ಫೈರ್-ಬೋಲ್ಟ್ ವಿಷನರಿ ಸ್ಮಾರ್ಟ್‌ವಾಚ್‌ಗೆ 78% ರಿಯಾಯಿತಿ; ಎಲ್ಲಿ ಲಭ್ಯ!?
ಫೈರ್-ಬೋಲ್ಟ್ ಪ್ರಮುಖ ಸ್ಮಾರ್ಟ್‌ವಾಚ್ ತಯಾರಿಕಾ ಸಂಸ್ಥೆಯಾಗಿದ್ದು, ಮಾರುಕಟ್ಟೆಯಲ್ಲಿ ಈ ವಾಚ್‌ಗಳಿಗೆ ಭರ್ಜರಿ ಜನಪ್ರಿಯತೆ ಇದೆ. ಇದರ ಆಧಾರದಲ್ಲೇ ಕಾಲಕಾಲಕ್ಕೆ ಸುಧಾರಿತ ಫೀಚರ್ಸ್ ಇರುವ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಈ ನಡುವೆ ಈ ವಿಶೇಷ ವಾಚ್ ಬರೋಬ್ಬರಿ 78% ರಿಯಾಯಿತಿಯೊಂದಿಗೆ ಕಾಣಿಸಿಕೊಂಡಿದೆ.
ಹೌದು, ಫೈರ್-ಬೋಲ್ಟ್ ಕೆಲವು ದಿನಗಳ ಹಿಂದಷ್ಟೇ ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ್‌ಗೆ 83 % ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಈ ನಡುವೆ ಫೈರ್-ಬೋಲ್ಟ್ ವಿಷನರಿ ಸ್ಮಾರ್ಟ್‌ವಾಚ್ (Fire-Boltt Visionary Smartwatch) ಬೆಲೆಯಲ್ಲೂ ಭಾರಿ ಇಳಿಕೆಯಾಗಿದ್ದು, 78% ರಿಯಾಯಿತಿ ಪಡೆದುಕೊಂಡಿದೆ. ಈ ವಾಚ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ವಿವಿಧ ಆರೋಗ್ಯ ಮೇಲ್ವಿಚಾರಣೆ ಮಾಡುತ್ತದೆ. ಹಾಗಿದ್ರೆ, ಈ ವಾಚ್ ಬೆಲೆ ವಿವರಕ್ಕೂ ಮುನ್ನ ಇದರ ಫೀಚರ್ಸ್ ಕಡೆ ಕಣ್ಣಾಯಿಸೋಣ.

ಫೈರ್-ಬೋಲ್ಟ್ ವಿಷನರಿ ಸ್ಮಾರ್ಟ್‌ವಾಚ್ ಫೀಚರ್ಸ್: ಈ ವಿಶೇಷ ಸ್ಮಾರ್ಟ್‌ವಾಚ್ 1.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 368*448 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಇದರೊಂದಿಗೆ ರೊಟೇಟಿಂಗ್ ಕ್ರೌನ್ ಬಟನ್ ಆಯ್ಕೆ ಹಾಗೂ 60Hz ರಿಫ್ರೆಶ್ ರೇಟ್ ಮತ್ತು 100+ ಸ್ಪೋರ್ಟ್ಸ್ ಮೋಡ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಈ ವಾಚ್‌ನ ವಿಶೇಷತೆ ಎಂದರೆ ನೀವು ಇದನ್ನು ಬರೋಬ್ಬರಿ ಇಪ್ಪತ್ತು ನಿಮಿಷಗಳವರೆಗೆ ನೀರಿನಲ್ಲಿ ಮುಳುಗಿಸಿದರೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಯಾಕೆಂದರೆ ಈ ವಾಚ್ ಬೆವರು, ಧೂಳು, ಮರಳು ನಿರೋಧಕವಾಗಿದ್ದು, IP68 ರೇಟಿಂಗ್ ಹೊಂದಿದೆ. ಇನ್ನುಳಿದಂತೆ ವಾಯ್ಸ್ ಅಸಿಸ್ಟೆಂಟ್ ಫೀಚರ್ಸ್ ಪಡೆದುಕೊಂಡಿದ್ದು, ಈ ಮೂಲಕ ಸುಲಭವಾಗಿ ವಾಚ್‌ಅನ್ನು ಕಂಟ್ರೋಲ್ ಮಾಡಬಹುದು.
ಫೈರ್-ಬೋಲ್ಟ್ ವಿಷನರಿಯಲ್ಲಿನ ಬಿಲ್ಟ್-ಇನ್ ಸ್ಪೀಕರ್ ಹಾಗೂ ಮೈಕ್ರೊಫೋನ್ ಆಯ್ಕೆ ನೀಡಲಾಗಿದ್ದು, ಇದರಿಂದ ವಾಚ್ ಮೂಲಕವೇ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ವಾಚ್ ಇತ್ತೀಚಿನ ಕರೆ ವಿಭಾಗಕ್ಕೆ ಪ್ರವೇಶಿಸಲು ಹಾಗೂ ಫೋನ್‌ನಿಂದ ಸಂಪರ್ಕಗಳನ್ನು ಸಿಂಕ್ ಮಾಡಲು ಡಯಲ್ ಪ್ಯಾಡ್ ಆಯ್ಕೆಯನ್ನು ಹೊಂದಿದೆ.

ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಅಲಾರ್ಮ್, ಹೃದಯ ಬಡಿತ ಸೆನ್ಸರ್, ಹೃದಯ ಬಡಿತ ಮಾನಿಟರ್, SpO2 (ಬ್ಲಡ್ ಆಕ್ಸಿಜನ್) ಮೀಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್, ಸ್ಲೀಪ್ ಮಾನಿಟರ್ ಸೇರಿದಂತೆ ಇನ್ನೂ ಹತ್ತು ಹಲವು ಫೀಚರ್ಸ್‌ಗಳನ್ನು ಈ ವಾಚ್ ಹೊಂದಿದೆ. ಹಾಗೆಯೇ ಈ ವಾಚ್‌ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ.
ಇನ್ನು ನಿಮ್ಮ ಮೊಬೈಲ್ ಆಪ್‌ಗಳಿಗೆ ಬರುವ ನೋಟಿಫಿಕೇಶನ್‌ಗಳನ್ನೂ ಅನ್ನು ಸಹ ವಾಚ್‌ನಲ್ಲಿ ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡಲಾಗಿದ್ದು, ಇದರೊಂದಿಗೆ ಬೇಸಿಕ್ ರಿಮೈಂಡರ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಂದರೆ ನೀವು ಯಾವ ಸಮಯದಲ್ಲಿ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ವಾಚ್ ನಿಮಗೆ ತಿಳಿಸುತ್ತದೆ.
ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ನೀವು 5 ದಿನಗಳು ಬಳಕೆ ಮಾಡಬಹುದು. ಇದಕ್ಕಾಗಿ 250 mAh ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿಯಿಂದ ಈ ಸ್ಮಾರ್ಟ್‌ವಾಚ್ ಪ್ಯಾಕ್ ಆಗಿದೆ. ಹಾಗಿದ್ರೆ, ತಡ ಯಾಕೆ ಬನ್ನಿ ಈ ಸ್ಮಾರ್ಟ್‌ವಾಚ್‌ನ ಆಫರ್ ಬೆಲೆ ಬಗ್ಗೆ ತಿಳಿದುಕೊಳ್ಳೋಣ.
ಫೈರ್-ಬೋಲ್ಟ್ ವಿಷನರಿ ಸ್ಮಾರ್ಟ್ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್ ಸಾಮಾನ್ಯ ದರ 16,999 ರೂ. ಗಳಾಗಿದ್ದು, ನೀವು ಇದೀಗ ಕೇವಲ 3,799 ರೂ. ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಈ ವಾಚ್‌ಗೆ 78% ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಅಂತೆಯೇ ಇದನ್ನು ನೀವು ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ.

ಇದಿಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ದಾರರೂ ಇನ್ನೂ ಹೆಚ್ಚಿನ ಡಿಸ್ಕೌಂಟ್ ಸಹ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಪಾರ್ಟನರ್ ಆಫರ್ ಸಹ ಈ ವಾಚ್ ಮೇಲೆ ಲಭ್ಯ. ಹಾಗೆಯೇ ಅಮೆಜಾನ್ ಪೇ ಲೇಟರ್ ಆಯ್ಕೆ ಹಾಗೂ ಇಎಮ್‌ಐ ಆಯ್ಕೆ ಮೂಲಕ ಈ ಸ್ಮಾರ್ಟ್‌ವಾಚ್ ಅನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.


Click it and Unblock the Notifications








