Subscribe to Gizbot

ಬೆಳಕಿನಿಂದ ಡೇಟಾ ವರ್ಗಾಯಿಸುವ ಹೊಸ ಚಿಪ್

Written By:

ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದಾದರೊಂದು ರೀತಿಯ ಹೊಸ ಟೆಕ್ನಾಲಜಿಯ ಅಲೆ ಬರುತ್ತಲೇ ಇರುತ್ತದೆ. ಅಂತೆಯೇ ಇಷ್ಟುದಿನ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ಗಳ ನಡುವೆ ಡೇಟಾ ವರ್ಗಾವಣೆ ಮಾಡಲು ಬಳಸುತ್ತಿದ್ದ ಮೈಕ್ರೊಪ್ರೊಸೆಸರ್‌ ಚಿಪ್‌ ಬದಲಾಗಿ ಈಗ ಬೆಳಕಿನ ಆಧಾರದಿಂದ ಡೇಟಾ ವರ್ಗಾವಣೆ ಮಾಡುವ ಹೊಸ ಚಿಪ್‌ ಅನ್ನು ಅಭಿವೃದ್ದಿಪಡಿಸಲಾಗಿದೆ. ಈ ಚಿಪ್‌ ಮೊಟ್ಟಮೊದಲು ಕೇವಲ ಬೆಳಕಿನ ಆಧಾರದಿಂದ ಡೇಟಾ ವರ್ಗಾವಣೆ ಮಾಡಿದ ಮೊದಲ ಚಿಪ್‌ ಎಂಬ ಖ್ಯಾತಿಗೆ ಹೆಸರಾಗಿದೆ. ಹಾಗಾದರೆ ಇದರ ಬಗೆಗಿನ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

ಓದಿರಿ: 2015 ರ ಟಾಪ್ ಸ್ಮಾರ್ಟ್‌ ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಳಕಿನಿಂದ ಡೇಟಾ ವರ್ಗಾವಣೆ

ಮೈಕ್ರೋ ಪ್ರೊಸೆಸರ್ಸ್‌ ಚಿಪ್‌

ಭಾರತೀಯ ಮೂಲದ ಇಬ್ಬರು ಸಂಶೋಧಕರು ಸೇರಿದಂತೆ ವಿಜ್ಞಾನಿಗಳ ತಂಡವೊಂದು ಅಭಿವೃದ್ದಿಪಡಿಸಿರುವ ಮೈಕ್ರೋಪ್ರೊಸೆಸರ್ ಚಿಪ್‌ ಒಂದು ಇದೇ ಮೊದಲಬಾರಿಗೆ ಡೇಟಾ ವರ್ಗಾವಣೆ ಮಾಡಲು ಬೆಳಕನ್ನು ಮಾತ್ರ ಅವಲಂಭಿಸಿದೆ.

ಅತಿವೇಗವಾಗಿ ಡೇಟಾ ವರ್ಗಾವಣೆ

ಮೈಕ್ರೋ ಪ್ರೊಸೆಸರ್ಸ್‌ ಚಿಪ್‌

ಈ ಹೊಸ ಆವಿಷ್ಕಾರವು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಮೂಡಿಸಿದ್ದು, ವೇಗವಾಗಿ ಡೇಟಾ ವರ್ಗಾವಣೆ ಮಾಡುತ್ತದೆ. ಹಾಗೂ ಹೆಚ್ಚು ಶಕ್ತಿಶಾಲಿ ಗಣನಾ ವ್ಯವಸ್ಥೆಯನ್ನು ಮತ್ತು ನೆಟ್‌ವರ್ಕ್‌ ಅನ್ನು ಕಲ್ಪಿಸಿಕೊಳ್ಳುತ್ತದೆ.

ಪ್ರಭಾವಿ ಬದಲಾವಣೆ

ಮೈಕ್ರೋ ಪ್ರೊಸೆಸರ್ಸ್‌ ಚಿಪ್‌

ಬೆಳಕಿನ ಆಧಾರಿತ ಡೇಟಾ ವರ್ಗಾವಣೆಯ ಮೈಕ್ರೋಪ್ರೊಸೆಸರ್ ಅಭಿವೃದ್ದಿ ಇಂದಾಗಿ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ ಮತ್ತು ಸೂಪರ್‌ ಕಂಪ್ಯೂಟರ್‌ಗಳ ಅಧಿಕ ಡೇಟಾ ವರ್ಗಾವಣೆಯಲ್ಲಿ ಪ್ರಭಾವಿ ಬದಲಾವಣೆಯಾಗಿದೆ. ಈಗಾಗಲೇ ಕೆಲವು ಕೆಲವು ಕಂಪ್ಯೂಟರ್‌ ತಯಾರಕರು ನೆಟ್‌ವರ್ಕ್‌ ಚಿಪ್‌ನ ಆಧಾರದಲ್ಲಿ ಈಗಾಗಲೇ ಕೆಲಸ ಆರಂಭಿಸಿದ್ದಾರೆ ಎಂದು ಅಮೇರಿಕ ಕೊಲೊರೆಡೊ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ 'ಮಿಲೋಸ್‌ ಪೊಪೊವಿಕ್‌ ಹೇಳಿದ್ದಾರೆ.

