Home
ಸುದ್ದಿಜಾಲ

ಫೈರ್ ಬೋಲ್ಟ್ ಲೆಗಸಿ ಸ್ಮಾರ್ಟ್‌ವಾಚ್ ಲಾಂಚ್‌: ಬೆಲೆ, ಹೊಸ ಫೀಚರ್ಸ್‌ ಬಗ್ಗೆ ತಿಳಿಯಿರಿ!

ಫೈರ್‌ ಬೋಲ್ಟ್‌ ಸಂಸ್ಥೆಯು ಪ್ರಮುಖ ಸ್ಮಾರ್ಟ್‌ವಾಚ್‌ಗಳ ತಯಾರಿಕಾ ಸಂಸ್ಥೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಈ ಕಂಪೆನಿಯ ಯಾವುದೇ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಲಿವೆ. ಅದರಂತೆ ಈ ಹಿಂದಿನ ಯಾವುದೇ ಪ್ರಮುಖ ವಾಚ್‌ನಲ್ಲಿ ಇಲ್ಲದ ವಿಶೇಷ ಫೀಚರ್ಸ್‌ನೊಂದಿಗೆ ಫೈರ್ ಬೋಲ್ಟ್ ಲೆಗಸಿ ಲಾಂಚ್ ಆಗಿದೆ.

ಹೌದು, ಫೈರ್ ಬೋಲ್ಟ್ ಇದೀಗ ಲೆಗಸಿ ಸ್ಮಾರ್ಟ್‌ವಾಚ್ (Fire Boltt Legacy) ಅನ್ನು ಅನಾವರಣ ಮಾಡಲಾಗಿದ್ದು, ಈ ಮೂಲಕ ಸಂಸ್ಥೆಯು ತನ್ನ LUXE ಆವೃತ್ತಿಯ ವಿಭಾಗಕ್ಕೆ ಹೊಸ ವಾಚ್‌ಅನ್ನು ಸೇರಿಸಿದೆ. ಜೊತೆಗೆ ಈ ವಾಚ್ ಆಲ್‌ವೇಸ್‌ ಆನ್ ಡಿಸ್‌ಪ್ಲೇ ಹೊಂದಿದ್ದು, ಸ್ಟಾಕ್ ಮಾರ್ಕೆಟ್ ಟ್ರ್ಯಾಕರ್‌ನಂತಹ ಕೆಲವು ಉದ್ಯಮ ಆಧಾರಿತ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟೆಂದು ತಿಳಿಯಿರಿ.

ಫೈರ್ ಬೋಲ್ಟ್ ಲೆಗಸಿ ಸ್ಮಾರ್ಟ್‌ವಾಚ್ ಲಾಂಚ್‌: ಬೆಲೆ, ಫೀಚರ್ಸ್‌ ಬಗ್ಗೆ ತಿಳಿಯಿರಿ!

ಫೈರ್ ಬೋಲ್ಟ ಲೆಗಸಿ ಸ್ಮಾರ್ಟ್ ವಾಚ್ ವಿನ್ಯಾಸ: ಈ ಲೆಗಸಿ ಸ್ಮಾರ್ಟ್‌ವಾಚ್‌1.43 ಇಂಚಿನ ಆಲ್‌ವೇಸ್‌ ಆನ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಎರಡು ಕ್ರೌನ್‌ ಬಟನ್‌ ಆಯ್ಕೆಯೊಂದಿಗೆ ಸಾಂಪ್ರದಾಯಿಕ ನೋಟವನ್ನೂ ಇದು ನೀಡಲಿದೆ. ಜೊತೆಗೆ ಇದು ಟೆಕ್ಸ್ಚರ್ಡ್ ಸ್ಟ್ರಾಪ್‌ಗಳೊಂದಿಗೆ ನಯವಾದ ಸ್ಟೇನ್‌ಲೆಸ್ ಸ್ಟೀಲ್ ವಿನ್ಯಾಸ ಪಡೆದುಕೊಂಡಿದೆ ಮತ್ತು 60 Hz ರಿಫ್ರೆಶ್ ರೇಟ್‌ ಆಯ್ಕೆ ಸಹ ಇದರಲ್ಲಿದೆ.

