Flipkart ನಲ್ಲಿ ಗ್ರ್ಯಾಂಡ್ ಹೋಮ್ ಅಪ್ಲೈಯೆನ್ಸ್ ಸೇಲ್: ಸ್ಮಾರ್ಟ್‌ಟಿವಿಗಳಿಗೆ ಭಾರೀ ಡಿಸ್ಕೌಂಟ್!
ಫ್ಲಿಪ್‌ಕಾರ್ಟ್ (Flipkart) ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಒಂದಾಗಿದ್ದು, ಇದೀಗ ಮೇ 22ರಿಂದ ಅಂದರೆ ಇಂದಿನಿಂದ ಮೇ 25, 2023 ರವರೆಗೆ 'ಗ್ರ್ಯಾಂಡ್ ಹೋಮ್ ಅಪ್ಲೈಯೆನ್ಸ್ ಸೇಲ್' ಎಂಬ ಶೀರ್ಷಿಕೆಯಡಿ ಮತ್ತೊಂದು ಮಾರಾಟವನ್ನು ಆರಂಭಿಸಿದೆ. ಈ ಮೂಲಕ ಹಲವಾರು ಪ್ರಮುಖ ಕಂಪೆನಿಗಳ ಅತ್ಯುತ್ತಮ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಕೈಗೆಟುಕುವ ಸ್ಮಾರ್ಟ್ ಟೆಲಿವಿಷನ್‌ಗಳನ್ನು ಹುಡುಕುತ್ತಿದ್ದರೆ ಈ ಸಮಯ ನಿಮಗಾಗಿ.
ಹೌದು, ಪ್ರಮುಖ ಇ-ಕಾಮರ್ಸ್ ತಾಣವಾಗಿರುವ ಫ್ಲಿಪ್‌ಕಾರ್ಟ್ ಭಾರತದಲ್ಲಿ ವಿವಿಧ ಹಬ್ಬಗಳು ಹಾಗೂ ಋತುಗಳಿಗೆ ಸಂಬಂಧಿಸಿದಂತೆ ವಿಶೇಷ ಸೇಲ್ ಆಯೋಜನೆ ಮಾಡಿಕೊಂಡು ಬರುತ್ತಿದೆ. ಅದರಂತೆ ಈಗ ಪ್ರತ್ಯೇಕವಾಗಿ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಡಿಸ್ಕೌಂಟ್ ನೀಡುವ ಭಾಗವಾಗಿ ಗ್ರ್ಯಾಂಡ್ ಹೋಮ್ ಅಪ್ಲೈಯೆನ್ಸ್ ಸೇಲ್ (Grand Home appliances Sale ) ಆರಂಭ ಆಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಪ್ರಮುಖ ಸ್ಮಾರ್ಟ್‌ಟಿವಿಗಳಿಗೆ ಡಿಸ್ಕೌಂಟ್ ಇದೆ ತಿಳಿಯೋಣ.

