Home
ಸುದ್ದಿಜಾಲ

Smartphones: ಫ್ಲಿಪ್‌ಕಾರ್ಟ್,ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಭಾರೀ ಆಫರ್: 66,999ರೂ.ಗೆ ಐಫೋನ್ 15‌

ಸ್ಮಾರ್ಟ್‌ಫೋನ್‌ಗಳನ್ನು (Smartphones) ಖರೀದಿ ಮಾಡಲು ಇದು ಬೆಸ್ಟ್‌ ಟೈಮ್‌ ಆಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ದೈತ್ಯರಾದ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ (Flipkart, Amazon) ಹಲವಾರು ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿವೆ. ಅದರಲ್ಲೂ ಈ ವಿಶೇಷ ಸೇಲ್‌ನಲ್ಲಿ ಐಫೋನ್ 15 (iPhone 15) ‌ ಅನ್ನು 66,999ರೂ. ಖರೀದಿ ಮಾಡಬಹುದಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಲ್ಲಿ ರಿಪಬ್ಲಿಕ್ ಡೇ ಸೇಲ್ (Republic Day Sale) ಆರಂಭ ಆಗಿದ್ದು, ಈ ಮೂಲಕ ಸ್ಯಾಮ್‌ಸಂಗ್, ಆಪಲ್‌, ಒನ್‌ಪ್ಲಸ್‌ ಸೇರಿದಂತೆ ಅನೇಕ ಬ್ರ್ಯಾಂಡ್‌ ಫೋನ್‌ಗಳನ್ನು ಅಗ್ಗದರ ದರದಲ್ಲಿ ಖರೀದಿ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌, ಆಡಿಯೋ ಡಿವೈಸ್‌ ಸೇರಿಂದತೆ ಎಲ್ಲಾ ಸ್ಮಾರ್ಟ್‌ ಡಿವೈಸ್‌ಗಳಿಗೆ ಉತ್ತಮ ಆಫರ್ ನೀಡಲಾಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ.

ಫ್ಲಿಪ್‌ಕಾರ್ಟ್,ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಭಾರೀ ಆಫರ್

ಐಫೋನ್ 15: ಆಪಲ್‌ನ ಹೊಸ ಸರಣಿ ಫೋನ್ ಆದ ಐಫೋನ್ 15 (iPhone 15) ಅನ್ನು ಖರೀದಿ ಮಾಡುವ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಅಂದರೆ ಈ ಫೋನ್‌ನ ಆರಂಭಿಕ ಬೆಲೆ 79,900 ರೂ.ಗಳಾಗಿದ್ದು, ರಿಪಬ್ಲಿಕ್ ಡೇ ಸೇಲ್ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 66,999 ರೂ.ಗಳಿಗೆ ಈ ಫೋನ್‌ ಕಾಣಿಸಿಕೊಂಡಿದೆ. ಈ ನಡುವೆ ಖರೀದಿದಾರರು ICICI ಬ್ಯಾಂಕ್ ಕಾರ್ಡ್‌ಲೆಸ್ ಇಎಮ್‌ಐ ವ್ಯವಹಾರದ ಮೇಲೆ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿ ಸಹ ಪಡೆಯಬಹುದಾಗಿದೆ.

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌: ಈ ಫೋನ್‌ (OnePlus Nord CE 3 Lite) ಸಾಮಾನ್ಯ ಬೆಲೆ 26,999 ರೂ.ಗಳಾಗಿದ್ದು, ಈ ವಿಶೇಷ ಸೇಲ್‌ನಲ್ಲಿ ಅಮೆಜಾನ್‌ ಮೂಲಕ ನೀವು 19,998 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದಾಗ್ಯೂ 1,000 ಮೌಲ್ಯದ ಅಮೆಜಾನ್ ಕೂಪನ್ ಜೊತೆಗೆ ಈ ಫೋನ್ ಲಭ್ಯ ಇರುವುದು ಉನ್ನಷ್ಟು ಸಂತಸದ ವಿಚಾರವಾಗಿದೆ. ಹೆಚ್ಚುವರಿಯಾಗಿ, ಖರೀದಿದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ ಪಡೆಯಬಹುದಾಗಿದೆ.

