ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
ಸಾಮಾನ್ಯವಾಗಿ ಗಣ್ಯವ್ಯಕ್ತಿಗಳು ಬಳಕೆ ಮಾಡುತ್ತಿದ್ದ ವಸ್ತುಗಳು ಹಾಗೂ ಐತಿಹಾಸಿಕ ವಸ್ತುಗಳನ್ನು ಹರಾಜಿಗೆ ಇಟ್ಟರೆ ಅವು ಭಾರೀ ಬೆಲೆಗೆ ಮಾರಾಟವಾಗುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ.ಆದರೆ, ಇದೀಗ ಫೋನ್ ವಿಚಾರದಲ್ಲೂ ಈ ಬೆಳವಣಿಗೆ ಕಂಡುಬಂದಿದ್ದು, 2007ರ ಐಫೋನ್ ಬರೋಬ್ಬರಿ ಅರ್ಧಕೋಟಿಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟ ಆಗುವ ನಿರೀಕ್ಷೆ ಇದೆ.

ಹೌದು, ಜಗತ್ತಿನಲ್ಲಿ ಐಫೋನ್ ಬಗ್ಗೆ ಕ್ರೇಜ್ ಎಷ್ಟಿದೆ ಎಂದು ತಿಳಿದುಕೊಳ್ಳಲು ಈ ಘಟನೆ ನಿದರ್ಶನವಾಗಿದೆ. 2007 ರಲ್ಲಿ ಲಾಂಚ್ ಆದ ಐಫೋನ್ ಹರಾಜಿನಲ್ಲಿ ಅರ್ಧಕೋಟಿಗೆ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದೆ. ವಿಷಯ ಏನೆಂದರೆ ಈ ಫೋನ್‌ನ ಸಾಮಾನ್ಯ ದರ 49,200 ರೂ. ಗಳು. ಹಾಗಿದ್ರೆ, ಈ ಹರಾಜು ಪ್ರಕ್ರಿಯೆ ಎಲ್ಲಿ ನಡೆಯುತ್ತಿದೆ? ಅಷ್ಟಕ್ಕೂ ಈ ಫೋನ್‌ಗೆ ಯಾಕಿಷ್ಟು ಬೆಲೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.
ಈ ಐಫೋನ್ ಬಾಕ್ಸ್ ಅನ್ನು 2007 ರಿಂದ ಓಪನ್ ಮಾಡಿಯೇ ಇಲ್ಲ!
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳನ್ನು ಆಕರ್ಷಕವಾದ ಬಾಕ್ಸ್‌ನಲ್ಲಿ ಇರಿಸಿ ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಈಗಂತೂ ಈ ಬಾಕ್ಸ್ ವಿಚಾರ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ. ಆದರೆ, 50 ಲಕ್ಷಕ್ಕೆ ಮಾರಾಟವಾಗಲಿದೆ ಎನ್ನಲಾಗುತ್ತಿರುವ ಈ ಐಫೋನ್ ಬಾಕ್ಸ್ ಅನ್ನು 2007 ರಿಂದಲೂ ತೆರೆದಿಲ್ಲ, ಅಂದಿನಿಂದ ಈವರೆಗೂ ಬಾಕ್ಸ್ ನಲ್ಲಿಯೇ ಇದೆ.

ಹರಾಜು ಪ್ರಕ್ರಿಯೆ ಎಲ್ಲಿ?
ಯುಎಸ್‌ನಲ್ಲಿ ಆಯೋಜನೆ ಮಾಡಿದ್ದ ಹರಾಜು ಪ್ರಕ್ರಿಯೆಯಲ್ಲಿ ಈ ಐಫೋನ್ ಅನ್ನು 2 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಬೆಲೆಗೆ ಹರಾಜಿಗೆ ಇಡಲಾಗಿದ್ದು, ಇದನ್ನು ಅಭಿಮಾನಿಗಳು ಅರ್ಧಕೋಟಿ ಹಣ ಕೊಟ್ಟು ಖರೀದಿ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಈ ಆಪಲ್ ಐಫೋನ್‌ಗೆ ಯಾಕಿಷ್ಟು ಮೌಲ್ಯ?
ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ 2007 ರಲ್ಲಿ ಮೊದಲ ಜನ್ ಐಫೋನ್ ಅನ್ನು ಲಾಂಚ್ ಮಾಡಿದ್ದರು. ಈ ಫೋನ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈ ಮೂಲಕ ಅದೆಷ್ಟೋ ಜನ ಈ ಫೋನ್ ಅನ್ನು ಖರೀದಿ ಮಾಡಿದ್ದು, ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಈ ಫೋನ್‌ನಿಂದ ಆರಂಭವಾದ ಐಫೋನ್ ಜನಪ್ರಿಯತೆ ಈಗ ಐಫೋನ್ 14 ಸರಣಿಗೆ ಬಂದು ನಿಂತಿದೆ. ಈ ಫೋನ್ ಅನ್ನು 2022 ರಲ್ಲಿ ಅನಾವರಣ ಮಾಡಲಾಗಿದ್ದು, ಇದಕ್ಕೆ 79,900 ರೂ. ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಐಫೋನ್15 ಸರಣಿ ಸ್ಮಾರ್ಟ್‌ಫೋನ್ ಲಾಂಚ್‌ಗೂ ಸಿದ್ಧತೆ ನಡೆದಿದೆ.

ಈ ಐಫೋನ್ ಯಾರದ್ದು?
ಈ ಐಫೋನ್ ಕಾಸ್ಮೆಟಿಕ್ ಟ್ಯಾಟೂ ಕಲಾವಿದರಾದ ಕರೆನ್ ಗ್ರೀನ್ ಅವರದ್ದಾಗಿದ್ದು, 2007 ರಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಾಗ ಗ್ರೀನ್‌ನ ಸ್ನೇಹಿತರು ಅವರಿಗೆ ಮೊದಲ ತಲೆಮಾರಿನ ಐಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರಂತೆ. ಈ ಫೋನ್ 3.5 ಇಂಚಿನ ಡಿಸ್‌ಪ್ಲೇ ಹಾಗೂ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಸಫಾರಿ ವೆಬ್ ಬ್ರೌಸರ್ ಅನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ ಅನ್ನು ಈವರೆಗೂ ಯಾಕೆ ತೆರೆದಿಲ್ಲ?
ಗ್ರೀನ್ ಅವರು ಸ್ಮಾರ್ಟ್‌ಫೋನ್ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರಾಗಿದ್ದು, ಈಗಾಗಲೇ ಅವರು ಮೂರು ಫೋನ್ ಲೈನ್‌ಗಳನ್ನು ಹೊಂದಿದ್ದರಿಂದ ಉಡುಗೊರೆಯಾಗಿ ನೀಡಿದ್ದ ಈ ಐಫೋನ್ ಅನ್ನು ತೆರೆದಿರಲಿಲ್ಲವಂತೆ. ಕಾರಣ, ಶುಲ್ಕವನ್ನು ಕಡಿಮೆ ಮಾಡುವ ಉದ್ದೇಶದಿಂದ.
ಹೆಚ್ಚು ಬೆಲೆಗೆ ಮಾರಾಟ ಮಾಡುವ ಐಡಿಯಾ ಬಂದಿದ್ದು ಹೇಗೆ?
ಇನ್ನು ಇಬೇ ಸೈಟ್‌ನಲ್ಲಿ ಒಮ್ಮೆ ಬಾಕ್ಸ್ ಓಪನ್ ಮಾಡದ ಫೋನ್ ಒಂದಕ್ಕೆ 8,22,270 ರೂ. ಗಳ ಬೆಲೆ ನಿಗದಿ ಮಾಡಿದ್ದು, ಗಮನಕ್ಕೆ ಬಂದಿದೆ. ಇದನ್ನು ನೋಡಿದ ತಕ್ಷಣ ಅವರು ತಮ್ಮ ಈ ಐಫೋನ್ ಅನ್ನು ನೆನಪಿಸಿಕೊಂಡು 2,05,547 ರೂ. ಗಳ ಬೆಲೆಗೆ ಮಾರಾಟಕ್ಕೆ ಇಟ್ಟಿದ್ದಾರೆ. ಫೆಬ್ರವರಿ 2 ರಿಂದ ಬಿಡ್ಡಿಂಗ್ ಆರಂಭ ಆಗಿದ್ದು, ಫೆಬ್ರವರಿ 19 ರಂದು ಅಂತ್ಯವಾಗಲಿದೆ. ಅಲ್ಲಿವರೆಗೆ ಈ ಹರಾಜು ಪ್ರಕ್ರಿಯೆಯಲ್ಲಿ 41,10,952 ರೂ. ಗಳ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications