ಇನ್ಮುಂದೆ ಮೊಬೈಲ್ ಬ್ಯಾಟರಿ ಖಾಲಿಯಾಗುತ್ತದೆ ಎಂಬ ಚಿಂತೆಯನ್ನು ಬಿಟ್ಟುಬಿಡಿ!!

|

ನಿಮ್ಮ ಸ್ಮಾರ್ಟ್​ಫೋನ್​ ಅನ್ನು ಎಷ್ಟು ಸಮಯ ಬಳಸಬಹುದು ಎಂಬುದನ್ನು ನಿರ್ಧರಿಸುವುದು ಅದರಲ್ಲಿ ಅಳವಡಿಸಿರುವ ಬ್ಯಾಟರಿಯ ಸಾಮರ್ಥ್ಯ. ಸ್ಮಾರ್ಟ್‌ಫೋನ್ ಶಕ್ತಿ ಹೆಚ್ಚಳವಾದಷ್ಟು ಸಹ ಬ್ಯಾಟರಿ ಬಹುಬೇಗ ವಿನಿಯೋಗವಾಗುತ್ತದೆ ಎಂಬುದು ಗೊತ್ತು. ಆದರೆ, 24 ಗಂಟೆಯೂ ಸ್ಮಾರ್ಟ್‌ಫೋನನ್ನು ಬಳಸಿ ಎಷ್ಟು ದಿನವಾದರೂ ಬ್ಯಾಟರಿ ಖಾಲಿಯಾಗದಿದ್ದರೆ ಹೇಗಿರುತ್ತದೆ ಹೇಳಿ.?

ಇನ್ಮುಂದೆ ಮೊಬೈಲ್ ಬ್ಯಾಟರಿ ಖಾಲಿಯಾಗುತ್ತದೆ ಎಂಬ ಚಿಂತೆಯನ್ನು ಬಿಟ್ಟುಬಿಡಿ!!

ಹೌದು, ಇನ್ಮುಂದೆ ಮೊಬೈಲ್ ಬ್ಯಾಟರಿ ಬಹುಬೇಗ ಖಾಲಿಯಾಗುತ್ತದೆ ಎಂಬ ಚಿಂತೆಯನ್ನು ಬಿಟ್ಟುಬಿಡಿ. ಏಕೆಂದರೆ, ಮೊಬೈಲ್‌ನಲ್ಲಿ ಬ್ಯಾಟರಿಯೇ ಇಲ್ಲವಾಗಿಸಲು ಇದೀಗ ವಿಜ್ಞಾನಿಗಳು ಪವಾಡವನ್ನೇ ನಡೆಸಿದ್ದಾರೆ. ಅಂದರೆ, ಸಂಶೋಧಕರು ನೂತನ ಪ್ರಯೋಗವನ್ನು ಮಾಡಿದ್ದು, ಬ್ಯಾಟರಿಯಿಲ್ಲದ ಮೊಬೈಲ್​ ಫೋನ್​​​​ವೊಂದನ್ನು ಕಂಡುಹಿಡಿದು ವಿಶ್ವಕ್ಕೇ ಅಚ್ಚರಿ ಮೂಡಿಸಿದ್ದಾರೆ.

ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಬಳಕೆ ಮಿತಿಗಳಲ್ಲಿ ಬ್ಯಾಟರಿ ಬಹುಬೇಗ ಖಾಲಿಯಾಗುತ್ತಿರುವುದು ಕೂಡ ಒಂದು. ಹಾಗಾಗಿ ಮೊಬೈಲ್ ಫೋನ್​ ಬ್ಯಾಟರಿ ಶಕ್ತಿಯನ್ನು ಹೆಚ್ಚಿಸಲು ಮೊಬೈಲ್ ತಯಾರಿಕ ಸಂಸ್ಥೆಗಳು ನಾನಾ ತರಹದ ಪ್ರಯೋಗಗಳನ್ನು ನಡೆಸುತ್ತಿವೆ. ಆದರೆ, ಅಮೆರಿಕಾದ ಸಂಶೋಧಕರು ಬ್ಯಾಟರಿಯಿಲ್ಲದ ಮೊಬೈಲ್​ ಅನ್ನು ಕಂಡುಹಿಡಿದಿದ್ದಾರೆ.

ಇನ್ಮುಂದೆ ಮೊಬೈಲ್ ಬ್ಯಾಟರಿ ಖಾಲಿಯಾಗುತ್ತದೆ ಎಂಬ ಚಿಂತೆಯನ್ನು ಬಿಟ್ಟುಬಿಡಿ!!

ಯುನಿವರ್ಸಿಟಿ ಆಫ್​ ವಾಷಿಂಗ್ಟನ್​​​​ ಸಂಶೋಧಕರು ನೂತನ ಪ್ರಯೋಗವನ್ನು ನಡೆಸಿ ಬ್ಯಾಟರಿಯಿಲ್ಲದ ಮೊಬೈಲ್​ ಫೋನ್​​​​ವೊಂದನ್ನು ಕಂಡುಹಿಡಿದಿದ್ದು, ಪ್ರಕೃತಿದತ್ತವಾಗಿ ಲಭ್ಯವಿರುವ ಶಕ್ತಿಯನ್ನು ಉಪಯೋಗಿಸಿ ಈ ಮೊಬೈಲ್ ಕೆಲಸ ಮಾಡಲಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಬ್ಯಾಟರಿ ರಹಿತ ಫೋನ್ ಬರುವ ದಿನ ದೂರವಿಲ್ಲ ಎಂದು ಸಂಶೋಧನ ತಂಡ ಹೇಳಿದೆ.

ವಿದ್ಯುತ್​​ ಶಕ್ತಿಗೆ ಬದಲಾಗಿ ರೇಡಿಯೋ ಸಿಗ್ನಲ್ಗಳ ಮೂಲಕ ಬೆಳಕಿಗೆ ಅಗತ್ಯವಿರುವ ಮೈಕ್ರೋವ್ಯಾಟ್​​​ಗಳನ್ನು ಬಳಸಿಕೊಂಡು ತಯಾರಾಗಿರುವ ಈ ಬ್ಯಾಟರಿ ರಹಿತ ಮೊಬೈಲ್ ಫೋನಿನಲ್ಲಿ ಸಂಶೋಧಕರು ಸ್ಕೈಪ್​​ ಕರೆಗಳನ್ನು ಮಾಡಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಭವಿಷ್ಯದ ಮೊಬೈಲ್‌ಗಳು ಬ್ಯಾಟರಿ ಇಲ್ಲದೇ ಚಾಲೂ ಆಗುತ್ತವೆ ಎಂದು ಹೇಳಬಹುದು.

ಓದಿರಿ: ನೀವು ಹಿಂದೆಯೂ ಕೇಳಿರದ ಹಾಗೂ ಮುಂದೆಯೂ ಕೇಳಲು ಸಾಧ್ಯವಾಗದ ವಿಚಿತ್ರ ಘಟನೆ!!

ಬೆಂಗಳೂರಿನಲ್ಲೇ ಮೊದಲು!..'ಎಟಿಎಂ' ಮೂಲಕ ಶಿಯೋಮಿ ಮೊಬೈಲ್ ಖರೀದಿಸಿ!!

ಬೆಂಗಳೂರಿನಲ್ಲೇ ಮೊದಲು!..'ಎಟಿಎಂ' ಮೂಲಕ ಶಿಯೋಮಿ ಮೊಬೈಲ್ ಖರೀದಿಸಿ!!

ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಬಿಡಿಭಾಗಗಳನ್ನು ತ್ವರಿತವಾಗಿ ಖರೀದಿಸಲು ಅವಕಾಶ ಮಾಡಿಕೊಡಲು ಶಿಯೋಮಿ ಕಂಪೆನಿ ಕ್ರಾಂತಿಕಾರಿಕ ವಿಧಾನವೊಂದನ್ನು ಬೆಂಗಳೂರಿನಲ್ಲಿ ಪರಿಚಯಿಸಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿಯೋಮಿ ಮಳಿಗೆಯಲ್ಲಿ, ಶಿಯೋಮಿ ಉತ್ಪನ್ನಗಳನ್ನು ಖರೀದಿಸಬಹುದಾದ 'ಎಟಿಎಂ' ಮಷಿನ್ ಒಂದನ್ನು ಅಳವಡಿಸಿದೆ.

ಹೌದು, ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಪಾರುಪತ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾದ ಮೊಬೈಲ್‌ ಉತ್ಪಾದಕ ಕಂಪನಿಯಾದ ಶಿಯೋಮಿ ಹೊಸ ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು ಎಟಿಎಂ ಮೂಲಕ ಸ್ಮಾರ್ಟ್‌ಫೋನ್‌ ಮತ್ತು ಮೊಬೈಲ್ ಬಿಡಿಭಾಗಗಳನ್ನು ಖರೀದಿಸಬಹುದಾಗಿದ್ದು, ಬೆಂಗಳೂರಿನಲ್ಲಿ ದೇಶದ ಮೊದಲ ಎಟಿಎಂ ಅನ್ನು ಸ್ಥಾಪಿಸಿದೆ.

ಈ ಎಟಿಎಂ ಅನ್ನು 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ಎಂದು ಕರೆಯಲಾಗಿದ್ದು, ಇದರಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್‌ ಕಾರ್ಡ್ ಮತ್ತು ಯುಪಿಐ ಸೇರಿದಂತೆ ಡಿಜಿಟಲ್ ಆಗಿ ವ್ಯವಹಾರ ನಡೆಸಬಹುದು ಎಂದು ಕಂಪೆನಿ ತಿಳಿಸಿದೆ. ಹಾಗಾದರೆ, ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಶಿಯೋಮಿ ಎಟಿಎಂ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಏನಿದು 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್'

ಏನಿದು 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್'

ಮೊದಲೇ ಹೇಳಿದಂತೆ, 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ಒಂದು ಎಟಿಎಂ ರೀತಿಯ ಯಂತ್ರವಾಗಿದ್ದಯ, ಇದರಲ್ಲಿ ಗ್ರಾಹಕರು ತಮಗೆ ಬೇಕಾದ ಶಿಯೋಮಿ ಉತ್ಪನ್ನಗಳನ್ನು ಖರೀದಿಸಬಹುದು. ಅದಕ್ಕೆ ತಗುಲುವ ವೆಚ್ಚವನ್ನು ಡೆಬಿಟ್, ಕ್ರೆಡಿಟ್‌, ನಗದು ಹಾಗೂ ಯುಪಿಐ ಕೋಡ್‌ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆಯನ್ನು ಈ ಯಂತ್ರದಲ್ಲಿ ಕಲ್ಪಿಸಲಾಗಿದೆ. ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಈ ಯಂತ್ರ 200 ಮೊಬೈಲ್‌ಗಳನ್ನು ತನ್ನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಬೆಂಗಳೂರಿನಲ್ಲೇ ಮೊದಲು ಸ್ಥಾಪನೆ!

ಬೆಂಗಳೂರಿನಲ್ಲೇ ಮೊದಲು ಸ್ಥಾಪನೆ!

ಮುಂದಿನ ಕೆಲವು ತಿಂಗಳುಗಳಲ್ಲೇ ಭಾರತದ ಮೆಟ್ರೋ ನಗರಗಳಲ್ಲಿ 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ಎಟಿಎಂ ಮಷಿನ್ ಅನ್ನು ಸ್ಥಾಪಿಸಲು ಶೀಯೋಮಿ ಕಂಪನಿ ಮುಂದಾಗಿದೆ. ಮೆಟ್ರೋ ನಗರಗಳ ಏರ್‌ಪೋರ್ಟ್‌, ಮೆಟ್ರೋ ನಿಲ್ದಾಣ, ಶಾಪಿಂಗ್‌ ಮಾಲ್‌ ಸೇರಿದಂತೆ ಇನ್ನಿತರ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್‌ ವಿತರಣಾ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಇದರ ಆರಂಭವಾಗಿ ಬೆಂಗಳೂರಿನಲ್ಲಿ ದೇಶದ ಮೊದಲ ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಂಡ ಎಟಿಎಂ ಅನ್ನು ಸ್ಥಾಪಿಸಿದೆ.

ಇದರಲ್ಲಿ ಮೊಬೈಲ್ ಖರೀದಿ ಹೇಗೆ?

ಇದರಲ್ಲಿ ಮೊಬೈಲ್ ಖರೀದಿ ಹೇಗೆ?

