Flipkart ನಲ್ಲಿ ಹೊಸ ಸೇಲ್ ಪ್ರಾರಂಭ! ಯಾವುದಕ್ಕೆ ಎಷ್ಟು ಆಫರ್ ಇದೆ ನೋಡಿ
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ (Flipkart) ಈಗಾಗಲೇ ಹಲವಾರು ರೀತಿಯ ವಿಶೇಷ ಸೇಲ್ ಆಯೋಜನೆ ಮಾಡುವ ಮೂಲಕ ಗ್ರಾಹಕರಿಗೆ ಅಗ್ಗದ ದರದಲ್ಲಿ ಅತ್ಯುತ್ತಮ ಡಿವೈಸ್‌ಗಳನ್ನು ಕೊಂಡುಕೊಳ್ಳಲು ಅನುವು ಮಾಡಿಕೊಟ್ಟಿದೆ. ಆದರೆ ಈಗ ಮಾತ್ರ ಈ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ನಲ್ಲಿ (flipkart big bachat dhamaal sale) ದೊಡ್ಡ ರೀತಿಯ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ಇಂದಿನಿಂದ ಆರಂಭ ಆಗಿದೆ. ಅಂದರೆ ಸೆಪ್ಟೆಂಬರ್ 1 ರಿಂದ ಆರಂಭ ಆಗಿದ್ದು, ಸೆಪ್ಟೆಂಬರ್ 3 ರವರೆಗೆ ಮುಂದುವರಿಯುತ್ತದೆ. ಈ ವಿಶೇಷ ಸೇಲ್‌ನಲ್ಲಿ ವಿವಿಧ ವರ್ಗಗಳ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ಅಷ್ಟೇ ಅಲ್ಲದೆ 1 ವರ್ಷಕ್ಕಿಂತ ಹಳೆಯ ಉತ್ಪನ್ನಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುತ್ತದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ವಸ್ತುಗಳಿಗೆ ಏನೆಲ್ಲಾ ರಿಯಾಯಿತಿ ಇದೆ ನೋಡೋಣ.

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್: ಈ ವಿಶೇಷ ಸೇಲ್‌ನಲ್ಲಿ ಕೆಲವು ಉತ್ಪನ್ನಗಳ ಮೇಲೆ ಬರೋಬ್ಬರಿ 80% ವರೆಗೆ ರಿಯಾಯಿತಿ ನೀಡಲಾಗಿದೆ. ಅದರಲ್ಲೂ ಫ್ಯಾಷನ್, ಸೌಂದರ್ಯ-ಮೇಕಪ್, ಮನೆ-ಅಡುಗೆ ಉಪಕರಣಗಳು, ಅಲಂಕಾರಿಕ ವಸ್ತುಗಳು, ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್ ಮತ್ತು ಇತರೆ ಟೂಲ್ಸ್‌ಗಳು, ಪೀಠೋಪಕರಣಗಳು , ಟಿವಿ ಸೇರಿದಂತೆ ಅನೇಕ ವಸ್ತುಗಳ ಮೇಲೆ ರಿಯಾಯಿತಿ ಇದೆ.
ಅದರಲ್ಲೂ ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರು 1000 ಕ್ಕೂ ಹೆಚ್ಚು ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ ಉಚಿತ ವಿತರಣೆ ಸೌಲಭ್ಯ ಸಹ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಇರುವ ಆಫರ್‌ಗಿಂತ ಇನ್ನೂ ಹೆಚ್ಚಿನ ಆಫರ್ ಪಡೆಯಬೇಕು ಎಂದರೆ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಹೆಚ್ಚುವರಿ ರಿಯಾಯಿತಿ ಸಿಗಲಿದೆ.
ಬೆಲೆ ಆಧಾರದಲ್ಲಿ ವರ್ಗೀಕರಣ: ಈ ಸೇಲ್‌ನಲ್ಲಿ ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಶಾಪಿಂಗ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಅಂದರೆ ಇದಕ್ಕಾಗಿ ಮೈಕ್ರೋಸೈಟ್ ಆಯ್ಕೆ ನೀಡಲಾಗಿದೆ. ಜೊತೆಗೆ ಬೆಲೆ ಶ್ರೇಣಿಯನ್ನೂ ಸಹ ಉಲ್ಲೇಖ ಮಾಡಲಾಗಿದ್ದು, ಇದರಲ್ಲಿ 499ರೂ.ಗಳು,699ರೂ.ಗಳು, 799 ರೂ.ಗಳು ಹಾಗೂ 999 ರೂ.ಗಳ ವಿಭಾಗ ಇದೆ.
ಯಾವುದಕ್ಕೆ ಎಷ್ಟು ರಿಯಾಯಿತಿ ?: ಗ್ರಾಹಕರು ವಿವಿಧ ವಿಭಾಗಗಳಲ್ಲಿ ಭಾರಿ ರಿಯಾಯಿತಿಗಳನ್ನು ಪಡೆಯಲು ಅನುಕೂಲ ಮಾಡಿಕೊಡಲಾಗಿದ್ದು, ಅದರಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ ಶೇ.70 ರಿಯಾಯಿತಿ, ವಾಷಿಂಗ್ ಮೆಷಿನ್ ಮೇಲೆ ಶೇ.60 ರಿಯಾಯಿತಿ, ಪರ್ಸನಲ್ ಕೇರ್ ಉತ್ಪನ್ನಗಳ ಮೇಲೆ ಶೇ.60 ರಿಯಾಯಿತಿ, ಉಡುಪುಗಳ ಮೇಲೆ ಶೇ.60 ರಿಂದ 70 ಮತ್ತು ದಿನಸಿ ವಸ್ತುಗಳ ಮೇಲೆ ಶೇ.70 ರಿಯಾಯಿತಿ ಘೋಷಣೆ ಮಾಡಲಾಗಿದೆ.
ಇದರೊಂದಿಗೆ ಕ್ರೀಡಾ ಫಿಟ್‌ನೆಸ್‌ನಲ್ಲಿ ಶೇ. 80 ರಷ್ಟು ರಿಯಾಯಿತಿ, ಸ್ಮಾರ್ಟ್ ಟಿವಿಗಳು, ಮಾನಿಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ ಆಯ್ಕೆ ನೀಡಲಾಗಿದ್ದು, ಈ ಮೂಲಕ ಗ್ರಾಹಕರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರು ಈ ಖರೀದಿಯಲ್ಲಿ ಇನ್ನೂ ಹೆಚ್ಚಿನ ಕ್ಯಾಶ್‌ಬ್ಯಾಕ್ ಪ್ರಯೋಜನ ಪಡೆಯಲಿದ್ದಾರೆ.

ಉಳಿದಂತೆ ಕೆಲವು ವಸ್ತುಗಳ ಮೇಲೆ ಕಣ್ಣಾಡಿಸುವುದಾದರೆ ಬೋಟ್ ಏರ್‌ಡಾಪ್ಸ್ 161 ಪ್ರೊ ಅನ್ನು ನೀವು ಈ ಸೇಲ್‌ನಲ್ಲಿ 1,299 ರೂ.ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 3,490ರೂ.ಗಳಾಗಿದೆ. ಜೊತೆಗೆ ಆಂಬ್ರೇನ್ 25000mAh ಪವರ್ ಬ್ಯಾಂಕ್ 9,999ರೂ.ಗಳಬೆಲೆ ಹೊಂದಿದೆಯಾದರೂ ಇದಕ್ಕೆ ಈ ಸೇಲ್‌ನಲ್ಲಿ 40% ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ನೀವು 5,999ರೂ.ಗಳಿಗೆ ಖರೀದಿ ಮಾಡಬಹುದು.


Click it and Unblock the Notifications








