ಭಾರತದಲ್ಲಿ 'ಫಿಟ್‌ಬಿಟ್‌ ವರ್ಸಾ 2' ಸ್ಮಾರ್ಟ್‌ವಾಚ್ ಬಿಡುಗಡೆ!..ಬೆಲೆ ಎಷ್ಟು?

|

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ನಂತಯೇ ಫಿಟ್ನೆಸ್‌ ಸ್ಮಾರ್ಟ್‌ವಾಚ್ ಡಿವೈಸ್‌ಗಳ ಬೇಡಿಕೆಯು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಕಂಪನಿಗಳು ತಮ್ಮ ಫಿಟ್ನೆಸ್‌ ಸ್ಮಾರ್ಟ್‌ವಾಚ್ ಡಿವೈಸ್‌ ಸರಣಿಗಳನ್ನು ಬಿಡುಗಡೆ ಮಾಡುತ್ತಲೇ ಸಾಗಿವೆ. ಅವುಗಳಲ್ಲಿ 'ಫಿಟ್‌ಬಿಟ್‌' ಸಂಸ್ಥೆಯು ಇದೀಗ ಹೊಸದಾದ ಡಿವೈಸ್‌ ಅನ್ನು ಬಿಡುಗಡೆ ಮಾಡಿದ್ದು, ಅತ್ಯುತ್ತಮ ಟಾಪ್‌ ಫೀಚರ್ಸ್‌ಗಳನ್ನು ಹೊಂದಿದೆ. ಈ ಡಿವೈಸ್‌ ಆರಂಭಿಕ ಬೆಲೆಯು 20,999ರೂ.ಗಳಾಗಿದೆ.

ಫಿಟ್‌ಬಿಟ್‌

ಹೌದು, ಫಿಟ್‌ಬಿಟ್‌ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ನಿನ್ನೆ(ಅ.14ರಂದು) ಹೊಸ ಫಿಟ್‌ಬಿಟ್‌ ವರ್ಸಾ 2 ಡಿವೈಸ್‌ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್‌ ಸ್ವಿಮ್ಮ ಪ್ರೂಫ್‌ ಡಿಸೈನ್‌ ಮತ್ತು ಆನ್‌ ಡಿವೈಸ್‌ ಮೈಕ್ರೋಫೋನ್‌ ಆಯ್ಕೆಗಳಿಂದ ಗಮನ ಸೆಳೆದಿದೆ. ಹಾಗೆಯೇ ಫಿಟ್‌ಬಿಟ್‌ ಆಪ್ ಅಗತ್ಯ ಫಿಟ್ನೆಸ್‌ ಸೌಲಭ್ಯಗಳ ಟ್ರಾಕ್ ಮಾಹಿತಿ ತಿಳಿಸುವ ಸೌಲಭ್ಯ ಪಡೆದಿದೆ. ಫಿಟ್‌ಬಿಟ್‌ ಸಂಸ್ಥೆಯ ಫಿಟ್‌ನೆಸ್‌ ಚಂದಾದಾರಿಕೆ ಲಭ್ಯವಾಗಲಿದೆ.

ಫಿಟ್‌ಬಿಟ್ ವರ್ಸಾ 2 ಡಿವೈಸ್‌

ಫಿಟ್‌ಬಿಟ್‌ ಕಂಪನಿಯ ಹೊಸ ಡಿವೈಸ್‌ ಎರಡು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಅವುಗಳು ಕ್ರಮವಾಗಿ 'ಫಿಟ್‌ಬಿಟ್ ವರ್ಸಾ 2 ಡಿವೈಸ್‌', ಇನ್ನೊಂದು 'ಫಿಟ್‌ಬಿಟ್ ವರ್ಸಾ 2 ಸ್ಪೆಷಲ್‌ ಎಡಿಷನ್' ವೇರಿಯಂಟ್‌ ಆಗಿವೆ. ಸ್ಪೆಷಿಲ್ ಎಡಿಷನ್ 'ಕಾಪರ್ ರೋಜ್ ಅಲ್ಯುಮಿನಿಯಮ್ ಕೇಸ್‌ ಜೊತೆಗೆ ನ್ಯಾವಿ ಮತ್ತು ಪಿಂಕ್' ಬಣ್ಣದ ಆಯ್ಕೆ, ಸ್ಮೋಕ್‌ ಜೊತೆಗೆ ಮಿಸ್ಟಿಗ್ರೇ ಕೇಸ್‌ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ವರ್ಸಾ 2 ಡಿವೈಸ್‌ ಕಾರ್ಬನ್ ಕೇಸ್, ಅಲ್ಯುಮಿನಿಯಮ್ ಕೇಸ್‌ ಮತ್ತು ಮಿಸ್ಟಿಗ್ರೇ ಕೇಸ್‌ ಆಯ್ಕೆಗಳಲ್ಲಿ ಲಭ್ಯ.

