ಜಿಯೋ ಸಿಮ್ ಓವರ್ ಹೀಟಿಂಗ್ ಸಮಸ್ಯೆ ಪರಿಹಾರ ಹೇಗೆ?
ಪ್ರಸ್ತುತ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ಜಿಯೋ ಸಿಮ್ ಅನ್ನೇ ಬಳಸುತ್ತಿದ್ದಾರೆ. ಮುಕೇಶ್ ಅಂಬಾನಿ ಯೋಜನೆಯ 4ಜಿ ಸಿಮ್ ಈಗ ಹೆಚ್ಚಿನ ಬಳಕೆದಾರರು ನೆಚ್ಚಿನ ನೆಟ್‌ವರ್ಕ್ ಎಂದೆನಿಸಿದೆ. ಈ ಸಿಮ್ ಅನ್ನು ಹೊಂದಿರುವ ಬಳಕೆದಾರರು ಉಚಿತ ಕರೆಗಳನ್ನು ಅಸ್ವಾದಿಸಬಹುದಾಗಿದೆ ಮತ್ತು ಅನಿಯಮಿತ 4ಜಿ ಡೇಟಾವನ್ನು ಬಳಸಿಕೊಂಡು ಎಸ್‌ಎಮ್‌ಎಸ್ ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಓದಿರಿ: ಮೈಕ್ರೋಸಾಫ್ಟ್ ಲೂಮಿಯಾ ಫೋನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ಆಕ್ಟಿವೇಟ್ ಹೇಗೆ?
ಅದಾಗ್ಯೂ ಬಳಕೆದಾರರು ಸಿಮ್ ಕುರಿತಾದ ಹೆಚ್ಚಿನ ದೂರುಗಳನ್ನು ಹೊಂದಿದ್ದು ಇಂದಿನ ಲೇಖನದಲ್ಲಿ ಆ ದೂರುಗಳ ಕುರಿತ ಮಾಹಿತಿಯನ್ನು ನಾವು ಅರಿತುಕೊಳ್ಳಲಿದ್ದೇವೆ.

ಜಿಯೋ ಸಿಮ್ ಫೋನ್ ಓವರ್ ಹೀಟ್ ಮಾಡುತ್ತಿದೆ
ಕೆಲವೊಂದು ಜಿಯೋ ಸಿಮ್ ಬಳಕೆದಾರರ ದೂರೆಂದರೆ ಇದು ಫೋನ್ ಅನ್ನು ಓವರ್ ಹೀಟ್ ಮಾಡುತ್ತಿದೆ ಎಂದಾಗಿದೆ. ಸ್ಮಾರ್ಟ್‌ಫೋನ್ ಓವರ್ ಹೀಟಿಂಗ್ ಎಂಬುದು ಸಾಮಾನ್ಯ ವಿಷಯವಾಗಿದ್ದು ಕರೆಗಳನ್ನು ಮಾಡುವಾಗ ಬ್ರೌಸ್ ಮಾಡುತ್ತಿರುವಾಗ ಫೋನ್ ಬಿಸಿಯಾಗುತ್ತಿದೆ ಎಂಬುದು ಬಳಕೆದಾರರ ದೂರಾಗಿದೆ.

ಬ್ಯಾಟರಿ ಜೀವನಕ್ಕೆ ಕೊಕ್
ಕೆಲವೊಂದು ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್‌ನಲ್ಲಿ ಜಿಯೋ ಸಿಮ್ ಬಳಸಿಕೊಂಡು ಇದು ಬ್ಯಾಟರಿ ಜೀವನವನ್ನು ಉಳಿಸಬಹುದು ಎಂಬುದು ಅವರ ಯೋಜನೆಯಾಗಿತ್ತಾದರೂ ಈಗ ಸಿಮ್ ಫೋನ್‌ನ ಬ್ಯಾಟರಿಗೆ ತೊಂದರೆಯನ್ನುಂಟು ಮಾಡುವಂತಿದೆ.

ಬಳಕೆದಾರರಲ್ಲಿ ತಪ್ಪು ಭಾವನೆ
ಫೋನ್ ಓವರ್ ಹೀಟ್ ಕುರಿತು ಜಿಯೋ ಬಳಕೆದಾರರಲ್ಲಿ ತಪ್ಪು ಭಾವನೆ ಉಂಟಾಗುತ್ತಿದೆ. ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ನ ಹೆಚ್ಚುವರಿ ಡೇಟಾ ಟ್ರಾನ್ಸ್‌ಫರ್ ವೇಗದಿಂದಾಗಿ ಫೋನ್ ಬಿಸಿಯಾಗುತ್ತಿದೆ ಎಂಬುದು ಬಳಕೆದಾರರ ತಪ್ಪು ಕಲ್ಪನೆಯಾಗಿದೆ. ಆದರೆ ಡೇಟಾ ವರ್ಗಾವಣೆಯು ನಿಮ್ಮ ಫೋನ್ ಅನ್ನು ಬಿಸಿ ಮಾಡುವುದಿಲ್ಲ ಅಂತೆಯೇ ಬ್ಯಾಟರಿಗೂ ತೊಂದರೆಯನ್ನುಂಟು ಮಾಡುವುದಿಲ್ಲ.

ಮೊಬೈಲ್ ಸಿಗ್ನಲ್‌ನಿಂದ ಓವರ್ ಹೀಟ್ ಸಮಸ್ಯೆ
ಜಿಯೋ ಸಿಮ್ ಮೊದಲನೆಯ ಹಂತದಲ್ಲಿದ್ದರೂ ಬಳಕೆದಾರರಲ್ಲಿ ಸಿಮ್‌ಗಾಗಿ ಹೆಚ್ಚಿನ ಬೇಡಿಕೆ ಇದೆ. ಗರಿಷ್ಟ ಸಿಗ್ನಲ್ ಬಲವನ್ನು ನೀಡುವುದಕ್ಕಾಗಿ ಹತ್ತಿರದ ಟವರ್‌ಗಳಲ್ಲಿ ನೆಟ್‌ವರ್ಕ್ ಸಂಪೂರ್ಣ ಸಿಗ್ನಲ್ ಸಾಮರ್ಥ್ಯವನ್ನು ನೀಡಬೇಕು. ಕೆಲವೊಮ್ಮೆ ಸಿಮ್ ಹೆಚ್ಚುವರಿ ಆವರ್ತನೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಮತ್ತು ಇದರಿಂದ ಫೋನ್ ಹೀಟ್ ಆಗುತ್ತದೆ.

ಬ್ಯಾಟರಿ ಡ್ರೈನ್
ಜಿಯೋ ಸಿಮ್ ಅನ್ನು ಪಡೆದುಕೊಳ್ಳಲು, ಮೈಜಿಯೋ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ನೆಟ್‌ವರ್ಕ್‌ನ ಸರ್ವರ್‌ನಿಂದ ಅಧಿಸೂಚನೆಯನ್ನು ಪಡೆದುಕೊಳ್ಳುವಾಗ ಈ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಖಾಲಿಮಾಡಿಬಿಡುತ್ತವೆ. ಈ ಯಾವುದೇ ಅಪ್ಲಿಕೇಶನ್‌ಗಳನ್ನು ನೀವು ಬಳಸುತ್ತಿಲ್ಲ ಎಂದಾದಲ್ಲಿ, ಬ್ಯಾಟರಿ ಉಳಿಸುವುದಕ್ಕಾಗಿ ಇದನ್ನು ಅನ್‌ಇನ್‌ಸ್ಟಾಲ್ ಮಾಡಬಹುದಾಗಿದೆ.


Click it and Unblock the Notifications








