ಫೈರ್ ಬೋಲ್ಟ್ ಫೀನಿಕ್ಸ್ ಪ್ರೊ ಸ್ಮಾರ್ಟ್‌ವಾಚ್‌ಗೆ 86% ಡಿಸ್ಕೌಂಟ್: ಬೊಂಬಾಟ್ ಫೀಚರ್ಸ್ ಆಯ್ಕೆ!
ಸ್ಮಾರ್ಟ್‌ವಾಚ್ ವಿಭಾಗದಲ್ಲಿ ತೀವ್ರಗತಿಯ ಬೆಳವಣಿಗೆ ಕಂಡುಬರುತ್ತಿದೆ. ಅದರಂತೆ ಪ್ರತಿ ತಿಂಗಳು ಹಲವು ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಗೆ ಲಾಂಚ್ ಆಗುತ್ತಿದ್ದು, ಈ ಸ್ಮಾರ್ಟ್‌ವಾಚ್‌ಗಳು ವಿವಿಧ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಹಾಗೆಯೇ ಬಳಕೆದಾರರಿಗೆ ಹಲವು ಸೌಲಭ್ಯ ನೀಡುತ್ತಾ ಬರುತ್ತಿವೆ. ಈ ನಡುವೆ ಪ್ರಮುಖ ಬ್ರ್ಯಾಂಡ್‌ನ ಸ್ಮಾರ್ಟ್‌ವಾಚ್‌ಗೆ ಬರೋಬ್ಬರಿ 86% ರಿಯಾಯಿತಿ ಘೋಷಣೆ ಮಾಡಲಾಗಿದೆ.
ಹೌದು, ಪ್ರಮುಖ ಸ್ಮಾರ್ಟ್‌ವಾಚ್ ತಯಾರಿಕಾ ಸಂಸ್ಥೆಯಾದ ಫೈರ್-ಬೋಲ್ಟ್ ತನ್ನ ಫೈರ್-ಬೋಲ್ಟ್ ಫೀನಿಕ್ಸ್ ಪ್ರೊ ಸ್ಮಾರ್ಟ್‌ವಾಚ್(Fire-Boltt Phoenix Pr ) ಬೆಲೆಯನ್ನು ಇಳಿಕೆ ಮಾಡಿದ್ದು, 11 ಸಾವಿರಕ್ಕೂ ಅಧಿಕ ಇರುವ ಸ್ಮಾರ್ಟ್‌ವಾಚ್‌ಗೆ 86% ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ವಾಚ್‌ಇತ್ತೀಚಿನ HRX3600 ತಂತ್ರಜ್ಞಾನದೊಂದಿಗೆ ಪ್ಯಾಕ್ ಆಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಆಫರ್ ವಿವರವನ್ನು ತಿಳಿಸಿಕೊಟ್ಟಿದ್ದೇವೆ ಓದಿರಿ.

