ಫಿಟ್‌ನೆಸ್ ಪ್ರಿಯರಿಗಾಗಿ ಫಿಟ್‌ಬಿಟ್ ಚಾರ್ಜ್ 6 ಲಾಂಚ್: ಫೀಚರ್ಸ್ ಹೇಗಿದೆ, ಬೆಲೆ ಎಷ್ಟು?
ಫಿಟ್‌ನೆಸ್ (Fitness) ಪ್ರಿಯರಿಗೆ ಅಗತ್ಯವಾದ ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿರುವ ಫಿಟ್‌ಬಿಟ್ (Fitbit) ಈಗ ಹೊಸ ಡಿವೈಸ್ ಅನ್ನು ಲಾಂಚ್ ಮಾಡಿದೆ. ಈ ಮೂಲಕ ಬಳಕೆದಾರರು ತಮ್ಮ ಅತ್ಯುತ್ತಮ ಆರೋಗ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದಾಗಿದೆ.
ಹೌದು, ಸುಧಾರಿತ ಹೃದಯ ಬಡಿತ ಟ್ರ್ಯಾಕಿಂಗ್ ಫೀಚರ್ಸ್‌ನೊಂದಿಗೆ ಫಿಟ್‌ಬಿಟ್ ಚಾರ್ಜ್ 6 (Fitbit Charge 6) ಅನ್ನು ಅನಾವರಣ ಮಾಡಲಾಗಿದೆ. ಈ ಡಿವೈಸ್ ಜಿಪಿಎಸ್ ಬೆಂಬಲವನ್ನು ಹೊಂದಿದ್ದು, ಅದರಲ್ಲೂ ಮಹಿಳೆಯ ಆರೋಗ್ಯದ ಮೇಲೆ ಇನ್ನೂ ಹೆಚ್ಚಿನ ಗಮನಹರಿಸಲಿದೆ. ಹಾಗಿದ್ರೆ, ಈ ಡಿವೈಸ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿಚಾರ ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಡಿವೈಸ್‌ಅನ್ನು ಯುಎಸ್ ನಲ್ಲಿ ಲಾಂಚ್ ಮಾಡಲಾಗಿದೆ. ಇಂಡಿಯಾ ವೆಬ್‌ಸೈಟ್‌ನ ಪ್ರಕಾರ ಸ್ಮಾರ್ಟ್ ವೇರಬಲ್ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಇದು ಆಗಸ್ಟ್ 2021 ರಲ್ಲಿ ಬಿಡುಗಡೆಯಾದ ಫಿಟ್‌ಬಿಟ್ ಚಾರ್ಜ್ 5 ಯ ಮುಂದಿನ ಸರಣಿಯಾಗಿದೆ. ಸ್ಮಾರ್ಟ್ ವಾಚ್ ಋತುಚಕ್ರದ ಟ್ರ್ಯಾಕರ್ ಸೇರಿದಂತೆ ಇತರ ಆರೋಗ್ಯ ಮೇಲ್ವಿಚಾರಣಾ ಫೀಚರ್ಸ್ ಆಯ್ಕೆ ಪಡೆದಿದ್ದು, ಅದರಲ್ಲೂ ಬಹು ಸ್ಪೋರ್ಟ್ಸ್ ಮೋಡ್ ಹೊಂದಿದೆ.
ಇನ್ನು ಈ ಡಿಸ್‌ಪ್ಲೇ ಆಯತಾಕಾರದ ಬಣ್ಣದ ಟಚ್‌ಸ್ಕ್ರೀನ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದರ ಬಾಡಿಯನ್ನು ಅಲ್ಯೂಮಿನಿಯಂ ಮತ್ತು ರಾಳದಿಂದ (resin) ನಿರ್ಮಿಸಲಾಗಿದೆ . ಆದರೆ ಬ್ಯಾಂಡ್ ಅನ್ನು ಸಿಲಿಕೋನ್ ಹಾಗೂ ಅಲ್ಯೂಮಿನಿಯಂ ಬಕಲ್ ಮೂಲಕ ತಯಾರು ಮಾಡಲಾಗಿದೆ. ಮೊದಲೇ ಹೇಳಿದಂತೆ ಈ ಸ್ಮಾರ್ಟ್ ವಾಚ್ 40 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಬೆಂಬಲಿಸುತ್ತದೆ.
ಆಪ್ಟಿಕಲ್ ಹಾರ್ಟ್ ರೇಟ್ ಮಾನಿಟರ್, 3-ಆಕ್ಸಿಸ್ ಅಕ್ಸೆಲೆರೊಮೀಟರ್, ಆಕ್ಸಿಜನ್ ಸ್ಯಾಚುರೇಶನ್ ಮಾನಿಟರ್, ತಾಪಮಾನ ಸೆನ್ಸರ್ ಮತ್ತು ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಆಪ್ ಮತ್ತು ಇಡಿಎ (ಎಲೆಕ್ಟ್ರೋಡರ್ಮಲ್ ಚಟುವಟಿಕೆ) ಗೆ ಹೊಂದಿಕೆಯಾಗುವ ವಿವಿಧೋದ್ದೇಶ ವಿದ್ಯುತ್ ಸೆನ್ಸರ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಬಳಕೆದಾರರಿಗೆ ಸುಲಭವಾಗಿ ಅತ್ಯುತ್ತಮವಾದ ಮಾಹಿತಿಯನ್ನು ನೀಡುತ್ತದೆ.
