ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಫೈರ್‌ಬೋಲ್ಟ್ ಸೋಲೇಸ್ ಸ್ಮಾರ್ಟ್‌ವಾಚ್!..ಸ್ಟನ್ನಿಂಗ್ ಲುಕ್, ಸ್ಟೈಲಿಶ್ ಡಿಸೈನ್!
ಸ್ಮಾರ್ಟ್‌ವಾಚ್ ವಲಯದಲ್ಲಿ ಫೈರ್‌ಬೋಲ್ಟ್ ಕಂಪೆನಿ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ತನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳಿಂದ ಫೈರ್‌ಬೋಲ್ಟ್ ಸೈ ಎನಿಸಿಕೊಂಡಿದೆ. ಇದೀಗ ಫೈರ್‌ಬೋಲ್ಟ್ ಸೋಲೇಸ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವೃತ್ತಾಕಾರದ ಡಯಲ್ ಮತ್ತು ಚೈನ್ ಸ್ಟ್ರಾಪ್ ಕ್ಲಾಸಿಕ್ ವಾಚ್ ವಿನ್ಯಾಸವನ್ನು ಹೊಂದಿದೆ.
ಹೌದು, ಫೈರ್-ಬೋಲ್ಟ್ ಸೋಲೇಸ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದು ನೂರಕ್ಕೂ ಹೆಚ್ಚು ಕೌಡ್ ಆಧಾರಿತ ವಾಚ್ ಫೇಸ್‌ಗಳೊಂದಿಗೆ ಬರಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ತಿರುಗುವ ಕಿರೀಟ ಮತ್ತು ಎರಡು ಪುಶ್‌ಬಟನ್‌ಗಳನ್ನು ಕಾಣಬಹುದಾಗಿದೆ. ಇನ್ನುಳಿದಂತೆ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೈರ್-ಬೋಲ್ಟ್ ಸೋಲೇಸ್ ಸ್ಮಾರ್ಟ್‌ವಾಚ್ ಫೀಚರ್ಸ್ ವಿವರ
ಫೈರ್-ಬೋಲ್ಟ್ ಸೋಲೇಸ್ ಸ್ಮಾರ್ಟ್‌ವಾಚ್ 1.32 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 360 x 360 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ 100 ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳೊಂದಿಗೆ ಪಡೆದುಕೊಂಡಿದೆ. ಇದರ ನಯವಾದ ವಿನ್ಯಾಸವು ಬಾಳಿಕೆ ಬರುವ ಸ್ಟೇನ್‌ಲೆಸ್ ಸ್ಟೀಲ್ ಬಾಡಿಯನ್ನು ಹೊಂದಿದೆ.
ಫೈರ್-ಬೋಲ್ಟ್ ಸೋಲೇಸ್ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫಿಚರ್ಸ್ ಅನ್ನು ಹೊಂದಿದೆ. ಇದಕ್ಕಾಗಿ ಮೈಕ್ರೊಫೋನ್ ಮತ್ತು ಸ್ಪೀಕರ್‌ನೊಂದಿಗೆ ಕರೆಗಳನ್ನು ಮಾಡಲು ಅವಕಾಶ ನೀಡಲಾಗಿದೆ. ಇದಲ್ಲದೆ ಕಾಲ್ ಹಿಸ್ಟರಿಯನ್ನು ಪ್ರವೇಶಿಸಲು ಮತ್ತು ಕಂಟ್ಯಾಕ್ಟ್‌ಗಳನ್ನು ತ್ವರಿತವಾಗಿ ಡಯಲ್ ಮಾಡಲು ಅವಕಾಶ ಸಿಗಲಿದೆ. ಇದರಿಂದ ಸ್ಮಾರ್ಟ್‌ವಾಚ್‌ನಲ್ಲಿಯೇ ಸುಲಭವಾಗಿ ಸ್ಮಾರ್ಟ್‌ಫೋನ್ ಕರೆಗಳನ್ನು ತೆಗೆದುಕೊಳ್ಳಬಹುದು. ಇನ್ನು ವಾಚ್‌ನಲ್ಲಿ ತಿರುಗುವ ಕಿರೀಟ ಮತ್ತು ಎರಡು ಪುಶ್ ಬಟನ್‌ಗಳನ್ನು ಕಾಣಬಹುದು.
ಈ ಸ್ಮಾರ್ಟ್‌ವಾಚ್ ಫಿಟ್‌ನೆಸ್ ಉತ್ಸಾಹಿಗಳಿಗೆ 120 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಿದೆ. ಇದರಲ್ಲಿ ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ನೀಡಲಾಗಿದ್ದು, ನಿಮ್ಮ ಕೆಲಸ ಕಾರ್ಯಗಳನ್ನು ಸುಲಭಗೊಳಿಸಲಿದೆ. ಹೆಲ್ತ್ ಫೀಚರ್ಸ್‌ಗಳಲ್ಲಿ ನಿದ್ರೆಯ ಮಾದರಿಗಳು, ರಕ್ತದ ಆಮ್ಲಜನಕ (SpO2) ಮಟ್ಟ ಮತ್ತು ಹೃದಯ ಬಡಿತದ ಮೇಲೆ ಟ್ಯಾಬ್‌ಗಳನ್ನು ಇರಿಸಲಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ ರಿಮೈಂಡರ್‌ಗಳು, ವೆದರ್ ಅಪ್‌ಡೇಟ್ಸ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಮತ್ತು ಕ್ಯಾಮರಾ ಕಂಟ್ರೋಲ್, ಅಲಾರಮ್‌ಗಳು, ಟೈಮರ್‌ಗಳನ್ನು ಸಹ ಕಾಣಬಹುದಾಗಿದೆ.
ಫೈರ್-ಬೋಲ್ಟ್ ಸೋಲೇಸ್ ಸ್ಮಾರ್ಟ್‌ವಾಚ್ IP67 ರೇಟಿಂಗ್ ಅನ್ನು ಹೊಂದಿದೆ. ಇದು ನಿಮಗೆ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡಲಿದೆ. ಇನ್ನು ಈ ಸ್ಮಾರ್ಟ್‌ವಾಚ್ 230mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಸಿಂಗಲ್ ಚಾರ್ಜ್‌ನಲ್ಲಿ 5 ದಿನಗಳ ಬಳಕೆಯನ್ನು ಒದಗಿಸಲಿದೆ.
ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ಸೊಲೇಸ್ ಸ್ಮಾರ್ಟ್‌ವಾಚ್ ಭಾರತದಲ್ಲಿ 1,999ರೂ. ಪರಿಚಯಾತ್ಮಕ ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ವಾಚ್ ಕಪ್ಪು, ನೀಲಿ, ಚಿನ್ನ, ಬೆಳ್ಳಿ ಮತ್ತು ಚಿನ್ನದ ಬೆಳ್ಳಿದ ಆಯ್ಕೆಗಳಲ್ಲಿ ಬರಲಿದೆ. ಇನ್ನು ಸ್ಮಾರ್ಟ್‌ವಾಚ್ ಇದೇ ಸೆಪ್ಟೆಂಬರ್ 12 ರಂದು Fireboltt.com ಮತ್ತು Amazon.in ಮೂಲಕ ಖರೀದಿಸಬಹುದಾಗಿದೆ.
ಇದಲ್ಲದೆ ಫೈರ್-ಬೋಲ್ಟ್ ಕಂಪೆನಿ ಇತ್ತೀಚಿಗೆ ಫೈರ್‌ಬೋಲ್ಟ್ ಫೀನಿಕ್ಸ್ ಅಮೋಲೆಡ್ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಇದು 1.43 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 466x466 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸಬಹುದಾಗಿದೆ. ಇದಕ್ಕಾಗಿ ಸ್ಮಾರ್ಟ್ ವಾಚ್‌ನಲ್ಲಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ನೀಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಫೈರ್-ಬೋಲ್ಟ್ ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ (SpO2) ಮಾನಿಟರಿಂಗ್, ಹೃದಯ ಬಡಿತ ಮಾನಿಟರಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲೀಪ್ ಟ್ರ್ಯಾಕಿಂಗ್‌ನಂತಹ ಸ್ಮಾರ್ಟ್ ಹೆಲ್ತ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ.


Click it and Unblock the Notifications








