Subscribe to Gizbot

ಆಧಾರ್-ಮೊಬೈಲ್‌ ಲಿಂಕ್ ಮಾಡಲು ಹೋಗಿ ರೂ.1,10,000 ಕಳೆದು ಕೊಂಡ: ನೀವು ಈ ತಪ್ಪು ಮಾಡದಿರಿ..!

Written By:

ಆಧಾರ್ ಕಾರ್ಡ್-ಮೊಬೈಲ್ ಸಿಮ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿರುವ ಭಾರತ ಸರಕಾರವು ಇದಕ್ಕೊಂದು ಡೆಡ್ ಲೈನ್‌ ಅನ್ನು ಸಹ ನೀಡಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಸಹ ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಮೊಬೈಲ್ ಸಿಮ್‌ ಲಿಂಕ್ ಮಾಡಲು ಮುಂದಾಗಿದೆ. ಆದರೆ ಇದನ್ನೇ ಕೆಲವರು ವಂಚನೆ ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಆಧಾರ್-ಮೊಬೈಲ್‌ ಲಿಂಕ್ ಮಾಡಲು ಹೋಗಿ ರೂ.1,10,000 ಕಳೆದು ಕೊಂಡ:

ಏರ್‌ಟೆಲ್‌ ಗ್ರಾಹಕರು ಆಧಾರ್ ಲಿಂಕ್ ಮಾಡುವ ಸಂದರ್ಭದಲ್ಲಿ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಆಕೌಂಟ್ ಓಪನ್ ಮಾಡಿಸಿದ್ದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೇ ಮಾದರಿಯಲ್ಲಿ ಜೈಪುರದಲ್ಲಿ ಆಧಾರ್ ಕಾರ್ಡ್ ಮೊಬೈಲ್ ಸಿಮ್ ಲಿಂಕ್ ಮಾಡಲು ಹೋದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ರೂ.1,10,000ಗಳನ್ನು ಕಳೆದುಕೊಂಡ ಘಟನೆಯೊಂದು ನಡೆದಿದೆ.

ಓದಿರಿ: ಆನ್‌ಲೈನಿನಲ್ಲಿ ಬ್ಯಾಡ್ ರಿವ್ಯೂ: '850 ಕಿ.ಮೀ ಹುಡ್ಕೋಂಡು ಬಂದು ಕಸ್ಟಮರ್‌ಗೆ ಹೊಡೆದ' ಓನರ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಮ್ ಕದ್ದ:

ಸಿಮ್ ಕದ್ದ:

ಆಧಾರ್ ಕಾರ್ಡ್-ಮೊಬೈಲ್ ಸಿಮ್ ಲಿಂಕ್ ಮಾಡಿಕೊಂಡುವಂತೆ ಬ್ರಿಜ್ವಾನಿ ಎನ್ನುವ ವ್ಯಕ್ತಿಯೊಬ್ಬರು ಟೆಲಿಕಾಂ ಶಾಪ್ ವೊಂದಕ್ಕೆ ಭೇಟಿ ನೀಡಿದ್ದು, ಅಲ್ಲಿದ್ದ ಯುವಕನೋರ್ವ ಇವರ ಹಳೇಯ ಸಿಮ್ ಕದ್ದು, ಹೊಸ ಸಿಮ್ ವೊಂದನ್ನು ನೀಡಿ ವಾಪಸ್ಸು ಕಳುಹಿಸಿದ್ದಾನೆ ಎನ್ನಲಾಗಿದೆ.

ಹಣ ಕದ್ದ:

ಹಣ ಕದ್ದ:

ನಂತರ ಹಳೇಯ ಸಿಮ್ ಬಳಕೆ ಮಾಡಿಕೊಂಡು ಬ್ರಿಜ್ವಾನಿ ಅವರ ಖಾತೆಯಲ್ಲಿದ್ದ ಸುಮಾರು ರೂ.1,10,000ಗಳನ್ನು ಡ್ರಾ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹಳೇಯ ಸಿಮ್‌ಗೆ ಬರುವ OTP ಯಿಂದಾಗಿ ಯುವಕ ಇಷ್ಟು ಪ್ರಮಾಣದ ಹಣವನ್ನು ಡ್ರಾ ಮಾಡಿ ಮೋಸ ಮಾಡಿದ್ದಾನೆ.

ಬ್ಯಾಂಕಿಗೆ ಹೋದಾಗ ತಿಳಿಯಿತು:

ಬ್ಯಾಂಕಿಗೆ ಹೋದಾಗ ತಿಳಿಯಿತು:

ನಂತರ ಮರುದಿನ ಬ್ರಿಜ್ವಾನಿ ಬ್ಯಾಂಕಿಗೆ ಹೋಗಿ ಹಣವನ್ನು ತೆಗೆಯಲು ಹೋದ ಸಂದರ್ಭದಲ್ಲಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ರೂ.1,10,000 ಕಡಿತಗೊಂಡಿರುವುದು ತಿಳಿದುಬಂದಿದೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಎಚ್ಚರದಿಂದಿರಿ:

ಎಚ್ಚರದಿಂದಿರಿ:

ನೀವು ಸಹ ಈ ರೀತಿಯಲ್ಲಿ ಆಧಾರ್-ಮೊಬೈಲ್ ಸಿಮ್ ಲಿಂಕ್ ಮಾಡಲು ಹೋಗಿ ವಂಚನೆಗೆ ಒಳಗಾಗದಿರಿ ಎಂದು ಎಚ್ಚರಿಸುವುದು ನಮ್ಮ ಉದ್ದೇಶವಾಗಿದೆ. ಎಚ್ಚರಿಕೆಯಿಂದ ಇರುವುದೇ ಅವಶ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
mobile SIM with Aadhaar cost a man Rs 1,10,000. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot