Fire-Boltt: ಫೈರ್ ಬೋಲ್ಟ್ ರೋಯಲ್ ಸ್ಮಾರ್ಟ್‌ವಾಚ್ ಲಾಂಚ್! 4GB ಸ್ಟೋರೇಜ್ ಆಯ್ಕೆ, ಬೆಲೆ ಎಷ್ಟು?
ಫೈರ್ ಬೋಲ್ಟ್ (Fire-Boltt) ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು (Smartwatch) ಲಾಂಚ್ ಮಾಡಿಕೊಂಡು ಬರುತ್ತಲೇ ಇದೆ. ಇದಕ್ಕೆ ಕಾರಣ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಈ ವಾಚ್‌ಗಳಿಗೆ ಇರುವ ದೊಡ್ಡ ಬೇಡಿಕೆ. ಅದರಲ್ಲೂ ಈ ವಾಚ್‌ಗಳು ನೋಡಲು ಆಕರ್ಷಕವಾಗಿರಲಿದ್ದು, ಬಳಕೆ ಸಮಯದಲ್ಲಿ ವಿಶೇಷವಾದ ಅನುಭವ ನೀಡುತ್ತವೆ. ಈ ಕಾರಣಕ್ಕೆ ಫೈರ್ ಬೋಲ್ಟ್ ಹೊಸ ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿದೆ.
ಹೌದು, ಫೈರ್ ಬೋಲ್ಟ್ ಕಳೆದ ತಿಂಗಳು ಎಕ್ಸ್‌ಪೆಡಿಶನ್ ಮತ್ತು ಕ್ವೆಸ್ಟ್ ರಗಡ್ ಸ್ಮಾರ್ಟ್‌ವಾಚ್‌ಗಳನ್ನು ಸಹ ಲಾಂಚ್ ಮಾಡಲಾಗಿದ್ದು, ಇದೀಗ ಈ ಐಷಾರಾಮಿ ಆವೃತ್ತಿಯ ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಹೊಸ ಫೈರ್ ಬೋಲ್ಟ್ ರೋಯಲ್ (Fire-Boltt Royale) ಸದ್ದು ಮಾಡಲಿದೆ. ಇನ್ನು ಈ ವಾಚ್ ಪ್ರೀಮಿಯಂ ಬ್ಲೂಟೂತ್ ಕಾಲಿಂಗ್ ವಾಚ್ ಆಗಿದ್ದು, ಮೆಟಲ್ ವಿನ್ಯಾಸ ಪಡೆದಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ ಬನ್ನಿ.

ಫೈರ್ ಬೋಲ್ಟ್ ರೋಯಲ್ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ವಿವರ: ಈ ವಾಚ್ 466 x 466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಇರುವ 1.43 ಇಂಚಿನ ಆಲ್‌ವೇಸ್ ಆನ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 750 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಈ ಮೂಲಕ ಎಂತಹುದೇ ಬೆಳಕಿನಲ್ಲೂ ಸಹ ಸ್ಪಷ್ಟವಾಗಿ ಈ ವಾಚ್ ಅನ್ನು ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ವಾಚ್ ಅನ್ನು ಕಂಟ್ರೋಲ್ ಮಾಡಲು ತಿರುಗುವ ಕ್ರೌನ್ ಬಟನ್ ಆಯ್ಕೆಯನ್ನೂ ಸಹ ಪಡೆದಿದೆ.
ಫೈರ್ ಬೋಲ್ಟ್ ರೋಯಲ್ ಸ್ಮಾರ್ಟ್‌ವಾಚ್ ಫೀಚರ್ಸ್: ಈ ಸ್ಮಾರ್ಟ್‌ವಾಚ್ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದಿದ್ದು, ಈ ಮೂಲಕ ಕರೆ ಸಂದರ್ಭದಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈ ವಾಚ್ ವಾಯ್ಸ್ ಅಸಿಸ್ಟೆಂಟ್ ಮತ್ತು ಇತರ ಫೀಚರ್ಸ್ ಅನ್ನೂ ಸಹ ಬೆಂಬಲಿಸಲಿದ್ದು, ವಾಚ್‌ನಲ್ಲಿ MP3 ಹಾಡುಗಳನ್ನು ಮತ್ತು 130+ ವಾಚ್ ಫೇಸ್‌ಗಳನ್ನು ಸ್ಟೋರ್ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಇದಕ್ಕಾಗಿ 4GBಯ ಇನ್‌ಬಿಲ್ಟ್ ಆಯ್ಕೆ ಸಹ ಇದೆ.

