ಅಮೆಜಾನ್‌ನಲ್ಲಿ ಗ್ಯಾಜೆಟ್ಸ್ ಖರೀದಿಸಬೇಕೆ?..ಇಲ್ಲಿದೆ ನೋಡಿ ಡಿಸ್ಕೌಂಟ್ ಮಾಹಿತಿ!
ದಸರಾ ಹಬ್ಬದ ಪ್ರಯುಕ್ತ ಇತ್ತೀಚಿಗೆ ಅಮೆಜಾನ್ ಇ-ಕಾಮರ್ಸ್ ತಾಣವು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳವನ್ನು ಆಯೋಜಿಸಿತ್ತು. ಅದರ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೊಮ್ಮೆ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೆಲೆಬ್ರೆಷನ್ ಸ್ಪೆಷಲ್' ಸೇಲ್ ಮೇಳವನ್ನು ಶುರುಮಾಡಿದೆ. ಈ ಮೇಳದಲ್ಲಿ ಗ್ಯಾಜೆಟ್ಸ್ ಉತ್ಪನ್ನಗಳಿಗೆ ಅತ್ಯುತ್ತಮ ಡಿಸ್ಕೌಂಟ್ ಮತ್ತು ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಲಭ್ಯವಾಗಲಿವೆ.

ಹೌದು, ಅಮೆಜಾನ್ ಇ-ಕಾಮರ್ಸ್ ತಾಣವು ಆಯೋಜಿಸಿರುವ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೆಲೆಬ್ರೆಷನ್ ಸ್ಪೆಷಲ್' ಸೇಲ್ ಮೇಳವು ಪ್ರಸ್ತುತ ಚಾಲ್ತಿಯಲ್ಲಿದೆ. ಇದೇ ಅಕ್ಟೋಬರ್ 13ರಿಂದ ಆರಂಭವಾಗಿರುವ ಈ ಮೇಳವು ಇದೇ ಅಕ್ಟೋಬರ್ 17ರ ವರೆಗೂ ನಡೆಯಲಿದೆ. ಸ್ಮಾರ್ಟ್‌ಫೋನ್, ಗೇಮಿಂಗ್ ಲ್ಯಾಪ್‌ಟಾಪ್, ಅಮೆಜಾನ್ ಉತ್ಪನ್ನಗಳು, ಸ್ಮಾರ್ಟ್ ಟಿವಿ ಮತ್ತು ಧರಿಸಬಹುದಾದ ಸ್ಮಾರ್ಟ್ ಡಿವೈಸ್‌ಗಳಿಗೆ ಬೆಸ್ಟ್ ರಿಯಾಯಿತಿಗಳಿವೆ.

