Home
ಸುದ್ದಿಜಾಲ

ಆಪಲ್‌ ಡೇಸ್‌: ಫುಲ್‌ ಡಿಸ್ಕೌಂಟ್‌ನಲ್ಲಿ ಐಫೋನ್‌ ಖರೀದಿಸಲು ಅವಕಾಶ!

ಜನಪ್ರಿಯ ಇ-ಕಾಮರ್ಸ್‌ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಏನಾದರೂ ಒಂದು ವಿಶೇಷ ಕೊಡುಗೆ ನೀಡುತ್ತಲೆ ಬಂದಿವೆ. ಈ ನಿಟ್ಟಿನಲ್ಲಿ ಇತ್ತೀಚಿನ ಬಹುತೇಕ ಮಂದಿ ಈ ತಾಣಗಳಲ್ಲಿಯೇ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಿದ್ದಾರೆ. ಇನ್ನು ವಿಶೇಷ ದಿನಗಳು, ಹಬ್ಬದ ದಿನಗಳು, ಸೇಲ್ ಮೇಳಗಳು ಇದ್ದರಂತೂ ಇ-ಕಾಮರ್ಸ್‌ ತಾಣಗಳ ಹಬ್ಬದ ವಾತಾವರಣ ನಿರ್ಮಾಣ ಮಾಡಿಬಿಡುತ್ತವೆ. ಅಂತಹದೊಂದು ವ್ಯವಸ್ಥೆಯನ್ನು ಫ್ಲಿಪ್‌ಕಾರ್ಟ್‌ ಈಗ ಮಾಡಿದೆ.

ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌

ಹೌದು, ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣವು ಇದೀಗ 'ಆಪಲ್ ಡೇಸ್‌' ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್ ಇಂದಿನಿಂದ (ಫೆ.5) ಆರಂಭವಾಗಿದ್ದು, ಇದೇ ಫೆಬ್ರುವರಿ 8ರ ವರೆಗೂ ಇರಲಿದೆ. ಆಪಲ್ ಡೇಸ್ ಸೇಲ್‌ನಲ್ಲಿ ಆಪಲ್‌ ಐಫೋನ್‌ಗಳಿಗೆ, ಆಪಲ್ ಮ್ಯಾಕ್‌ಬುಕ್‌, ಆಪಲ್ ಐಫೋಡ್‌ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡಲಾಗುತ್ತಿದ್ದು, ವಿಶೇಷ ಇಎಮ್ಐ ಸೌಲಭ್ಯಗಳ ಆಯ್ಕೆ ಸಹ ಇದೆ. ಡಿಸ್ಕೌಂಟ್‌ನಲ್ಲಿ ಐಫೋನ್ ಖರೀದಿಸಬೇಕು ಎಂದುಕೊಂಡವರಿಗೆ ಇದು ಸಕಾಲ ಎನ್ನಬಹುದಾಗಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಆಪಲ್ ಡೇಸ್‌ ಸೇಲ್‌ ಮೇಳದಲ್ಲಿ ಯಾವೆಲ್ಲ ಐಫೋನ್‌ಗಳು ಬಿಗ್ ಡಿಸ್ಕೌಂಟ್ ಪಡೆದಿವೆ ಎನ್ನುವುದನ್ನು ಮುಂದೆ ತಿಳಿಯೋಣ.

ಆಪಲ್‌ ಐಫೋನ್‌ XS

ಆಪಲ್‌ ಐಫೋನ್‌ XS

ಆಪಲ್‌ ಸಂಸ್ಥೆಯ ಜನಪ್ರಿಯ ಐಫೋನ್ XS ಸ್ಮಾರ್ಟ್‌ಫೋನ್ ಸಹ ಈ ಸೇಲ್ ಮೇಳದಲ್ಲಿ ಡಿಸ್ಕೌಂಟ್ ಪಡೆದಿದೆ. 59,999ರೂ ಪ್ರೈಸ್‌ಟ್ಯಾಗ್‌ನಲ್ಲಿ ಗುರುತಿಸಿಕೊಂಡಿರುವ 64GB ವೇರಿಯಂಟ್‌ ಇದೀಗ ಡಿಸ್ಕೌಂಟ್‌ ಆಗಿ 54,999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಒಟ್ಟಾರೆ 5,000ರೂ. ಸ್ಪೆಷಲ್ ಡಿಸ್ಕೌಂಟ್ ಪಡೆದಿದೆ. ಇನ್ನು ಈ ಫೋನ್ 12ಎಂಪಿ ಸೆನ್ಸಾರ್ ನ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ.

