Flipkart exchange program: ಇನ್ಮುಂದೆ ನಿಮ್ಮ ಮನೆಯಲ್ಲಿರುವ ಹಳೇ ಫೋನ್,ಟಿವಿ, ಫ್ರಿಡ್ಜ್ ಗಳಿಂದಲೂ ಸಂಪಾದಿಸಬಹುದು!
ನಿಮ್ಮ ಮನೆಯಲ್ಲಿ ಹಾಳಾಗಿರುವ ಯಾವುದೇ ಹಳೆಯ ಸ್ಮಾರ್ಟ್‌ಫೋನ್, ಟಿವಿ, ಫೀಚರ್ ಫೋನ್ ಸೇರಿದಂತೆ ಇತರೆ ಯಾವುದೇ ಗ್ಯಾಜೆಟ್ ಇದ್ದರೂ ಇನ್ಮುಂದೆ ಅವುಗಳಿಗೂ ಮೌಲ್ಯ ಸಿಗಲಿದೆ. ಜೊತೆಗೆ ಇದರಿಂದ ಹೊಸ ಸ್ಮಾರ್ಟ್‌ಡಿವೈಸ್‌ಗಳಿಗೆ ಅಪ್‌ಗ್ರೇಡ್ ಆಗಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ ಹೊಸ ಪ್ಲ್ಯಾನ್‌ವೊಂದನ್ನು ಪರಿಚಯಿಸಿದೆ.
ಹೌದು, ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಕಾರ್ಯನಿರ್ವಹಿಸದ ಉಪಕರಣಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್‌ಗಳಿಗಾಗಿ ಹೊಸ ವಿನಿಮಯ ಕಾರ್ಯಕ್ರಮವನ್ನು ಪರಿಚಯಿಸಿದೆ. ಹಾಗಿದ್ರೆ, ಇದರಲ್ಲಿ ಯಾವೆಲ್ಲಾ ಸ್ಮಾರ್ಟ್‌ಡಿವೈಸ್ ಸೇಲ್ ಮಾಡಬಹುದು?, ಇದರಿಂದ ಆಗುವ ಪ್ರಯೋಜನ ಏನು?, ಯಾಕೆ ಫ್ಲಿಪ್‌ಕಾರ್ಟ್ ಈ ನಿರ್ಧಾರ ಮಾಡಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಪ್ರೋಗ್ರಾಂ: ಈ ಕಾರ್ಯಕ್ರಮದಡಿಯಲ್ಲಿ ಜನರು ಟಿವಿ, ರೆಫ್ರಿಜರೇಟರ್ ಹಾಗೂ ವಾಷಿಂಗ್ ಮೆಷಿನ್, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್‌ಗಳವರೆಗೆ ನಿಷ್ಕ್ರಿಯವಾದ ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ. ಇದರಿಂದಾಗಿ ಅದೆಷ್ಟೋ ಜನರ ಮನೆಯಲ್ಲಿರುವ ಹಳೆಯ ಸ್ಮಾರ್ಟ್‌ಡಿವೈಸ್‌ಗಳಿಗೆ ಫ್ಲಿಪ್‌ಕಾರ್ಟ್ ಜೀವ ನೀಡಿದೆ.
ಕೆಲಸ ಮಾಡದ ಉಪಕರಣಗಳನ್ನು ವಿಲೇವಾರಿ ಮಾಡುವುದು ಗ್ರಾಹಕರಿಗೆ ಸವಾಲಿನ ಕೆಲಸವಾಗಿದೆ. ಈ ಕಾಳಜಿಯನ್ನು ಪರಿಹರಿಸಲು ಈ ಎಕ್ಸ್‌ಚೇಂಜ್ ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಫ್ಲಿಪ್‌ಕಾರ್ಟ್ ಮಾಹಿತಿ ನೀಡಿದೆ. ಇದರಿಂದಾಗಿ ಯಾವುದೇ ಸಮಸ್ಯೆ ಇಲ್ಲದೆ ಗ್ರಾಹಕರು ನಿಷ್ಕ್ರಿಯ ಉಪಕರಣಗಳನ್ನು ವಿಲೇವಾರಿ ಮಾಡಿಕೊಳ್ಳಬಹುದಾಗಿದೆ. ಅಂದರೆ ಈ ಎಕ್ಸ್‌ಚೇಂಜ್ ಕಾರ್ಯಕ್ರಮವು ವಿನಿಮಯ ಮೌಲ್ಯವನ್ನು ನೀಡುತ್ತದೆ. ಈ ಮೂಲಕ ನವೀಕರಿಸಿದ ಉತ್ಪನ್ನವನ್ನು ಖರೀದಿಸಬಹುದಾಗಿದೆ.
ಎಲೆಕ್ಟ್ರಾನಿಕ್ ತ್ಯಾಜ್ಯ ಕಡಿಮೆ ಮಾಡುವ ಗುರಿ: ಈ ಎಕ್ಸ್‌ಚೇಂಜ್ ಪ್ರೋಗ್ರಾಂನಡಿ ಫ್ಲಿಪ್‌ಕಾರ್ಟ್ ಅನುಚಿತ ವಿಲೇವಾರಿಯಿಂದ ಉತ್ಪತ್ತಿಯಾಗುವ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಅದರಂತೆ ನಿಷ್ಕ್ರಿಯಗೊಂಡ ಉಪಕರಣಗಳ ಸ್ಥಿತಿಯನ್ನು ಅವಲಂಬಿಸಿ ಅಧಿಕೃತ ಮಾರಾಟಗಾರರಿಂದ ಅದನ್ನು ನವೀಕರಿಸಲಾಗುತ್ತದೆ. ಬಳಿಕ ಅದನ್ನು ಮರುಬಳಕೆ ಮಾಡುವ ಕೆಲಸದೊಂದಿಗೆ ಜವಾಬ್ದಾರಿಯುತವಾಗಿ ವಿಲೇವಾರಿ ಸಹ ಮಾಡುವ ಗುರಿಯನ್ನು ಫ್ಲಿಪ್‌ಕಾರ್ಟ್ ಹೊಂದಿದೆ.

ಈ ಸಂಬಂಧ ಫ್ಲಿಪ್‌ಕಾರ್ಟ್‌ನ ರೀ-ಕಾಮರ್ಸ್‌ನ ಹಿರಿಯ ನಿರ್ದೇಶಕ ಮತ್ತು ವ್ಯವಹಾರ ಮುಖ್ಯಸ್ಥ ಅಶುತೋಷ್ ಸಿಂಗ್ ಚಾಂಡೆಲ್ ಮಾಹಿತಿ ನೀಡಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಇ-ತ್ಯಾಜ್ಯ ಉತ್ಪಾದಕವಾಗಿದೆ ಅಂದರೆ 2019 ರಲ್ಲಿ 3.2 ಮಿಲಿಯನ್ ಟನ್‌ಗಳೊಂದಿಗೆ ದಾಖಲೆ ಬರೆದಿದೆ. ಅದರಂತೆ MEITY ನೀತಿ ಪ್ರಕಾರ ಮರುಬಳಕೆಗಾಗಿ ಕೇವಲ 10 ಪ್ರತಿಶತ ತ್ಯಾಜ್ಯವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಇದನ್ನು ಬದಲಾಯಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕೆಲಸ ಮಾಡದ ಉಪಕರಣಗಳಿಗೆ ಎಕ್ಸ್‌ಚೇಂಜ್ ಪ್ರೋಗ್ರಾಂ ನಡಿ ನಾವು ನಮ್ಮ ಗ್ರಾಹಕರಿಗೆ ನವೀನ ಹಾಗೂ ಸಮರ್ಥನೀಯ ಮತ್ತು ಅನುಕೂಲಕರ ಪರಿಹಾರವನ್ನು ಒದಗಿಸಲು ಬಯಸುತ್ತೇವೆ. ಬಳಕೆಯಾಗದ ಎಲೆಕ್ಟ್ರಾನಿಕ್ ಮತ್ತು ದೊಡ್ಡ ಉಪಕರಣಗಳನ್ನು ತ್ಯಜಿಸಲು ಮುಂದಾಗಿರುವ ಹಾಗೂ ಇದೇ ರೀತಿಯ ಹೊಸ ಡಿವೈಸ್‌ಗೆ ಅಪ್‌ಗ್ರೇಡ್ ಆಗಲು ಬಯಸುವ ಜನರಿಗೆ ಇದು ಪ್ರಯೋಜನ ನೀಡುತ್ತದೆ. ಇದರೊಂದಿಗೆ ಪರಿಸರದ ಮೇಲೆ ಕಡಿಮೆ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳ ಅಂತ್ಯದ ಮೊಬೈಲ್ ಫೆಸ್ಟ್ ಸೇಲ್ ಅನ್ನು ಆಯೋಜನೆ ಮಾಡಿದ್ದು, ಇದು ಈ ತಿಂಗಳ 29 ರ ವರೆಗೆ ಲೈವ್ ಆಗಿರಲಿದೆ. ಈ ಸೇಲ್‌ನಲ್ಲಿ ಬಳಕೆದಾರರು ಸ್ಯಾಮ್‌ಸಂಗ್ ಗ್ಯಾಲಕ್ಸಿ, ಐಫೋನ್ 14 ಪ್ರೊ ಮ್ಯಾಕ್ಸ್, ಐಫೋನ್ 13, ನಥಿಂಗ್ ಫೋನ್ (1), ಗೂಗಲ್ ಪಿಕ್ಸೆಲ್ 7a ಫೋನ್‌ಗಳಿಗೆ ಬೊಂಬಾಟ್ ಡಿಸ್ಕೌಂಟ್ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಇತರೆ ಬ್ರ್ಯಾಂಡ್‌ನ ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ಸಿಗಲಿದೆ.


Click it and Unblock the Notifications