ಗ್ರಾಹಕರು ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸದರೇ ಶೇ.10% ಡಿಸ್ಕೌಂಟ್ ಸಿಗಲಿದೆ. ಹಾಗೆಯೇ 3,000ದಿಂದ 50,000ರೂ.ವರೆಗಿನ ಪ್ರತಿ ಖರೀದಿಗೂ 1,750ರೂ ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ. ಇನ್ನು ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆ ಸಹ ಇದೆ. ಹಾಗಾದರೇ ಅಮೆಜಾನ್ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೆಲೆಬ್ರೆಷನ್ ಸ್ಪೆಷಲ್' ಮೇಳದಲ್ಲಿ ಲಭ್ಯವಿರುವ ಬೆಸ್ಟ್ ಡೀಲ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಸ್ಮಾರ್ಟ್‌ಫೋನ್ ಆಫರ್
ಅಮೆಜಾನ್‌ನ ಈ ಮೇಳದಲ್ಲಿ ಶಿಯೋಮಿ ಕಂಪನಿಯ ಆಯ್ದ ಸ್ಮಾರ್ಟ್‌ಫೋನ್ಗಳ ಮೇಲೆ ಸುಮಾರು 12,000ರೂ.ವರೆಗೂ ರಿಯಾಯಿತಿ ಇದ್ದು, ರೆಡ್ಮಿ 7, ರೆಡ್ಮಿ 7A ಮತ್ತು ಮಿ A3 ಸ್ಮಾರ್ಟ್‌ಫೋನ್‌ಗಳು ಬೆಸ್ಟ್ ಡೀಲ್‌ನಲ್ಲಿ ಸಿಗಲಿವೆ. ಹಾಗೆಯೇ ಆಯ್ದ ವಿವೋ ಸ್ಮಾರ್ಟ್‌ಗಳಿಗೆ 16,000ರೂ.ಗಳ ವರೆಗೂ ಡಿಸ್ಕೌಂಟ್ ನೀಡಲಾಗುತ್ತಿದ್ದು, ಜೊತೆಗೆ ಆಯ್ದ ಒಪ್ಪೊ ಸ್ಮಾರ್ಟ್‌ಫೋನ್‌ಗಳಿಗೆ 20,000ರೂ ವರೆಗೂ ರಿಯಾಯಿತಿ ಸಿಗಲಿದೆ. ಆಯ್ದ ಹುವಾವೆ ಸ್ಮಾರ್ಟ್‌ಫೋನ್‌ಗಳಿಗೆ ಸುಮಾರು 30,000ರೂ.ಗಳ ವರೆಗೂ ರಿಯಾಯಿತಿ ಲಭ್ಯವಿದ್ದು, ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು.

ಅಮೆಜಾನ್ ಡಿವೈಸ್‌ಗಳಿಗೂ ಆಫರ್
ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಪರಿವರ್ತಿಸಲು ಅಮೆಜಾನ್‌ನ ಹಲವು ಸ್ಮಾರ್ಟ್ ಉತ್ಪನ್ನಗಳು ಡಿಸ್ಕೌಂಟ್‌ನಲ್ಲಿ ದೊರೆಯಲಿವೆ. ಅಮೆಜಾನ್ ಫೈರ್ ಸ್ಟಿಕ್ ಟಿವಿ ಡಿವೈಸ್‌ಗೆ 1,200ರೂ ರಿಯಾಯಿತಿ ನೀಡಿದ್ದು, ಅಮೆಜಾನ್ ಫೈರ್ ಸ್ಟಿಕ್ ಟಿವಿ 4K ಡಿವೈಸ್‌ಗೆ 2,000ರೂ. ಡಿಸ್ಕೌಂಟ್ ತಿಳಿಸಿದೆ. ಅಮೆಜಾನ್ ಇಕೋ ಸ್ಮಾರ್ಟ್ ಡಿವೈಸ್‌ಗಳಿಗೆ 35% ವರೆಗೂ ವಿನಾಯ್ತಿ ಲಭ್ಯವಾಗಲಿದೆ. ಸ್ಮಾರ್ಟ್ ಬಲ್ಬಗಳಿಗೂ ವಿಶೇಷ ರಿಯಾಯಿತಿ ಇದೆ.

ಲ್ಯಾಪ್‌ಟಾಪ್‌ಗಳಿಗೂ ಡಿಸ್ಕೌಂಟ್
ಅಮೆಜಾನ್ ಕೆಲವು ಆಯ್ದ ಮಾಡೆಲ್‌ಗಳಿಗೆ 40,000ರೂ.ಗಳ ವರೆಗೂ ಡಿಸ್ಕೌಂಟ್ ನೀಡುತ್ತಿದ್ದು, ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯವನ್ನು ನೀಡುತ್ತಿದೆ. 8GB RAM ಮತ್ತು 1TB ಹಾರ್ಡ್ ಡಿಸ್ಕ್‌ನ ಡೆಲ್-G3 3579 ಲ್ಯಾಪ್‌ಟಾಪ್ 64,299ರೂ.ಗಳಿಗೆ ಸಿಗಲಿದೆ. ಹಾಗೆಯೇ 9ನೇ ತಲೆಮಾರಿನ ಇಂಟಲ್ ಕೋರ್ i5 ಪ್ರೊಸೆಸರ್ ಸಾಮರ್ಥ್ಯದ ಲೆನೊವೊ ಕೂಲ್‌ಪ್ಯಾಡ್ L340 ಲ್ಯಾಪ್‌ಟಾಪ್ 60,300ರೂ.ಗಳಿಗೆ ಲಭ್ಯ. ಇನ್ನು ಆಸೂಸ್-FX505DY ಲ್ಯಾಪ್‌ಟಾಪ್ 44,990ರೂ. ಪ್ರೈಸ್‌ಟ್ಯಾಗ್ ಹೊಂದಿದೆ.

