Home
ಸುದ್ದಿಜಾಲ

ಅಬ್ಬಬ್ಬಾ... ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಾ ಈ ಲಕ್ಸುರಿ ಸ್ಮಾರ್ಟ್‌ವಾಚ್‌, ಮೂಲ ದರ 19,999ರೂ.ಗಳು!

ಸ್ಮಾರ್ಟ್‌ವಾಚ್‌ಗಳು (Smartwatches) ಇಂದು ಕೈಗೆಟಕುವ ಬೆಲೆಗೇನೋ ಲಭ್ಯ ಆಗುತ್ತಿರುವುದು ಸಾಮಾನ್ಯವಾದ ವಿಚಾರ. ಆದರೆ, ಈ ಲಕ್ಸುರಿ ಸ್ಮಾರ್ಟ್‌ವಾಚ್‌( Luxury Smartwatch) ಪ್ರೀಮಿಯಂ ಫೀಚರ್ಸ್‌ ಹೊಂದಿದ್ದರೂ ಇದೀಗ ಭಾರೀ ಕಡಿಮೆ ಬೆಲೆಗೆ ಲಭ್ಯ ಆಗುತ್ತಿದೆ.

ಹೌದು, ವಿವಿಧ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಇಂದು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದರಲ್ಲೂ ಫೈರ್-ಬೋಲ್ಟ್ ಕಂಪೆನಿಯ ವಾಚ್‌ಗಳಿಗೆ ವಿಶೇಷ ಬೇಡಿಕೆ ಇದೆ. ಈ ಕಾರಣಕ್ಕೆ ಈ ಕಂಪೆನಿ ಸಾಕಷ್ಟು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿದ್ದು, ಈ ನಡುವೆ ಭಾರೀ ಜನಪ್ರಿಯತೆ ಪಡೆದಿದ್ದ ಫೈರ್-ಬೋಲ್ಟ್ ಕ್ವಾಂಟಮ್ ಲಕ್ಸುರಿ ಸ್ಮಾರ್ಟ್‌ವಾಚ್‌ಗೆ ದೊಡ್ಡ ರಿಯಾಯಿತಿ ನೀಡಲಾಗಿದೆ. ಹಾಗಿದ್ರೆ, ಈ ವಾಚ್‌ನ ಫೀಚರ್ಸ್‌ ಏನು? ಬೆಲೆ ಎಷ್ಟು ಎಂದು ತಿಳಿಯೋಣ ಬನ್ನಿ.

ಅಬ್ಬಬ್ಬಾ... ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಾ ಈ ಲಕ್ಸುರಿ ಸ್ಮಾರ್ಟ್‌ವಾಚ್‌...

ಫೈರ್-ಬೋಲ್ಟ್ ಕ್ವಾಂಟಮ್ ಲಕ್ಸುರಿ ಸ್ಮಾರ್ಟ್‌ವಾಚ್ ಫೀಚರ್ಸ್‌: ಈ ವಾಚ್‌(Fire-Boltt Quantum Luxury Smartwatch) ಅನ್ನು ಖರೀದಿ ಮಾಡುವ ಮುನ್ನ ಇದರ ವಿನ್ಯಾಸ ಹಾಗೂ ಫೀಚರ್ಸ್‌ ತಿಳಿದುಕೊಂಡರೆ ಖರೀದಿ ಮಾಡಲು ಸುಲಭವಾಗುತ್ತದೆ. ಅದರಂತೆ ಈ ಸ್ಮಾರ್ಟ್‌ವಾಚ್‌ನ‌ ಸ್ಟೇನ್‌ಲೆಸ್ ಸ್ಟೀಲ್ ನೋಟವು ಬಳಕೆದಾರರನ್ನು ಸೆಳೆಯದೇ ಇರದು. 1.28 ಇಂಚಿನ ಪ್ರೀಮಿಯಂ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಮೂಲಕ ಮತ್ತಷ್ಟು ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ.

