Subscribe to Gizbot

ದೇಶದ 1st ಎಲೆಕ್ಟ್ರಿಕ್-ಸ್ಮಾರ್ಟ್‌ ಕಾರು: ಮೈಲೆಜ್ ಕೇಳಿದ್ರೆ ಈಗಲೇ ಬುಕ್ ಮಾಡುವುದು ಗ್ಯಾರೆಂಟಿ...!

Written By:

ಭಾರತೀಯ ರಸ್ತೆಗಳಲ್ಲಿ ಶೀಘ್ರವೇ ಎಲೆಕ್ಟ್ರಿಕ್ ಕಾರುಗಳು ಆರ್ಭಟವು ಹೆಚ್ಚಾಗಲಿದೆ. ಈಗಾಗಲೇ ಪೇಟ್ರೋಲಿಯಂ ನಿಂದ ಓಡುವ ಕಾರುಗಳಿಂದ ದೇಶದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣವು ಅತ್ಯಧಿಕವಾಗಿದ್ದು, ಇದನ್ನು ನಿಯಂತ್ರಿಸಲು ಸರಕಾರಗಳು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಹೆಚ್ಚಿನ ಕ್ರಮವನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸ್ಟ್ರಾಟ್ ಆಪ್ ಕಂಪನಿಯೊಂದು ಅದ್ಬುತ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ.

ಸ್ಮಾರ್ಟ್‌ ಕಾರು: ಮೈಲೆಜ್ ಕೇಳಿದ್ರೆ ಈಗಲೇ ಬುಕ್ ಮಾಡುವುದು ಗ್ಯಾರೆಂಟಿ...!

ದೆಹಲಿಯ ಸ್ಟಾರ್ಟ್​ಅಪ್​ ಭಾರತದ ಎರಡು ಸೀಟ್ ಎಲೆಕ್ಟ್ರಿಕ್ ಕಾರ್ ನಿರ್ಮಾಣವಾಗುತ್ತಿದೆ. ಒಮ್ಮೆ ಈ ಕಾರನ್ನು ಕೊಂಡ ನಂತರದಲ್ಲಿ ಕಾರಿನಲ್ಲಿರುವ ಬ್ಯಾಟರಿ ರೀಪ್ಲೇಸ್​ ಮಾಡುವ ಅಗತ್ಯವೇ ಇಲ್ಲ ಎಂದು ಕಂಪನಿಯೂ ತಿಳಿಸಿದ್ದು, ಶೀಘ್ರವೇ ರಸ್ತೆಗಳಲ್ಲಿ ಈ ಕಾರುಗಳು ಕಾಣಿಸಿಕೊಳ್ಳಲಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು, ಭಾರತದಲ್ಲಿಯೂ ಎಲೆಕ್ಟ್ರಿಕ್ ಕಾರ್‌ಗಳಿಗೆ ದೊಡ್ಡ ಮಾರುಕಟ್ಟೆ ನಿರ್ಮಾಣವಾಗುತ್ತಿದೆ.

ಓದಿರಿ: ಆಧಾರ್-ಮೊಬೈಲ್‌ ಲಿಂಕ್ ಮಾಡಲು ಹೋಗಿ ರೂ.1,10,000 ಕಳೆದು ಕೊಂಡ: ನೀವು ಈ ತಪ್ಪು ಮಾಡದಿರಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
RT90 ಎಲೆಕ್ಟ್ರಿಕ್ ಕಾರು:

RT90 ಎಲೆಕ್ಟ್ರಿಕ್ ಕಾರು:

ದೆಹಲಿಯ ಮೂಲದ Hriman Motors LLP ಎಂಬ ಸ್ಟಾರ್ಟ್​ಅಪ್​ ಕಂಪನಿಯೂ ಭಾರತದ ಮೊದಲ ಎಲೆಕ್ಟ್ರಿಕ್ ಕಾರನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ RT90 ಎಲೆಕ್ಟ್ರಿಕ್ ಕಾರು ಎಂದು ನಾಮಕರಣವನ್ನು ಮಾಡಿದೆ ಎನ್ನಲಾಗಿದೆ.

ಒಂದು ಚಾರ್ಜ್‌ಗೆ 200ಕಿಮೀ;

ಒಂದು ಚಾರ್ಜ್‌ಗೆ 200ಕಿಮೀ;

RT90 ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದರೆ ಸರಿ ಸುಮಾರು 200 ಕಿ. ಮೀ ಚಲಿಸುತ್ತದೆ ಎಂದು Hriman Motors LLP ಕಂಪನಿಯೂ ತಿಳಿಸಿದ್ದು, ವೇಗವಾಗಿ ಚಾರ್ಜ್ ಆಗುವ ವ್ಯವಸ್ಥೆಯನ್ನು ಈ ಕಾರಿನಲ್ಲಿ ಕಾಣಬಹುದಾಗಿದೆ.

4G ಕನೆಕ್ಟಿವಿಟಿ:

4G ಕನೆಕ್ಟಿವಿಟಿ:

ಇದೊಂದು ಸ್ಮಾರ್ಟ್‌ ಕಾರ್ ಆಗಿದ್ದು, 4G ಕನೆಕ್ಟಿವಿಟಿಯನ್ನು ಹೊಂದಿದ್ದು, IoT ಪ್ಲ್ಯಾಟ್​ಫಾರ್ಮ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಈ ಕಾರನ್ನು ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ಎಂದೇ ಕರೆಯಬಹುದಾಗಿದೆ.

How to Sharing a Mobile Data Connection with Your PC (KANNADA)
ಜೂನ್‌ನಲ್ಲಿ ಮಾರುಕಟ್ಟೆಗೆ:

ಜೂನ್‌ನಲ್ಲಿ ಮಾರುಕಟ್ಟೆಗೆ:

ಈಗಾಗಲೇ ಪ್ರಾಯೋಗಿಕ ಪರೀಕ್ಷೆಯಲ್ಲಿರುವ ಈ ಕಾರು ಇದೇ ಜೂನ್ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ ಎನ್ನಲಾಗಿದೆ. ಬೆಲೆಯೂ ತೀರಾ ಹೆಚ್ಚು ಇರುವುದಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
First Electric Car 200km Range. Kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot