Home
ಸುದ್ದಿಜಾಲ

Flipkart: ಫ್ಲಿಪ್‌ಕಾರ್ಟ್‌ನ ಈ ವಿಶೇಷ ಸೇಲ್‌ನಲ್ಲಿ ಐಫೋನ್‌, ಪೊಕೊ ಫೋನ್‌ಗಳಿಗೆ ಆಫರ್!

ಫ್ಲಿಪ್‌ಕಾರ್ಟ್ (Flipkart) ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳನ್ನು ಘೋಷಣೆ ಮಾಡಿಕೊಂಡು ಬಂದಿದೆ. ಈ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಅಥವಾ ಆಫರ್ ದರದಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ ಸೇರಿದಂತೆ ಅನೇಕ ಸ್ಮಾರ್ಟ್‌ ಡಿವೈಸ್‌ಗಳು ಲಭ್ಯವಾಗುವಂತೆ ಮಾಡಲಾಗಿದೆ. ಅದರಂತೆ ಈಗ ಫ್ಲಿಪ್‌ಕಾರ್ಟ್‌ ಮೊಬೈಲ್ ಬೊನಾನ್ಜಾ ಸೇಲ್‌ (Flipkart Mobile Bonanza sale) ಆರಂಭ ಮಾಡಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡಿದ್ದು, ಈ ಸೇಲ್‌ ವಿಭಾಗದಲ್ಲಿ ಮೊಬೈಲ್ ಬೊನಾನ್ಜಾ ಸೇಲ್‌ ಆಕರ್ಷಣಿಯವಾಗಿದೆ. ಈ ಸೇಲ್‌ನಲ್ಲಿ ಪ್ರಮುಖ ಪ್ರೀಮಿಯಂ ಫೋನ್‌ಗಳನ್ನೂ ಸಹ ಭಾರೀ ಆಫರ್ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಅದರಲ್ಲೂ ಐಫೋನ್‌ 15, ಐಫೋನ್‌ 15 ಪ್ರೊ ಮ್ಯಾಕ್ಸ್‌, ಪೊಕೊ X6 (iPhone 15, iPhone 15 Pro Max, Poco X6) ಸೇರಿದಂತೆ ಇನ್ನೂ ಹೆಚ್ಚಿನ ಫೋನ್‌ಗಳು ಆಫರ್ ಬೆಲೆಗೆ ಲಭ್ಯ ಇವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ.

ಫ್ಲಿಪ್‌ಕಾರ್ಟ್‌ನ ಈ ವಿಶೇಷ ಸೇಲ್‌ನಲ್ಲಿ ಐಫೋನ್‌, ಪೊಕೊ ಫೋನ್‌ಗಳಿಗೆ ಆಫರ್!

ಫ್ಲಿಪ್‌ಕಾರ್ಟ್‌ ಮೊಬೈಲ್ ಬೊನಾನ್ಜಾ ಸೇಲ್: ಫ್ಲಿಪ್‌‌ಕಾರ್ಟ್ ಮೊಬೈಲ್ ಬೊನಾಂಜಾ ಸೇಲ್‌ ಪ್ರಾರಂಭವಾಗಿದ್ದು, ಈ ಸೇಲ್‌ನಲ್ಲಿ ಪೊಕೊ X6, ಐಫೋನ್‌ 15, ಐಫೋನ್‌ 15 ಪ್ರೊ ಮ್ಯಾಕ್ಸ್, ಮೊಟೊರೊಲಾ ಎಡ್ಜ್‌ 40 ನಿಯೋ (Poco X6, iPhone 15, iPhone 15 Pro Max, Motorola Edge 40 Neo) ಮತ್ತು ಇನ್ನೂ ಹೆಚ್ಚಿನ ಫೋನ್‌ಗಳಿಗೆ ಆಫರ್ ಲಭ್ಯ ಇದೆ. ಹೆಚ್ಚಿನ ಫೋನ್ ಡೀಲ್‌ಗಳು ಬ್ಯಾಂಕ್ ಕೊಡುಗೆಗಳನ್ನು ಆಧರಿಸಿವೆ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಈ ವಿಶೇಷ ಸೇಲ್‌ ಫೆಬ್ರವರಿ 15 ರವರೆಗೆ ಮುಂದುವರಿಯುತ್ತದೆ.

ಇನ್ನು ಪೊಕೊ X6 ಸ್ಮಾರ್ಟ್‌ಫೋನ್‌ ಅನ್ನು 21,999 ರೂಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ಇದು ಅದರ ಮೂಲ ಚಿಲ್ಲರೆ ವೆಚ್ಚವಾಗಿದೆ. ಆದರೆ, ಎಸ್‌ಬಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಗ್ರಾಹಕರು 2,000 ರೂ.ಗಳ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ 19,999 ರೂ.ಗೆ ಖರೀದಿ ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್‌ನ ಈ ವಿಶೇಷ ಸೇಲ್‌ನಲ್ಲಿ ಐಫೋನ್‌, ಪೊಕೊ ಫೋನ್‌ಗಳಿಗೆ ಆಫರ್!