ಆಪಲ್‌ ಐಫೋನ್‌ 11

ಆಪಲ್‌ ಐಫೋನ್‌ 11

ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಆಪಲ್‌ ಐಫೋನ್‌ 11 ಸ್ಮಾರ್ಟ್‌ಫೋನ್ ಸಹ ಭಾರಿ ಡಿಸ್ಕೌಂಟ್‌ ಪಡೆದಿದ್ದು, 64GB ವೇರಿಯಂಟ್‌ ಫೋನ್ 64,900ರೂ. ಬೆಲೆಗೆ ಲಭ್ಯ. ಹಾಗೆಯೇ ಐಫೋನ್‌ 11 ಫೋನ್‌ಗೆ ಹಲವು ಇಎಮ್‌ಐ ಆಯ್ಕೆಗಳನ್ನು ನೀಡಲಾಗಿದ್ದು, ಆರಂಭಿಕ ಇಎಮ್‌ಐ ಬೆಲೆ 10,817ರೂ. ಆಗಿದೆ. ಇನ್ನು ಈ ಐಫೋನ್ ಹಿಂಬದಿಯಲ್ಲಿ 12ಎಂಪಿ ಸೆನ್ಸಾರ್‌ನ ಎರಡು ಕ್ಯಾಮೆರಾ ಹೊಂದಿದ್ದು, ಮುಂಬದಿ ಸಹ 12ಎಂಪಿ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಆಪಲ್ ಐಫೋನ್ 8

ಆಪಲ್ ಐಫೋನ್ 8

ಆಪಲ್‌ನ ಐಫೋನ್‌ 8 ಫೋನ್ ಶೇ.12% ಪರ್ಸೆಂಟ್ ಡಿಸ್ಕೌಂಟ್ ಪಡೆದಿದ್ದು, 64GB ವೇರಿಯಂಟ್‌ ಫೋನ್ ಇದೀಗ 34,999ರೂ.ಗಳಿಗೆ ಸಿಗಲಿದೆ. ಇನ್ನು ಈ ಫೋನ್ ರೇಟಿನಾ ಹೆಚ್‌ಡಿ ಡಿಸ್‌ಪ್ಲೇಯನ್ನು ಪಡೆದಿದ್ದು, ಎ11 ಬಯೋನಿಕ್ ಚೀಪ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12ಎಂಪಿ ರಿಯರ್ ಕ್ಯಾಮೆರಾ ಒಳಗೊಂಡಿದ್ದು, 7ಎಂಪಿ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ.

ಆಪಲ್‌ ಐಫೋನ್ 7

ಆಪಲ್‌ ಐಫೋನ್ 7

ಜನಪ್ರಿಯ ಐಫೋನ್ 7 ಸ್ಮಾರ್ಟ್‌ಫೋನ್ ಸಹ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಾಯಿತಿ ಪಡೆದಿದ್ದು, ಆರಂಭಿಕ 32GB ವೇರಿಯಂಟ್‌ ಫೋನ್ 24,999ರೂ.ಗಳಿಗೆ ಲಭ್ಯವಿದೆ. ಇನ್ನು ಈ ಫೋನ್ ರೇಟಿನಾ ಹೆಚ್‌ಡಿ ಡಿಸ್‌ಪ್ಲೇಯನ್ನು ಪಡೆದಿದ್ದು, ಎ10 ಬಯೋನಿಕ್ ಚೀಪ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12ಎಂಪಿ ರಿಯರ್ ಕ್ಯಾಮೆರಾ ಒಳಗೊಂಡಿದ್ದು, 7ಎಂಪಿ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ.

ಆಪಲ್‌ ಐಫೋನ್ 7 ಪ್ಲಸ್

ಆಪಲ್‌ ಐಫೋನ್ 7 ಪ್ಲಸ್

ಅದೇ ರೀತಿ ಆಪಲ್ ಐಫೋನ್‌ 7 ಪ್ಲಸ್ ಸಹ ಬೆಸ್ಟ್‌ ಡಿಸ್ಕೌಂಟ್ ಪಡೆದಿದ್ದು, ಆರಂಭಿಕ 32GB ವೇರಿಯಂಟ್ ಫೋನ್ 33,999ರೂ.ಗಳಿಗೆ ದೊರೆಯುತ್ತದೆ. ಈ ಐಫೋನ್ ಹಿಂಬದಿಯಲ್ಲಿ 12ಎಂಪಿ ಸೆನ್ಸಾರ್‌ನ ಎರಡು ಕ್ಯಾಮೆರಾ ಹೊಂದಿದ್ದು, ಮುಂಬದಿ 7ಎಂಪಿ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಹಾಗೆಯೇ ಈ ಫೋನ್ ರೇಟಿನಾ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ.

Best Mobiles in India

English summary
Flipkart will start its ‘Apple Days’ sale tomorrow with discounts on iPhones, MacBooks and iPads.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+