Just In
- 2 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 2 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 3 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 3 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Movies
Lakshana Serial: ಭೂಪತಿ ಕೊಟ್ಟ ಸಪ್ರೈಸ್ ನೋಡಿ ಶಾಕ್ ಆದ ಶ್ವೇತ!
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ಮಹತ್ತರ ಡಿವೈಸ್‌ಗಳಾಗಿದ್ದು, ಜೊತೆಗೆ ಅತ್ಯುತ್ತಮ ಕ್ಯಾಮೆರಾ ಡಿವೈಸ್‌ಗಳಾಗಿಯೂ ಗುರುತಿಸಿಕೊಂಡಿವೆ. ಹೀಗಾಗಿ ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸೆನ್ಸಾರ್ ಒದಗಿಸಲಾಗುತ್ತಿದೆ. ಈ ಪೈಕಿ ಚೀನಾದ ಶಿಯೋಮಿ ಇತ್ತೀಚಿಗೆ 64ಎಂಪಿ ಕ್ಯಾಮೆರಾ ಫೋನ್ ಲಾಂಚ್ ಮಾಡುವುದಾಗಿ ಹೇಳಿ ಅಚ್ಚರಿ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಹೌಹಾರುವ ಸುದ್ದಿ ಹೊರಹಾಕಿದೆ.

ಹೌದು, ಶಿಯೋಮಿ ಕಂಪನಿಯು ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಫೋನ್ ಮೂಲಕ ಮೊದಲ ಬಾರಿಗೆ 48ಎಂಪಿ ಸೆನ್ಸಾರ್ ಕ್ಯಾಮೆರಾ ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ಸಂಚಲಯ ಮೂಡಿಸಿತ್ತು. ಹಾಗೆಯೇ ಇತ್ತೀಚಿಗೆ 64ಎಂಪಿ ಕ್ಯಾಮೆರಾ ಸೆನ್ಸಾರ್‌ನ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ, ಸದ್ದು ಮಾಡಿರುವ ಕಂಪನಿಯ ಇದೀಗ 100ಎಂಪಿ ಸೆನ್ಸಾರ್ ಕ್ಯಾಮೆರಾ ಸ್ಮಾರ್ಟ್‌ಫೋನ್ ರಿಲೀಸ್ ಮಾಡುವುದಾಗಿ ಸ್ಮಾರ್ಟ್‌ಫೋನ್ ಪ್ರಿಯರನ್ನು ಶಾಕ್ ನೀಡಿದೆ.

ಶಿಯೋಮಿ ತಂಡವು ಇದೀಗ ಬರೋಬ್ಬರಿ 100ಎಂಪಿ ಸೆನ್ಸಾರ್ ಸಾಮರ್ಥ್ಯದ ಅಲ್ಟ್ರಾ-ಕ್ಲಿಯರ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಲಾಂಚ್ ಮಾಡುವುದಾಗಿ ಟೀಸ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ 64ಎಂಪಿ ಕ್ಯಾಮೆರಾ ಫೋನ್ ಬಿಡುಗಡೆಯ ನಂತರ ಲಾಂಚ್ ಆಗಲಿದೆ ಎಂದು ತಿಳಿಸಿದೆ. ಈ ಬಗ್ಗೆ ಭಾರತೀಯ ಶಿಯೋಮಿ ಮುಖ್ಯಸ್ಥರಾದ ಮನು ಜೈನ್ ಅವರು ಸಹ 100ಎಂಪಿ ಕ್ಯಾಮೆರಾದ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ತಯಾರಿಸುತ್ತಿರುವುದಾಗಿ ಸುಳಿವು ನೀಡಿದ್ದಾರೆ.

ಬರಲಿರುವ 100ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ 12032 x 9024 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಸ್ಯಾಮ್‌ಸಂಗ್‌ನ ISOCELL ಸೆನ್ಸಾರ್‌ನಲ್ಲಿರಲಿದೆ ಎನ್ನುವುದನ್ನು ಕಂಪನಿಯು ಬಹಿರಂಗ ಪಡಿಸಿದೆ. ಹಾಗೆಯೇ ಇನ್ನುಳಿದ ಇತರೆ ಯಾವ ಫೀಚರ್ಸ್‌ಗಳ ಬಗ್ಗೆಯು ಕಂಪನಿಯು ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ. 64ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ರಿಲೀಸ್ ಆದ ನಂತರವೇ 100ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.
WHOA! #100MP camera 😮
— #MiFan Manu Kumar Jain (@manukumarjain) August 7, 2019
Yes, we've been working on 100MP camera flagship phone!
Beginning of 2019, we launched #48MP, & today all flagships use it. We'll soon disrupt the market again with #64MP camera.
And then #100MP 📸
RT if you think this is absolutely crazy! 🤩 #Xiaomi ❤️ pic.twitter.com/0trjCGiyWF
ಗ್ರಾಹಕರಿಗೆ ಅಚ್ಚರಯ ಮೇಲೆ ಅಚ್ಚರಿ ನೀಡುತ್ತಿರುವ ಶಿಯೋಮಿ ಕಂಪನಿಯು ಶೀಘ್ರದಲ್ಲೇ 64ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಸಾಧ್ಯತೆಗಳಿದ್ದು, ದೇಶಿಯ ಮಾರುಕಟ್ಟೆಗೆ ವರ್ಷದ ಅಂತ್ಯದ ವೇಳೆಗೆ (Q4 2019) ಎಂಟ್ರಿಕೊಡುವ ಸಂಭವಗಳಿವೆ. ಆದ್ರೆ ಹೊಸ ನಿರೀಕ್ಷೆ ಹುಟ್ಟುಹಾಕಿರುವ 100ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಬರುವುದು ಎನ್ನುವ ಬಗ್ಗೆಯು ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ.

ಆಂಡ್ರಾಯ್ಡ್ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್?.ಖರೀದಿಸುವ ಮುನ್ನ ತಿಳಿಯಿರಿ!
ಕಳೆದ ಇತ್ತೀಚಿನ ಕೇಲವು ವರ್ಷಗಳಲ್ಲಿ ಟಿವಿ ವಲಯದಲ್ಲಿ ಸಾಕಷ್ಟು ಮಹತ್ತರವಾದ ಬದಲಾವಣೆಗಳನ್ನು ನಡೆದಿವೆ. ಪ್ರಸ್ತುತ ಟಿವಿ ಬರೀ ಟಿವಿಯಾಗಿ ಉಳಿದಿಲ್ಲ ಅದೊಂದು ಮನರಂಜನೆಯ ಸ್ಮಾರ್ಟ್ ಡಿವೈಸ್ ಆಗಿ ರೂಪಗೊಂಡಿದೆ. ಮಾರುಕಟ್ಟೆಯಲ್ಲಿ ಇತ್ತೀಚಿಗಿನ ಸ್ಮಾರ್ಟ್ ಮತ್ತು ಆಂಡ್ರಾಯ್ಡ್ ಟಿವಿಗಳ ಖರೀದಿಯ ಸಂಖ್ಯೆಯಲ್ಲಿಯೂ ಗಣನಿಯ ಏರಿಕೆ ಕಾಣುತ್ತಿದ್ದು, ಅತ್ಯುತ್ತಮ ಟಿವಿಗಳಿಂದೂ ಬಜೆಟ್ ಬೆಲೆಯಲ್ಲಿಯೂ ಸಹ ಲಭ್ಯವಾಗುತ್ತಿವೆ.
ಸದ್ಯ ಟಿವಿ ಖರೀದಿಸುವ ಗ್ರಾಹಕರಿಗೆ ಸ್ಮಾರ್ಟ್ ಟಿವಿ ಮತ್ತು ಆಂಡ್ರಾಯ್ಡ್ ಟಿವಿಗಳಲ್ಲಿ ಯಾವುದು ಬೆಸ್ಟ್ ಮತ್ತು ಇವುಗಳ ನಡುವಿನ ಪ್ರಮುಖ ವ್ಯತ್ಯಾಸಗಳೆನು ಎನ್ನುವ ಕನ್‌ಫ್ಯೂಶನ್ ಇದ್ದೆ ಇರುತ್ತದೆ. ಬಹುತೇಕ ಸ್ಮಾರ್ಟ್ ಟಿವಿ ಮತ್ತು ಆಂಡ್ರಾಯ್ಡ್ ಟಿವಿಗಳೆರಡು ಒಂದೇ ಎಂದುಕೊಳ್ಳುವವರೇ ಹೆಚ್ಚು. ಆದರೆ ಅವುಗಳ ನಡುವೆ ಸಾಮ್ಯತೆ ಇದ್ದರು ಹಲವು ವಿಶೇಷತೆಗಳಿಂದ ಭಿನ್ನವಾಗಿವೆ. ಹಾಗಾದರೇ ಸ್ಮಾರ್ಟ್‌ಟಿವಿ ಮತ್ತು ಆಂಡ್ರಾಯ್ಡ್ ಟಿವಿಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಮುಂದೆ ನೋಡೋಣ ಬನ್ನಿರಿ.

