ಫ್ಲಿಪ್‌ಕಾರ್ಟ್‌ಗೆ ಮುಗಿದ್ದ ಜನರು: 20 ಗಂಟೆಯಲ್ಲಿ ದಾಖಲೆಯ ಸ್ಮಾರ್ಟ್‌ಫೋನ್ ಮಾರಾಟ!
ಫ್ಲಿಪ್‌ಕಾರ್ಟ್‌ನೊಂದಿಗೆ ಪೇಟಿಎಂ, ಅಮೆಜಾನ್‌ಗಳು ಸಹ ಆಫರ್ ಮೇಲೆ ಆಫರ್ ಘೋಷಣೆ ಮಾಡುತ್ತಿದ್ದು, ಆದರೂ ಸಹ ಫ್ಲಿಪ್ ಕಾರ್ಟ್ ಈ ಎಲ್ಲಾ ಕಂಪನಿಗಳಿಗೂ ಸೆಡ್ಡು ಹೊಡೆದು ಸ್ಮಾರ್ಟ್ ಫೋನ್ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಭಾರತೀಯ ಆನ್‌ಲೈನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಫ್ಲಿಪ್‌ಕಾರ್ಟ್ ಮತ್ತೊಂದು ಹೊಸ ದಾಖಲೆಯನ್ನು ನಿರ್ಮಿಸಿದ್ದು, ತನ್ನ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಕೇವಲ 20 ಗಂಟೆಗಳಲ್ಲಿ 13 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಸೇಲ್ ಈ ಹಿಂದೆ ಎಂದು ಆಗಿಲ್ಲ ಎನ್ನಲಾಗಿದೆ.

ಓದಿರಿ: ನೋಕಿಯಾ 3310 ಫೀಚರ್ ಫೋನ್ ಇಲ್ಲಿ ಕೇಲವ ರೂ.349 ಸಿಗಲಿದೆ
ಫ್ಲಿಪ್‌ಕಾರ್ಟ್‌ನೊಂದಿಗೆ ಪೇಟಿಎಂ, ಅಮೆಜಾನ್‌ಗಳು ಸಹ ಆಫರ್ ಮೇಲೆ ಆಫರ್ ಘೋಷಣೆ ಮಾಡುತ್ತಿದ್ದು, ಆದರೂ ಸಹ ಫ್ಲಿಪ್ ಕಾರ್ಟ್ ಈ ಎಲ್ಲಾ ಕಂಪನಿಗಳಿಗೂ ಸೆಡ್ಡು ಹೊಡೆದು ಸ್ಮಾರ್ಟ್ ಫೋನ್ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಹಲವು ಆಫರ್ ಗಳು:
ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 7, ಗ್ಯಾಲೆಕ್ಸಿ S7 ಮತ್ತು ನೋಟ್ 4 ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇಲ್ ಆಗಿದ್ದು, ಈ ಫೋನ್‌ಗಳು ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳ ಮೆಲೆ ಸಾಕಷ್ಟು ಆಫರ್ ಗಳು ದರ ಕಡಿತವನ್ನು ಕಾಣಬಹುದಾಗಿದೆ.

ಯಾವ ಯಾವ ಆಫರ್ ಗಳು:
ನೋ ಕಾಸ್ಟ್ EMI, ಬೈ ಬ್ಯಾಕ್ ಗ್ಯಾರೆಂಟಿ, ಕ್ಯಾಷ್ ಬ್ಯಾಕ್, ಡಿಸ್‌ಕೌಂಟ್ ಸೇರಿದಂತೆ ಸ್ಮಾರ್ಟ್‌ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್ ಹಲವಾರು ಆಫರ್ ಗಳನ್ನು ಘೋಷಣೆ ಮಾಡಿದ್ದು, ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 24ರ ವರೆಗೂ ಸೇಲ್ ಇದೆ:
ಈಗಾಗಲೇ ಕೇವಲ 20 ಗಂಟೆಗಳಲ್ಲಿ ಸುಮಾರು 13 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿರುವ ಫ್ಲಿಪ್‌ಕಾರ್ಟ್, ತನ್ನ ಬಿಗ್ ಬಿಲಿಯನ್ ಡೇ ಸೇಲ್ ಅನ್ನು ಸೆಪ್ಟೆಂಬರ್ 24ರ ವರೆಗೂ ಮುಂದುವರೆಸಲಿದೆ ಎನ್ನಲಾಗಿದೆ.


Click it and Unblock the Notifications