'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ವಿತರಣಾ ಯಂತ್ರಗಳಲ್ಲಿ ಗ್ರಾಹಕರು ತಮಗೆ ಬೇಕಾದ ಮೊಬೈಲ್‌ಗಳನ್ನು ಖರೀದಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ ಹಾಗೂ ಬಿಡಿಭಾಗಗಳಿಗಾಗಿಯೇ ಮಾತ್ರವೇ ವಿನ್ಯಾಸಗೊಳಿಸಲಾದ ಈ ಯಂತ್ರದಲ್ಲಿ ಎಟಿಎಂ ರೀತಿಯಲ್ಲೇ ವ್ಯವಹಾರ ನಡೆಯಲಿದೆ. ಆ ಯಂತ್ರದ ಮುಂದೆ ನಿಂತು ನಿಮಗೆ ಬೇಕಾದ ಯಾವುದೇ ಶಿಯೋಮಿ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ಅದನ್ನು ಖರೀದಿಸಬಹುದು. ಒಮ್ಮೆ ಆಯ್ಕೆ ಮಾಡಿಕೊಂಡ ವಸ್ತುವಿಗೆ ಹಣ ಪಾವತಿಸಿದರೆ ಆ ಕೂಡಲೇ ಆ ಉತ್ಪನ್ನ ನಿಮ್ಮ ಕೈಸೇರಲಿದೆ.

ಹೆಚ್ಚು ಆಫರ್‌ಗಳು ಸಹ ದೊರೆಯಲಿವೆ.!

ಹೆಚ್ಚು ಆಫರ್‌ಗಳು ಸಹ ದೊರೆಯಲಿವೆ.!

ಡೆಬಿಟ್‌, ಕ್ರೆಡಿಟ್‌, ನಗದು ಹಾಗೂ ಯುಪಿಐ ಕೋಡ್‌ ಮೂಲಕ ಪಾವತಿ ಮಾಡಬಹುದಾದ ವ್ಯವಸ್ಥೆ ಹೊಂದಿರುವ 'ಮಿ ಎಕ್ಸ್ಪ್ರೆಸ್ ಕಿಯೋಸ್ಕ್' ವಿತರಣಾ ಯಂತ್ರಗಳಲ್ಲಿ ಗ್ರಾಹಕರು ಆನ್‌ಲೈನ್ ರೀತಿಯ ಆಫರ್‌ಗಳನ್ನು ಸಹ ಪಡೆಯಬಹುದಾಗಿದೆ. ಆನ್‌ಲೈನಿನಲ್ಲಿ ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ನೀಡುವಂತೆ ಇಲ್ಲೂ ಕ್ಯಾಶ್‌ಬ್ಯಾಕ್ ನೀಡಲು ಶಿಯೋಮಿ ಚಿಂತಿಸಿದೆ. ಅಗತ್ಯಬಿದ್ದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಕಿಯೋಸ್ಕ್‌ಗಳ ನಿರ್ವಹಣೆಗೆ ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಕಂಪನಿ ಹೇಳಿದೆ.

ಕಿಯೋಸ್ಕ್ ಯೋಜನೆ ಹೊಳೆದದ್ದು ಹೇಗೆ?

ಕಿಯೋಸ್ಕ್ ಯೋಜನೆ ಹೊಳೆದದ್ದು ಹೇಗೆ?

ಭಾರತದಲ್ಲಿ ಆನ್‌ಲೈನ್‌ ಮೂಲಕ ತನ್ನ ವಹಿವಾಟು ಆರಂಭಿಸಿದ್ದ ಶಿಯೋಮಿ ತನ್ನ ಜನಪ್ರಿಯತೆ ಉತ್ತುಂಗಕ್ಕೇರಿದ ನಂತರ ರಿಟೇಲರ್ ಅಂಗಡಿಗಳಿಗೆ ಕಾಲಿಟ್ಟಿತು. ಇದಾದ ನಂತರ ಭಾರತದಲ್ಲಿ ಮಾರಾಟವಾದ ಒಟ್ಟಾರೆ ಶಿಯೋಮಿ ಮೊಬೈಲ್‌ಗಳ ಪೈಕಿ ಶೇ.50ರಷ್ಟು ಮೊಬೈಲ್‌ಗಳು ರಿಟೇಲರ್‌ ಅಂಗಡಿಗಳಲ್ಲೇ ಮಾರಾಟವಾಗುತ್ತಿವೆ. ಇದೇ ಕಾರಣಕ್ಕಾಗಿ ಭಾರತದಲ್ಲಿ ಮಿ ಎಕ್ಸ್‌ಪ್ರೆಸ್‌ ಕಿಯೋಸ್ಕ್ ತಂತ್ರಜ್ಞಾನವನ್ನು ಶಿಯೋಮಿ ತಂದಿದೆ. ಹೆಚ್ಚು ಗ್ರಾಹಕರ ಸೆಳೆಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

Best Mobiles in India

English summary
University of Washington researchers have invented a cellphone that requires no batteries . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X