ಸ್ಮಾರ್ಟ್ ಟಿವಿಗಳಿಗೆ ಬೆಸ್ಟ್ ಡೀಲ್
ಅಮೆಜಾನ್ ಇತ್ತೀಚಿನ ಕೆಲವು ಆಯ್ದ ಸ್ಮಾರ್ಟ್ ಟಿವಿಗಳಿಗೆ ಶೇ.55% ಪರ್ಸೆಂಟ್‌ನಷ್ಟು ಡಿಸ್ಕೌಂಟ್ ನೀಡುವುದಾಗಿ ತಿಳಿಸಿದೆ. ಅವುಗಳಲ್ಲಿ ಸ್ಯಾಮ್‌ಸಂಗ್ 40 ಇಂಚಿನ 7-ಇನ್-1 ಫುಲ್ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಟಿವಿಯು 25,999ರೂ.ಗಳಗೆ ದೊರೆಯುತ್ತದೆ. ಹಾಗೆಯೇ ಸೋನಿ ಬ್ರಾವಿಯೊ 32 ಇಂಚಿನ ಫುಲ್ ಹೆಚ್‌ಡಿ ಎಲ್‌ಇಡಿ ಸ್ಮಾರ್ಟ್ ಟಿವಿ 31,990ರೂ.ಗಳಿಗೆ ಲಭ್ಯ. 35,999ರೂ.ಗಳಿಗೆ ಎಲ್‌ಜಿ 108-43 ಇಂಚಿನ 4K UHD ಸ್ಮಾರ್ಟ್ ಟಿವಿಯ ಖರೀದಿಸಬಹುದಾಗಿದೆ.

ಹೆಡ್‌ಫೋನ್‌ಗಳಿಗೂ ರಿಯಾಯಿತಿ
ಅಮೆಜಾನ್ ಈ ಸೇಲ್ ಮೇಳದಲ್ಲಿ ಹೆಡ್‌ಫೋನ್‌ಗಳಿಗೂ 60% ಪರ್ಸೆಂಟ್‌ನಷ್ಟು ಡಿಸ್ಕೌಂಟ್ ಘೋಷಿಸಲಾಗಿದ್ದು, ಅತ್ಯುತ್ತಮ ಬೆಲೆಗೆ ಹೆಡ್‌ಫೋನ್ ಹಾಗೂ ಸ್ಮಾರ್ಟ್ ವಾಚ್‌ಗಳನ್ನು ಖರೀದಿಸಬಹುದಾಗಿದೆ. ಜೆಬಿಎಲ್- JBL T460BT ಎಕ್ಸ್‌ಟ್ರಾ ಬಾಸ್ ಹೆಡ್‌ಫೋನ್ ಬೆಲೆಯು 1,899ರೂ. ಆಗಿದೆ. ಮಿ ಇಯರ್‌ಫೋನ್ 499ರೂ.ಗೆ ಲಭ್ಯ. ಹಾಗೆಯೇ ಆಪಲ್ ವಾಚ್ ಸೀರಿಸ್ 4 ಆಫರ್ ಬೆಲೆಯು 37,999ರೂ.ಗಳಾಗಿದೆ. ಹುವಾವೆ ವಾಚ್ ಜಿಟಿ ಡಿವೈಸ್ ಬೆಲೆಯು 9,999ರೂ. ಆಗಿದೆ.


Click it and Unblock the Notifications