ಸ್ಯಾಂಡರ್ಡ್ ಟಿವಿಗಳು
ಸ್ಯಾಂಡರ್ಡ್ ಟಿವಿಗಳು ಬೇಸಿಕ್ ಮಾದರಿಯ ಟಿವಿಗಳಾಗಿದ್ದು, ಎಂಟ್ರಿ ಲೆವೆಲ್ ಸ್ಮಾರ್ಟ್‌ಟಿವಿಗಳೆಂದು ಗುರುತಿಸಿಕೊಂಡಿವೆ. ಈ ಟಿವಿಗಳು ಹೆಚ್‌ಡಿ ರೆಡಿ, ಫುಲ್ ಹೆಚ್‌ಡಿ ಅಥವಾ 4K ಡಿಸ್‌ಪ್ಲೇ ಪ್ಯಾನೆಲ್ ರಚನೆಯನ್ನು ಒಳಗೊಂಡಿರುತ್ತವೆ. ಹಾಗೆಯೇ ಬೇಸಿಕ್ ಕನೆಕ್ಟಿವಿಟಿ ಸೌಲಭ್ಯಗಳಾದ HDMI ಪೋರ್ಟ್, ಅನಾಲಾಗ್ ಕೇಬಲ್ ಪೋರ್ಟ್, ಯುಎಸ್‌ಬಿ ಪೋರ್ಟ್ ಆಯ್ಕೆ ಪಡೆದಿರುತ್ತವೆ ಮತ್ತು ಪೋಟೋ, ವಿಡಿಯೊ ಮತ್ತು ಮ್ಯೂಸಿಕ್ ಒಳಗೊಂಡ ಪ್ಲೇಬ್ಯಾಕ್ ಮೀಡಿಯಾ ಫೈಲ್‌ಗಳ ಬೆಂಬಲ ಹೊಂದಿರುತ್ತವೆ.

ಸ್ಮಾರ್ಟ್‌ಟಿವಿಗಳು
ಟಿವಿ ವಲಯದಲ್ಲಿ ಹೊಸ ಅಲೆ ಸೃಷ್ಠಿಸಿದ ಸ್ಮಾರ್ಟ್‌ಟಿವಿಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಿವೆ. ಸ್ಮಾರ್ಟ್‌ಟಿವಿಗಳಲ್ಲಿ ಹಾಟ್‌ಸ್ಟಾರ್, ನೆಟ್‌ಫ್ಲೆಕ್ಸ್, ಅಮೆಜಾನ್ ಪ್ರೈಮ್, ಯೂಟ್ಯೂಬ್ ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ OTT ಅಪ್ಲಿಕೇಶನ್‌ಗಳನ್ನು ತುಂಬಿಕೊಂಡಿರುತ್ತವೆ. ಯಾವುದೇ ಸಮಯದಲ್ಲಿ ಗ್ರಾಹಕರು ನೆಚ್ಚಿನ ಸಿನಿಮಾ ಮತ್ತು ಟಿವಿ ಶೋ ಗಳನ್ನು ವೀಕ್ಷಿಸಬಹುದಾಗಿದೆ. ಸ್ಮಾರ್ಟ್‌ಟಿವಿಗಳ ಓಸ್ ಒಂದೇ ಆಗಿರುವುದಿಲ್ಲ ಅದು ತಯಾರಕರ ಮೇಲೆ ಅವಲಂಭಿತವಾಗಿರುತ್ತದೆ. ಉದಾಹರಣೆಗೆ : WebOS, Tizen, HomeOS ಅಥವಾ Linux-based OS. ಕಾಣಬಹುದಾಗಿದೆ.

ಆಂಡ್ರಾಯ್ಡ್ ಟಿವಿಗಳು
ಸದ್ಯ ಟಿವಿ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಆಂಡ್ರಾಯ್ಡ್ ಟಿವಿಗಳು ಗ್ರಾಹಕರನ್ನು ನೆಚ್ಚಿನ ಟಿವಿ ಮಾದರಿಗಳಾಗಿವೆ. ಆಂಡ್ರಾಯ್ಡ್ ಟಿವಿಗಳಲ್ಲಿ ಯೂಟ್ಯೂಬ್, ಹಾಟ್‌ಸ್ಟಾರ್, ನೆಟ್‌ಫ್ಲೆಕ್ಸ್, ಅಮೆಜಾನ್ ಪ್ರೈಮ್, ಪ್ಲೇ ಮ್ಯೂಸಿಕ್, ಪ್ಲೇ ವಿಡಿಯೊ, ಸ್ಪಾಟಿಫೈ, ಫೇಸ್‌ಬುಕ್, ಟ್ವಿಟ್ಟರ್, ಹೀಗೆ ಆಂಡ್ರಾಯ್ಡ್ ಬೆಂಬಲಿತ ಮನರಂಜನೆಯ ಆಪ್ಸ್‌ಗಳನ್ನು ಆಂಡ್ರಾಯ್ಡ್ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಹಾಗೆಯೇ ಆಂಡ್ರಾಯ್ಡ್ ಟಿವಿಗಳಲ್ಲಿ 'ಆಂಡ್ರಾಯ್ಡ್ ಓಎಸ್' ಕಾರ್ಯನಿರ್ವಹಿಸುತ್ತದೆ ಪ್ಲೇ ಸ್ಟೋರ್‌ನಿಂದ ಆಪ್ಸ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಪ್ರಮುಖ ವ್ಯತ್ಯಾಸಗಳು
* ಸ್ಮಾರ್ಟ್‌ಟಿವಿಗಳು ಪ್ರತ್ಯೇಕ ಆಪರೇಟಿಂಗ್ ಸಿಸ್ಟಮ್ ಹೊಂದಿರುವುದಿಲ್ಲ. ಸ್ಮಾರ್ಟ್‌ಟಿವಿಗಳಲ್ಲಿ ಓಎಸ್ ಬೇರೆ ಬೇರೆ ಆಗಿರುತ್ತದೆ. ಉದಾಹರಣೆಗೆ- Tizen, Smart Central, webOS ಮತ್ತು ಇತರೆ . ಆದ್ರೆ ಆಂಡ್ರಾಯ್ಡ್ ಟಿವಿಗಳಲ್ಲಿ ಹಾಗಲ್ಲ ಯಾವುದೇ ಕಂಪನಿಯ ಆಂಡ್ರಾಯ್ಡ್ ಟಿವಿ ಆದರು ಸರಿ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ವರ್ಷನ್‌ನಲ್ಲಿರುವುದನ್ನು ಕಾಣಬಹುದಾಗಿದೆ.
* ಸ್ಮಾರ್ಟ್‌ಟಿವಿಗಳಲ್ಲಿ ಹಲವು ಜನಪ್ರಿಯ ಆಪ್ಸ್ ಪ್ರೀ ಇನ್‌ಸ್ಟಾಲ್(ಇನ್‌ಬಿಲ್ಟ್) ಆಗಿರುತ್ತವೆ. ಮತ್ತು ಟಿವಿಯ ಓಎಸ್‌ಗಳ ಪ್ರತ್ಯೇಕ ಆಪ್ ಸ್ಟೋರ್ ಹೊಂದಿರುತ್ತವೆ. ಆದರೆ ಆಂಡ್ರಾಯ್ಡ್ ಟಿವಿಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಒಂದು ರೀತಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸಿದಂತೆ ಭಾಸವಾಗಲಿದೆ.

ಕೊನೆಯ ಮಾತು
ಸ್ಮಾರ್ಟ್ ಟಿವಿ ಮತ್ತು ಆಂಡ್ರಾಯ್ಡ್ ಟಿವಿಗಳ ಎರಡು ಅತ್ಯುತ್ತಮವಾಗಿದ್ದು, ತಮ್ಮದೇ ಆದ ವಿಶೇಷತೆಗಳನ್ನು ಒಳಗೊಂಡಿವೆ. ಆದರೆ ಆಂಡ್ರಾಯ್ಡ್ ಟಿವಿಗಳು ಸ್ಮಾರ್ಟ್‌ಟಿವಿಗಳಿಂಗಿಂತ ಉತ್ತಮ ಎನ್ನಬಹುದು. ಏಕೆಂದರೇ ಆಂಡ್ರಾಯ್ಡ್ ಟಿವಿಗಳು ಗೂಗಲ್ ಪ್ಲೇ ಸ್ಟೋರ್ ಲಭ್ಯತೆ ಸೀಗಲಿದೆ ಮತ್ತು ನೂತನ ಅಪ್‌ಡೇಟ್‌ಗಳು ಬೇಗನೆ ಆಂಡ್ರಾಯ್ಡ್ ಸೇರಲಿದ್ದು, ಬೆಲೆಯು ಕಡಿಮೆ ಮತ್ತು ಬಳಕೆ ಸಹ ಸುಲಭ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470