ನೀವು ಹಿಂದೆಯೂ ಕೇಳಿರದ ಹಾಗೂ ಮುಂದೆಯೂ ಕೇಳಲು ಸಾಧ್ಯವಾಗದ ವಿಚಿತ್ರ ಘಟನೆ!!

|

ಮಲೇಶ್ಯಾ ದೇಶದಲ್ಲಿ ಒಂದು ಕಾನೂನಿನಿದೆ. ಆ ಕಾನೂನಿನ ಪ್ರಕಾರ ಅಪ್ರಾಪ್ತರ ಆತ್ಮಹತ್ಯೆಗೆ ಯಾರು ಪ್ರೇರಣೆ ನೀಡುತ್ತಾರೋ ಅವರು ದೋಷಿ ಎಂದು ಸಾಬೀತಾದರೆ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ ಅಥವಾ ಅವರು 20 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ. ಇಂತಹದೊಂದು ಕಾನೂನು ಈಗ ಅಲ್ಲಿನ ಸಾವಿರಾರು ಇನ್‌ಸ್ಟಗಾಮ್ ಬಳಕೆದಾರರ ಕುತ್ತಿಗೆಗೆ ಬಂದಿರುವ ವಿಚಿತ್ರ ಘಟನೆ ಮಲೇಶ್ಯಾದ ಸಾರಾವಾಕ್ ಎಂಬಲ್ಲಿ ನಡೆದಿದೆ.

ನೀವು ಹಿಂದೆಯೂ ಕೇಳಿರದ ಹಾಗೂ ಮುಂದೆಯೂ ಕೇಳಲು ಸಾಧ್ಯವಾಗದ ವಿಚಿತ್ರ ಘಟನೆ!!

ಹೌದು, ನೀವು ಹಿಂದೆಯೂ ಕೇಳಿರದ ಹಾಗೂ ಮುಂದೆಯೂ ಕೇಳಲು ಸಾಧ್ಯವಾಗದಂತಹ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಡೆದ ಸಮೀಕ್ಷೆಯೊಂದಕ್ಕೆ ಮತಹಾಕಿದ ಪರಿಣಾಮ ಈಗ ಇನ್‌ಸ್ಟಗಾಮ್ ಬಳಕೆದಾರರು ಪರದಾಡುತ್ತಿದ್ದಾರೆ. ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗ ಸಮೀಕ್ಷೆಗೆ ಮತಹಾಕಿದ ಇನ್‌ಸ್ಟಗಾಮ್ ಬಳಕೆದಾರರು ತಪ್ಪಿತಸ್ಥರು ಎಂದು ತನಿಖೆ ನಡೆಸಲು ಒತ್ತಾಯಿಸುತ್ತಿರುವುದು ಈಗ ಅವರ ಕುತ್ತಿಗೆಗೆ ತಂದಿದೆ.

ಘಟನೆ ವಿವರ ಹೀಗಿದ್ದು, ಮಲೇಶ್ಯಾ ದೇಶದಲ್ಲಿನ ಸಾರಾವಾಕ್ ಪೊಲೀಸರ ಮಾಹಿತಿ ಪ್ರಕಾರ, ಮೇ 13ರಂದು 16 ವರ್ಷದ ಹುಡುಗಿಯೊಬ್ಬಳು ಇನ್ಸ್ ಸ್ಟಾಗ್ರಾಮ್ ಫೋಟೋ ಶೇರಿಂಗ್ ಆಪ್ ನಲ್ಲಿ 'ಇದು ತುಂಬಾ ಮುಖ್ಯವಾದದ್ದು..ನನಗೆ D/L ಆಯ್ಕೆ ಮಾಡಲು ನೆರವು ನೀಡಿ ಎಂದು ಪ್ರಶ್ನೆ ಕೇಳಿದ್ದಳು. ಇನ್‌ಸ್ಟಗಾಮ್ ಸಮೀಕ್ಷೆಗೆ ಬಾಲಕಿಯ ಶೇ.69ರಷ್ಟು ಫಾಲೋವರ್ಸ್ "ಡಿ" ಆಯ್ಕೆ ಮಾಡಿಕೊಳ್ಳಲು ಸಹಮತ ಸೂಚಿಸಿದ್ದರು.! ಆ ಬಳಿಕ ಹುಡುಗಿ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.!

ನೀವು ಹಿಂದೆಯೂ ಕೇಳಿರದ ಹಾಗೂ ಮುಂದೆಯೂ ಕೇಳಲು ಸಾಧ್ಯವಾಗದ ವಿಚಿತ್ರ ಘಟನೆ!!

ಈ ಪ್ರಕರಣದ ಬಗ್ಗೆ ಮಾತನಾಡಿರುವ ವಕೀಲ ಹಾಗೂ ಸಂಸತ್ ಸದಸ್ಯ ರಾಮ್ ಕರ್ಪಾಲ್ ಸಿಂಗ್, ಇನ್‌ಸ್ಟಗಾಮ್ ನಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯಾರು ವೋಟ್ ಹಾಕಿದ್ದಾರೋ ಅವರೇ ಕಾರಣರಾಗುತ್ತಾರೆ. ಈ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಒಂದು ವೇಳೆ ಈ ಪ್ರಕರಣದಲ್ಲಿ ಇನ್‌ಸ್ಟಗಾಮ್ ಬಳಕೆದಾರರು ತಪ್ಪಿತಸ್ಥರು ಎಂದು ತೀರ್ಮಾನವಾದರೆ ಆ ಕಾನೂನಿನ ಪ್ರಕಾರ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ ಅಥವಾ 20 ವರ್ಷಗಳ ಕಾಲ ಜೈಲುಶಿಕ್ಷೆಯಾಗಲಿದೆಯಂತೆ.!

ಓದಿರಿ: ಬೆಂಗಳೂರಿನಲ್ಲೇ ಮೊದಲು!..'ಎಟಿಎಂ' ಮೂಲಕ ಶಿಯೋಮಿ ಮೊಬೈಲ್ ಖರೀದಿಸಿ!!

Best Mobiles in India

English summary
Malaysia's youth and sports minister, Syed Saddiq Syed Abdul Rahman, also called for a probe, saying that rising suicide rates and mental health issues among young people needed to be taken seriously.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X