Driverless metro train: ಬೆಂಗಳೂರು ಮೆಟ್ರೋದಲ್ಲಿ ಮೊದಲ ಚಾಲಕ ರಹಿತ ರೈಲು! ಚೀನಾದಿಂದ ಚೆನ್ನೈ ಬಂದರಿಗೆ ಈಗಾಗಲೇ ಎಂಟ್ರಿ
ಬೆಂಗಳೂರು (Bangalore) ಇತರೆ ಮಹಾನಗರಗಳಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತದೆ. ಈ ಕಾರಣಕ್ಕೆ ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಬಂದು ಜನರು ಜೀವನ ಮಾಡುತ್ತಾರೆ. ಈ ನಡುವೆ ಜನರಿಗೆ ಸುಲಭ ಸಂಚಾರ ಅನುಕೂಲಕ್ಕೆ ನಮ್ಮ ಮೆಟ್ರೋ ವಿಶೇಷ ಸೇವೆ ನೀಡುತ್ತಿದ್ದು, ಬೆಂಗಳೂರು ಜನತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಹೌದು, ಬೆಂಗಳೂರಲ್ಲಿ ಇನ್ಮುಂದೆ ಚಾಲಕ ರಹಿತ ರೈಲು (Driverless metro train) ಸಂಚಾರ ಮಾಡಲಿದೆ. ಈಗಾಗಲೇ ಈ ರೈಲು ಚೀನಾದಿಂದ ಚೆನ್ನೈ ಬಂದರಿಗೆ ಬಂದಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಮೆಟ್ರೋದ ಮೊದಲ ಚಾಲಕ ರಹಿತ ರೈಲು ಮಂಗಳವಾರ ಚೆನ್ನೈ ಬಂದರಿನಲ್ಲಿ ಡೆಲಿವರಿ ಆಗಿದ್ದು, ಚೀನಾದಿಂದ ಭಾರತಕ್ಕೆ ತಲುಪಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಹಾಗಿದ್ರೆ, ಈ ರೈಲು ಯಾವ ಮಾರ್ಗದಲ್ಲಿ ಸಂಚಾರ ಮಾಡಲಿದೆ?, ಜೊತೆಗೆ ಇದು ಹೇಗೆ ಕೆಲಸ ಮಾಡಲಿದೆ?, ಏನೆಲ್ಲಾ ಟೆಕ್ನಾಲಜಿ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರಲ್ಲಿ ಚಾಲಕ ರಹಿತ ರೈಲು: ಬೆಂಗಳೂರಲ್ಲಿ ಶೀಘ್ರದಲ್ಲೇ ಈ ಚಾಲಕ ರಹಿತ ಮೆಟ್ರೋ ರೈಲು ಸೇವೆಗೆ ಸಿದ್ಧವಾಗಲಿದೆ. ವರದಿಯ ಪ್ರಕಾರ, ಬಂದರಿನಲ್ಲಿ ಕಸ್ಟಮ್ಸ್ ಅನುಮತಿ ಪಡೆದ ನಂತರ ಈ ಚಾಲಕ ರಹಿತ ರೈಲನ್ನು ಬೆಂಗಳೂರಿಗೆ ಸಾಗಿಸಲಾಗುತ್ತದೆ ಎಂದು ತಿಳಿದುಬಂದಿದೆ. 2019 ರಲ್ಲಿ, ಸಿಆರ್‌ಸಿಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಬೆಂಗಳೂರು ಮೆಟ್ರೋ ರೈಲ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಂದ ಈ ಮೂಲ ಮಾದರಿಯ ರೈಲಿಗೆ 216 ಕೋಚ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ಪಡೆದಿತ್ತು.
ಇನ್ನು ಬೆಂಗಳೂರು ತಲುಪಿದ ನಂತರ, ರೈಲನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜೋಡಿಸಲಾಗುವುದು ಎನ್ನಲಾಗಿದ್ದು, ಚೀನಾದ ಎಂಜಿನಿಯರ್‌ಗಳ ತಂಡವು ಜೋಡಣೆ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ವಿಶೇಷ ರೈಲು ಸಿಲ್ಕ್ ಬೋರ್ಡ್ ಮೂಲಕ ಬೊಮ್ಮಸಂದ್ರದಿಂದ ಆರ್‌ವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಓಡಾಟ ನಡೆಸಲಿದೆ. ಈ ರೈಲಿನಲ್ಲಿ ಪ್ರಾಯೋಗಿಕ ಸಂಚಾರ ಕೈಗೊಂಡ ನಂತರ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರಿಗೆ (CCRS) ವರದಿಯನ್ನು ಸಲ್ಲಿಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಚಾಲಕ ರಹಿತ ರೈಲುಗಳು 90 ಸೆಕೆಂಡುಗಳ ಆವರ್ತನದಲ್ಲಿ ಚಲಿಸಲಿದ್ದು, ಪ್ರತಿ ಕೋಚ್ 21 ಮೀಟರ್ ಉದ್ದವಿರುತ್ತವೆ. ಇದರೊಂದಿಗೆ ಬಿಎಂಆರ್‌ಸಿಎಲ್ ಇಂತಹ ಇನ್ನೂ ಎರಡು ರೈಲುಗಳನ್ನು ಮೆಟ್ರೋ ಟ್ರ್ಯಾಕ್‌ಗೆ ಬಿಡಲಿದೆ. ಈ ರೈಲುಗಳು ಮೇ ಒಳಗೆ ಬರಲಿವೆ ಎನ್ನಲಾಗಿದೆ. ಜೂನ್ ವೇಳೆಗೆ ಎರಡು ರೈಲುಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಬೊಮ್ಮಸಂದ್ರ ಮತ್ತು ಆರ್‌ವಿ ರಸ್ತೆ ನಡುವಿನ ಹಳದಿ ಮಾರ್ಗವು 16 ನಿಲ್ದಾಣಗಳನ್ನು ಹೊಂದಿರಲಿದ್ದು, ಸರಿಸುಮಾರು 19 ಕಿಮೀ ಉದ್ದವಿರುತ್ತದೆ. ಈ ಪ್ರಮುಖ ವಿಸ್ತರಣೆಯು ನಗರದಲ್ಲಿ ಸಂಚಾರ ಸುಗಮಗೊಳಿಸುವ ನಿರೀಕ್ಷೆಯನ್ನು ಈ ಮೂಲಕ ಹೊಂದಲಾಗಿದೆ. ಅಲ್ಲದೆ ಈ ರೈಲು ಮಾರ್ಗವು ಬೊಮ್ಮಸಂದ್ರವನ್ನು ಹೆಚ್ಚು ಜನದಟ್ಟಣೆಯ ಕೇಂದ್ರ ಸಿಲ್ಕ್ ಬೋರ್ಡ್ ಪ್ರದೇಶಕ್ಕೆ ಸಂಪರ್ಕಿಸುತ್ತದೆ.

ಈ ಚಾಲಕರಹಿತ ಮೆಟ್ರೋ ರೈಲು ಹೇಗೆ ಸಂಚಾರ ಮಾಡಲಿದೆ?: ಬೆಂಗಳೂರಿಗೆ ಬರುತ್ತಿರುವ ರೈಲು ಏನೆಲ್ಲಾ ತಂತ್ರಜ್ನಾನ ಬಳಕೆ ಮಾಡಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯ ಇಲ್ಲದಿದ್ದರೂ ಭಾರತದಲ್ಲಿ ದೆಹಲಿಯಲ್ಲಿ ಈಗಾಗಲೇ ಸಂಚಾರ ಮಾಡುತ್ತಿರುವ ಚಾಲಕ ರಹಿತ ರೈಲಿನ ಬಗ್ಗೆ ಹೇಳುವುದಾದರೆ ಈ ಮೆಟ್ರೋ ರೈಲುಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೈಟೆಕ್ ಕ್ಯಾಮೆರಾಗಳು ಮತ್ತು ಅಡಚಣೆ ಸಂವೇದನಾ ಸೆನ್ಸರ್ ಅನ್ನು ಹೊಂದಿರುತ್ತವೆ. ನ್ನು ಹೊಂದಿವೆ.
ಈ ರೈಲುಗಳು ಸರಾಸರಿ ವೇಗದಲ್ಲಿ ಸಂಚಾರ ಮಾಡಲಿದ್ದು, ಪ್ಯಾಸೆಂಜರ್ ಅಲರ್ಟ್ ಡಿವೈಸ್ ಆಯ್ಕೆ ಹೊಂದಿರುತ್ತವೆ. ಅದರಂತೆ ಕೆಂಪು ಬಟನ್ ಒತ್ತಿದರೆ ಎಚ್ಚರಿಕೆ ರವಾನೆ ಆಗಲಿದೆ. ಅದರಂತೆ ದೆಹಲಿಯಲ್ಲಿ ಈಗಾಗಲೇ ಸಂಚಾರ ಮಾಡುತ್ತಿರುವ ರೈಲಿನ ಪ್ರತಿ ಕೋಚ್‌ನಲ್ಲಿ ನಾಲ್ಕು ಪ್ಯಾಡ್ ಬಟನ್ ಆಯ್ಕೆ ನೀಡಲಾಗಿದೆ. ಇನ್ನು ಮುಖ್ಯ ಕೋಚ್‌ನ ಕೆಳಗೆ ಅಡಚಣೆ ಪತ್ತೆ ಡಿವೈಸ್ (ODD) ಇದೆ. ಈ ಟೂಲ್ಸ್ ಸೆನ್ಸರ್ ಮೂಲಕ ದೊಡ್ಡ ಅಡೆತಡೆಗಳನ್ನು ಗ್ರಹಿಸುವ ಕೆಲಸ ಮಾಡುತ್ತದೆ.


Click it and Unblock the Notifications