ಆರೋಗ್ಯ ವಿಚಾರಕ್ಕೆ ಬಂದರೆ ಈ ವಾಚ್ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್ ಮತ್ತು ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಸೇರಿದಂತೆ ಇತರೆ ಆರೋಗ್ಯ ಸಂಬಂಧಿ ವಿಷಯಗಳನ್ನು ಕರಾರುವಕ್ಕಾಗಿ ಮೇಲ್ವಿಚಾರಣೆ ಮಾಡಲಿದೆ. ಅಷ್ಟೇ ಅಲ್ಲದೆ ಮೋಷನ್ ಗೇಮಿಂಗ್, ಸ್ಮಾರ್ಟ್ ನೋಟಿಫಿಕೇಶನ್, ಹವಾಮಾನ, ಕ್ಯಾಮೆರಾ ಮತ್ತು ಮ್ಯೂಸಿಕ್ ಕಂಟ್ರೋಲ್, ಟೈಮರ್, ಅಲಾರ್ಮ್, ಸ್ಟಾಪ್‌ವಾಚ್ ಸೇರಿದಂತೆ ವಿವಿಧ ಸೌಲಭ್ಯಗಳು ಈ ವಾಚ್ ಮೂಲಕ ಸಿಗಲಿವೆ.
ಇದರೊಂದಿಗೆ ಈ ಸ್ಮಾರ್ಟ್‌ವಾಚ್ 300 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದ್ದು, ನಿಮ್ಮ ಎಲ್ಲಾ ರೀತಿಯ ದೈಹಿಕ ಚಟುವಟಿಕೆಯನ್ನು ಈ ಮೂಲಕ ಟ್ರ್ಯಾಕ್ ಮಾಡಲಿದೆ. ಇದರಿಂದ ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತನ್ನದೇ ಆದ ರೀತಿಯಲ್ಲಿ ಈ ವಾಚ್ ಸಹಕಾರ ನೀಡಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಕರೆ ಇತಿಹಾಸ, ತ್ವರಿತ ಡಯಲ್ ಪ್ಯಾಡ್, ಸಿಂಕ್ ಸಂಪರ್ಕಗಳು ಸೆರಿದಂತೆ ಕರೆ ವಿಭಾಗದಲ್ಲೂ ಸಹ ಒಂದು ಹೆಜ್ಜೆ ಮುಂದೆ ಇದೆ. ಜೊತೆಗೆ ಈ ವಾಚ್ 380mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ದೀರ್ಘ ಬ್ಯಾಕಪ್ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಫೈರ್ ಬೋಲ್ಟ್ ರೋಯಲ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್ 4,999 ರೂ.ಗಳ ಬೆಲೆ ಹೊಂದಿದ್ದು, ಇದನ್ನು ನೀವು ನವೆಂಬರ್ 25 ರಿಂದ ಖರೀದಿ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಫೈರ್-ಬೋಲ್ಟ್ ಸೈಟ್‌ನಲ್ಲಿ ಸ್ಮಾರ್ಟ್ ವಾಚ್ ಅನ್ನು ಮುಂಚೆಯೇ ಬುಕ್ ಮಾಡಿದ್ರೆ 250 ರೂ.ಗಳ ರಿಯಾಯಿತಿ ಸಹ ಸಿಗಲಿದೆ. ಈ ವಾಚ್ ರೋಸ್ ಗೋಲ್ಡ್, ಗೋಲ್ಡ್, ಬ್ಲ್ಯಾಕ್, ಬ್ಲೂ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications








