Flipkart Big Billion Days sale: ಮೊಟೊರೊಲಾ ರೇಜರ್ ಫೋನ್‌ಗೆ ಬಿಗ್ ಡಿಸ್ಕೌಂಟ್!
ಮೊಟೊರೊಲಾ ಸಂಸ್ಥೆಯ ಜನಪ್ರಿಯ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಮೊಟೊರೊಲಾ ರೇಜರ್ ಈಗಾಗಲೇ ಬೆಲೆ ಇಳಿಕೆ ಕಂಡು ಅಚ್ಚರಿ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಮತ್ತೊಮ್ಮೆ ಭಾರಿ ದರ ಕಡಿತವಾಗುವ ಸೂಚನೆಯನ್ನು ಹೊರಹಾಕಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಹೌದು, ಇದೇ ಅಕ್ಟೋಬರ್ 16ರಿಂದ ಶುರುವಾಗಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಮೊಟೊ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ 40,000ರೂ ವರೆಗೂ ಬೆಲೆ ಇಳಿಕೆ ಆಗುವ ಸೂಚನೆ ನೀಡಿದೆ. ಇದರೊಂದಿಗೆ ನೋ ಕಾಸ್ಟ್ EMI ಆಯ್ಕೆಗಳು ಸಹ ಲಭ್ಯವಾಗಲಿವೆ. ಹಾಗಾದರೇ ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ 876 x 2142 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ OLED ಹೆಚ್‌ಡಿ ಪ್ಲಸ್ ಫ್ಲೆಕ್ಸಿಬಲ್ ಸ್ಕ್ರೀನ್ ಹೊಂದಿದೆ. ಡಿಸ್‌ಪ್ಲೇ ಅನುಪಾತವು 21:9 ಆಗಿದ್ದು, ಮಡಚುವ ರಚನೆಯಿದೆ. ಹಾಗೆಯೇ ನೋಟಿಫಿಕೇಶನಗಾಗಿ 2.7 ಇಂಚಿನ ಕಿರು ಡಿಸ್‌ಪ್ಲೇ ಹೊಂದಿದ್ದು, 600 x 800 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಬಾಹ್ಯ ನೋಟ್ ಹೆಚ್ಚು ಆಕರ್ಷಕವಾಗಿದೆ.

ಪ್ರೊಸೆಸರ್ ಸಾಮರ್ಥ್ಯ
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಇದೆ. ಇದರೊಂದಿಗೆ 6GB RAM ಮತ್ತು 128GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಫೋನಿನ ಮಲ್ಟಿಟಾಸ್ಕ್ ಕೆಲಸಗಳಿಗೆ ಪ್ರೊಸೆಸರ್ ಕಾರ್ಯವೈಖರಿ ಸಪೋರ್ಟ್ ನೀಡಲಿದೆ.

ಕ್ಯಾಮೆರಾ ವಿಶೇಷ
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಆ ಕ್ಯಾಮೆರಾವು f/1.7 ಅಪರ್ಚರ್ ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ನೈಟ್ ಮೋಡ್ ಆಯ್ಕೆ ಸೇರಿದಂತೆ ಅಗತ್ಯ ಕ್ಯಾಮೆರಾ ಫೀಚರ್ಸ್‌ಗಳನ್ನು ಒದಗಿಸಲಾಗಿದೆ.

ಬ್ಯಾಟರಿ ಲೈಫ್
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ 2510mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದ್ದು, ಇದರೊಂದಿಗೆ 15W ಸಾಮರ್ಥ್ಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ಬ್ಲೂಟೂತ್ 5.0, ವೈ-ಫೈ 802.11, 4G LTE, ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.


Click it and Unblock the Notifications








