Home
ಸುದ್ದಿಜಾಲ

ಫೈರ್ ಬೋಲ್ಟ್ ನಿಂದ ಹೊಸ ಸ್ಮಾರ್ಟ್‌ವಾಚ್ ಲಾಂಚ್‌,9 ದಿನಗಳ ಬ್ಯಾಟರಿ ಬ್ಯಾಕಪ್‌, ಬೆರಗುಗೊಳಿಸುವ ಶೈಲಿ!

ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲಿ ಹಲವಾರು ವಾಚ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆ. ಈ ನಡುವೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳು ಸಹ ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಗ್ರಾಹಕರ ಅಗತ್ಯಗಳನ್ನು ಪೂರೈಸಲಾಗುತ್ತಿದೆ. ಈ ನಡುವೆ ಸ್ಮಾರ್ಟ್‌ವಾಚ್‌ ತಯಾರಿಕಾ ಕಂಪೆನಿ ಆಗಿರುವ ಫೈರ್ ಬೋಲ್ಟ್ ಮತ್ತೊಂದು ವಾಚ್‌ ಅನ್ನು ಅನಾವರಣ ಮಾಡಿದೆ.

ಹೌದು, ಫೈರ್ ಬೋಲ್ಟ್‌ನಿಂದ ಫೈರ್ ಬೋಲ್ಟ್ ಸೋಲಾರಿಸ್ ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಬ್ಲೂಟೂತ್ ಕರೆ, ಹೆಲ್ತ್ ಮಾನಿಟರ್‌ಗಳು ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಹೊಂದಿದೆ. ಹಾಗಿದ್ರೆ, ಈ ವಾಚ್‌ನ ಫೀಚರ್ಸ್‌ಗಳ ಪ್ರಮುಖ ವಿವರ ಹಾಗೂ ಭಾರತದಲ್ಲಿ ಈ ವಾಚ್‌ನ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫೈರ್ ಬೋಲ್ಟ್ ನಿಂದ ಹೊಸ ಸ್ಮಾರ್ಟ್‌ವಾಚ್ ಲಾಂಚ್‌,9 ದಿನಗಳ ಬ್ಯಾಟರಿ ಬ್ಯಾಕಪ್‌..

ಫೈರ್ -ಬೋಲ್ಟ್ ಸೋಲಾರಿಸ್ ಡಿಸ್‌ಪ್ಲೆ ವಿವರ: ಈ ಫೈರ್-ಬೋಲ್ಟ್ ಸ್ಮಾರ್ಟ್‌ವಾಚ್‌ ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಹೊಂದಿದ್ದು, ಈ ಮೂಲಕ ಪ್ರೀಮಿಯಂ ನೋಟ ಪಡೆದುಕೊಂಡಿದೆ. ಇದರ ಜೊತೆಗೆ 1.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಈ ಡಿಸ್ಪ್ಲೇ 368 x 448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 100+ ಕ್ಲೌಡ್ ಆಧಾರಿತ ವಾಚ್ ಫೇಸ್‌ ಆಯ್ಕೆ ಸಹ ಈ ವಾಚ್‌ನಲ್ಲಿದೆ.

ಫೈರ್ -ಬೋಲ್ಟ್ ಸೋಲಾರಿಸ್ ಫೀಚರ್ಸ್‌: ಉಳಿದಂತೆ ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಹೊಂದಿದೆ. ಹಾಗೆಯೇ ಇನ್‌ಬಿಲ್ಟ್‌ ಮೈಕ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಇದು ಕರೆ ಹಿಸ್ಟ್ರಿ, ತ್ವರಿತ ಡಯಲ್ ಪ್ಯಾಡ್ ಮತ್ತು ಸಿಂಕ್ ಸಂಪರ್ಕಗಳನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ 123+ ಸ್ಪೋರ್ಟ್ಸ್‌ ಮೋಡ್‌, ಜಾಗಿಂಗ್, ಈಜು, ಸ್ಕೇಟಿಂಗ್ ಸೇರಿದಂತೆ ಪ್ರಮುಖ ಮೋಡ್‌ ಆಯ್ಕೆ ಇದರಲ್ಲಿದೆ.

