ಫ್ಲಿಪ್‌ಕಾರ್ಟ್‌ನಿಂದ ಆಂಡ್ರಾಯ್ಡ್ ಆಪ್‌ ಬಿಡುಗಡೆ

Written By:

ಫ್ಲಿಪ್‌ ಕಾರ್ಟ್‌ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಆಂಡ್ರಾಯ್ಡ್ ಓಎಸ್‌ನ ಬಳಕೆದಾರರಿಗೆ ಗುಡ್‌ನ್ಯೂಸ್‌. ಅತೀ ಹೆಚ್ಚು ಬಳಕೆದಾರರು ಭೇಟಿ ನೀಡುವ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌‌ ಇದೀಗ ಬಳಕೆದಾರರಿಗೆ ನೆರವಾಗಲು ಆಂಡ್ರಾಯ್ಡ್ ಆಪ್‌ನ್ನು ಬಿಡುಗಡೆ ಮಾಡಿದೆ.

ಆಪ್‌ನಲ್ಲಿ ಎಲ್ಲಾ ಉತ್ಪನ್ನಗಳ ಮಾಹಿತಿ ಜೊತೆಗೆ ಗ್ರಾಹಕರ ಈ ಹಿಂದೆ ಸರ್ಚ್‌ ಮಾಡಿರುವ ಉತ್ಪನ್ನಗಳು ನೋಡಬಹುದು. ಅಷ್ಟೇ ಅಲ್ಲದೇ ಹೇಗೆ ಈಗ ವೆಬ್‌ಸೈಟ್‌ನಲ್ಲೂ ಬೆಲೆ, ಬ್ಯ್ರಾಂಡ್‌ ಆಧಾರದ ಮೇಲೆ ಗ್ರಾಹಕರು ಉತ್ಪನ್ನವನ್ನು ವಿಂಗಡನೆ ಮಾಡಿ ಹುಡುಕುತ್ತಾರೋ ಅದೇ ರೀತಿಯಾಗಿ ಈ ಆಪ್‌ನಲ್ಲೂ ಸಹ ವಸ್ತುವನ್ನು ಹುಡುಕಬಹುದಾಗಿದೆ.ಅಷ್ಟೇ ಅಲ್ಲದೇ ವಾಯ್ಸ್‌ ಸರ್ಚ್‌ ವಿಶೇಷತೆ ನೀಡಿದ್ದು ಬೇಕಾದ ವಸ್ತುವಿನ ಹೆಸರು ಹೇಳಿ ವಸ್ತುವನ್ನು ಹುಡುಕಬಹುದು.

 ಫ್ಲಿಪ್‌ಕಾರ್ಟ್‌ನಿಂದ ಆಂಡ್ರಾಯ್ಡ್ ಆಪ್‌ ಬಿಡುಗಡೆ

ಇದರ ಇನ್ನೊಂದು ವಿಶೇಷತೆ ಇಷ್ಟವಾದ ಉತ್ಪನ್ನದ ಮಾಹಿತಿಯನ್ನು ಇತರರಿಗೆ ಈ ಆಪ್‌ನಲ್ಲಿ ಸುಲಭವಾಗಿ ಕಳುಹಿಸಬಹುದು.ಉತ್ಪನ್ನವನ್ನು ಎಸ್‌ಎಂಎಸ್‌, ಫೇಸ್‌ಬುಕ್‌,ಟ್ವೀಟರ್‌, ಗೂಗಲ್‌ ಪ್ಲಸ್‌ನಲ್ಲಿ ಶೇರ್‍ ಮಾಡಬಹುದಾಗಿದೆ.

ಫ್ಲಿ‌ಪ್‌ಕಾರ್ಟ್‌ ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಲು ಕ್ಲಿಕ್‌ ಮಾಡಿ: ಗೂಗಲ್‌ ಪ್ಲೇಸ್ಟೋರ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot