ಭಾರೀ ಡಿಸ್ಕೌಂಟ್‌ನಲ್ಲಿ ಫೈರ್-ಬೋಲ್ಟ್ ವಾಚ್ ಖರೀದಿಸಲು ಒಳ್ಳೆಯ ಸಮಯ!
ಬಜೆಟ್ ದರದಲ್ಲಿ ಫೈರ್-ಬೋಲ್ಟ್ ಸಂಸ್ಥೆಯ ಸ್ಮಾರ್ಟ್ ಡಿವೈಸ್‌ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಸಂಸ್ಥೆಯು ಸ್ಮಾರ್ಟ್‌ವಾಚ್ ಸೇರಿ ಇತರೆ ಹಲವು ಡಿವೈಸ್‌ಗಳನ್ನು ಒಳಗೊಂಡಿದೆ. ಸಂಸ್ಥೆಯ ಸ್ಮಾರ್ಟ್‌ವಾಚ್ ಸರಣಿಯಲ್ಲಿ 'ಫೈರ್-ಬೋಲ್ಟ್ ಶಾರ್ಕ್' ವಾಚ್ ಮಾಡೆಲ್ ಇದೀಗ ಫೈರ್ ಬೋಲ್ಟ್ ವೆಬ್‌ಸೈಟ್‌ನಲ್ಲಿ ಜಬರ್ದಸ್ತ್ ರಿಯಾಯಿತಿ ಪಡೆದುಕೊಂಡಿದೆ.
ಹೌದು, ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್‌ನಲ್ಲಿ 'ಫೈರ್-ಬೋಲ್ಟ್ ಶಾರ್ಕ್' ಸ್ಮಾರ್ಟ್‌ವಾಚ್ ಸಖತ್ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್ ವಾಚ್ ಬೆಲೆ 18,999 ರೂ. ಆಗಿದ್ದು, ಇದೀಗ 1,299ರೂ. ಗಳ ಆಫರ್ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಕೆಲವು ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್ ಸಹ ಲಭ್ಯ.

ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿಯಂತಹ AI ವಾಯ್ಸ್ ಅಸಿಸ್ಟೆಂಟ್ ಸೌಲಭ್ಯದ ಜೊತೆಗೆ ಬ್ಲೂಟೂತ್ ಕರೆ ಆಯ್ಕೆಪಡೆದುಕೊಂಡಿದೆ. ಇನ್ನು ಈ ವಾಚ್ ಕಪ್ಪು ಕ್ಯಾಮೌ, ಕಪ್ಪು, ಹಸಿರು ಹಳದಿ ಮತ್ತು ಕಪ್ಪು ಹಳದಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಫೈರ್-ಬೋಲ್ಟ್ ಶಾರ್ಕ್ ವಾಚ್ 1.83 ಇಂಚಿನ HD ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಸ್ಕ್ರೀನ್ 240 x 284 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಒಳಗೊಂಡಿದೆ. ಅಲ್ಲದೇ ಈ ವಾಚ್ ಶಾಕ್ ಪ್ರೂಫ್, ಸ್ಕ್ರಾಚ್ ರೆಸಿಸ್ಟೆಂಟ್ ನಂತಹ ಆಯ್ಕೆಗಳು ಇವೆ. ಹಾಗೆಯೇ ಸದ್ಯ ಲೀಡಿಂಗ್‌ನಲ್ಲಿ ಇರುವ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ.