ಮಿ 4A: ಮಿ 4A ಸ್ಮಾರ್ಟ್ ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 20W ಸೌಂಡ್ ಔಟ್‌ಪುಟ್‌ನೊಂದಿಗೆ 60Hz ನ ರಿಫ್ರೆಶ್ ರೇಟ್ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಈ ಟಿವಿಯನ್ನು ಈ ವಿಶೇಷ ಸೇಲ್‌ನಲ್ಲಿ 9,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಸಿಟಿ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಇಎಮ್‌ಐ ವಹಿವಾಟುಗಳ ಮೇಲೆ ಶೇ.10 ರಷ್ಟು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು. ವಿನಿಮಯ ಆಫರ್‌ನಲ್ಲಿ 9,000ರೂ.ವರೆಗೆ ಉಳಿತಾಯ ಸಹ ಆಗಲಿದೆ.
ಸ್ಯಾಮ್‌ಸಂಗ್ ಟಿವಿ: ಈ ಸ್ಯಾಮ್‌ಸಂಗ್ ಟಿವಿ (UA32T4050ARXXL) 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಲಿನಕ್ಸ್ ಡಿಸ್‌ಪ್ಲೇ ಹೊಂದಿದ್ದು, ಇದೂ ಸಹ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ಹಾಟ್‌ಸ್ಟಾರ್,ಯೂಟ್ಯೂಬ್‌ಗೆ ಬೆಂಬಲ ನೀಡಲಿದೆ. ಹಾಗೆಯೇ ಲಿನಕ್ಸ್ ಆಧಾರಿತ ಓಎಸ್ ನಲ್ಲಿ ರನ್ ಆಗಲಿದೆ. ಈ ವಿಶೇಷ ಸೇಲ್‌ನಲ್ಲಿ 13,290ರೂ.ಗಳಿಗೆ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದಾಗಿದ್ದು, ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐನಲ್ಲಿ ಶೇ.10 ರಿಯಾಯಿತಿ ಹಾಗೂ ವಿನಿಮಯ ಆಫರ್‌ನಲ್ಲಿ11,000ರೂ.ವರೆಗೆ ಹಣ ಉಳಿಕೆ ಮಾಡಬಹುದು.

ಇನ್ಫಿನಿಕ್ಸ್ X3 ಸ್ಮಾರ್ಟ್‌ಟಿವಿ: ಇನ್ಫಿನಿಕ್ಸ್ X3 ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್ ನಲ್ಲಿ ರನ್ ಆಗಲಿದೆ. ಈ ಟಿವಿಯನ್ನು ನೀವು 10,499ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಜೊತೆಗೆ ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳಲ್ಲಿ ಶೇ.10 ರಷ್ಟು ಡಿಸ್ಕೌಂಟ್ ಸಿಗಲಿದೆ. ಇನ್ನುಳಿದಂತೆ ವಿನಿಮಯ ಆಫರ್‌ನಲ್ಲಿ 7,000ರೂ.ವರೆಗೂ ಹಣ ಉಳಿತಾಯ ಮಾಡಬಹುದು.
ಒನ್‌ಪ್ಲಸ್ Y1: ಈ ಒನ್‌ಪ್ಲಸ್ Y1 ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ,ಡಿಸ್ನಿ+ಹಾಟ್‌ಸ್ಟಾರ್,ಯೂಟ್ಯೂಬ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಆಂಡ್ರಾಯ್ಡ್ ನಲ್ಲಿ ರನ್ ಆಗಲಿದೆ. ಇದನ್ನು ನೀವು 12,999ರೂ.ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದ್ದು,ಇದಕ್ಕೂ ಅಗ್ಗದ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದರೆ ವಿನಿಮಯ ಆಫರ್ ಹಾಗೂ ಸಿಟಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು. ಈ ಮೂಲಸಕ 7,600ರೂ.ವರೆಗೂ ಹಣ ಉಳಿತಾಯ ಮಾಡಬಹುದಾಗಿದೆ.

ಮೈಕ್ರೋಮ್ಯಾಕ್ಸ್ ಟಿವಿ: ಮೈಕ್ರೋಮ್ಯಾಕ್ಸ್ ಕಂಪೆನಿಯ 20 ಇಂಚಿನ ಈ ಟಿವಿ (20B22HD-A) ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 20W ಸೌಂಡ್ ಔಟ್‌ಪುಟ್ ನೀಡಲಿದೆ. ಇದನ್ನು ನೀವೀಗ 10,390ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳಲ್ಲಿ ಶೇ. 10ರಷ್ಟು ರಿಯಾಯಿತಿ ಸಿಗಲಿದ್ದು, 5,000ರೂ.ಗಳ ಆರ್ಡರ್‌ಗಳ ಮೇಲೆ 2,000ರೂ.ವರೆಗೆ ರಿಯಾಯಿತಿ ಲಭ್ಯ. ಇದರಲ್ಲೂ ವಿನಿಮಯ ಆಫರ್ ಅನ್ವಯ ಆಗಲಿದೆ.


Click it and Unblock the Notifications