Home
ಸುದ್ದಿಜಾಲ

1000ರೂ. ಒಳಗೆ ಸ್ಮಾರ್ಟ್‌ವಾಚ್‌ ಖರೀದಿಸಲು ಇದು ಅತ್ಯುತ್ತಮ ಆಫರ್‌!

ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಗಳ ಆಕರ್ಷಕ ರಿಯಾಯಿತಿ ಮಾರಾಟ ಮೇಳಗಳನ್ನು ಘೋಷಿಸಿವೆ. ಆ ಪೈಕಿ ಜನಪ್ರು ಅಮೆಜಾನ್ ತಾಣವು ತನ್ನ ಪ್ಲಾಟ್‌ಫಾರ್ಮ್‌ ನಲ್ಲಿ ಪ್ಲಾಟ್‌ಫಾರ್ಮ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಅನ್ನು ಆಯೋಜಿಸಿದ್ದು, ಆನ್‌ಲೈನ್‌ ಶಾಪಿಂಗ್ ಪ್ರಿಯರು ಹುಬ್ಬೇರಿಸುವಂತಹ ಡಿಸ್ಕೌಂಟ್‌ ತಿಳಿಸಿದೆ. ಬರೀ ಫೋನ್‌ಗಳಿಗಷ್ಟೇ ಅಲ್ಲ, ಬದಲಿಗೆ ಸ್ಮಾರ್ಟ್ ವಾಚ್‌ಗಳಿಗೂ ಸಖತ್ ರಿಯಾಯಿತಿ ಲಭ್ಯ ಮಾಡಿದೆ.

ಹೌದು, ಅಮೆಜಾನ್‌ ಸಂಸ್ಥೆಯ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ನಲ್ಲಿ ಫೈರ್‌ಬೋಲ್ಟ್‌ ಕಂಪನಿಯ ಫೈರ್‌ಬೋಲ್ಟ್‌ ನಿಂಜಾ ಫಿಟ್‌ ಸ್ಮಾರ್ಟ್‌ವಾಚ್‌ ಬರೋಬ್ಬರಿ ಶೇ. 88% ರಷ್ಟು ಡಿಸ್ಕೌಂಟ್‌ ಪಡೆದಿದೆ. 7,999ರೂ. ಫೈರ್‌ಬೋಲ್ಟ್‌ ನಿಂಜಾ ಫಿಟ್‌ ಸ್ಮಾರ್ಟ್‌ವಾಚ್‌ ಅನ್ನು ಗ್ರಾಹಕರು ಆಫರ್‌ನಲ್ಲಿ 998ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಇತರೆ ಕೊಡುಗೆಗಳು ಸಹ ಲಭ್ಯ ಇವೆ.

1000ರೂ. ಒಳಗೆ ಸ್ಮಾರ್ಟ್‌ವಾಚ್‌ ಖರೀದಿಸಲು ಇದು ಅತ್ಯುತ್ತಮ ಆಫರ್‌!

ಅಂದಹಾಗೆ ಫೈರ್‌ಬೋಲ್ಟ್‌ ನಿಂಜಾ ಫಿಟ್‌ ಸ್ಮಾರ್ಟ್‌ವಾಚ್‌ 123 ಸ್ಪೋರ್ಟ್ಸ್‌ ಮೋಡ್‌ಗಳ ಆಯ್ಕೆ ಪಡೆದಿದ್ದು, ರೆಡ್, ಬ್ಲೂ, ಗ್ರೀನ್‌, ಗ್ರೇ, ಬ್ಲ್ಯಾಕ್‌, ಬಿಂಜ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಅಲ್ಟ್ರಾ ತೀನ್ ರಚನೆ ಪಡೆದಿದ್ದು, ತುಂಬಾ ಹಗುರವಾಗಿದೆ.

ಹಾರ್ಟ್‌ ರೇಟ್‌ ಟ್ರ್ಯಾಕಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಸ್ಮಾರ್ಟ್‌ ಎಸ್‌ಎಮ್‌ಎಸ್‌ ಅಲರ್ಟ್‌ ಆಯ್ಕೆಯನ್ನು ಒಳಗೊಂಡಿದ್ದು, ಗ್ರಾಹಕರನ್ನು ಮೋಡಿ ಮಾಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ ವಾಚ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.