ಇಷ್ಟೇ ಅಲ್ಲದೆ ವಾಯ್ಸ್‌ ಅಸಿಸ್ಟೆಂಟ್‌ಗೂ ಸಹ ಬೆಂಬಲ ನೀಡಲಿದ್ದು, ಸ್ಲೀಪಿಂಗ್ ಮಾನಿಟರ್, SpO2 ಮಾನಿಟರ್, ಹೃದಯ ಬಡಿತ ಟ್ರ್ಯಾಕಿಂಗ್ ಸೇರಿದಂತೆ ಮಹಿಳೆಯರ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಈ ಸ್ಮಾರ್ಟ್‌ವಾಚ್‌ ಮಾನಿಟರ್ ಮಾಡಲಾಗಿದೆ. ಹಾಗೆಯೇ ಯಾವಾಗ ನೀರು ಕುಡಿಯಬೇಕು ಮತ್ತು ಯಾವಾಗ ವಿಶ್ರಾಂತಿ ಪಡೆಯಬೇಕು ಎಂಬ ಅಗತ್ಯ ಮಾಹಿತಿಯನ್ನು ಈ ವಾಚ್‌ ನೀಡಲಿದೆ.

ಉಳಿದಂತೆ ಈ ಸ್ಮಾರ್ಟ್‌ವಾಚ್‌ ನೋಟಿಫಿಕೇಶನ್‌ಗೆ‌ ಬೆಂಬಲ ಸಹ ಪಡೆದಿದ್ದು, ನಿಮ್ಮ ಫೋನ್‌ಗೆ ಬರುವ ಕರೆ ಹಾಗೂ ಎಸ್ಎಮ್‌ಎಸ್ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ, ಹವಾಮಾನ ನವೀಕರಣ, ಕ್ಯಾಲ್ಕುಲೇಟರ್, ಮ್ಯೂಸಿಕ್‌ ಮತ್ತು ಕ್ಯಾಮೆರಾ ಕಂಟ್ರೋಲ್‌, ಅಲಾರಂ, ಟೈಮರ್ ಮತ್ತು ಸ್ಟಾಪ್‌ವಾಚ್ ಆಯ್ಕೆಯನ್ನೂ ಸಹ ಈ ವಾಚ್‌ನಲ್ಲಿ ಕಾಣಬಹುದಾಗಿದೆ.

ಫೈರ್ -ಬೋಲ್ಟ್ ಸೋಲಾರಿಸ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ವಾಚ್‌ನ ಪ್ರಮುಖ ಫೀಚರ್ಸ್‌ ಏನೆಂದರೆ ದೀರ್ಘ ದಿನಗಳ ಬ್ಯಾಟರಿ ಬ್ಯಾಕಪ್‌. ಅಂದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಬಳಕೆದಾರರು 9 ದಿನಗಳ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈ ವಾಚ್ IP67 ರೇಟಿಂಗ್‌ ಹೊಂದಿದ್ದು, ಧೂಳು ಮತ್ತು ನೀರು ನಿರೋಧಕ ಆಯ್ಕೆ ಪಡೆದುಕೊಂಡಿದೆ.

ಫೈರ್ ಬೋಲ್ಟ್ ನಿಂದ ಹೊಸ ಸ್ಮಾರ್ಟ್‌ವಾಚ್ ಲಾಂಚ್‌,9 ದಿನಗಳ ಬ್ಯಾಟರಿ ಬ್ಯಾಕಪ್‌..

ಫೈರ್ -ಬೋಲ್ಟ್ ಸೋಲಾರಿಸ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ 2,499 ರೂ. ಗಳ ಬೆಲೆ ಹೊಂದಿದ್ದು, ಈ ಬೆಲೆಯು ಪರಿಚಯಾತ್ಮಕ ಕೊಡುಗೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಏರಿಕೆ ಆಗಬಹುದು ಎಂದು ಹೇಳಲಾಗುತ್ತಿದೆ. ಅಂತೆಯೇ ಕಾಪರ್ ಗ್ಲೋ, ಶಾಡೋ ಬ್ಲ್ಯಾಕ್ ಮತ್ತು ಸ್ಟರ್ಲಿಂಗ್ ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಈ ವಾಚ್‌ ಕಾಣಿಸಿಕೊಂಡಿದೆ. ಇದನ್ನು ನೀವು ಅಮೆಜಾನ್‌ ಹಾಗೂ ಫೈರ್‌ಬೋಲ್ಟ್‌ನ ಅಧಿಕೃತ ಸೈಟ್‌ನಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Fire Bolt has launched the Fire Bolt Solaris smartwatch. This smartwatch has got an AMOLED display option and has many attractive features including Bluetooth calling, health monitors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+