Home
ಸುದ್ದಿಜಾಲ

ಕಡಿಮೆ ಬೆಲೆಗೆ ಲಭ್ಯವಿರುವ 32 ಇಂಚಿನ 5 ಬ್ರ್ಯಾಂಡೆಡ್‌ ಸ್ಮಾರ್ಟ್‌ಟಿವಿಗಳು!

ಪ್ರಸ್ತುತ ಟೆಲಿವಿಷನ್ ವಲಯ ಸಾಕಷ್ಟು ಅಪ್‌ಗ್ರೇಡ್‌ ಆಗಿದ್ದು, ಮಾರುಕಟ್ಟೆ ಈಗೇನಿದ್ದರೂ ಸ್ಮಾರ್ಟ್‌ ಟಿವಿಗಳಿಗೆನೇ ಹೆಚ್ಚಿನ ಬೇಡಿಕೆ. ಈ ನಿಟ್ಟಿನಲ್ಲಿ ಎಲ್ಲ ಟಿವಿ ಉತ್ಪಾದಕ ಸಂಸ್ಥೆಗಳು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತ ಸಾಗಿವೆ. ಕೆಲವು ಮೊಬೈಲ್ ಕಂಪನಿಗಳು ಸಹ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಲಾಂಚ್ ಮಾಡಿವೆ. ಹೀಗಾಗಿ ಗ್ರಾಹಕರು ಕಡಿಮೆ ಬೆಲೆಯಲ್ಲಿಯೂ ಇದೀಗ ಅತ್ಯುತ್ತಮ ಫೀಚರ್ಸ್‌ಗಳ ಸ್ಮಾರ್ಟ್‌ಟಿವಿ ಖರೀದಿಸಬಹುದಾಗಿದೆ.

ಆನ್‌ಲೈನ್‌ ತಾಣ

ಹೌದು, ಸದ್ಯ ಆನ್‌ಲೈನ್‌ ತಾಣಗಳಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್‌ನಿಂದ ದುಬಾರಿ ಪ್ರೈಸ್‌ಟ್ಯಾಗ್‌ನ ವರೆಗೂ ಹಲವು ಬ್ರ್ಯಾಂಡ್‌ಗಳ ಸ್ಮಾರ್ಟ್‌ಟಿವಿಗಳು ಖರೀದಿಗೆ ಲಭ್ಯ ಇವೆ. ಅವುಗಳಲ್ಲಿ ಆಂಡ್ರಾಯ್ಡ್‌ ಓಎಸ್‌ ಆಧಾರಿತ ಟಿವಿಗಳು ಸಹ ಲಭ್ಯ ಇದ್ದು, 32 ಇಂಚಿನಿಂದ ವಿವಿಧ ಗಾತ್ರಗಳ ಡಿಸ್‌ಪ್ಲೇಗಳ ಆಯ್ಕೆ ಹೊಂದಿವೆ. ಜೊತೆಗೆ 4K, HDR, ಡಾಲ್ಬಿ ಸೌಂಡ್‌, ವೈಫೈ ಹಾಗೂ ಬ್ಲೂಟೂತ್ ಸೌಲಭ್ಯಗಳು ಸೇರಿದಂತೆ ಇತ್ತೀಚಿಗಿನ ಅಗತ್ಯ ಸೌಲಭ್ಯಗಳ ಆಯ್ಕೆಗಳನ್ನು ಹೊಂದಿವೆ. ಸುಮಾರು 15,000ರೂ. ಪ್ರೈಸ್‌ಟ್ಯಾಗ್‌ ಒಳಗಿನ 32 ಇಂಚಿನ ಟಾಪ್‌ ಐದು ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ರಿಯಲ್‌ಮಿ ಸ್ಮಾರ್ಟ್‌ಟಿವಿ

ರಿಯಲ್‌ಮಿ ಸ್ಮಾರ್ಟ್‌ಟಿವಿ

ರಿಯಲ್‌ಮಿ ಸಂಸ್ಥೆಯು ಎರಡು ಸ್ಮಾರ್ಟ್‌ಟಿವಿ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಆ ಪೈಕಿ 32 ಇಂಚಿನ ಸ್ಮಾರ್ಟ್‌ಟಿವಿಯು 12,999ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಟಿವಿಯು 1366 × 768 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ ಟಿವಿ 9 ಸಾಫ್ಟ್‌ವೇರ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಟಿವಿಯು ಕ್ವಾಡ್-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್, 1GB RAM, 8GB ಆಂತರಿಕ ಸಂಗ್ರಹಣೆ, ಡಾಲ್ಬಿ ಆಡಿಯೋ ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಗೂಗಲ್ ಅಸಿಸ್ಟೆಂಟ್, ಕ್ರೋಮ್‌ಕಾಸ್ಟ್ ಮತ್ತು ಪ್ಲೇ ಸ್ಟೋರ್‌ಗೆ ಬೆಂಬಲವನ್ನು ಹೊಂದಿದೆ.

ಮಿ ಎಲ್‌ಇಡಿ ಟಿವಿ 4A Pro (smart TV)

ಮಿ ಎಲ್‌ಇಡಿ ಟಿವಿ 4A Pro (smart TV)

ಶಿಯೋಮಿ ಸಂಸ್ಥೆಯ ಮಿ ಎಲ್ಇಡಿ ಟಿವಿ 4 ಎ ಪ್ರೊ ಸ್ಮಾರ್ಟ್‌ಟಿವಿಯು 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಟಿವಿಯು 1GB RAM ಮತ್ತು 8GB ಆಂತರಿಕ ಸಂಗ್ರಹಣೆಯೊಂದಿಗೆ ಅಮ್ಲೊಜಿಕ್ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್ ಟಿವಿ 9 ಆಧಾರಿತ ಪ್ಯಾಚ್‌ವಾಲ್ ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಟಿವಿಯು 20W ಆಡಿಯೊ ಔಟ್‌ಪುಟ್ ಸೌಲಭ್ಯ ಹೊಂದಿದೆ. ಇನ್ನು ಇದರ ಬೆಲೆ 12,499 ರೂ. ಆಗಿದೆ.

ಮೊಟೊರೊಲಾ ಸ್ಮಾರ್ಟ್‌ ಟಿವಿ

ಮೊಟೊರೊಲಾ ಸ್ಮಾರ್ಟ್‌ ಟಿವಿ

ಮೊಟೊರೊಲಾ ಸಂಸ್ಥೆಯ 32 ಇಂಚಿನ ಹೆಚ್‌ಡಿ ರೆಡಿ ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಸಲು ಲಭ್ಯವಿದೆ. ಈ ಟಿವಿಯು ARM CA53 ಕ್ವಾಡ್-ಕೋರ್ ಪ್ರೊಸೆಸರ್, 1GB RAM, 8GB ಆಂತರಿಕ ಸಂಗ್ರಹಣೆ ಮತ್ತು 20W ಆಡಿಯೊ ಔಟ್‌ಪುಟ್‌ ಸೌಲಭ್ಯಗಳನ್ನು ಪಡೆದಿದೆ. ಹಾಗೆಯೇ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ ಟಿವಿ ಓಎಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಕ್ರೋಮ್‌ಕಾಸ್ಟ್‌ ಮತ್ತು ಗೂಗಲ್ ಅಸಿಸ್ಟೆಂಟ್ ಮತ್ತು ಪ್ಲೇ ಸ್ಟೋರ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಮೊಟೊರೊಲಾ ಟಿವಿಯ ಬೆಲೆ 13,999ರೂ. ಆಗಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ನ ಸರಣಿ 4 ಶ್ರೇಣಿಯ 32 ಇಂಚಿನ ಎಲ್‌ಇಡಿ ಸ್ಮಾರ್ಟ್ ಟಿವಿಯು ಹೆಚ್‌ಡಿ ರೆಡಿ ಮಾದರಿಯ ಡಿಸ್‌ಪ್ಲೇ ಹೊಂದಿದೆ. ಈ ಟಿವಿಯು ಕ್ವಾಡ್-ಕೋರ್ ಪ್ರೊಸೆಸರ್ ಮತ್ತು 1.25GB RAM ಸಾಮರ್ಥ್ಯವನ್ನು ಪಡೆದಿದ್ದು, ಟಿಜೆನ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಜನಪ್ರಿಯ ಟಿವಿ ಅಪ್ಲಿಕೇಶನ್‌ಗಳಾದ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ + ಹಾಟ್‌ಸ್ಟಾರ್ ಸೇರಿದಂತೆ ಇತರೆ ಆಪ್‌ಗಳನ್ನು ಬೆಂಬಲಿಸುತ್ತದೆ. ಹಾಗೆಯೇ 10W ಆಡಿಯೊ ಔಟ್‌ಪುಟ್‌ ಸಾಮರ್ಥ್ಯ ಹೊಂದಿದ್ದು, ಡಿಸ್‌ಪ್ಲೇ ರಿಫ್ರೆಶ್ ರೇಟ್ 50Hz ಆಗಿದೆ. ಇನ್ನು ಈ ಟಿವಿಯ ಬೆಲೆಯು 13,999 ರೂ. ಆಗಿದೆ.

ಎಲ್‌ಜಿ ಆಲ್‌-ಇನ್‌-ಒನ್‌ ಎಲ್‌ಇಡಿ ಸ್ಮಾರ್ಟ್‌ಟಿವಿ

ಎಲ್‌ಜಿ ಆಲ್‌-ಇನ್‌-ಒನ್‌ ಎಲ್‌ಇಡಿ ಸ್ಮಾರ್ಟ್‌ಟಿವಿ

ಎಲ್‌ಜಿ ಸಂಸ್ಥೆಯ ಆಲ್ ಇನ್ ಒನ್ ಎಲ್ಇಡಿ ಸ್ಮಾರ್ಟ್ ಟಿವಿ 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯು 1GB RAM ಮತ್ತು 4GB ಆಂತರಿಕ ಸಂಗ್ರಹಣೆಯ ಸಾಮರ್ಥ್ಯದೊಂದಿಗೆ ಕ್ವಾಡ್-ಕೋರ್ ಸಿಪಿಯು ಹೊಂದಿದೆ. ಹಾಗೆಯೇ ಎಲ್‌ಜಿಯ ಈ ಟಿವಿ 10W ಆಡಿಯೊ ಔಟ್‌ಪುಟ್‌ನೊಂದಿಗೆ ಡಿಟಿಎಸ್ ವರ್ಚುವಲ್ ಎಕ್ಸ್ ಸರೌಂಡ್ ಸೌಂಡ್ ಅನ್ನು ಸಹ ಹೊಂದಿದೆ. ಬೆಲೆಯು 14,999ರೂ. ಆಗಿದೆ.

Best Mobiles in India

English summary
Lot of option for a 32-inch smart TV or standard TV under Rs 15,000. But here we are listing down the top five TV models.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+