ವಿಶಾಲ ಹೆಚ್‌ಡಿ ಮಾದರಿಯ ಫೀಚರ್ಸ್‌

ಫೈರ್‌ಬೋಲ್ಟ್‌ ಕಂಪನಿಯ ನಿಂಜಾ ಫಿಟ್‌ ವಾಚ್ 1.69 ಇಂಚಿನ ಫುಲ್‌ ಟಚ್‌ ಹೆಚ್‌ಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಸ್ಕ್ರೀನ್‌ ಆಕರ್ಷಕ ಲುಕ್‌ನಲ್ಲಿದೆ. ಡಿಸ್‌ಪ್ಲೇಯು 240 x 280 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದ್ದು, ಈ ಡಿಸ್‌ಪ್ಲೇ ಯ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 218 ppi ಆಗಿದೆ.

ಈ ಸ್ಮಾರ್ಟ್‌ ವಾಚ್‌ ಲಿಥೀಯಂ ಬ್ಯಾಟರಿ ಪಡೆದಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡುವ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನು ಸ್ಟ್ಯಾಂಡ್‌ಬೈ ಟೈಮ್‌ 1.31 ತಿಂಗಳು ಆಗಿದ್ದು, ಇದಲ್ಲದೇ ಈ ಸ್ಮಾರ್ಟ್‌ ವಾಚ್‌ ಬ್ಲೂಟೂತ್ ಕರೆ ಮಾಡುವ ಸೌಲಭ್ಯ ಸಹ ಒಳಗೊಂಡಿದೆ. ಈ ಸಾಧನವು ಆಂಡ್ರಾಯ್ಡ್‌ ಮತ್ತು ಐಓಎಸ್‌ ಗೂ ಸಪೋರ್ಟ್‌ ಪಡೆದಿದೆ.

ವಾಚ್‌ನ ಕೆಲವು ಫೀಚರ್ಸ್‌ಗಳು ಹೀಗಿವೆ

ಫೈರ್‌ಬೋಲ್ಟ್‌ ಕಂಪನಿಯ ನಿಂಜಾ ಫಿಟ್‌ ವಾಚ್‌ ಹಾರ್ಟ್‌ ರೇಟ್‌ ಮಾನಿಟರಿಂಗ್, SpO2 ಮಾನಿಟರ್, ಕ್ಯಾಲೋರಿ ಕೌಂಟ್‌, ಸ್ಟೆಪ್‌ ಕೌಂಟ್‌, ಸ್ಲಿಪ್‌ ಮಾನಿಟರ್ ನಂತಹ ಕೆಲವು ಅಗತ್ಯ ಸೇವೆ ಹಾಗೂ ಆಯ್ಕೆಗಳ ಕೂಡಾ ಇದು ಪಡೆದಿದೆ. ಇದರ ಜೊತೆಗೆ ಅಲಾರಾಂ ಕ್ಲಾಕ್, ಸ್ಟಾಪ್‌ವಾಚ್‌, ಟೈಮರ್‌ ಹಾಗೂ ರಿಮೈಂಡರ್‌ ಸೌಲಭ್ಯಗಳು ಇವೆ.

ಹಾಗೆಯೇ ಈ ವಾಚ್‌ ತೆಳುವಾದ ರಚನೆ ಹೊಂದಿದ್ದು, ಸ್ಟೈಲಿಶ್‌ ಲುಕ್‌ ಪಡೆದಿದೆ. ಅಲ್ಲದೇ ಇದು ವಾಚ್ ಫೇಸ್‌ಗಳಲ್ಲಿ ಅನಿಯಮಿತವಾಗಿ ಕಸ್ಟಮೈಸ್ ಹೊಂದಿದ್ದು ಮತ್ತು ಆಪ್‌ ಮೂಲಕ ಬಹು ವಾಚ್ ಫೇಸ್‌ಗಳು, ಇನ್‌ಬಿಲ್ಟ್‌ ಸೋಶೀಯಲ್ ಮೀಡಿಯಾ ನೋಟಿಫೀಕೇಶನ್ ಆಯ್ಕೆ ಇದೆ. ಸುಮಾರು 100 ಕ್ಕೂ ಅಧಿಕ ವಾಚ್‌ಫೇಸ್‌ಗಳ ಆಯ್ಕೆ ಬಳಕೆದಾರರಿಗೆ ಲಭ್ಯ. ಸ್ಮಾರ್ಟ್‌ವಾಚ್‌ ಮೂಲಕ ಫೋನಿನ ಕ್ಯಾಮೆರಾ, ಮ್ಯೂಸಿಕ್‌ ಕಂಟ್ರೋಲ್‌ ಆಯ್ಕೆಗಳು ಕೂಡಾ ಇವೆ. ವಾಕ್‌, ಡ್ರಿಂಕ್‌ ವಾಟರ್‌ ನಂತಹ ರಿಮೈಂಡರ್‌ಗಳ ಆಯ್ಕೆ ಇದೆ.

Best Mobiles in India

English summary
Fire Boltt Ninja Fit Smartwatch huge discount on amazon sale. check offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+