ಫಿಟ್‌ಬಿಟ್ ಪ್ರಿಮಿಯಮ್ ಚಂದಾದಾರಿಕೆ

ಫಿಟ್‌ಬಿಟ್‌ ವರ್ಸಾ 2 ಸ್ಮಾರ್ಟ್‌ ವಾಚ್ ಜೊತೆಗೆ ಫಿಟ್‌ಬಿಟ್ ಪ್ರಿಮಿಯಮ್ ಚಂದಾದಾರಿಕೆ ಸೇವೆಯು ಸಹ ಲಭ್ಯವಾಗಲಿದ್ದು, ಹಾಗೆಯೇ ಫಿಟ್‌ಬಿಟ್ ಆಪ್ ಸೌಲಭ್ಯವು ಸಹ ದೊರೆಯಲಿದೆ. ಫಿಟ್ನೆಸ್‌ ಮತ್ತು ಹೆಲ್ತ್ ಕುರಿತ ಮಾಹಿತಿಗಳು ಲಭ್ಯವಾಗಲಿವೆ. ಇನ್ನು ಈ ಡಿವೈಸ್‌ ಸ್ವಿಮ್ಮ ಪ್ರೂಫ್ ಡಿಸೈನ್‌ ರಚನೆ ಪಡೆದಿದ್ದು, ಆನ್‌ ಡಿವೈಸ್‌ ಮೈಕ್ರೋಫೋನ್ ಸೌಲಭ್ಯವನ್ನು ಒಳಗೊಂಡಿದೆ. ನಿದ್ರೆ, ನಡಿಗೆ, ಹಾರ್ಟ್‌ಬಿಟ್‌ಗಳ ಮಾಹಿತಿಗಳನ್ನು ನೀಡಲಿದೆ.

ಆರಂಭಿಕ ಬೆಲೆ

ಇನ್ನು ಫಿಟ್‌ಬಿಟ್‌ ವರ್ಸಾ 2 ಸ್ಮಾರ್ಟ್‌ ವಾಚ್ ಡಿವೈಸ್ ಕ್ರೋಮಾ, Helios, ಲ್ಯಾಂಡ್‌ಮಾರ್ಕ್, ರಿಲಾಯನ್ಸ್‌ ಡಿಜಿಟಲ್ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಾಗಲಿದ್ದು, ಹಾಗೆಯೇ ಅಮೆಜಾನ್ ಇ-ಕಾಮರ್ಸ್ ತಾಣದಲ್ಲಿಯೂ ಸಹ ಗ್ರಾಹಕರು ಖರೀದಿಸಬಹುದಾಗಿದೆ. ಫಿಟ್‌ಬಿಟ್‌ ವರ್ಸಾ 2 ಸ್ಮಾರ್ಟ್‌ ವಾಚ್ ಆರಂಭಿಕ ಬೆಲೆಯು 20,999ರೂ.ಗಳಾಗಿದೆ. ಫಿಟ್‌ಬಿಟ್ ವರ್ಸಾ 2 ಸ್ಪೆಷಲ್‌ ಎಡಿಷನ್' ಬೆಲೆಯು 22,999ರೂ.ಗಳಾಗಿದೆ.

Best Mobiles in India

English summary
Fitbit Versa 2 was launched by the global wearables brand in India. The smartwatch has been priced at Rs. 20,999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X