ಅದೇ ರೀತಿ ನೀವು ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಮೊಟೊರೊಲಾ ಎಡ್ಜ್‌ 40 ನಿಯೋ ಅನ್ನು 21,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ನ ಮೂಲ ಬೆಲೆ 22,999ರೂ.ಗಳಾಗೊದೆ. ಅಂದರೆ ಈ ಸ್ಮಾರ್ಟ್‌ಫೋನ್‌ನಲ್ಲಿ 1,500 ರಿಯಾಯಿತಿ ಸಿಗಲಿದೆ. ಆಸಕ್ತ ಬಳಕೆದಾರರು ಫ್ಲಿಪ್‌ಕಾರ್ಟ್‌ನಲ್ಲಿ ಪರಿಶೀಲನೆ ನಡೆಸಲಬಹುದಾಗಿದ್ದು, ಬ್ಯಾಂಕ್ ಕೊಡುಗೆಗಳೊಂದಿಗೆ ಅನೇಕ ಇತರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇದೇ ರೀತಿಯ ಆಫರ್ ಪಡೆದಿವೆ.

ಅದರಲ್ಲೂ ಐಫೋನ್‌ 15 ಅನ್ನು ಖರೀದಿಸಲು ಬಯಸುವ ಜನರಿಗೆ ಇದು ಉತ್ತಮ ಸಮಯವಾಗಿದೆ. ಬಿಡುಗಡೆಯಾದ ಸುಮಾರು 5 ತಿಂಗಳ ನಂತರ. ಇದು ಯಾವುದೇ ನಿಯಮಗಳು ಅಥವಾ ಷರತ್ತುಗಳಿಲ್ಲದೆ 66,999 ರೂ.ಗಳಿಗೆ ಲಭ್ಯ ಇದ್ದು, ಐಫೋನ್ 15 ಅನ್ನು ಕಳೆದ ವರ್ಷ ಭಾರತದಲ್ಲಿ 79,900 ರೂ.ಗಳ ಬೆಲೆಯೊಂದಿಗೆ ಲಾಂಚ್‌ ಮಾಡಲಾಗಿತ್ತು. ಪರಿಣಾಮ ಗ್ರಾಹಕರು 12,901 ರೂ.ಗಳ ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಇದೇ ವೇಳೆ ನೀವು ಐಫೋನ್ 13 ಅನ್ನು ಖರೀದಿಸಲು ಪರಿಗಣಿಸಬಹುದು. ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾನ್ಜಾ ಸೇಲ್‌ನಲ್ಲಿ ಈ ಫೋನ್‌ಗೆ 52,999 ರೂ.ಗಳ ಬೆಲೆ ನಿಗದಿ ಮಾಡಿದೆ. ಇದರೊಂದಿಗೆ ಐಫೋನ್ 14 ಸ್ಮಾರ್ಟ್‌ಫೋನ್‌ ಅನ್ನು 57,999 ರೂ.ಗಳಿಗೆ ನೀಡಲಿದೆ. ಎರಡೂ ಡಿವೈಸ್‌ಗಳ ಕಾರ್ಯಕ್ಷಮತೆ ಒಂದೇ ಆಗಿರುವುದರಿಂದ 5,000ರೂ.ಗಳ ಹೆಚ್ಚುವರಿ ಖರ್ಚು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

ಫ್ಲಿಪ್‌ಕಾರ್ಟ್‌ನ ಈ ವಿಶೇಷ ಸೇಲ್‌ನಲ್ಲಿ ಐಫೋನ್‌, ಪೊಕೊ ಫೋನ್‌ಗಳಿಗೆ ಆಫರ್!

ಹಾಗೆಯೇ ಅತ್ಯುತ್ತಮ iOS ಅನುಭವಕ್ಕಾಗಿ ಇತ್ತೀಚಿನ ಐಫೋನ್‌ 15 ಪ್ರೊ ಅನ್ನು ಸಹ ಈ ವೇಳೆ ಖರೀದಿ ಮಾಡಬಹುದಾಗಿದೆ. ಅಂದರೆ, ನೀವು 1.40 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಲು ಮುಂದಾಗಿದ್ದರೆ ಮ್ಯಾಕ್ಸ್‌ ಮಾದರಿಯನ್ನು ಖರೀದಿಸುವುದು ಉತ್ತಮ. ಹಾಗೆಯೇ ಐಫೋನ್‌ 15 ಪ್ರೊ ಅನ್ನು 1,27,990 ರೂಪಾಯಿಗಳ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಐಫೋನ್ 15 ಪ್ರೊ ಮ್ಯಾಕ್ಸ್‌ ಅನ್ನು 1,48,900 ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ಮ್ಯಾಕ್ಸ್ ವೇರಿಯಂಟ್‌ನಲ್ಲಿ 11,000 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ್ ಪಡೆಯಬಹುದಾಗಿದೆ.

Best Mobiles in India

English summary
Flipkart, the leading e-commerce site, has just announced a mobile bonanza sale. In this sale, iPhone 15, iPhone 15 Pro Max, Poco X6 and many more phones are available at offer prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+