 ಸಾಂಪ್ರಾದಾಯಿಕ ಮೈಕ್ರೊಪ್ರೊಸೆಸರ್ ಚಿಪ್‌

ಮೈಕ್ರೋ ಪ್ರೊಸೆಸರ್ಸ್‌ ಚಿಪ್‌

ಈ ಹಿಂದಿನ ಚಿಪ್‌ ಮಾಹಿತಿ ವರ್ಗಾವಣೆಗಾಗಿ ಹಾಗೂ ಲ್ಯಾಪ್‌ಟಾಪ್‌ ಮತ್ತು ಸೂಪರ್‌ಕಂಪ್ಯೂಟರ್‌ಗಳ ನಡುವೆ ಸಂವಹಿಸಲು ಎಲೆಕ್ಟ್ರಿಕಲ್ ಸರ್ಕ್ಯೂಟ್ ಅನ್ನು ಬಳಸಿಕೊಳ್ಳುತ್ತಿತ್ತು. ಹಾಗೂ ಹೆಚ್ಚು ವೇಗಗೊಳಿಸಲು ಈ ಚಿಪ್‌ ಹೆಚ್ಚು ವಿದ್ಯುತ್‌ ಅನ್ನು ಬಳಸುಕೊಳ್ಳುತ್ತಿತ್ತು. ಆದ್ದರಿಂದ ಈ ಸಮಸ್ಯೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಬೆಳಕಿನ ಆಧಾರಿತ ಚಿಪ್‌ ಅನ್ನು ಆವಿಷ್ಕರಿಸಲು ಸಂಶೋಧಕರು ಮುಂದಾಗಿದ್ದರು.

ಹೊಸ ಮೈಕ್ರೊಪ್ರೊಸೆಸರ್ ಚಿಪ್‌

ಮೈಕ್ರೋ ಪ್ರೊಸೆಸರ್ಸ್‌ ಚಿಪ್‌

ಈ ಚಿಪ್‌ ಅನ್ನು ಕೊಲೆರೆಡೊ ಬೌಲ್ಡರ್‌ ವಿಶ್ವವಿದ್ಯಾನಿಲಯದ ರಾಜೇಶ್‌ ಕುಮಾರ್‌ ಸಹ ಈ ಬೆಳಕಿನ ಆಧಾರಿತ ಚಿಪ್‌ ಅನ್ನು ಸಂಶೋಧಿಸುವಲ್ಲಿ ಭಾಗಿಯಾಗಿದ್ದಾರೆ.

ಕಾರ್ಯ ವಿಶೇಷತೆ ಏನು ?

ಮೈಕ್ರೋ ಪ್ರೊಸೆಸರ್ಸ್‌ ಚಿಪ್‌

ಪ್ರಸ್ತುತದಲ್ಲಿ ಅಭಿವೃದ್ದಿಗೊಳಿಸಿರುವ ಚಿಪ್‌ ಡೇಟಾ ವರ್ಗಾವಣೆ ಮಾಡಲು ಕೇವಲ ಬೆಳಕನ್ನು ಆಧರಿಸಿದ್ದು, ಮೊದಲಿನ ಚಿಪ್‌ಗಿಂತ ಕಡಿಮೆ ವಿದ್ಯುತ್‌ ಶಕ್ತಿಯನ್ನು ಬಳಸಿಕೊಒಳ್ಳುತ್ತದೆ. ಅಲ್ಲದೇ ಹೆಚ್ಚು ವೇಗವಾಗಿ ಮಾಹಿತಿಯನ್ನು ವಿಶಾಲ ದೂರದವರೆಗೂ ಸಹ ವರ್ಗಾವಣೆ ಮಾಡುತ್ತದೆ.

 ಹೊಸ ಚಿಪ್‌

ಮೈಕ್ರೋ ಪ್ರೊಸೆಸರ್ಸ್‌ ಚಿಪ್‌

ಹೊಸ ಚಿಪ್‌ 300 ಜಿಬಿ ಬ್ಯಾಂಡ್‌ವಿಡ್ತ್‌ ಸಾಂದ್ರತೆಯನ್ನು 1 ಸೆಕೆಂಡಿಗೆ 1 ಚದರ ಮಿಲಿಮೀಟರ್‌ ಹೊಂದಿದೆ.

 ಲೇಖನಗಳು

ಗಿಜ್‌ಬಾಟ್‌ನ ಇತ್ತೀಚಿನ ಲೇಖನಗಳು

ಸರ್ಕಾರಿ ಯೋಜನೆಗಳನ್ನು ತಿಳಿಯಲು ಮೊಬೈಲ್‌ ಅಪ್ಲಿಕೇಶನ್‌

ನಾಸಾದಿಂದ ಫೋನ್ ಬ್ಯಾಟರಿ ಹೆಚ್ಚಿಸುವ ಚಿಪ್ ಸಂಶೋಧನೆ

ಶಾಶ್ವತವಾಗಿ ಡಾಟಾ ಉಳಿಸುವ ಲೈಟ್‌ ಮೆಮೊರಿ ಚಿಪ್‌

ಕನ್ನಡ ಗಿಜ್‌ಬಾಟ್‌ನ ಲೇಖನಗಳು ನಿಮಗೆ ಫೇಸ್‌ಬುಕ್‌ನಲ್ಲೂ ಲಭ್ಯ. ಓದಲು ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

https://www.facebook.com/GizBotKannada/?fref=ts

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A microprocessor chip that uses light, rather than electricity, to transfer data at rapid speeds while consuming minute amounts of energy has been developed by researchers, including those of Indian-origin. Read more in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot