ಈ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು 15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ!
ಮಾರುಕಟ್ಟೆಯಲ್ಲಿ ನಿಮ್ಮ ಆಲೋಚನೆಗೂ ಮೀರಿದ ಸ್ಮಾರ್ಟ್‌ಫೋನ್‌ಗಳ ಆಯ್ಕೆ ಇದ್ದು, ವಿವಿಧ ಬ್ರ್ಯಾಂಡ್ ಹಾಗೂ ಫೀಚರ್ಸ್ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಪ್ರಮುಖ ಇ- ಕಾಮರ್ಸ್ ಸೈಟ್‌ಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ನಲ್ಲಿ ಇನ್ನೂ ಹೆಚ್ಚಿನ ಆಫರ್‌ನೊಂದಿಗೆ ಫೋನ್‌ಗಳನ್ನು ಖರೀದಿ ಮಾಡಬಹುದಾದ ಆಯ್ಕೆ ಸಹ ಲಭ್ಯ. ಆದರೆ, ಮಾರುಕಟ್ಟೆಯಲ್ಲಿ ವ್ಯಾಪಕ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ನಿಮ್ಮ ಅವಶ್ಯಕತೆಗೆ ಸರಿಯಾಗಿ ಹೊಂದಿಕೆ ಆಗುವ ಸ್ಮಾರ್ಟ್‌ಫೋನ್ ಅನ್ನು ಆಯ್ಕೆ ಮಾಡುವುದು ಕೆಲವೊಮ್ಮೆ ಕಠಿಣವಾದ ಕೆಲಸವಾಗುತ್ತದೆ.

ಹೌದು, ಅತ್ಯುತ್ತಮ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಯ್ಕೆ ಪ್ರಕ್ರಿಯೆ ಕೆಲವೊಮ್ಮೆ ಒಂದು ದೊಡ್ಡ ಕೆಲಸವಾಗಬಹುದು. ಅದರಲ್ಲೂ ಉತ್ತಮ ಫೀಚರ್ಸ್ ಇರುವ ಹಾಗೂ ದೀರ್ಘ ಬಾಳಿಕೆ ಬರುವ, ಹಾಗೆಯೇ 15,000 ರೂ.ಗಳಿಗಿಂತ ಕಡಿಮೆ ದರದಲ್ಲಿ ನೀವು ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಾವು ಇಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ನೀಡಿದ್ದೇವೆ ಈ ಲೇಖನ ಓದಿ.
ರಿಯಲ್‌ಮಿ 10 ಸ್ಮಾರ್ಟ್‌ಫೋನ್
ಕೈಗೆಟಕುವ ದರದಲ್ಲಿ ಅತ್ಯುತ್ತಮ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳು ಲಭ್ಯವಾಗುವುದು ಹೆಚ್ಚಾಗಿ ರಿಯಲ್‌ಮಿ ಬ್ರ್ಯಾಂಡ್‌ನಿಂದ ಇದರಲ್ಲಿ ರಿಯಲ್‌ಮಿ 10 ಸ್ಮಾರ್ಟ್‌ಫೋನ್ ನಿಮಗೆ 13,999 ರೂ. ಗಳಲ್ಲಿ ಲಭ್ಯವಾಗಲಿದೆ. ಈ ಫೋನ್ 6.4 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 90 Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಹಾಗೆಯೇ ಹಿಲಿಯೋ G99 ಚಿಪ್‌ಸೆಟ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್ ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯವಿದೆ. ಇದರೊಂದಿಗೆ 50MP ಯ ರಿಯರ್ ಡ್ಯುಯಲ್ ಕ್ಯಾಮೆರಾ ಹಾಗೂ 16MP ಇನ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ ಫೋನ್ ನ ಅಂದವನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತದೆ. 5,000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿರುವ ಈ ಫೋನ್ .33W ಸೂಪರ್ ವೂಕ್ ಚಾರ್ಜರ್‌ನೊಂದಿಗೆ ಬರುತ್ತದೆ.

ಮೊಟೊ G72 ಸ್ಮಾರ್ಟ್‌ಫೋನ್
ಮೊಟೊ G72 ಸ್ಮಾರ್ಟ್‌ಫೋನ್ 14,999 ರೂ. ಗಳಲ್ಲಿ ನಿಮಗೆ ಲಭ್ಯವಾಗಲಿದ್ದು, ಈ ಫೋನ್ 6.55 ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಹಾಗೆಯೇ ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 6GB RAM ಆಯ್ಕೆ ಪಡೆದುಕೊಂಡಿದೆ. ಹಾಗೂ 108MP ಪ್ರಮುಖ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಸೆಲ್ಫಿಗಾಗಿ 16MP ಕ್ಯಾಮೆರಾ ಇದರಲ್ಲಿದೆ. ಇನ್ನು 33W ವೇಗದ ಚಾರ್ಜರ್‌ನಿಂದ ಬೆಂಬಲಿತವಾದ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಈ ಫೋನ್ ಲಭ್ಯ.
ಪೊಕೊ M4 ಪ್ರೊ ಸ್ಮಾರ್ಟ್‌ಫೋನ್
ಪೊಕೊ M4 ಪ್ರೊ ಸ್ಮಾರ್ಟ್‌ಫೋನ್ ಅನ್ನು 13,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.6 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ನೀಡಲಿದೆ. ಹಾಗೆಯೇ
ಮೀಡಿಯಾ ಟೆಕ್ ಹಿಲಿಯೋ G96 ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್, ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ. ಇದರೊಂದಿಗೆ 64MP ಪ್ರಮುಖ ಕ್ಯಾಮೆರಾದ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಪಡೆದುಕೊಂಡಿದೆ. ಹಾಗೆಯೇ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ.

ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್ 12,499 ರೂ. ಗಳಲ್ಲಿ ನಿಮಗೆ ಲಭ್ಯ. ಈ ಫೋನ್ 6.43 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ ಮೀಡಿಯಾ ಟೆಕ್ ಹಿಲಿಯೋ G96 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಮತ್ತು 6GB+64GB ಹಾಗೂ 6GB+128GB ನ ಎರಡು ವೇರಿಯಂಟ್ ನಲ್ಲಿ ಈ ಫೋನ್ ಲಭ್ಯ. ಇದರೊಂದಿಗೆ 64 MP ಪ್ರಮುಖ ಕ್ಯಾಮೆರಾ ಆಯ್ಕೆಯೊಂದಿಗೆ ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಸೆಲ್ಫಿಗಾಗಿ 13MP ಕ್ಯಾಮೆರಾ ಆಯ್ಕೆ ಪಡೆದಿದೆ. ಇನ್ನು 33W ಫಾಸ್ಟ್ ಚಾರ್ಜರ್‌ನೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದೆ.
ಐಕ್ಯೂ Z6 44W ಸ್ಮಾರ್ಟ್‌ಫೋನ್
ಐಕ್ಯೂ Z6 44W ಸ್ಮಾರ್ಟ್‌ಫೋನ್ ಅನ್ನು 14,499 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್ 6.44 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM + 128GB, 6GB RAM + 128GB ಹಾಗೂ 8GB+128GB ನ ಮೂರು ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ. ಇದರೊಂದಿಗೆ 50MP ರಿಯರ್ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಹೊಂದಿದೆ.


Click it and Unblock the Notifications