ಫ್ಲಿಪ್‌ಕಾರ್ಟ್,ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಭಾರೀ ಆಫರ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23: ಈ ಫೋನ್ (Samsung Galaxy S23) ಅನ್ನು 74,999 ರೂ.ಗಳಿಗೆ ಲಾಂಚ್‌ ಮಾಡಲಾಗಿದ್ದು, 128GB ವೇರಿಯಂಟ್‌ ಈಗ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ 10,000 ರೂಪಾಯಿಗಳ ಇಳಿಕೆ ಕಂಡಿದ್ದು, 64,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದು. ಹಾಗೆಯೇ 256GB ವೇರಿಯಂಟ್‌ ಅನ್ನು 69,999 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್ ಫ್ಯಾಂಟಮ್ ಬ್ಲಾಕ್, ಕ್ರೀಮ್, ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.

ಫ್ಲಿಪ್‌ಕಾರ್ಟ್,ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಭಾರೀ ಆಫರ್

ನಥಿಂಗ್‌ ಫೋನ್ 2: ಈ ಫೋನ್ (Nothing Phone 2) 44,999 ರೂ.ಗಳ ಬೆಲೆಯಲ್ಲಿ ಲಾಂಚ್‌ ಆಗಿದ್ದು, ನೀವೀಗ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 34,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಲ್ಲದೆ ಗ್ರಾಹಕರು ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿ ಖರೀದಿ ಮಾಡಿದ್ರೆ 2,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ. ಈ ಮೂಲಕ ಈ ಫೋನ್‌ ಅನ್ನು 32,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್,ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಭಾರೀ ಆಫರ್

ರೆಡ್ಮಿ ನೋಟ್‌ 13 ಪ್ರೊ+: ಈ ಫೋನ್‌ (Redmi Note 13 Pro+) 31,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಫ್ಲಿಪ್‌ಕಾರ್ಟ್ ಮೂಲಕ ಖರೀದಿ ಮಾಡಲು ಮುಂದಾದರೆ ಭಾರೀ ಹಣ ಉಳಿತಾಯ ಮಾಡಬಹುದು. ಅಂದರೆ ICICI ಬ್ಯಾಂಕ್ ಕಾರ್ಡ್ ವ್ಯವಹಾರದ ಮೇಲೆ ಗ್ರಾಹಕರು 2,000 ರೂ. ಗಳ ತ್ವರಿತ ಪಡೆಯಬಹುದಾಗಿದ್ದು, ಇದರೊಂದಿಗೆ ವಿನಿಮಯದ ಮೇಲೆ ಹೆಚ್ಚುವರಿ 2,000 ರೂ.ಗಳ ಹಣವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

ಹಾನರ್ 90 : ಈ ಫೋನ್‌ಗೆ (Honor 90) ಭಾರತದಲ್ಲಿ ದೊಡ್ಡ ಬೇಡಿಕೆ ಇದೆ. ಅದರಲ್ಲೂ ಈಗ ಆಫರ್ ಬೆಲೆ ಯಲ್ಲಿ ಲಭ್ಯ ಇದ್ದು, ಮುಗಿಬಿದ್ದು ಖರೀದಿ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಈ ಫೋನ್‌ 30,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಅಮೆಜಾನ್‌ನಲ್ಲಿ 2,000 ಮೌಲ್ಯದ ಕೂಪನ್‌ನೊಂದಿಗೆ ಇದನ್ನು ಖರೀದಿ ಮಾಡಬಹುದು. ಜೊತೆಗೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಖರೀದಿದಾರರು 2,250 ರೂಪಾಯಿಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದ್ದು, ಒಟ್ಟು 4,250 ರೂ.ಗಳ ರಿಯಾಯಿತಿ ಸಿಕ್ಕಂತಾಗುತ್ತದೆ.

Best Mobiles in India

English summary
Republic Day sale on Flipkart and Amazon offers various phones including iPhone 15, OnePlus Nord CE 3 Lite, Samsung Galaxy S23, Nothing Phone 2 smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+