ವಾಟ್ಸಾಪ್‌ ಪೇ ಬಳಕೆ ಮಾಡುವ ಮುನ್ನ ಈ ಸಂಗತಿಗಳು ನಿಮಗೆ ತಿಳಿದಿರಲಿ!

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್‌ ಬಹುನಿರೀಕ್ಷಿತ ವಾಟ್ಸಾಪ್‌ ಪೇ ಸೇವೆ ಪರಿಚಯಿಸಿದೆ. ಬಳಕೆದಾರರು ಚಾಟ್‌ ಮಾಡುವ ಜೊತೆಗೆ ಹಣ ಕಳುಹಿಸುವುದು ಹಾಗೂ ಸ್ವೀಕರಿಸುವುದನ್ನು ಮಾಡಬಹುದಾಗಿದೆ. ಆದರೆ ವಾಟ್ಸಾಪ್‌ ಪೇ ಬಳಕೆ ಮಾಡುವ ಮುನ್ನ ಕೆಲವು ಸಂಗತಿಗಳನ್ನು ಬಳಕೆದಾರರು ಗಮನಿಸಬೇಕಿದೆ.

ಡಿಜಿಟಲ್

ಹೌದು, ಪ್ರಸ್ತುತ ಡಿಜಿಟಲ್ ಪೇಮೆಂಟ್‌ ಆಪ್‌ಗಳ ಬೇಡಿಕೆ ಹೆಚ್ಚಿದೆ. ಗೂಗಲ್ ಪೇ, ಫೋನ್ ಪೇ ಜನಪ್ರಿಯತೆ ಪಡೆದಿದ್ದು, ಆ ಸಾಲಿಗೆ ಈಗ ಭಾರತದಲ್ಲಿ ವಾಟ್ಸಾಪ್‌ ಪೇ ಸಹ ಲಗ್ಗೆ ಇಟ್ಟಿದೆ. ಸಂಸ್ಥೆಯು ವಾಟ್ಸಾಪ್‌ ಪೇ ಸೇವೆಯ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದಿದೆ. ಆದರೆ ಬಳಕೆದಾರರು ಈ ಸೇವೆಯನ್ನು ಪ್ರಾರಂಭಿಸುವ ಮುನ್ನ ಈ ಹಂತಗಳನ್ನು ಗಮನಿಸಬೇಕು. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ಪೇಮೆಂಟ್‌

ಹೌದು, ಪ್ರಸ್ತುತ ಡಿಜಿಟಲ್ ಪೇಮೆಂಟ್‌ ಆಪ್‌ಗಳ ಬೇಡಿಕೆ ಹೆಚ್ಚಿದೆ. ಗೂಗಲ್ ಪೇ, ಫೋನ್ ಪೇ ಜನಪ್ರಿಯತೆ ಪಡೆದಿದ್ದು, ಆ ಸಾಲಿಗೆ ಈಗ ಭಾರತದಲ್ಲಿ ವಾಟ್ಸಾಪ್‌ ಪೇ ಸಹ ಲಗ್ಗೆ ಇಟ್ಟಿದೆ. ಸಂಸ್ಥೆಯು ವಾಟ್ಸಾಪ್‌ ಪೇ ಸೇವೆಯ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದಿದೆ. ಆದರೆ ಬಳಕೆದಾರರು ಈ ಸೇವೆಯನ್ನು ಪ್ರಾರಂಭಿಸುವ ಮುನ್ನ ಈ ಹಂತಗಳನ್ನು ಗಮನಿಸಬೇಕು. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ರಿಜಿಸ್ಟ್ರೇಷನ್‌

ರಿಜಿಸ್ಟ್ರೇಷನ್‌

ವಾಟ್ಸಾಪ್‌ ಪೇ ಸೇವೆಯನ್ನು ಸಕ್ರಿಯಗೊಳಿಸಲು ನೀವು ಬ್ಯಾಂಕ್ ಖಾತೆ ಮತ್ತು ಫೋನ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಲು ನೀವು ಸಾಮಾನ್ಯವಾಗಿ ಬಳಸುವ ಸ್ಕ್ರೀನ್‌ನ ಕೆಳಭಾಗದಲ್ಲಿರುವ 'ಲಗತ್ತುಗಳು' ಐಕಾನ್ ಕ್ಲಿಕ್ ಮಾಡುವ ಮೂಲಕ ಪಾವತಿಗಳನ್ನು ಮಾಡಬಹುದು. ಬಳಕೆದಾರರು ಯುಪಿಐ ಪಾಸ್ಕೋಡ್ ಅನ್ನು ಸಹ ಹೊಂದಿಸಬೇಕಾಗಿದೆ. ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಯುಪಿಐ ಅಪ್ಲಿಕೇಶನ್‌ನೊಂದಿಗೆ ಯುಪಿಐ ಪಾಸ್‌ಕೋಡ್ ಹೊಂದಿದ್ದರೆ ನೀವು ಅದೇ ಕೋಡ್ ಅನ್ನು ಬಳಸಬಹುದು.

