ಗೂಗಲ್‌ 'ವೆಬ್‌ ಸುರಕ್ಷೆ' ಸ್ಪರ್ಧೆಯಲ್ಲಿ ಗೆದ್ದ 5 ಭಾರತೀಯ ಶಾಲಾಮಕ್ಕಳು

By Suneel
|

ತಂತ್ರಜ್ಞಾನ, ಇಂಟರ್ನೆಟ್, ಸಾಮಾಜಿಕ ತಾಣಗಳ ಬಳಕೆ ಎಷ್ಟು ಉಪಯೋಗಿಕಾರಿಯೋ ಅಷ್ಟೇ ಸಮಸ್ಯೆಯನ್ನು ಕೆಲವೊಮ್ಮೆ ಬಳಕೆದಾರರು ಎದುರಿಸಬೇಕಾಗುತ್ತದೆ. ಅದಕ್ಕೆ ಉದಾಹರಣೆ ಹ್ಯಾಕಿಂಗ್‌ ಮತ್ತು ವಯಕ್ತಿಕ ಡೇಟಾ ಕಳ್ಳತನ ಸಮಸ್ಯೆಗಳು. ಅಂದಹಾಗೆ ಇಂದು ಇಂತಹ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಗೂಗಲ್‌ ಇಂಡಿಯಾ ಶಾಲಾ ಮಕ್ಕಳಲ್ಲೂ ಸಹ ವೆಬ್ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಮತ್ತು ಅವರ ಟ್ಯಾಲೆಂಟ್‌ ಪರೀಕ್ಷಿಸುವ ದೃಷ್ಟಿಯಿಂದ "ವೆಬ್‌ ಸುರಕ್ಷತೆ(Web Safety)" ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಐವರು ಭಾರತೀಯ ಹದಿಹರೆಯದ ಯಂಗ್‌ಸ್ಟರ್ಸ್‌ಗಳು ಸ್ಪರ್ಧೆಯಲ್ಲಿ ವಿಜಯಿ ಆಗಿದ್ದಾರೆ. ಅಂದಹಾಗೆ ಅವರು ಯಾರು? ಅವರ ಸಾಧನೆ ಏನು? ಎಂಬಿತ್ಯಾದಿ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಗೂಗಲ್‌

ಗೂಗಲ್‌

ಗೂಗಲ್‌ ಏರ್ಪಡಿಸಿದ್ದ ವೆಬ್‌ ಸುರಕ್ಷತೆ ಸ್ಪರ್ಧೆಯಲ್ಲಿ ಭಾರತೀಯ ಐವರು ಹದಿಹರೆಯದವರು ವಿಜಯಿಗಳಿಸಿದ್ದಾರೆ ಎಂದು ಜಾಗತಿಕ ಮಾಹಿತಿ ಸರ್ಚ್‌ ಇಂಜಿನ್‌ ಬುಧವಾರ ಹೇಳಿದೆ.

ಸ್ಪರ್ಧೆ

ಸ್ಪರ್ಧೆ

"ಸ್ಪರ್ಧೆಯು ಎಂಟ್ರಿಗಳನ್ನು ರೇಖಾಚಿತ್ರಗಳು, ವೀಡಿಯೋಗಳು, ಅಪ್ಲಿಕೇಶನ್‌ಗಳು, ಸೃಜನಶೀಲತೆ, ಸೇವೆ ತಲುಪುವಿಕೆ, ಪರಿಣಾಮದ ಬಗೆಗಿನ ವಿವಿಧ ರೂಪದಲ್ಲಿ ತೆಗೆದುಕೊಂಡದ್ದು ತೀರ್ಮಾನಿಸಿರುವುದು ಸಾಕ್ಷಿಯಾಗಿದೆ", ಎಂದು ಸಿಲಿಕಾನ್ ವ್ಯಾಲಿ ಮೂಲದ ಭಾರತದ ಉಪಸಂಸ್ಥೆ ಬೆಂಗಳೂರಿನಲ್ಲಿ ಹೇಳಿದೆ.

