Home
ಸುದ್ದಿಜಾಲ

ಫೈರ್-ಬೋಲ್ಟ್ ಪ್ರಿಸ್ಟಿನ್ ಅನಾವರಣ: ಮಹಿಳೆಯರಿಗಾಗಿಯೇ ತಯಾರಿಸಲಾದ ಸ್ಮಾರ್ಟ್‌ವಾಚ್!

ಫೈರ್‌ ಬೋಲ್ಟ್‌ನ ಸ್ಮಾರ್ಟ್‌ವಾಚ್‌ಗಳು ಇದೀಗ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಭಾರೀ ರಿಯಾಯಿತಿ ಪಡೆದುಕೊಂಡು ಸೇಲ್‌ ಆಗುತ್ತಿರುವ ನಡುವೆಯೇ ಫೈರ್‌ ಬೋಲ್ಟ್ ಮಹಿಳೆಯರಿಗಾಗಿ ವಿಶೇಷವಾದ ಸ್ಮಾರ್ಟ್‌ವಾಚ್‌ ಒಂದನ್ನು ಅನಾವರಣ ಮಾಡಿದ್ದು, ತುಂಬಾ ಆಕರ್ಷಕವಾಗಿದೆ. ಜೊತೆಗೆ ಈ ವಾಚ್‌ ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿರುವುದು ವಿಶೇಷವಾದ ಸಂಗತಿ.

ಹೌದು, ಫೈರ್‌ ಬೋಲ್ಟ್‌ ಇದೀಗ ಫೈರ್-ಬೋಲ್ಟ್ ಪ್ರಿಸ್ಟಿನ್ (Fire-Boltt Pristine) ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿದ್ದು, ಈ ವಾಚ್‌ 3D ಕರ್ವ್ಡ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಬ್ಲೂಟೂತ್‌ ಕಾಲಿಂಗ್‌ ಸೌಲಭ್ಯ ಪಡೆದುಕೊಂಡಿದೆ. ಹಾಗಿದ್ರೆ, ಈ ಫೈರ್-ಬೋಲ್ಟ್ ಪ್ರಿಸ್ಟಿನ್ ನ ವಿಶೇಷ ಫೀಚರ್ಸ್‌ ಹಾಗೂ ಬೆಲೆ ಸೇರಿದಂತೆ ಇನ್ನಿತರೆ ಪ್ರಮುಖ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫೈರ್-ಬೋಲ್ಟ್ ಪ್ರಿಸ್ಟಿನ್ ಅನಾವರಣ:ಮಹಿಳೆಯರಿಗಾಗಿಯೇ ತಯಾರಿಸಲಾದ ಸ್ಮಾರ್ಟ್‌ವಾಚ್!

ಫೈರ್-ಬೋಲ್ಟ್ ಪ್ರಿಸ್ಟಿನ್ ವಿನ್ಯಾಸ: ಇದು 43mm ಡಯಲ್ ಮತ್ತು 360×360 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ 1.32 ಇಂಚಿನ 3D ಕರ್ವ್ಡ ಡಿಸ್‌ಪ್ಲೇ ಹೊಂದಿದೆ. ಮಹಿಳೆಯರಿಗಾಗಿಯೇ ನಿರ್ಮಿಸಲಾಗಿರುವ ಈ ಸ್ಮಾರ್ಟ್‌ವಾಚ್‌ಶೆಲ್ ಪ್ರಿಂಟೆಡ್ ಸ್ಟೇನ್‌ಲೆಸ್ ಸ್ಟೀಲ್ ಬೆಜಲ್‌ ಅನ್ನು ಹೊಂದಿದ್ದು, ಎರಡು ಪಟ್ಟಿಯ ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ.

ಸಿಲಿಕಾನ್ ಮತ್ತು ಸೆರಾಮಿಕ್ ಎಂಬ ಎರಡು ಪಟ್ಟಿಯ ಆಯ್ಕೆ ಹೊಂದಿದ್ದು, ಸಿಲಿಕಾನ್‌ನಲ್ಲಿ ಮೂರು ಬಣ್ಣಗಳನ್ನು ಹೊಂದಿದ್ದು, ಸೆರಾಮಿಕ್‌ನಲ್ಲಿ ಗೋಲ್ಡ್ ಮತ್ತು ಸಿಲ್ವರ್ ಹಾಗೂ ಚಿನ್ನದ ಬಣ್ಣದ ಡಯಲ್‌ನೊಂದಿಗೆ ಮುತ್ತಿನ ಬಣ್ಣವನ್ನು ಹೊಂದಿರುತ್ತದೆ. ಇದರೊಂದಿಗೆ ನ್ಯಾವಿಗೇಷನ್‌ಗಾಗಿ ಕ್ರೌನ್‌ ಬಟನ್‌ ಆಯ್ಕೆ ಸಹ ಇದೆ.

ಫೈರ್-ಬೋಲ್ಟ್ ಪ್ರಿಸ್ಟಿನ್ ಅನಾವರಣ:ಮಹಿಳೆಯರಿಗಾಗಿಯೇ ತಯಾರಿಸಲಾದ ಸ್ಮಾರ್ಟ್‌ವಾಚ್!

