಸ್ಲೀಪ್ ಮಾನಿಟರ್ ಸೇರಿದಂತೆ ವಿವಿಧ ಸೆನ್ಸರ್‌ ಆಯ್ಕೆಗಳನ್ನು ಇದು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ ಹಾಗೂ ಆಪಲ್‌ ಫೋನ್‌ಗಳಿಗೆ ಬೆಂಬಲ ನೀಡುತ್ತದೆ.

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ ವಾಚ್‌ಗೆ ಬರೋಬ್ಬರಿ 83% ಡಿಸ್ಕೌಂಟ್!

ಹಾಗೆಯೇ ಈ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್‌ವಾಚ್ ಮೂಲಕ ಪ್ರಯಾಣದಲ್ಲಿರುವಾಗ ಕರೆಗಳನ್ನು ಮಾಡಬಹುದು ಹಾಗೂ ಸ್ವೀಕಾರ ಮಾಡಬಹುದು. ಇದರೊಂದಿಗೆ ಆಪ್‌ ಸಂಬಂಧಿ ನೋಟಿಫಿಕೇಶನ್‌ ಮತ್ತು ಜ್ಞಾಪನೆಗಳು ಈ ವಾಚ್‌ ಮೂಲಕ ಪಡೆದುಕೊಳ್ಳಬಹುದು. ಹಾಗೆಯೇ ರಿಮೋಟ್ ಮೂಲಕ ಕ್ಯಾಮೆರಾವನ್ನೂ ಸಹ ಕಂಟ್ರೋಲ್ ಮಾಡಬಹುದಾಗಿದ್ದು, ಇದರೊಂದಿಗೆ ಮ್ಯೂಸಿಕ್‌ ಅನ್ನೂ ನಿಯಂತ್ರಿಸಬಹುದಾಗಿದೆ.

ಈ ವಾಚ್‌ ಲಿಥಿಯಂ ಅಯಾನ್ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 120 ನಿಮಿಷಗಳವರೆಗೆ ಚಾರ್ಜಿಂಗ್‌ ಮಾಡಿದರೆ ನೀವು ಬರೋಬ್ಬರಿ 5 ದಿನಗಳವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮೆಟಾಲಿಕ್ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಯುಎಸ್‌ಬಿ ಕೇಬಲ್ -2 ಅನ್ನು ಹೊಂದಿದೆ. ಜೊತೆಗೆ IP67 ವಾಟರ್ ರೆಸಿಸ್ಟೆಂಟ್‌ರೇಟ್‌ ಹೊಂದಿದ್ದು, ಈ ಮೂಲಕ ಎಲ್ಲಾ ಸಮಯದಲ್ಲೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಈ ವಾಚ್‌ನ ಆಫರ್‌ ಬೆಲೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ್ ಸ್ಮಾರ್ಟ್ ವಾಚ್‌ ಬೆಲೆ: ಈ ಸ್ಮಾರ್ಟ್‌ವಾಚ್‌ ಅತ್ಯಂತ ಹೆಚ್ಚು ಬೇಡಿಕೆ ಇರುವ ಹಾಗೂ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ ಆಗಿದ್ದು, 9,999 ರೂ. ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ಈ ಆಫರ್‌ ಮೂಲಕ ನೀವು ಕೇವಲ 1,699 ರೂ. ಗಳಿಗೆ ಈ ವಾಚ್‌ ಖರೀದಿ ಮಾಡಬಹುದಾಗಿದೆ. ಅಂದರೆ ಈ ವಾಚ್‌ ಮೇಲೆ ಬರೋಬ್ಬರಿ 83% ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ ವಾಚ್‌ಗೆ ಬರೋಬ್ಬರಿ 83% ಡಿಸ್ಕೌಂಟ್!

ಎಲ್ಲಾ ಸರಿ ಈ ವಾಚ್‌ ಅನ್ನು ಇಷ್ಟು ಕಡಿಮೆ ದರದಲ್ಲಿ ಖರೀದಿ ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮನೆ ಮಾಡಿರುತ್ತದೆ. ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಇದು ಲಭ್ಯವಿದ್ದು, ಈ ಮೂಲಕ ಕೊಂಡುಕೊಳ್ಳಬಹುದಾಗಿದೆ. ಅದರಂತೆ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೂಲಕವೂ ಇನ್ನೂ ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಳ್ಳಬಹುದು.

Best Mobiles in India

English summary
It's always a good time to buy a smartwatch at a cheap price. Because 83% discount has been announced on Fire Bolt Ninja Calling Pro Plus Watch on Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+