ಫೈರ್ ಬೋಲ್ಟ ಲೆಗಸಿ ಸ್ಮಾರ್ಟ್ ಪ್ರಮುಖ ಫೀಚರ್ಸ್‌: ಈ ವಾಚ್‌ನ ಫೀಚರ್ಸ್‌ ವಿಷಯಕ್ಕೆ ಬಂದರೆ ಇದು ಪ್ರಮುಖವಾಗಿ ಉದ್ಯಮವನ್ನು ಕೇಂದ್ರೀಕರಿಸಿದೆ ಎಂದೇ ಹೇಳಬಹುದು. ಯಾಕೆಂದರೆ ಈ ವಾಚ್‌ನಲ್ಲಿ ಸ್ಟಾಕ್ ಮಾರ್ಕೆಟ್ ಟ್ರ್ಯಾಕರ್‌ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಇದರೊಂದಿಗೆ ಬಳಕೆದಾರರು ತಮ್ಮ ನೆಚ್ಚಿನ ಸ್ಟಾಕ್‌ಗಳ ವಿವರವನ್ನು ತಮ್ಮ ಮಣಿಕಟ್ಟಿನ ಮೇಲೆಯೇ ಪಡೆಯಬಹುದಾಗಿದೆ.

ಇನ್ನುಳಿದಂತೆ ಈ ವಾಚ್‌ 100+ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ಫೈರ್ ಬೋಲ್ಟ್‌ನ ಸಿಗ್ನೇಚರ್ ಹೆಲ್ತ್ ಸೂಟ್ ಅನ್ನು ಪಡೆದುಕೊಂಡಿದೆ. ಜೊತೆಗೆ ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆಯ ಮೇಲ್ವಿಚಾರಣೆ, SpO2 ಮಾನಿಟರಿಂಗ್, ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಟ್ರ್ಯಾಕಿಂಗ್ ಮತ್ತು ಇತರೆ ಚಟುವಟಿಕೆ ಟ್ರ್ಯಾಕಿಂಗ್ ಅನ್ನು ಇದು ಮಾಡಲಿದ್ದು, ಬಳಕೆದಾರರಿಗೆ ಎಲ್ಲಾ ರೀತಿಯಲ್ಲೂ ಸಹಕಾರಿಯಾಗಿದೆ.

ಫೈರ್ ಬೋಲ್ಟ್ ಲೆಗಸಿ ಸ್ಮಾರ್ಟ್‌ವಾಚ್ ಲಾಂಚ್‌: ಬೆಲೆ, ಫೀಚರ್ಸ್‌ ಬಗ್ಗೆ ತಿಳಿಯಿರಿ!