ಇನ್ನುಳಿದಂತೆ ಇನ್‌ಬಿಲ್ಟ್‌‌ ಸ್ಪೀಕರ್ ಮತ್ತು ಮೈಕ್ರೊಫೋನ್‌ ಆಯ್ಕೆ ಪಡೆದುಕೊಂಡಿದ್ದು, ವಾಚ್‌ ಬಳಕೆದಾರರು ಕರೆ ಇತಿಹಾಸವನ್ನು ವೀಕ್ಷಣೆ ಮಾಡಬಹುದಾಗಿದೆ. ಸಂಪರ್ಕಗಳನ್ನು ಸಿಂಕ್ ಮಾಡಲು ಹಾಗೂ ವಾಚ್‌ನಿಂದ ನೇರವಾಗಿ ಸಂಖ್ಯೆಗಳನ್ನು ಡಯಲ್ ಮಾಡಲು ಇದು ಅನುಕೂಲ ಮಾಡಿಕೊಡುತ್ತದೆ. ಇದರಿಂದ ನಿಮ್ಮ ಫೋನ್‌ ಅನ್ನು ಓಪನ್‌ ಮಾಡದೆಯೇ ಕೇವಲ ಕೈ ನ ಮೊಣಕಟ್ಟಿನಿಂದಲೇ ಎಲ್ಲವನ್ನು ಈ ವಾಚ್‌ ಸಾಧ್ಯವಾಗಿಸುತ್ತದೆ.

ಆರೋಗ್ಯ ಸಂಬಂಧಿ ವಿಷಯಕ್ಕೆ ಬರುವುದಾದರೆ ಹೃದಯ ಬಡಿತ ಸೆನ್ಸರ್‌, ನಿದ್ರೆ ಟ್ರ್ಯಾಕರ್ ಮತ್ತು SpO2 ಸೆನ್ಸರ್‌ ಆಯ್ಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಫೈರ್-ಬೋಲ್ಟ್ ಪ್ರಿಸ್ಟಿನ್ ಹಲವಾರು ದೈಹಿಕ ಚಟುವಟಿಕೆಗಳನ್ನು ಪತ್ತೆಹಚ್ಚಲು 60 ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದ್ದು, ಬಳಕೆದಾರರು ಯಾವಾಗ ನೀರು ಕುಡಿಯಬೇಕು ಯಾವಾಗ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂಬಿತ್ಯಾದಿ ಜ್ಞಾಪನೆಗಳನ್ನು ಇದು ನೀಡುತ್ತದೆ.

ಫೈರ್-ಬೋಲ್ಟ್ ಪ್ರಿಸ್ಟಿನ್ ಅನಾವರಣ:ಮಹಿಳೆಯರಿಗಾಗಿಯೇ ತಯಾರಿಸಲಾದ ಸ್ಮಾರ್ಟ್‌ವಾಚ್!

ಹಾಗೆಯೇ ಕ್ಯಾಲೊರಿಗಳು ಮತ್ತು ದೂರವನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಈ ವಾಚ್‌ ನಲ್ಲಿದ್ದು ನಿಮ್ಮ ದಿನನಿತ್ಯದ ಎಲ್ಲಾ ಚಟುವಟಿಕೆಯನ್ನು ಸುಲಭವಾಗಿ ಟ್ರ್ಯಾಕ್‌ ಮಾಡುತ್ತದೆ. ಈ ಮೂಲಕ ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವಿವಿಧ ರೀತಿಯಲ್ಲಿ ಈ ವಾಚ್‌ ಸಹಕಾರಿಯಾಗಿರಲಿದೆ. ಇದೆಲ್ಲದರ ಜೊತೆಗೆ ರಿಮೋಟ್ ಕ್ಯಾಮೆರಾ/ಮ್ಯೂಸಿಕ್ ಕಂಟ್ರೋಲ್‌ಗಳು, ಎರಡು ರೀತಿಯ ಮೆನು UIಗಳು, AI ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲ ಸೇರಿದಂತೆ ವಿವಿಧ ಸೌಲಭ್ಯವನ್ನು ಈ ವಾಚ್ ಪಡೆದಿದೆ.

ಫೈರ್-ಬೋಲ್ಟ್ ಪ್ರಿಸ್ಟಿನ್ ಬ್ಯಾಟರಿ ಸಾಮರ್ಥ್ಯ: ಇದರೊಂದಿಗೆ ಈ ವಾಚ್‌ ಅನ್ನು ಒಂದು ಬಾರಿ ಪೂರ್ಣ ಚಾರ್ಜಿಂಗ್‌ ಮಾಡಿದರೆ ನೀವು ಬರೋಬ್ಬರಿ 15 ದಿನಗಳವರೆಗೆ ಬಳಕೆ ಮಾಡಬಹುದು ಎಂದು ಕಂಪೆನಿ ತಿಳಿದಿದೆ. ಇದಕ್ಕಾಗಿ ಈ ಸ್ಮಾರ್ಟ್‌ ವಾಚ್‌ 210mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ.

ಫೈರ್-ಬೋಲ್ಟ್ ಪ್ರಿಸ್ಟಿನ್ ಅನ್ನು ನೀವು 2,999 ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 3,999 ರೂ. ಗಳು. ಅಂತೆಯೇ ಈ ವಾಚ್‌ ಬೋಟ್ ಲೂನಾರ್ ಕನೆಕ್ಟ್ ಪ್ರೊ ಮತ್ತು ಲೂನಾರ್ ಕಾಲ್ ಪ್ರೊ, ಪೆಬಲ್ ಫ್ರಾಸ್ಟ್ ಸೇರಿದಂತೆ ವಿವಿಧ ಸ್ಮಾರ್ಟ್‌ವಾಚ್‌ಗಳ ವಿರುದ್ಧ ಸ್ಪರ್ಧೆ ನೀಡಲಿದೆ. ನೀವಿದನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಬಹುದು.

Best Mobiles in India

English summary
Fire Boltt smartwatch has gained a lot of popularity in the market, meanwhile Fire Bolt Pristine smartwatch for women has been unveled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+