ವೆಬ್‌ ಸುರಕ್ಷೆ ಸ್ಪರ್ಧೆಯಲ್ಲಿ ವಿಜಯಿಯಾದವರು

ವೆಬ್‌ ಸುರಕ್ಷೆ ಸ್ಪರ್ಧೆಯಲ್ಲಿ ವಿಜಯಿಯಾದವರು

2014 ರಲ್ಲಿ ಲಾಂಚ್ ಮಾಡಿದ ಗೂಗಲ್‌ನ ವೆಬ್‌ ಸುರಕ್ಷೆ ಸ್ಪರ್ಧೆಯಲ್ಲಿ ವಿಜಯಿಯಾದವರು ಈ ಕೆಳಗಿನಂತಿದ್ದಾರೆ.
* ಹೈದರಾಬಾದ್ NASR ಶಾಲೆಯ ಮಾವಿಕಾ ಬೊಯಿನಿ
* ಪುಣೆಯ ಆರ್ಮಿ ಪಬ್ಲಿಕ್‌ ಶಾಲೆಯ ವೈದೇಹಿ ರೆಡ್ಡಿ
* ಘಾಜಿಯಾಬಾದ್‌ನ DLF ಪಬ್ಲಿಕ್‌ ಶಾಲೆಯ ಕನಿಶ್‌ ಛುಘ್‌
* ಹೈದರಾಬಾದ್‌ನ ಛಿರೆಕ್‌ ಪಬ್ಲಿಕ್‌ ಶಾಲೆಯ ರವಿತೇಜ ಅನುಮುಕೊಂಡ
* ಚನ್ನೈನ ಹಿಂದೂ ಸೀನಿಯರ್‌ ಸೆಕೆಂಡಿರಿ ಶಾಲೆಯ ನೆಯಾ ಸರವನರಾಜನ್‌

ಯಂಗ್‌ ಮೈಂಡ್ಸ್‌

ಯಂಗ್‌ ಮೈಂಡ್ಸ್‌

ಅಂದಹಾಗೆ ಗೂಗಲ್‌ ಲಾಂಚ್‌ ಮಾಡಿದ್ದ ವೆಬ್‌ ಸುರಕ್ಷೆ ಸ್ಪರ್ಧೆಯಲ್ಲಿ ಯಂಗ್‌ ಮೈಂಡ್ಸ್‌ ತಮ್ಮ ಸ್ವಯಂ ಆನ್‌ಲೈನ್ ಸುರಕ್ಷೆಯಲ್ಲಿ ಅವರು ಸೈಬರ್‌ ಬೆದರಿಕೆಯನ್ನು ತಡೆಯುವ ಮತ್ತು ಅದಕ್ಕೆ ಸುರಕ್ಷತೆಯ ಡಿಜಿಟಲ್‌ ಫೂಟ್‌ಪ್ರಿಂಟ್‌ ಅಭಿವೃದ್ದಿ ಪಡಿಸುವುದು ಅವರಿಗೆ ಚಾಲೆಂಜ್‌ ಆಗಿತ್ತು.

ಬೊಯಿನಿ

ಬೊಯಿನಿ

ಅಂದಹಾಗೆ ಹೈದರಾಬಾದ್‌ನ ಬೊಯಿನಿ'ರವರು ಕೆಲವು ಕಾರ್ಟೂನ್‌ಗಳನ್ನು ರಚಿಸಿ ಅದರಲ್ಲಿ ಗೆಳೆಯರಿಗೆ ನೀವು ಒರಟರಾಗಬೇಡಿ. ಅಲ್ಲದೇ ಸೂಕ್ತವಲ್ಲದ ವಿಷಯಗಳನ್ನು ಪೋಸ್ಟ್‌ ಮಾಡಬೇಡಿ ನಿಮ್ಮ ಅಜ್ಜಿ ಅದನ್ನು ಇಷ್ಟಪಡುವುದಿಲ್ಲ. ನಿಮ್ಮ ಅಜ್ಜಿಯ ನಿಯಮ ಪಾಲಿಸಿ ಎಂದು ಕಾರ್ಟೂನ್‌ ಮೂಲಕ ಹೇಳಿದ್ದರು. ಅಲ್ಲೇ ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ತಿಳಿಸಿದ್ದಾರೆ ಎಂದು ಹೇಳಿಕೆ ನೀಡಲಾಗಿದೆ.