ಫೈರ್-ಬೋಲ್ಟ್ ಫೀನಿಕ್ಸ್ ಪ್ರೊ ಸ್ಮಾರ್ಟ್‌ವಾಚ್ ವಿನ್ಯಾಸ: ಈ ಸ್ಮಾರ್ಚ್‌ವಾಚ್ 1.39 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, ಇದು ಜೊತೆಗೆ 240 x 240 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ವಾಚ್‌ನ ಮಲ್ಟಿ-ಟಚ್ ಡಿಸ್‌ಪ್ಲೇ ಆಗಿರುವ ಇದು 244 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.
ಫೈರ್-ಬೋಲ್ಟ್ ಫೀನಿಕ್ಸ್ ಪ್ರೊ ಸ್ಮಾರ್ಟ್‌ವಾಚ್ ಫೀಚರ್ಸ್: ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಒನ್‌ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್ ಹೊಂದಿದ್ದು, ವಾಚ್‌ನಿಂದ ನೇರವಾಗಿ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ನಿಮಗೆ ಮಾಡಿಕೊಡುತ್ತದೆ. ಜೊತೆಗೆ ಡಯಲ್ ಪ್ಯಾಡ್ ಸಹ ಇದ್ದು, ಇತ್ತೀಚಿನ ಕರೆಗಳನ್ನು ನೋಡಲು ಮತ್ತು ನಿಮ್ಮ ಫೋನ್‌ನ ಸಂಪರ್ಕಗಳನ್ನು ಸಿಂಕ್ ಮಾಡುವ ಆಯ್ಕೆಯನ್ನು ಹೊಂದಿದೆ.
120+ ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿರುವ ಈ ವಾಚ್ ಪ್ರತಿ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಟ್ರ್ಯಾಕ್ ಮಾಡಲಿದೆ. ಜೊತೆಗೆ ಫಿಟ್‌ನೆಸ್ ಪ್ರಯಾಣದಲ್ಲಿರುವಾಗ ನಿಮ್ಮ ಕ್ಯಾಲೊರಿ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡುತ್ತದೆ. ಇದರೊಂದಿಗೆ ಎಐ ವಾಯ್ಸ್ ಅಸಿಸ್ಟೆಂಟ್ ಫೀಚರ್ಸ್ ಪಡೆದುಕೊಂಡಿದ್ದು, ಈ ಮೂಲಕ ನೀವು ಸಿರಿ ಹಾಗೂ ಗೂಗಲ್ ಅಸಿಸ್ಟೆಂಟ್ ಸೇವೆಯನ್ನು ಪಡೆದುಕೊಳ್ಳಬಹುದು.
ಹಾಗೆಯೇ ಸ್ಮಾರ್ಟ್ ನೋಟಿಫಿಕೇಶನ್ ಫೀಚರ್ಸ್ ಆಯ್ಕೆಹೊಂದಿರುವ ಈ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಅಗತ್ಯ ನೋಟಿಫಿಕೇಶನ್ ಅನ್ನು ವಾಚ್‌ನಲ್ಲಿಯೇ ವೀಕ್ಷಣೆ ಮಾಡಬಹುದು. ಜೊತೆಗೆ ಇನ್‌ಬಿಲ್ಟ್ ಗೇಮ್ ಗಳು ಸಹ ಇದ್ದು ಇದರಿಂದ ನೀವು ಪ್ರಯಾಣ ಮಾಡುವಾಗ ಅಥವಾ ಬೇಸರವಾದಾಗ ಸಮಯ ಕಳೆಯಲು ಇದು ಅತ್ಯುತ್ತಮ ಆಯ್ಕೆ.

ಬ್ರೀತ್ ಫಂಕ್ಷನ್, ಸ್ಮಾರ್ಟ್ ಹೆಲ್ತ್ ಫೀಚರ್ಸ್ ಪಡೆದುಕೊಂಡಿರುವ ಈ ಸ್ಮಾರ್ಟ್‌ವಾಚ್ ಇತ್ತೀಚಿನ HRX3600 ತಂತ್ರಜ್ಞಾನದೊಂದಿಗೆ ದಿನದ ಯಾವುದೇ ಸಮಯದಲ್ಲಿ ಅಥವಾ ನೀವು ಕೆಲವು ಚಟುವಟಿಕೆಗಳನ್ನು ಮಾಡುವಾಗಲೂ ನಿಮ್ಮ ಹೃದಯ ಬಡಿತವನ್ನು ಟ್ರ್ಯಾಕ್ ಮಾಡಿ ಅಗತ್ಯ ಮಾಹಿತಿಯನ್ನು ನೀಡುತ್ತದೆ. ಜೊತೆಗೆ ಫಿಟ್ ಮತ್ತು ಆರೋಗ್ಯಕರವಾಗಿರಲು ನಿಮ್ಮ ರಕ್ತದ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ.
ಫೈರ್-ಬೋಲ್ಟ್ ಫೀನಿಕ್ಸ್ ಪ್ರೊ ಸ್ಮಾರ್ಟ್‌ವಾಚ್ ಬ್ಯಾಟರಿ ಸಾಮರ್ಥ್ಯ: ಈ ಸ್ಮಾರ್ಟ್‌ವಾಚ್ ಲಿಥಿಯಂ ಪಾಲಿಮರ್ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಒಂದು ಬಾರಿ ಪೂರ್ಣವಾಗಿ ಚಾರ್ಜಿಂಗ್ ಮಾಡಿದರೆ ಬರೋಬ್ಬರಿ 5 ದಿನಗಳ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ.

ಫೈರ್-ಬೋಲ್ಟ್ ಫೀನಿಕ್ಸ್ ಪ್ರೊ ಸ್ಮಾರ್ಟ್‌ವಾಚ್ ಬೆಲೆ ವಿವರ: ಈ ಸ್ಮಾರ್ಟ್‌ವಾಚ್ 11,999ರೂ. ಗಳ ಸಾಮಾನ್ಯ ಬೆಲೆ ಹೊಂದಿದೆ . ಆದರೆ ಈ ವಾಚ್‌ಗೆ ಇದೀಗ 86% ರಿಯಾಯಿತಿ ನೀಡಲಾಗಿದ್ದು, ನೀವು 1,699 ರೂ. ಗಳಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಅಮೆಜಾನ್ ಹಾಗೂ ಇತರೆ ಇ ಕಾಮರ್ಸ್ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