ಯುಪಿಐ ಆಧಾರಿತ

ಯುಪಿಐ ಆಧಾರಿತ

ಗೂಗಲ್ ಪೇ, ಫೋನ್ ಪೇ, ಹಾಗೂ ವಿವಿಧ ಬ್ಯಾಂಕ್ ಅಪ್ಲಿಕೇಶನ್‌ಗಳು ಬಳಸುವ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ನಲ್ಲಿ ವಾಟ್ಸಾಪ್ ಪೇ ಸಹ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಹಣವನ್ನು ವಾಟ್ಸಾಪ್ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಹಣವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ವಾಟ್ಸಾಪ್‌ ಪೇ ಮೂಲಕ ವರ್ಗಾಯಿಸುವ ವ್ಯವಸ್ಥೆ ಇದೆ.

ಇತರೆ ಆಪ್ಸ್‌ ಬಳಕೆ

ಇತರೆ ಆಪ್ಸ್‌ ಬಳಕೆ

ಬಳಕೆದಾರರು ಭೀಮ್, ಗೂಗಲ್ ಪೇ ಅಥವಾ ಫೋನ್ ಪೇ ನಂತಹ ಯಾವುದೇ ಯುಪಿಐ ಬೆಂಬಲಿತ ಅಪ್ಲಿಕೇಶನ್ ಹೊಂದಿದ್ದರೂ ವಾಟ್ಸಾಪ್‌ ಪೇ ಮೂಲಕ ಹಣವನ್ನು ಕಳುಹಿಸಬಹುದು. ವಾಟ್ಸಾಪ್ ಪಾವತಿಗಳಿಗಾಗಿ ಸ್ವೀಕರಿಸುವವರನ್ನು ನೋಂದಾಯಿಸದಿದ್ದರೆ "ಯುಪಿಐ ಐಡಿ ನಮೂದಿಸಿ" ಆಯ್ಕೆಯನ್ನು ವಾಟ್ಸಾಪ್ ನಿಮಗೆ ನೀಡುತ್ತದೆ.

ಮಿತಿ ಮತ್ತು ಶುಲ್ಕಗಳು

ಮಿತಿ ಮತ್ತು ಶುಲ್ಕಗಳು

ಯುಪಿಐಗೆ ವಹಿವಾಟಿಗೆ ಇರುವ 1 ಲಕ್ಷದ ಮಿತಿ ವಾಟ್ಸಾಪ್‌ ಪೇ ಗೂ ಅನ್ವಯಿಸುತ್ತದೆ. ಇನ್ನು ಈ ಯುಪಿಐ ಸೇವೆಯು ಉಚಿತ ಸೇವೆಯಾಗಿದ್ದು, ಅದರ ಯಾವುದೇ ವ್ಯವಹಾರಗಳಿಗೆ ಶುಲ್ಕ ಇರುವುದಿಲ್ಲ. ಕೆಲವು ಯುಪಿಐ ಅಪ್ಲಿಕೇಶನ್‌ಗಳು ಜನರಿಗೆ ಅವರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ನಮೂದಿಸುವ ಮೂಲಕ ಹಣವನ್ನು ಕಳುಹಿಸಲು ನಿಮಗೆ ಅನುಮತಿಸುತ್ತದೆ. ಈ ವೈಶಿಷ್ಟ್ಯವನ್ನು ವಾಟ್ಸಾಪ್‌ನಲ್ಲಿ ಇನ್ನೂ ಸಕ್ರಿಯಗೊಳಿಸಲಾಗಿಲ್ಲ.

Best Mobiles in India

English summary
WhatsApp works on Unified Payments Interface (UPI), the same system that Google Pay, Phone Pay, BHIM and various bank apps use.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X