Home
ಸುದ್ದಿಜಾಲ

ರಗಡ್ ಲುಕ್ ಪಡೆದಿರುವ ಈ ಸ್ಮಾರ್ಟ್‌ವಾಚ್‌ ಈಗ ಸಸ್ತಾ ಬೆಲೆಗೆ ಲಭ್ಯ!..ಬಿಗ್‌ ಆಫರ್‌!

ಫೈರ್-ಬೋಲ್ಟ್ ಸಂಸ್ಥೆಯು ಸ್ಮಾರ್ಟ್‌ ವಾಚ್‌ ಉತ್ಪನ್ನಗಳ ಮೂಲಕ ಟೆಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆಯ ಫೈರ್-ಬೋಲ್ಟ್ ಶಾರ್ಕ್ (Fire-Boltt Shark) ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ ವಾಚ್‌ ಇದೀಗ ಅಧಿಕೃತ ಫೈರ್‌ ಬೋಲ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಫೈರ್‌ ಬೋಲ್ಟ್‌ ವೆಬ್‌ಸೈಟ್‌ ನಲ್ಲಿ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್‌ ವಾಚ್‌ ಬೊಂಬಾಟ್‌ ರಿಯಾಯಿತಿ ಬೆಲೆಗೆ ಕಾಣಿಸಿಕೊಂಡಿದೆ. ಅಂದಹಾಗೆ ಈ ಸ್ಮಾರ್ಟ್‌ ವಾಚ್‌ ಬೆಲೆ 18,999 ರೂ. ಆಗಿದ್ದು, ಇದೀಗ 1,399ರೂ. ಗಳ ಕೊಡುಗೆಯ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಕೂಡಾ ಸಿಗಲಿದೆ.

ರಗಡ್ ಲುಕ್ ಪಡೆದಿರುವ ಈ ಸ್ಮಾರ್ಟ್‌ವಾಚ್‌ ಈಗ ಸಸ್ತಾ ಬೆಲೆಗೆ ಲಭ್ಯ!..ಬಿಗ್‌ ಆಫರ್‌

ಫೈರ್-ಬೋಲ್ಟ್ ಶಾರ್ಕ್ ವಾಚ್‌ ಗೂಗಲ್ 120ಗೂ ಅಧಿಕ ಸ್ಟೋರ್ಟ್ಸ ಮೋಡ್‌ಗಳ ಆಯ್ಕೆ ಪಡೆದಿದೆ. ಜೊತೆಗೆ ಇದು ಅಸಿಸ್ಟೆಂಟ್ ಮತ್ತು ಆಪಲ್‌ ಸಿರಿಯಂತಹ AI ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯ ಪಡೆದಿದ್ದು, ಜೊತೆಗೆ ಬ್ಲೂಟೂತ್ ಕರೆ ಸೌಲಭ್ಯಕಾಣಬಹುದು. ಇದರ ಜೊತೆಗೆ ಪ್ರಮುಖ ಹೆಲ್ತ್‌ ಟ್ರ್ಯಾಕರ್‌ ಆಯ್ಕೆಗಳೂ ಇವೆ. ಹಾಗಾದರೇ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್‌ ವಾಚ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಗಡ್ ಲುಕ್ ಪಡೆದಿರುವ ಈ ಸ್ಮಾರ್ಟ್‌ವಾಚ್‌ ಈಗ ಸಸ್ತಾ ಬೆಲೆಗೆ ಲಭ್ಯ!..ಬಿಗ್‌ ಆಫರ್‌

ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ 1.83 ಇಂಚಿನ HD ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಸ್ಕ್ರೀನ್ 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಇದು ಹೊಂದಿದೆ. ಅಲ್ಲದೇ ಈ ವಾಚ್‌ ಶಾಕ್ ಪ್ರೂಫ್, ಸ್ಕ್ರಾಚ್ ರೆಸಿಸ್ಟೆಂಟ್ ನಂತಹ ಆಯ್ಕೆಗಳನ್ನು ಪಡೆದಿದೆ. ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್‌ವಾಚ್‌ ಸದ್ಯ ಲೀಡಿಂಗ್‌ನಲ್ಲಿ ಇರುವ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಕೂಡಾ ಇದೆ.