ಬ್ಲೂಟೂತ್ ಕಾಲಿಂಗ್ ಸೌಲಭ್ಯ ಇರುವುದರಿಂದ ಬಳಕೆದಾರರಿಗೆ ಸ್ಮಾರ್ಟ್‌ವಾಚ್ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸುವ ಹಾಗೂ ತಿರಸ್ಕರಿಸುವ ಆಯ್ಕೆ ದೊರೆಯುತ್ತದೆ. ಇದು ಹೆಲ್ತ್ ಫೀಚರ್ಸ್‌ಗಳನ್ನು ಕೂಡ ಪಡೆದುಕೊಂಡಿದ್ದು, SpO2 ಮಾನಿಟರಿಂಗ್, ಹಾರ್ಟ್‌ಬೀಟ್ ಸೆನ್ಸಾರ್‌ಗಳು, ಇದಲ್ಲದೆ ಅಥ್ಲೆಟಿಕ್ಸ್, ಆಟೋ ರೇಸಿಂಗ್ ಸೇರಿದಂತೆ 120ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಇವೆ.
ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿಯಂತಹ AI ವಾಯ್ಸ್ ಅಸಿಸ್ಟೆಂಟ್ ಸೌಲಭ್ಯಗಳ ಬೆಂಬಲ ಇದೆ. ಅಲ್ಲದೇ ಮಹಿಳೆಯರ ಆರೋಗ್ಯ ಸಂಬಂಧಿತ ಟ್ರ್ಯಾಕರ್ ಮತ್ತು ನಿದ್ರೆಯ ಮೇಲ್ವಿಚಾರಣೆ ಮಾಡುವ ಹೆಲ್ತ್ ಟ್ರ್ಯಾಕರ್‌ಗಳನ್ನು ಪಡೆದಿದೆ. ಇನ್ನು ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ 100 ಕಸ್ಟಮೈಸ್ ಮಾಡಬಹುದಾದ ಕ್ಲೌಡ್ ಆಧಾರಿತ ವಾಚ್ ಫೇಸ್‌ಗಳನ್ನು ಪಡೆದಿದೆ.

ಈ ವಾಚ್ ಬಿಗ್ ಬ್ಯಾಟರಿ ಪಡೆದಿದ್ದು, ಇದು ಸಾಮಾನ್ಯ ಬಳಕೆಯಲ್ಲಿ ಎಂಟು ದಿನಗಳ ಬ್ಯಾಟರಿ ಅವಧಿ ಅನ್ನು ಒದಗಿಸಲಿದೆ. ಇನ್ನು ಬ್ಲೂಟೂತ್ ಕರೆಯೊಂದಿಗೆ ಐದು ದಿನಗಳ ಬ್ಯಾಟರಿ ಬಾಳಿಕೆ ನೀಡಲಿದೆ. ಇನ್ನು ಬಳಕೆದಾರರು ವಾಚ್ ಅನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಬಳಸಿದರೆ 25 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ.
ಈ ಫೀಚರ್ಸ್‌ಗಳೊಂದಿಗೆ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಇನ್‌ಬಿಲ್ಟ್ ಗೇಮ್ಸ್, ರಿಮೋಟ್ ಕ್ಯಾಮೆರಾ ಕಂಟ್ರೋಲ್, ಸ್ಟಾಪ್‌ವಾಚ್, ವೆದರ್ ಅಪ್ಡೇಟ್, ಅಲಾರಾಂ, ಟೈಮರ್, ಸಿಟ್ಟಿಂಗ್ ರಿಮೈಂಡರ್ ಗಳಂತಹ ಕೆಲವು ಉಪಯುಕ್ತ ಮತ್ತು ಅಗತ್ಯ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್ ವಾಚ್ ಸ್ಮಾರ್ಟ್ ನೋಟಿಫೀಕೇಶನ್‌ಗಳನ್ನು ಸಹ ಸಪೋರ್ಟ್ ಮಾಡಲಿದೆ.
ಇತ್ತೀಚಿನ ಈ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಭಾರತದಲ್ಲಿ 1,799ರೂ. ಪ್ರೈಸ್ ಟ್ಯಾಗ್ ಅನ್ನು ಹೊಂದಿದೆ. ಇನ್ನು ಇದು ಕಪ್ಪು ಕ್ಯಾಮೌ, ಕಪ್ಪು, ಹಸಿರು ಹಳದಿ ಮತ್ತು ಕಪ್ಪು ಹಳದಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಫ್ಲಿಪ್‌ಕಾರ್ಟ್ ತಾಣದ ಮೂಲಕ ಹಾಗೂ ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಖರೀದಿಸಬಹುದು.


Click it and Unblock the Notifications