ವೈದೇಹಿ ರೆಡ್ಡಿ

ವೈದೇಹಿ ರೆಡ್ಡಿ

ಪುಣೆಯ 'ಆರ್ಮಿ ಪಬ್ಲಿಕ್‌ ಸ್ಕೂಲ್‌'ನ ವೈದೇಹಿ ರೆಡ್ಡಿಯವರು ಇಂಟರ್ನೆಟ್‌ ಬಳಕೆದಾರರು ಮನೆ ವಿಳಾಸ ನೀಡದಂತೆ ಮತ್ತು ವಯಕ್ತಿಕ ಮಾಹಿತಿ ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಸ್ಟೇಟ್‌ಮೆಂಟ್‌ನಲ್ಲಿ ಹೇಳಲಾಗಿದೆ.

 ಕನಿಶ್‌ ಛುಗ್‌

ಕನಿಶ್‌ ಛುಗ್‌

ಘಾಜಿಯಬಾದ್‌ನ DLF ಪಬ್ಲಿಕ್‌ ಶಾಲೆಯ ಕನಿಶ್‌ ಛುಗ್‌ ಆಂಟಿ-ಫಿಶಿಂಗ್‌ ಗೇಮ್‌ ಒಂದನ್ನು ಅಭಿವೃದ್ದಿಪಡಿಸಿದ್ದು ಗೆಳೆಯರಿಗೆ ಫೇಕ್‌ ಲೊಗೋಗಳನ್ನು ಹೇಗೆ ಗುರುತಿಸುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸರವನರಾಜನ್

ಸರವನರಾಜನ್

ಅಂದಹಾಗೆ ಸರವನರಾಜನ್‌ರವರು ಒಂದು ಆಕರ್ಷಕ ಟ್ಯೂನ್‌ ಅನ್ನು ಕಾಂಪೋಸ್ ಮಾಡಿದ್ದು, "Mr. Two Faces" ಪ್ರತಿಯೊಬ್ಬರನ್ನು ವಯಕ್ತಿಕ ಸೆಟ್ಟಿಂಗ್‌ ಬಗ್ಗೆ ಎಚ್ಚರ ವಹಿಸಲು ನೆನಪಿಸುತ್ತದಂತೆ.

ಅನುಮುಕೊಂಡ

ಅನುಮುಕೊಂಡ

ಅನುಮುಕೊಂಡ'ರವರು ಪ್ರತಿಯೊಬ್ಬರು ಸರಳ ಮತ್ತು ಎಲ್ಲರೂ ಸುಲಭವಾಗಿ ತಿಳಿಯಬಲ್ಲ ಪಾಸ್‌ವರ್ಡ್‌ಗಳನ್ನು ನೀಡುವುದನ್ನು ಸಾಕಷ್ಟು ತಪ್ಪಿಸಬೇಕು. ಇದರಿಂದ ಹ್ಯಾಕಿಂಗ್ ಸಮಸ್ಯೆಯಿಂದ ದೂರವಿರಬಹುದು ಎಂಬುದನ್ನು ತಿಳಿಸಿದ್ದಾರೆ.

ಗೂಗಲ್‌ ಉಡುಗೊರೆ

ಗೂಗಲ್‌ ಉಡುಗೊರೆ

ಅಂದಹಾಗೆ ಗೂಗಲ್‌ ಇಂಡಿಯಾ ವೆಬ್‌ ಸುರಕ್ಷೆ ಸ್ಪರ್ಧೆಯಲ್ಲಿ ವಿಜಯಿಯಾದ ಎಲ್ಲಾ ಮಕ್ಕಳಿಗೆ ಗೂಗಲ್‌ ಕ್ರೋಮ್‌ಬುಕ್ ಮತ್ತು ಟ್ಯಾಬ್ಲೆಟ್‌ ಅನ್ನು ಉಡುಗೊರೆಯಾಗಿ ನೀಡುತ್ತದೆ ಎಂದು ಹೇಳಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು<br /></a><a href=ಮೈಂಡ್‌ನಿಂದ ನಿಯಂತ್ರಿಸಬಹುದಾದ ಮೊಟ್ಟಮೊದಲ ಡ್ರೋನ್‌ ರೆಡಿ
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು" title="ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಮೈಂಡ್‌ನಿಂದ ನಿಯಂತ್ರಿಸಬಹುದಾದ ಮೊಟ್ಟಮೊದಲ ಡ್ರೋನ್‌ ರೆಡಿ
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು" />ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಮೈಂಡ್‌ನಿಂದ ನಿಯಂತ್ರಿಸಬಹುದಾದ ಮೊಟ್ಟಮೊದಲ ಡ್ರೋನ್‌ ರೆಡಿ
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ
ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Five Indian Teenagers Win Google Contest on Web Safety. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X