ಬ್ಲೂಟೂತ್‌ ಕಾಲಿಂಗ್‌ ಸೌಲಭ್ಯ ಇರುವುದರಿಂದ ಬಳಕೆದಾರರಿಗೆ ಸ್ಮಾರ್ಟ್‌ವಾಚ್‌ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸುವ ಹಾಗೂ ತಿರಸ್ಕರಿಸುವ ಆಯ್ಕೆ ದೊರೆಯುತ್ತದೆ. ಇದು ಅತ್ಯಾಕರ್ಷಕ ಹೆಲ್ತ್‌ ಫೀಚರ್ಸ್‌ಗಳನ್ನು ಕೂಡ ಪಡೆದುಕೊಂಡಿದ್ದು, SpO2 ಮಾನಿಟರಿಂಗ್, ಹಾರ್ಟ್‌ಬೀಟ್‌ ಸೆನ್ಸಾರ್‌ಗಳು, ಇದಲ್ಲದೆ ಅಥ್ಲೆಟಿಕ್ಸ್, ಆಟೋ ರೇಸಿಂಗ್ ಸೇರಿದಂತೆ 120ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲ ಲಭ್ಯ.

ರಗಡ್ ಲುಕ್ ಪಡೆದಿರುವ ಈ ಸ್ಮಾರ್ಟ್‌ವಾಚ್‌ ಈಗ ಸಸ್ತಾ ಬೆಲೆಗೆ ಲಭ್ಯ!..ಬಿಗ್‌ ಆಫರ್‌

ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್‌ ಸಿರಿಯಂತಹ AI ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯಗಳನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೇ ಮಹಿಳೆಯರ ಆರೋಗ್ಯ ಸಂಬಂಧಿತ ಟ್ರ್ಯಾಕರ್ ಮತ್ತು ನಿದ್ರೆಯ ಮೇಲ್ವಿಚಾರಣೆ ಮಾಡುವ ಹೆಲ್ತ್‌ ಟ್ರ್ಯಾಕರ್‌ಗಳನ್ನು ಪಡೆದಿದೆ. ಇನ್ನು ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ 100 ಕಸ್ಟಮೈಸ್ ಮಾಡಬಹುದಾದ ಕ್ಲೌಡ್‌ ಆಧಾರಿತ ವಾಚ್‌ ಫೇಸ್‌ಗಳನ್ನು ಪಡೆದಿದೆ.

ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಅತ್ಯುತ್ತಮ ಬ್ಯಾಟರಿ ಪಡೆದಿದ್ದು, ಇದು ಸಾಮಾನ್ಯ ಬಳಕೆಯಲ್ಲಿ ಎಂಟು ದಿನಗಳ ಬ್ಯಾಟರಿ ಅವಧಿ ಅನ್ನು ಒದಗಿಸಲಿದೆ. ಇನ್ನು ಬ್ಲೂಟೂತ್ ಕರೆಯೊಂದಿಗೆ ಐದು ದಿನಗಳ ಬ್ಯಾಟರಿ ಬಾಳಿಕೆ ನೀಡಲಿದೆ. ಇನ್ನು ಬಳಕೆದಾರರು ವಾಚ್‌ ಅನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಬಳಸಿದರೆ 25 ದಿನಗಳ ಬ್ಯಾಟರಿ ಬಾಳಿಕೆ ಸೌಲಭ್ಯ ಪಡೆದಿದೆ.

ಈ ಫೀಚರ್ಸ್‌ಗಳೊಂದಿಗೆ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಇನ್‌ಬಿಲ್ಟ್‌ ಗೇಮ್ಸ್‌, ರಿಮೋಟ್ ಕ್ಯಾಮೆರಾ ಕಂಟ್ರೋಲ್‌, ಸ್ಟಾಪ್‌ವಾಚ್, ವೆದರ್‌ ಅಪ್ಡೇಟ್‌, ಅಲಾರಾಂ, ಟೈಮರ್, ಸಿಟ್ಟಿಂಗ್‌ ರಿಮೈಂಡರ್‌ ಗಳಂತಹ ಕೆಲವು ಉಪಯುಕ್ತ ಮತ್ತು ಅಗತ್ಯ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್ ವಾಚ್‌ ಸ್ಮಾರ್ಟ್ ನೋಟಿಫೀಕೇಶನ್‌ಗಳನ್ನು ಸಹ ಸಪೋರ್ಟ್ ಪಡೆದಿದೆ.

ಸಂಸ್ಥೆಯ ಈ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಕಪ್ಪು ಕ್ಯಾಮೌ, ಕಪ್ಪು, ಹಸಿರು ಹಳದಿ ಮತ್ತು ಕಪ್ಪು ಹಳದಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಫ್ಲಿಪ್‌ಕಾರ್ಟ್ ತಾಣದ ಮೂಲಕ ಹಾಗೂ ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಖರೀದಿಸಬಹುದು.

Best Mobiles in India

English summary
Fire-Boltt Shark available at best deal price on official website. check offer price and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+