Home
ಸುದ್ದಿಜಾಲ

Smartwatch: ಫೈರ್ ಬೋಲ್ಟ್‌ನಿಂದ ಎರಡು ಸ್ಮಾರ್ಟ್‌ವಾಚ್‌ ಲಾಂಚ್; ಒಂದಕ್ಕಿಂತ ಒಂದು ಸೂಪರ್!.. ಬೆಲೆ ಎಷ್ಟು?

ಫೈರ್-ಬೋಲ್ಟ್ ಸ್ಮಾರ್ಟ್‌ವಾಚ್‌ಗಳ (Fire-Boltt Smartwatch) ವಿಭಾಗದಲ್ಲಿ ಫೈರ್-ಬೋಲ್ಟ್‌ದು ಅಗ್ರಸ್ಥಾನ. ಅದರಲ್ಲೂ ಕಡಿಮೆ ಅಂತರದಲ್ಲಿ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡುವ ಮೂಲಕ ಈ ವಿಭಾಗದಲ್ಲಿ ಬಹಳಷ್ಟು ಸಂಚಲನ ಉಂಟು ಮಾಡಿದೆ. ಈ ನಡುವೆ ಫೈರ್-ಬೋಲ್ಟ್ ಡೈಮಂಡ್ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಿದ ಬಳಿಕ ಈಗ ಮತ್ತೆ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ.

ಹೌದು ಫೈರ್-ಬೋಲ್ಟ್ ಕಂಪೆನಿ ಇದೀಗ ಕ್ಸೆಲರ್ ಮತ್ತು ಜ್ಯುವೆಲ್ ಸ್ಮಾರ್ಟ್‌ವಾಚ್‌ (Fire-Boltt Xelor and Jewel) ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳು ಪ್ರೀಮಿಯಂ ಬ್ಲೂಟೂತ್ ಕರೆ ಮಾಡುವ ಸ್ಮಾರ್ಟ್ ವಾಚ್‌ಗಳಾಗಿದ್ದು, ದೃಢವಾದ ಆಲ್-ಮೆಟಲ್ ವಿನ್ಯಾಸವನ್ನು ಪಡೆದುಕೊಂಡಿವೆ. ಇದರೊಂದಿಗೆ ಲಗ್ಸುರಿ ಎಲೈಟ್ ಎಡಿಷನ್ ಸ್ಮಾರ್ಟ್ ವಾಚ್‌ಗಳು ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ, ಇನ್‌ಬಿಲ್ಟ್ ಮೈಕ್ರೋ ಫೋನ್‌ ಫೀಚರ್ಸ್‌ ಪಡೆದುಕೊಂಡಿವೆ. ಹಾಗಿದ್ರೆ, ಈ ವಾಚ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರಗಳನ್ನು ನೋಡೋಣ ಬನ್ನಿ.

ಫೈರ್ ಬೋಲ್ಟ್‌ನಿಂದ ಎರಡು ಸ್ಮಾರ್ಟ್‌ವಾಚ್‌ ಲಾಂಚ್; ಒಂದಕ್ಕಿಂತ ಒಂದು ಸೂಪರ್!..

ಫೈರ್-ಬೋಲ್ಟ್ ಕ್ಸೆಲರ್ ಮತ್ತು ಜ್ಯುವೆಲ್ ಸ್ಮಾರ್ಟ್‌ವಾಚ್ ಫೀಚರ್ಸ್‌: ಈ ಎರಡೂ ಸ್ಮಾರ್ಟ್ ವಾಚ್‌ಗಳು ಸ್ಟೇನ್‌ಲೆಸ್ ಸ್ಟೀಲ್ ಸ್ಟ್ರಾಪ್ ಮತ್ತು ಸ್ಟೈಲಿಶ್ ಝಿಂಕ್ ಅಲಾಯ್ ಮಿಡಲ್ ಫ್ರೇಮ್‌ನೊಂದಿಗೆ ಅತ್ಯುತ್ತಮ ಶೈಲಿ ಪಡೆದುಕೊಂಡಿದ್ದು, ಕ್ಸೆಲರ್ 1.78 ಇಂಚಿನ ಆಲ್‌ವೇಸ್‌ ಆನ್ ಅಮೋಲೆಡ್‌ ಡಿಸ್ಪ್ಲೇ ಪಡೆದಿದ್ದು, 466 x 466 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 750 ನಿಟ್ಸ್‌ ಬ್ರೈಟ್‌ನೆಸ್, 75Hz ರಿಫ್ರೆಶ್ ರೇಟ್ ಪಡೆದಿದೆ.

ಹಾಗೆಯೆ ಜ್ಯುವೆಲ್ ಸ್ಮಾರ್ಟ್‌ವಾಚ್‌ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದು 320 x 386 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ ಐಪಿಎಸ್‌ ಡಿಸ್‌ಪ್ಲೇ ಆಯ್ಕೆ ಜೊತೆಗೆ 600 ನಿಟ್ಸ್‌ ಬ್ರೈಟ್‌ನೆಸ್ ಆಯ್ಕೆ ಹಾಗೂ 60Hz ರಿಫ್ರೆಶ್ ರೇಟ್‌ನೊಂದಿಗೆ ಈ ಸ್ಮಾರ್ಟ್‌ವಾಚ್‌ ಕಾಣಿಸಿಕೊಂಡಿದೆ. ಇದರೊಂದಿಗೆ ವಿಶೇಷವಾದ ಕ್ರೌನ್‌ ಬಟನ್‌ ಆಯ್ಕೆ ಈ ವಾಚ್‌ನ ಅಂದವನ್ನು ಇನ್ನಷ್ಟು ಹೆಚ್ಚು ಮಾಡಿದೆ.

ಫೈರ್ ಬೋಲ್ಟ್‌ನಿಂದ ಎರಡು ಸ್ಮಾರ್ಟ್‌ವಾಚ್‌ ಲಾಂಚ್; ಒಂದಕ್ಕಿಂತ ಒಂದು ಸೂಪರ್!..

ಉಳಿದಂತೆ ಈ ಎರಡೂ ಸ್ಮಾರ್ಟ್‌ವಾಚ್‌ಗಳು ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಬ್ಲೂಟೂತ್ ಕರೆ, ವಾಯ್ಸ್‌ ಅಸಿಸ್ಟೆಂಟ್‌ ಮತ್ತು ಇತರ ಫೀಚರ್ಸ್‌ ಅನ್ನು ಇದ ಪಡೆದುಕೊಂಡಿದೆ. ಇದರೊಂದಿಗೆ ಫೈರ್-ಬೋಲ್ಟ್ ಹೆಲ್ತ್ ಸೂಟ್ ಅಡಿಯಲ್ಲಿ ಹೃದಯ ಬಡಿತ ಮೇಲ್ವಿಚಾರಣೆ, SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಸೇರಿದಂತೆ ವಿವಿಧ ಮಾಹಿತಿಯನ್ನು ಇದು ನೀಡಲಿದೆ.

ಜೊತೆಗೆ ಈ ಎರಡೂ ಸ್ಮಾರ್ಟ್ ವಾಚ್‌ಗಳು 120+ ಸ್ಪೋರ್ಟ್‌ ಮೋಡ್‌ ಆಯ್ಕೆ ಪಡೆದುಕೊಂಡಿದ್ದು, ಸ್ಮಾರ್ಟ್ ನೋಟಿಫಿಕೇಶನ್‌ ಸೌಲಭ್ಯದೊಂದಿಗೆ IP67 ರೇಟಿಂಗ್‌ ಪಡೆದಿದ್ದು, ನೀರು ನಿರೋಧಕವಾಗಿದೆ ಮತ್ತು ಬ್ಲೂಟೂತ್ ಆವೃತ್ತಿ v5.0, ಬ್ಲೂಟೂತ್ ಕರೆ, ಕರೆ ಇತಿಹಾಸ, ತ್ವರಿತ ಡಯಲ್ ಪ್ಯಾಡ್, ಸಿಂಕ್ ಸಂಪರ್ಕಗಳು ಸೇರಿದಂತೆ ವಿವಿಧ ಸೌಕರ್ಯ ಪಡೆದುಕೊಂಡಿದೆ.

ಇಷ್ಟೇ ಅಲ್ಲದೆ ಇನ್‌ ಬಿಲ್ಟ್‌ ಗೇಮ್‌, ಹವಾಮಾನ, ಕ್ಯಾಮೆರಾ ಮತ್ತು ಸಂಗೀತ ಕಂಟ್ರೋಲ್‌, ಟೈಮರ್, ಅಲಾರ್ಮ್, ಸ್ಟಾಪ್‌ವಾಚ್ ಆಯ್ಕೆ ಪಡೆದಿದ್ದು, ಬ್ಲೂಟೂತ್‌ ಕರೆ ಸೌಲಭ್ಯದೊಂದಿಗೆ 3 ದಿನಗಳು ಹಾಗೂ ಸಾಮಾನ್ಯ ಬಳಕೆಯಲ್ಲಿ ಏಳು ದಿನಗಳು ಸೇರಿದಂತೆ 30 ದಿನಗಳ ಸ್ಟ್ಯಾಂಡ್‌ಬೈ ನೀಡಲಿದೆ.

ಫೈರ್ ಬೋಲ್ಟ್‌ನಿಂದ ಎರಡು ಸ್ಮಾರ್ಟ್‌ವಾಚ್‌ ಲಾಂಚ್; ಒಂದಕ್ಕಿಂತ ಒಂದು ಸೂಪರ್!..

ಫೈರ್-ಬೋಲ್ಟ್ ಕ್ಸೆಲರ್ ಮತ್ತು ಜ್ಯುವೆಲ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಪರಿಚಯಾತ್ಮಕ ಬೆಲೆಯಲ್ಲಿ ಕ್ರಮವಾಗಿ 2,999ರೂ.ಗಳು ಹಾಗೂ 3,999ರೂ.ಗಳ ಬೆಲೆ ಹೊಂದಿದ್ದು, ಇಂದಿನಿಂದ ಇವುಗಳನ್ನು ಖರೀದಿ ಮಾಡಬಹುದಾಗಿದೆ. ಫೈರ್-ಬೋಲ್ಟ್ ಜ್ಯುವೆಲ್ ರೋಸ್ ಗೋಲ್ಡ್ ಬಣ್ಣದಲ್ಲಿ ಮಾತ್ರ ಕಾಣಿಸಿಕೊಂಡರೆ ಕ್ಸೆಲರ್ ರೋಸ್ ಗೋಲ್ಡ್ ಪ್ರೀಮಿಯಂ, ಗೋಲ್ಡ್ ಪ್ರೀಮಿಯಂ, ಬ್ಲಾಕ್ ಪ್ರೀಮಿಯಂ, ಬ್ಲ್ಯಾಕ್ ಬೇಸಿಕ್, ಸಿಲ್ವರ್ ಬೇಸಿಕ್ ಮತ್ತು ಸಿಲ್ವರ್ ಪ್ರೀಮಿಯಂ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
Fire-Bolt company has now unveiled Fire Boltt Xeler and Jewel Smartwatch. These smartwatches are premium Bluetooth calling smartwatches.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+