ಈ 1.28 ಇಂಚಿನ ಡಿಸ್‌ಪ್ಲೇ 240×240ನ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದ್ದು, ಅತ್ಯಂತ ಉತ್ತಮ ಮಟ್ಟದ ಅನುಭವ ನೀಡುತ್ತದೆ. ಇದರೊಂದಿಗೆ 350 ನಿಟ್ಸ್‌ ನ ಗರಿಷ್ಠ ಬ್ರೈಟ್‌ನೆಸ್‌ ಇರುವುದರಿಂದ ಗಾಢ ಕತ್ತಲು ಹಾಗೂ ಗಾಢ ಬೆಳಕಿನಲ್ಲೂ ಇದನ್ನು ಬಳಕೆ ಮಾಡಬಹುದು. ಈ ಕಾರಣಕ್ಕೆ ಯುವಕರಿಗೆ ಈ ವಾಚ್‌ ಅಚ್ಚು ಮೆಚ್ಚು.

ಇದರೊಂದಿಗೆ ಈ ಕ್ವಾಂಟಮ್ ಸ್ಮಾರ್ಟ್‌ವಾಚ್‌ ಮೂಲಕ ಮ್ಯೂಸಿಕ್‌ ಅನ್ನು ನೇರವಾಗಿ ಕಂಟ್ರೋಲ್ ಮಾಡಬಹುದು. ಅಷ್ಟು ಮಾತ್ರವಲ್ಲದೆ 128MB ಸ್ಟೋರೇಜ್‌ ಆಯ್ಕೆ ಸಹ ನೀಡಲಾಗಿದ್ದು, ಈ ಮೂಲಕ ಈ ನಿಮ್ಮ ಮೆಚ್ಚಿನ ಹಾಡುಗಳನ್ನು ಸ್ಟೋರ್‌ ಮಾಡಲು ಸಹ ಅನುಕೂಲ ಮಾಡಿಕೊಡುತ್ತದೆ. ಇದರಿಂದಾಗಿ ಬಿಲ್ಟ್-ಇನ್ ಸ್ಪೀಕರ್ ಮೂಲಕ ನೀವು ಬಯಸಿದಾಗ ಅವುಗಳನ್ನು ಆಲಿಸಬಹುದಾಗಿದೆ.

ಫೈರ್-ಬೋಲ್ಟ್ ಕ್ವಾಂಟಮ್ ಲಕ್ಸುರಿ ಸ್ಮಾರ್ಟ್‌ವಾಚ್ ಬ್ಯಾಟರಿ ಸಾಮರ್ಥ್ಯ: ಇನ್ನು ಈ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಆಫ್‌ ಮಾಡಿಕೊಂಡು ಬಳಕೆ ಮಾಡಿದರೆ 7 ದಿನಗಳು ಹಾಗೂ ಬ್ಲೂಟೂತ್‌ ಕಾಲ್ ಫೀಚರ್ಸ್‌ನಲ್ಲಿ 2 ದಿನಗಳ ಬ್ಯಾಟರಿ ಬ್ಯಾಕಪ್‌ ಲಭ್ಯ ಆಗಲಿದೆ. ಹಾಗೆಯೇ 20% ಚಾರ್ಜ್‌ಗೆ 15 ನಿಮಿಷಗಳ ಕಾಲ ರೀಚಾರ್ಜ್‌ ಮಾಡಬೇಕಿದೆ. ಹಾಗೂ 80% ಚಾರ್ಜ್‌ಗೆ ಒಂದು ಗಂಟೆ ಚಾರ್ಜ್‌ಗೆ ಇಡಬೇಕಿದೆ.

ಫೈರ್-ಬೋಲ್ಟ್ ಕ್ವಾಂಟಮ್ ಲಕ್ಸುರಿ ಸ್ಮಾರ್ಟ್‌ವಾಚ್ ಆಫರ್‌ ವಿವರ: ಇನ್ನು ಪ್ರಮುಖ ವಿಷಯಕ್ಕೆ ಬರುವುದಾದರೆ ಈ ವಾಚ್‌19,999ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಇದನ್ನು 3,600ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಈ ವಾಚ್‌ಗೆ ಅಮೆಜಾನ್ 81% ಡಿಸ್ಕೌಂಟ್ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಇನ್ನೂ ಕಡಿಮೆ ಬೆಲೆಗೆ ಈ ವಾಚ್‌ ಅನ್ನು ಖರೀದಿ ಮಾಡಲು ಬಯಸಿದರೆ ಬ್ಯಾಂಕ್‌ ಕಾರ್ಡ್ ಹಾಗೂ ವಿನಿಮಯ ಆಫರ್‌ ಬಳಕೆ ಮಾಡಬಹುದು.

ಅಬ್ಬಬ್ಬಾ... ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಾ ಈ ಲಕ್ಸುರಿ ಸ್ಮಾರ್ಟ್‌ವಾಚ್‌...

ಬೋಟ್ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್‌ಗೂ ಭಾರೀ ಆಫರ್‌: ಇನ್ನು ಅಮೆಜಾನ್‌ನಲ್ಲಿ ಬೋಟ್‌ ಮತ್ತೊಂದು ವಾಚ್‌ ಆಗಿರುವ ಬೋಟ್ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್‌ಗೂ (Boat Xtend Smartwatch) ಡಿಸ್ಕೌಂಟ್‌ ನೀಡಲಾಗಿದೆ. ಈ ವಾಚ್‌ 7,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 1,797ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಾಚ್‌ ಖರೀದಿಯಲ್ಲಿ ಬ್ಯಾಂಕ್‌ ಆಫರ್‌ ಸಹ ಇದೆ.

ಉಳಿದಂತೆ ಈ ಸ್ಮಾರ್ಟ್‌ವಾಚ್‌ 1.66 ಇಂಚಿನ ಚದರ ಡಯಲ್‌ನೊಂದಿಗೆ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, 261 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇ ಸ್ಕ್ರಾಚ್ ರೆಸಿಸ್ಟೆಂಟ್‌ಆಯ್ಕೆ ಪಡೆದಿದ್ದು ಎಲ್ಲಾ ಸಮಯದಲ್ಲೂ ಬಳಕೆ ಮಾಡಬಹುದಾಗಿದೆ. ಇದರ ಜೊತೆಗೆ ವಾಟರ್‌ ರೆಸಿಸ್ಟೆಂಟ್ ಸಹ ಹೌದು.

ಇನ್ನು ನೈಜ-ಸಮಯದ ಹೃದಯ ಬಡಿತ ಸೆನ್ಸರ್‌ ಬಳಕೆದಾರರ ಹೃದಯ ಬಡಿತವನ್ನು ನಿಖರವಾಗಿ ಅಳೆಯುತ್ತದೆ. PPG ಆಪ್ಟಿಕಲ್ ಹೃದಯ ಬಡಿತ ಸೆನ್ಸರ್‌ ಆಯ್ಕೆ ಹಾಗೂ ಬ್ಲಡ್-ಆಕ್ಸಿಜನ್ ಲೆವೆಲ್ ಮಾನಿಟರ್ ಫೀಚರ್ಸ್‌ ಈ ವಾಚ್‌ನಲ್ಲಿ ವಿಶೇಷವಾಗಿದೆ. ಹಾಗೂ ರಕ್ತದಲ್ಲಿನ ಆಮ್ಲಜನಕದ ಶುದ್ಧತ್ವ ಮಟ್ಟವನ್ನು (SpO2) ಮೇಲ್ವಿಚಾರಣೆ ಮಾಡಲು ನಿಮಗೆ ಅನುಮತಿಸುತ್ತದೆ.

Best Mobiles in India

English summary
Smartwatches from various companies are gaining huge popularity in the market today. Meanwhile, the Boltt Quantum Luxury Smartwatch has been given a huge discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+