ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಐಫೋನ್ SE ಫೋನಿಗೆ ಬಿಗ್ ಡಿಸ್ಕೌಂಟ್!
ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಬಿಲಿಯನ್ ಸೇಲ್ ಈಗ ಚಾಲ್ತಿ ಇದ್ದು, ಭರ್ಜರಿ ಆಫರ್‌ಗಳು ಲಭ್ಯ ಇವೆ. ಆಪಲ್ ಐಫೋನ್ ಖರೀದಿಸುವ ಗ್ರಾಹಕರಿಗೆ ಈ ಸೇಲ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಎಂದು ಹೇಳಬಹುದಾಗಿದೆ. ಏಕೆಂದರೇ ಐಫೋನ್ ಆಯ್ದ ಫೋನ್‌ಗಳಿಗೆ ಬೆಸ್ಟ್ ರಿಯಾಯಿತಿ ಘೋಷಿಸಲಾಗಿದೆ. ಅದರಲ್ಲಿಯೂ ಐಫೋನ್ SE ಫೋನ್ ವಿಶೇಷ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರನ್ನು ಸೆಳೆದಿದೆ.

ಹೌದು, ಜನಪ್ರಿಯ ಆಪಲ್ ಕಂಪನಿಯ ಐಫೋನ್SE ಫೋನ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಸೇಲ್‌ನಲ್ಲಿ ರಿಯಾಯಿತಿ ದರವನ್ನು ಹೊಂದಿದೆ. 64GB ವೇರಿಯಂಟ್ ಫೋನ್ ಬೆಲೆಯು 28,999ರೂ. ಆಗಿದೆ. ಹಾಗೆಯೇ 128GB ಸ್ಟೋರೇಜ್ ಫೋನ್ ಬೆಲೆಯು 31,999ರೂ. ದರ ಹೊಂದಿದ್ದು, ಇನ್ನು 256GB ವೇರಿಯಂಟ್ ಫೋನ್ 40,999ರೂ. ಪ್ರೈಸ್‌ಟ್ಯಾಗ್ ಅನ್ನು ಪಡೆದಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಸಹ ಒಳಗೊಂಡಿದೆ. ಐಫೋನ್ SE ಫೋನಿನ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
ಆಪಲ್ ಐಫೋನ್ SE 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ.

ಪ್ರೊಸೆಸರ್ ಯಾವುದು
ಐಫೋನ್ SE ಆಪಲ್ ಕಂಪೆನಿ A 13 ಬಯೋನಿಕ್ SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್ 13 ಬೆಂಬಲ ನೀಡಲಿದೆ. ಈ ಐಫೋನ್ 64GB, 128GB, ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯ ವೇರಿಯೆಂಟ್ ಆಯ್ಕೆಯಲ್ಲಿ ಲಬ್ಯವಿದೆ. ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಕ್ಯಾಮೆರಾ ಸೆನ್ಸಾರ್
ಐಫೋನ್ SE ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಅದು 12 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ f/ 1.8 ಲೆನ್ಸ್ + ಒಐಎಸ್ ಹೊಂದಿದೆ ಮತ್ತು ಸ್ಲೋ ಸಿಂಕ್ ಜೊತೆಗೆ ದಿಗೆ ಎಲ್ಇಡಿ ಟ್ರೂ ಟೋನ್ ಫ್ಲ್ಯಾಷ್ ಹೊಂದಿದೆ. ಇದು 60kps ವರೆಗೆ 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳಿಗಾಗಿ ಸ್ಮಾರ್ಟ್ HDR ಅನ್ನು ನೀಡುತ್ತದೆ. ಜೊತೆಗೆ 7 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಐಫೋನ್SE ಬ್ಯಾಟರಿ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದಿದ್ದು, ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ 802.11ax, ವೈ-ಫೈ ಕಾಲ್, ಎನ್‌ಎಫ್‌ಸಿ, ಬ್ಲೂಟೂತ್ ವಿ 5.0, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಹಾಗೇಯೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ.


Click it and Unblock the Notifications