ಹಾಗೆಯೇ ಈ ವಾಚ್‌ ಹಲವು ವಾಚ್ ಫೇಸ್‌ಗಳು ಮತ್ತು ವರ್ಲ್ಡ್ ಕ್ಲಾಕ್, ಸ್ಟಾಪ್‌ವಾಚ್, ಅಲಾರಾಂ, ಹವಾಮಾನ ನವೀಕರಣಗಳು, ರಿಮೋಟ್ ಮ್ಯೂಸಿಕ್ ಕಂಟ್ರೋಲ್, ರಿಮೋಟ್ ಕ್ಯಾಮೆರಾ ಕಂಟ್ರೋಲ್, ಫೈಂಡ್ ಮೈ ಫೋನ್, ಸ್ಮಾರ್ಟ್ ನೋಟಿಫಿಕೇಶನ್‌ಗಳು ಸೇರಿದಂತೆ ಸೆಡೆಂಟರಿ ರಿಮೈಂಡರ್‌ಗಳಂತಹ ಫೀಚರ್ಸ್‌ಗಳೊಂದಿಗೆ ಪ್ಯಾಕ್‌ ಆಗಿದೆ. ಇದರಿಂದಾಗಿ ಮೊಬೈಲ್‌ ಅನ್ನು ತೆರೆಯದೆಯೇ ಎಲ್ಲೇ ಇದ್ದರೂ ಸಹ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇನ್ನುಳಿದಂತೆ ಈ ವಾಚ್‌ ಬ್ಲೂಟೂತ್ ಕಾಲ್ ಫೀಚರ್ಸ್‌ ಹಾಗೂ ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆಯನ್ನೂ ಪಡೆದುಕೊಂಡಿದ್ದು, ಮತ್ತಷ್ಟು ಹೆಚ್ಚಿನ ಅನುಭವ ಲಭ್ಯವಾಗಲಿದೆ. ಹಾಗೆಯೇ ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌ ಹೊಂದಿದ್ದು, ಯಾವ ವಾತಾವರಣದಲ್ಲಾದರೂ ಅಂಜಿಕೆ ಇಲ್ಲದೆ ಈ ವಾಚ್‌ ಅನ್ನು ಬಳಕೆ ಮಾಡಬಹುದಾಗಿದೆ.

ಫೈರ್ ಬೋಲ್ಟ ಲೆಗಸಿ ಸ್ಮಾರ್ಟ್‌ವಾಚ್‌ ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 330 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರುವ ಈ ಸ್ಮಾರ್ಟ್‌ವಾಚ್‌ ಒಂದು ಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 7 ದಿನಗಳವರೆಗೆ ಬ್ಯಾಕಪ್‌ ನೀಡಲಿದೆ. ಅದರಲ್ಲೂ ಇದು ವಾಯರ್‌ಲೆಸ್‌ ಚಾರ್ಜಿಂಗ್‌ ಆಯ್ಕೆ ಪಡೆದಿರುವುದು ಇನ್ನಷ್ಟು ವಿಶೇಷ.

ಫೈರ್ ಬೋಲ್ಟ್ ಲೆಗಸಿ ಸ್ಮಾರ್ಟ್‌ವಾಚ್ ಲಾಂಚ್‌: ಬೆಲೆ, ಫೀಚರ್ಸ್‌ ಬಗ್ಗೆ ತಿಳಿಯಿರಿ!

ಫೈರ್ ಬೋಲ್ಟ್ ಲೆಗಸಿ ಸ್ಮಾರ್ಟ್‌ವಾಚ್‌ ಬೆಲೆ ಮತ್ತು ಲಭ್ಯತೆ: ಈ ಫೈರ್ ಬೋಲ್ಟ್ ಲೆಗಸಿ ಸ್ಮಾರ್ಟ್‌ವಾಚ್ ಅನ್ನು ನೀವು 3,999 ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದ್ದು, ಇದು ಕಪ್ಪು, ಕಂದು, ಬೆಳ್ಳಿ ಮತ್ತು ಕಪ್ಪು ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಚರ್ಮ ಅಥವಾ ಸ್ಟೇನ್‌ಲೆಸ್ ಸ್ಟೀಲ್‌ನ ಎರಡು ಪಟ್ಟಿಯ ಆಯ್ಕೆಗಳನ್ನು ಇದು ಹೊಂದಿದ್ದು, ನೀವು ಮಾರ್ಚ್ 25 ರಿಂದ ಫ್ಲಿಪ್‌ಕಾರ್ಟ್, ಫೈರ್‌ಬೋಲ್ಟ್ ಸೈಟ್‌ ಮೂಲಕ ಖರೀದಿ ಮಾಡಬಹುದು.

Best Mobiles in India

English summary
FireBoltt Legacy comes with some industry-first features like wireless charging and a stock market tracker.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+