Flipkart Big Billion Days: ಈ ಉತ್ಪನ್ನಗಳ ಮೇಲೆ ಆಫರ್‌ಗಳ ಸುರಿಮಳೆ!
ಹಬ್ಬಗಳು ಬಂದರೇ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಖುಷಿಯೋ ಖುಷಿ. ಏಕೆಂದರೆ ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್ ಇ ಕಾಮರ್ಸ್ ತಾಣಗಳು ಭರ್ಜರಿ ಸೇಲ್ ಮೇಳಗಳನ್ನು ಆಯೋಜಿಸುತ್ತವೆ. ಆಯ್ದ ಉತ್ಪನ್ನಗಳಿಗೆ ಬೊಂಬಾಟ್ ರಿಯಾಯಿತಿ ಘೋಷಿಸುತ್ತವೆ. ಸದ್ಯ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್ ತಾಣವು ಬಿಗ್ ಬಿಲಿಯನ್ ಡೇ ಸೇಲ್ ಮಾರಾಟ ಮೇಳವನ್ನು ಪ್ರಾರಂಭ ಮಾಡಿದ್ದು, ಗ್ರಾಹಕರ ಗಮನ ಸೆಳೆದಿದೆ. ಹಾಗೆಯೇ ಈ ಮಾರಾಟದಲ್ಲಿ ಥಾಮ್ಸನ್ (Thomson) ಸಂಸ್ಥೆಯು ತನ್ನ ಕೆಲವು ಉತ್ಪನ್ನಗಳಿಗೆ ಅತ್ಯುತ್ತಮ ಡಿಸ್ಕೌಂಟ್ ತಿಳಿಸಿದೆ.
ಹೌದು, ಫ್ರೆಂಚ್ ಮೂಲದ ಬ್ರ್ಯಾಂಡ್ ಥಾಮ್ಸನ್ (Thomson) ಇದೇ ಸೆಪ್ಟೆಂಬರ್ 27 ರಿಂದ ಪ್ರಾರಂಭ ಆಗುತ್ತಿರುವ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ (Flipkart Big Billion Days) ಸೇಲ್ ನಲ್ಲಿ ತನ್ನ ಸ್ಮಾರ್ಟ್ ಟಿವಿಗಳು (Tvs), ವಾಷಿಂಗ್ ಮೆಷಿನ್ ಗಳು ಮತ್ತು ಸ್ಪೀಕರ್ ಗಳ ಮೇಲೆ ಬೊಂಬಾಟ್ ರಿಯಾಯಿತಿಗಳನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು 10 ದಿನಗಳ ಕಾಲ ನಡೆಯಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಸೆಪ್ಟೆಂಬರ್ 26 ರಂದೇ ಖರೀದಿ ಮಾಡುವ ಅವಕಾಶ ಪಡೆದಿದ್ದಾರೆ.

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ (Flipkart Big Billion Days) ಮಾರಾಟ ಸಂದರ್ಭದಲ್ಲಿ ಗ್ರಾಹಕರು ಥಾಮ್ಸನ್ (Thomson) ಆಂಡ್ರಾಯ್ಡ್ ಟಿವಿಗಳಲ್ಲಿ ಪ್ರತ್ಯೇಕವಾಗಿ ಸೋನಿ ಲೈವ್, ಜೀ5 (Zee5) ಹಾಗೂ 27 ಇತರ ಓಟಿಟಿಗಳನ್ನು ನೋಡುವ 3 ತಿಂಗಳ ಓಟಿಟಿ ಪ್ಲೇ ಚಂದಾದಾರಿಕೆ ಸಹ ಪಡೆಯಲಿದ್ದಾರೆ. ಇನ್ನುಳಿದಂತೆ ಕೊಡುಗೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
5,999ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ಪನ್ನ ಒದಗಿಸುತ್ತಿರುವ ಥಾಮ್ಸನ್ (Thomson) ಪ್ರತೀ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಉತ್ಪನ್ನಗಳನ್ನು ನೀಡಲಿದೆ. ಇದೇ ಸಂದರ್ಭದಲ್ಲಿ ಥಾಮ್ಸನ್ 12,999ರೂ. ಗಳ ಬೆಲೆಯಲ್ಲಿ ಆಕರ್ಷಕವಾದ ಮರೂನ್ ಬಣ್ಣದ ಟಾಪ್ ಲೋಡ್ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ (Fully Automatic Washing Machine) ಮಾಡೆಲ್ ಅನ್ನು ಬಿಡುಗಡೆ ಮಾಡಿದೆ.
ಥಾಮ್ಸನ್ (Thomson) ಇತ್ತೀಚೆಗಷ್ಟೇ ಆಲ್ಫಾಬೀಟ್ 25 ಮತ್ತು ಆಲ್ಫಾಬೀಟ್ 60 ಎಂಬ ಎರಡು ಪ್ರಮುಖ ಸೌಂಡ್ ಬಾರ್ ಗಳನ್ನು ಬಿಡುಗಡೆ ಮಾಡಿತ್ತು. ಹಾಗೆಯೇ ಥಾಮ್ಸನ್ ಮುಂದಿನ ಆರು ತಿಂಗಳಲ್ಲಿ 20 ಮಾಡೆಲ್ ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಎರಡು ಹೊಸ ಸೌಂಡ್ ಬಾರ್‌ಗಳು ಕ್ರಮವಾಗಿ 1499ರೂ. ಗಳು ಮತ್ತು 3599ರೂ. ಗಳ ವಿಶೇಷ ಬೆಲೆಯಲ್ಲಿ ಖರೀದಿಗೆ ಲಭ್ಯ ಆಗಲಿವೆ.
ಥಾಮ್ಸನ್ ಟಿವಿ 5999ರೂ. ಗಳಿಂದ 74,999ರೂ. ಗಳ ವರೆಗಿನ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ದೊರೆಯುತ್ತವೆ. ಹಾಗೆಯೇ ಥಾಮ್ಸನ್ 7 ಕೆಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್ ಆರಂಭಿಕ ಬೆಲೆ 7490ರೂ. ಗಳು ಆಗಿದೆ. ಅಲ್ಲದೇ ಥಾಮ್ಸನ್ 9 ಕೆಜಿ ವಾಶಿಂಗ್ ಮೆಷಿನ್ ಆರಂಭಿಕ ಬೆಲೆ 8790ರೂ. ಗಳು ಆಗಿದೆ.
ಬ್ಯಾಂಕ್ ಆಫರ್ ಮಾಹಿತಿ
ಹೆಚ್ ಡಿ ಎಫ್ ಸಿ (HDFC) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್‌ಸ್ಟಂಟ್ ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ ಯುಪಿಐ (UPI) ಪಾವತಿಗಳ ಮೇಲೆ ಶೇ.50 ವರೆಗೆ ರಿಯಾಯಿತಿ ಸಹ ಪಡೆಯಬಹುದು. ಗ್ರಾಹಕರು ಫ್ಲಿಪ್ ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಕಾರ್ಡ್ ಬಳಸಿಕೊಂಡು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು.


Click it and Unblock the Notifications








