ಮಕ್ಕಳಿಗಾಗಿಯೇ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ; ಇದರ ಫೀಚರ್ಸ್ ಏನು ಗೊತ್ತಾ?
ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ವಾಚ್‌ಗಳು ಸಹ ಡಿಮ್ಯಾಂಡ್ ಪಡೆದುಕೊಂಡಿವೆ. ಈ ನಿಟ್ಟಿನಲ್ಲಿ ತರಹೇವಾರಿ ಸ್ಮಾರ್ಟ್ ವಾಚ್ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇನ್ನು ಮಕ್ಕಳಿಗಾಗಿಯೇ ಕೆಲವು ಸಂಸ್ಥೆಗಳು ಆಕರ್ಷಕ ಸ್ಮಾರ್ಟ್ ವಾಚ್ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದೇ ಹಾದಿಯಲ್ಲಿ ಇದೀಗ ಗೂಗಲ್‌ನ ಫಿಟ್‌ಬಿಟ್ (Fitbit) ಸಂಸ್ಥೆಯು ಮಕ್ಕಳಿಗಾಗಿ ಹೊಸ ಸ್ಮಾರ್ಟ್ ವಾಚ್ ಘೋಷಣೆ ಮಾಡಿದ್ದು, ಅದುವೇ ಫಿಟ್‌ಬಿಟ್ ಏಸ್ LTE (Fitbit Ace LTE) ಆಗಿದೆ. ಈ ಸ್ಮಾರ್ಟ್ ವಾಚ್ ಮಕ್ಕಳ ಪಾಲಕರಿಗೆ ಲೈವ್ ಲೊಕೇಶನ್ ಟ್ರ್ಯಾಕ್ ಮಾಡುವ ಸೌಲಭ್ಯ ನೀಡುತ್ತದೆ.
ಹೌದು, ಫಿಟ್‌ಬಿಟ್ ಸಂಸ್ಥೆಯು ಹೊಸದಾಗಿ ಫಿಟ್‌ಬಿಟ್ ಏಸ್ LTE (Fitbit Ace LTE) ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದ್ದು, ಇದನ್ನು ಮಕ್ಕಳಿಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಿದೆ. ಏಳು ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದ ಮಕ್ಕಳಿಗಾಗಿ ಈ ಸ್ಮಾರ್ಟ್ ವಾಚ್ ಅನ್ನು ಸಂಸ್ಥೆಯು ವಿನ್ಯಾಸ ಮಾಡಿದೆ. ಈ ಸ್ಮಾರ್ಟ್ ವಾಚ್ ಐಓಎಸ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ Fitbit Ace ಕಂಪ್ಯಾನಿಯನ್ ಆಪ್‌ನೊಂದಿಗೆ ಕನೆಕ್ಟ್ ಮಾಡಬಹುದಾಗಿದೆ.

ಇನ್ನು ಈ ನೂತನ ಸ್ಮಾರ್ಟ್ ವಾಚ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಕಲರ್ OLED ಡಿಸ್‌ಪ್ಲೇ ಸೌಲಭ್ಯದ ಜೊತೆಗೆ ರಕ್ಷಣಾತ್ಮಕ ಬಂಪರ್ ಕೇಸ್ ವ್ಯವಸ್ಥೆ ಅನ್ನು ಹೊಂದಿದೆ. ಈ ವಾಚ್ ಗೂಗಲ್ ರಿಸರ್ಚ್ ಅಭಿವೃದ್ಧಿಪಡಿಸಿದ ಹೊಸ ಮೂವ್‌ಮೆಂಟ್ ಅಲ್ಗಾರಿದಮ್ ಮೂಲಕ ಗೌಪ್ಯತೆಗೆ ಒದಗಿಸುತ್ತದೆ. ಇದರಲ್ಲಿ ಯಾವುದೇ ಜಾಹೀರಾತುಗಳು ಅಥವಾ ಥರ್ಡ್ ಪಾರ್ಟಿ ಆಪ್‌ಗಳು ಇಲ್ಲ. ಅಲ್ಲದೇ ಇದು ಮಕ್ಕಳ ದೈಹಿಕ ಚಟುವಟಿಕೆ ಅನ್ನು ನಿಖರವಾಗಿ ಅಳೆಯಬಲ್ಲದು.
ಹಾಗೆಯೇ ಈ ವಾಚ್ ಅತ್ಯುತ್ತಮ ಸುರಕ್ಷತಾ ಆಯ್ಕೆಗಳನ್ನು ಪಡೆದಿದ್ದು, ಪೋಷಕರು ತಮ್ಮ ಮಗುವಿನ ಲೊಕೇಶನ್ ಅನ್ನು ರಿಯಲ್ ಟೈಮ್ ನಲ್ಲಿ ಟ್ರ್ಯಾಕ್ ಮಾಡುವ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಕರೆಗಳನ್ನು ಮಾಡಲು, ಟೆಕ್ಸ್ಟ್ ಹಾಗೂ ವಾಯಿಸ್ ಮೆಸೆಜ್ ಅನ್ನು ಕಳುಹಿಸಲು ಮತ್ತು ಸ್ವೀಕರಿಸಲು ಈ ವಾಚ್ ಸಪೋರ್ಟ್ ಮಾಡುತ್ತದೆ. ಹಾಗೆಯೇ ಇದು ಅಕ್ಸೆಲೆರೊಮೀಟರ್, ಆಪ್ಟಿಕಲ್ ಹಾರ್ಟ್ ಬಿಟ್ ಸೆನ್ಸಾರ್, ಆಲ್ಟಿಮೀಟರ್, ಮ್ಯಾಗ್ನೆಟೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಹಾಗೂ ಗೈರೊಸ್ಕೋಪ್ ಸೆನ್ಸಾರ್ ಆಯ್ಕೆಗಳನ್ನು ಪಡೆದಿದೆ.
ಈ ಸ್ಮಾರ್ಟ್ ವಾಚ್ ಕನೆಕ್ಟಿವಿ ಆಯ್ಕೆಗಳನ್ನು ನೋಡುವುದಾದರೆ, ಇದು ಬಿಲ್ಟ್‌ಇನ್ 4G LTE (ಫಿಟ್‌ಬಿಟ್ ಏಸ್ ಪಾಸ್ ಸದಸ್ಯತ್ವದ ಜೊತೆಗೆ), ವೈ-ಫೈ ಸೌಲಭ್ಯ, ಬ್ಲೂಟೂತ್ ಸಪೋರ್ಟ್, NFC ಮತ್ತು GPS/GNSS ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗೆಯೇ ಆಂಡ್ರಾಯ್ಡ್ 11.0 ಅಥವಾ ಅದರ ನಂತರದ ಓಎಸ್ ಮತ್ತು ಐಓಎಸ್ 15 ಅಥವಾ ಅದಕ್ಕಿಂತ ಹೊಸ ಓಎಸ್ ಜೊತೆಗೆ ಸಪೋರ್ಟ್ ಮಾಡಲಿದೆ.
ಇನ್ನು ಫಿಟ್‌ಬಿಟ್ ಏಸ್ LTE ವಾಚ್ 41.04 x 44.89 x 13.35 ಮಿಮೀ ಸುತ್ತಳತೆ ಅನ್ನು ಪಡೆದುಕೊಂಡಿದ್ದು, ಇನ್ನು ಬ್ಯಾಂಡ್ ಇಲ್ಲದೆ ಈ ವಾಚ್ ತೂಕವು 28 ಗ್ರಾಂ ಆಗಿದೆ. ಹೀಗಾಗಿ ಮಕ್ಕಳಿಗೆ ಧರಿಸಲು ಇದು ಹಗುರ ಎನಿಸುತ್ತದೆ. ಅಲ್ಲದೇ ಈ ವಾಚ್ 50m ವರೆಗೆ ನೀರು ನಿರೋಧಕ ರೇಟಿಂಗ್ ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್ ವಾಚ್ 328mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು 16 ಗಂಟೆಗಳ ಬ್ಯಾಕ್‌ಅಪ್ ಒದಗಿಸಲಿದೆ ಎನ್ನಲಾಗಿದೆ. ಇನ್ನು ಈ ವಾಚ್ 70 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಪಡೆದುಕೊಳ್ಳಲಿದೆ.
ಅಂದಹಾಗೆ ಫಿಟ್‌ಬಿಟ್ ಏಸ್ LTE ವಾಚ್ ಎರಡು ಕಲರ್ ಆಯ್ಕೆಯಲ್ಲಿ ಲಭ್ಯ ಆಗಲಿದ್ದು, ಅವುಗಳು ಕ್ರಮವಾಗಿ ಸ್ಪೈಸಿ ಮತ್ತು ಮೈಲ್ಡ್ ಕಲರ್ ಆಗಿವೆ. ಇನ್ನು ಈ ಕಿಡ್ಸ್ ವಾಚ್ ಬೆಲೆ USD 229.95 (ಭಾರತದಲ್ಲಿ ಅಂದಾಜು 19,175ರೂ. ಎನ್ನಲಾಗಿದೆ). ಹಾಗೆಯೇ ಈ ವಾಚ್ ಇದೇ ಜೂನ್ 5 ರಿಂದ ಅಧಿಕೃತ ಗೂಗಲ್ ಸ್ಟೋರ್ ಮತ್ತು ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಲಭ್ಯವಾಗಲಿದೆ.


Click it and Unblock the Notifications