ಇತರ ಫಿಟ್‌ನೆಸ್ ಟ್ರ್ಯಾಕರ್‌ಗಳಂತೆ, ಹೊಸ ಫಿಟ್‌ಬಿಟ್ ಚಾರ್ಜ್ 6 ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಉಸಿರಾಟದ ರೇಟ್, ಒತ್ತಡ ನಿರ್ವಹಣೆ ಮತ್ತು ಬಳಕೆದಾರರ ಚರ್ಮದ ತಾಪಮಾನವನ್ನು ಸಹ ಟ್ರ್ಯಾಕ್ ಮಾಡುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಮಹಿಳೆಯರ ಋತುಚಕ್ರದ ಟ್ರ್ಯಾಕರ್ ಅನ್ನು ಸಹ ನೀಡಲಿದ್ದು, ಈ ಮೂಲಕ ಮಹಿಳೆಯರ ಇತರೆ ಆರೋಗ್ಯದ ಮೇಲೂ ಸದಾ ಕಣ್ಣಿಟ್ಟಿರುತ್ತದೆ.
ಉಳಿದಂತೆ ಈ ಸ್ಮಾರ್ಟ್ ವಾಚ್ ಇನ್‌ಬಿಲ್ಟ್ ಜಿಪಿಎಸ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಇದರ ಎನ್‌ಎಫ್‌ಸಿ ಸಂಪರ್ಕವು ಗೂಗಲ್ ವಾಲೆಟ್ ಮೂಲಕ ಪಾವತಿಗಳನ್ನು ಅನುಮತಿಸುತ್ತದೆ ಎಂದು ಸಂಸ್ಥೆ ಹೇಳಿದೆ. ಇದರ ಜೊತೆಗೆ ಗೂಗಲ್ ವೇಗದ ಕನೆಕ್ಟಿವಿಟಿ, ಗೂಗಲ್ ಮ್ಯಾಪ್ ಮತ್ತು ಯೂಟ್ಯೂಬ್ ಮ್ಯೂಸಿಕ್ ಅನ್ನು ಬೆಂಬಲಿಸಲಿದ್ದು, ಈ ಮೂಲಕ ಉತ್ತಮ ಮನರಂಜನೆ ಪಡೆದುಕೊಳ್ಳಬಹುದಾಗಿದೆ.
ವಿಶೇಷ ಮಾಹಿತಿ ಏನೆಂದರೆ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಮಾತ್ರ ಈ ಸೌಲಭ್ಯ ಲಭ್ಯ ಇದೆ. ಈ ಸ್ಮಾರ್ಟ್ ವೇರಬಲ್ ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೆರಡಕ್ಕೂ ಹೊಂದಿಕೊಳ್ಳಲಿದ್ದು, ಏತನ್ಮಧ್ಯೆ, ಫಿಟ್‌ಬಿಟ್ ಚಾರ್ಜ್ 6 5 ಎಟಿಎಮ್ ರೇಟಿಂಗ್ ಅನ್ನು ನೀಡುತ್ತದೆ ಮತ್ತು ಏಳು ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಫಿಟ್‌ಬಿಟ್ ಚಾರ್ಜ್ 6 ಬೆಲೆ, ಲಭ್ಯತೆ: ಕೋರಲ್, ಅಬ್ಸಿಡಿಯನ್ ಮತ್ತು ಪಿಂಗಾಣಿ ಬಣ್ಣದ ಆಯ್ಕೆಗಳಲ್ಲಿ ಈ ವಾಚ್ ಕಾಣಿಸಿಕೊಂಡಿದ್ದು, ಇದನ್ನು ನೀವು 13,300ರೂ.ಗಳಿಗೆ ಖರೀದಿ ಮಾಡಬಹುದು. ಇದು ಯುಎಸ್ ಬೆಲೆಯಾಗಿದೆ. ಆದರೆ, ಭಾರತದಲ್ಲಿ ಈ ವಾಚ್ ಅನ್ನು ಇನ್ನೂ ಲಾಂಚ್ ಮಾಡಲಾಗಿಲ್ಲ. ಇದು ಪ್ರಸ್ತುತ ಫಿಟ್‌ಬಿಟ್ ವೆಬ್‌ಸೈಟ್ ಮೂಲಕ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದ್ದು, ಅಕ್ಟೋಬರ್ 12 ರಿಂದ ಮಾರಾಟವಾಗಲಿದೆ.


Click it and Unblock the Notifications








