ಕಡಿಮೆ ಬೆಲೆಗೆ ಸ್ಮಾರ್ಟ್‌ವಾಚ್ ಬೇಕಿದ್ರೆ, ಈ ಆಫರ್ ಒಮ್ಮೆ ಗಮನಿಸಿ!
ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್ ವಾಚ್ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಪಡೆದಿವೆ. ಅದರಲ್ಲಿಯೂ ಅಗ್ಗದ ದರದ ವಾಚ್‌ಗಳು ಹೆಚ್ಚಿನ ಬೇಡಿಕೆಯಲ್ಲಿ ಇವೆ. ಆ ಪೈಕಿ ಸದ್ಯ ಫೈರ್‌ಬೋಲ್ಟ್ ಸಂಸ್ಥೆಯಫೈರ್‌ಬೋಲ್ಟ್ ನಿಂಜಾ ಫಿಟ್ (Fire-Boltt Ninja Fit smartwatch) ಸ್ಮಾರ್ಟ್ ವಾಚ್ ಫೈರ್ ಬೋಲ್ಟ್ ವೆಬ್‌ಸೈಟ್‌ನಲ್ಲಿ ಭಾರೀ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಹುಬ್ಬೇರಿಸುವಂತೆ ಆಗಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಫೈರ್‌ಬೋಲ್ಟ್ ನಿಂಜಾ ಫಿಟ್ (Fire-Boltt Ninja Fit) ಸ್ಮಾರ್ಟ್ ವಾಚ್ ಫೈರ್ ಬೋಲ್ಟ್ ವೆಬ್‌ಸೈಟ್‌ನಲ್ಲಿ ಭಾರೀ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಆಫರ್‌ನಲ್ಲಿ ಈ ಸ್ಮಾರ್ಟ್ ವಾಚ್ ಅನ್ನು ಗ್ರಾಹಕರು 1099 ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಆದರೆ ಲಭ್ಯತೆ ನೋಡುವುದಾದರೇ, ಸದ್ಯ ನೋಟಿಫೈ ಮಿ ಇದೆ.

ಇದು ಹಾರ್ಟ್ ರೇಟ್ ಟ್ರ್ಯಾಕಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಇದರ ಜೊತೆಗೆ ಸ್ಮಾರ್ಟ್ ಎಸ್‌ಎಮ್‌ಎಸ್ ಅಲರ್ಟ್ ಆಯ್ಕೆ ಯನ್ನು ಒಳಗೊಂಡಿದ್ದು, ಗ್ರಾಹಕರನ್ನು ಮೋಡಿ ಮಾಡಿದೆ. ಇನ್ನು ಫೈರ್‌ಬೋಲ್ಟ್ ನಿಂಜಾ ಫಿಟ್ ಸ್ಮಾರ್ಟ್ ವಾಚ್ 123 ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಹೊಂದಿದ್ದು, ರೆಡ್, ಬ್ಲೂ, ಗ್ರೀನ್, ಗ್ರೇ, ಬ್ಲ್ಯಾಕ್, ಬಿಂಜ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತದೆ. ಹಾಗಾದರೇ ಫೈರ್‌ಬೋಲ್ಟ್ ನಿಂಜಾ ಫಿಟ್ ವಾಚ್‌ನ ಇತರೆ ಫೀಚರ್ಸ್ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸ್ಮಾರ್ಟ್‌ವಾಚ್ ಫೀಚರ್ಸ್ ಹೀಗಿವೆ
ಫೈರ್‌ಬೋಲ್ಟ್ ಸಂಸ್ಥೆಯ ನಿಂಜಾ ಫಿಟ್ ವಾಚ್ 1.69 ಇಂಚಿನ ಫುಲ್ ಟಚ್ ಹೆಚ್‌ಡಿ ಡಿಸ್‌ಪ್ಲೇ ಅನ್ನು ಹೊಂದಿದ್ದು, ಸ್ಕ್ರೀನ್ ಆಕರ್ಷಕ ಲುಕ್‌ನಲ್ಲಿ ಇದೆ. ಇದರ ಡಿಸ್‌ಪ್ಲೇಯು 240 x 280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದ್ದು, ಈ ಡಿಸ್‌ಪ್ಲೇ ಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 218 ppi ಪಡೆದುಕೊಂಡಿದೆ.
ಫೈರ್‌ಬೋಲ್ಟ್ ಸಂಸ್ಥೆಯ ಈ ವಾಚ್ ಲಿಥೀಯಂ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್ ನೀಡುವ ಸಾಮರ್ಥ್ಯ ಒಳಗೊಂಡಿದೆ. ಇನ್ನು ಸ್ಟ್ಯಾಂಡ್‌ಬೈ ಟೈಮ್ 1.31 ತಿಂಗಳು ಆಗಿದ್ದು, ಇದಲ್ಲದೇ ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ಸೌಲಭ್ಯ ಸಹ ಒಳಗೊಂಡಿದೆ. ಈ ಡಿವೈಸ್ ಆಂಡ್ರಾಯ್ಡ್ ಮತ್ತು ಐಓಎಸ್ ಗೂ ಬೆಂಬಲ ಪಡೆದಿದೆ.
ಫೈರ್‌ಬೋಲ್ಟ್ ಸಂಸ್ಥೆಯ ನಿಂಜಾ ಫಿಟ್ ವಾಚ್ ಹಾರ್ಟ್ ರೇಟ್ ಮಾನಿಟರಿಂಗ್, SpO2 ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್, ಸ್ಲಿಪ್ ಮಾನಿಟರ್ ನಂತಹ ಕೆಲವು ಅಗತ್ಯ ಸೇವೆ ಹಾಗೂ ಆಯ್ಕೆಗಳ ಸಹ ಇದು ಪಡೆದಿದೆ. ಇದರ ಜೊತೆಗೆ ಅಲಾರಾಂ ಕ್ಲಾಕ್, ಸ್ಟಾಪ್‌ವಾಚ್, ಟೈಮರ್ ಹಾಗೂ ರಿಮೈಂಡರ್ ಸೌಲಭ್ಯಗಳು ಇವೆ. ಅಲ್ಲದೇ ಈ ವಾಚ್ ತೆಳುವಾದ ರಚನೆ ಪಡೆದುಕೊಂಡಿದೆ.
ಹಾಗೆಯೇ ಫೈರ್‌ಬೋಲ್ಟ್ ಸಂಸ್ಥೆಯ ನಿಂಜಾ ಫಿಟ್ ಸ್ಮಾರ್ಟ್ ವಾಚ್ ಫೇಸ್‌ಗಳಲ್ಲಿ ಅನಿಯಮಿತ ವಾಗಿ ಕಸ್ಟಮೈಸ್ ಪಡೆದಿದ್ದು ಮತ್ತು ಆಪ್ ಮೂಲಕ ಬಹು ವಾಚ್ ಫೇಸ್‌ಗಳು, ಇನ್‌ಬಿಲ್ಟ್ ಸೋಶೀಯಲ್ ಮೀಡಿಯಾ ನೋಟಿಫೀಕೇಶನ್ ಆಯ್ಕೆ ಇದೆ. ಸುಮಾರು 100 ಕ್ಕೂ ಅಧಿಕ ವಾಚ್‌ಫೇಸ್‌ಗಳ ಆಯ್ಕೆ ಬಳಕೆದಾರರಿಗೆ ಲಭ್ಯ. ಸ್ಮಾರ್ಟ್‌ವಾಚ್ ಮೂಲಕ ಫೋನಿನ ಕ್ಯಾಮೆರಾ, ಮ್ಯೂಸಿಕ್ ಕಂಟ್ರೋಲ್ ಆಯ್ಕೆಗಳು ಕೂಡಾ ಇವೆ. ವಾಕ್, ಡ್ರಿಂಕ್ ವಾಟರ್ ನಂತಹ ರಿಮೈಂಡರ್‌ಗಳ ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications