ಶೀಘ್ರದಲ್ಲೇ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್; ಯಾವೆಲ್ಲಾ ಡಿವೈಸ್‌ಗಳಿಗೆ ಎಷ್ಟು ಡಿಸ್ಕೌಂಟ್!?
ಫ್ಲಿಪ್‌ಕಾರ್ಟ್ Flipkart ) ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳ ಮೂಲಕ ಸ್ಮಾರ್ಟ್ ಡಿವೈಸ್‌ಗಳ ಮೇಲೆ ಭರ್ಜರಿ ಆಫರ್‌ಗಳನ್ನು ನೀಡಿದೆ. ಈ ನಡುವೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ದೀಪಾವಳಿಗೂ ಮೊದಲು ಆರಂಭ ಆಗಲಿದ್ದು, ಈ ಸೇಲ್‌ನಲ್ಲಿ 5G ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ F54, ಐಫೋನ್ 13, ಪಿಕ್ಸೆಲ್ 7a ಸೇರಿದಂತೆ ಅನೇಕ ಫೋನ್‌ಗಳಿಗೆ ಭಾರೀ ಆಫರ್ ನೀಡಲಾಗುತ್ತದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಇ-ಕಾಮರ್ಸ್ ದೈತ್ಯ ಹಲವಾರು 5G ಫೋನ್‌ಗಳಲ್ಲಿ ದೊಡ್ಡ ರಿಯಾಯಿತಿಗಳನ್ನು ನೀಡಲಿದೆ. ಅದರಲ್ಲೂ ಈ ಸೇಲ್‌ನಲ್ಲಿ ಐಫೋನ್ 13 ಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಆಗಿದ್ರೆ ಯಾವೆಲ್ಲಾ ಫೋನ್‌ಗಳಿಗೆ ಎಷ್ಟು ರಿಯಾಯಿತಿ?, ಇತರೆ ಆಫರ್ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಇ-ಕಾಮರ್ಸ್ ದೈತ್ಯ ಈ ವಿಶೇಷ ಸೇಲ್ ದಿನಾಂಕವನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಐಫೋನ್ 13, ಸ್ಯಾಮ್‌ಸಂಗ್ ಗ್ಯಾಲಕ್ಸಿ F54, ಪಿಕ್ಸೆಲ್ 7a (iPhone 13, Samsung Galaxy F54, Pixel 7a) ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಡಿವೈಸ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಲಾಗುತ್ತದೆ. ಹಬ್ಬದ ಆಚರಣೆಯ ವಾರಗಳ ಮೊದಲೇ ಗ್ರಾಹಕರಿಗೆ ಉತ್ತಮ ಎಲೆಕ್ಟ್ರಾನಿಕ್ ಮತ್ತು ಫೋನ್ ಡೀಲ್‌ಗಳನ್ನು ನೀಡಲು ಫ್ಲಿಪ್‌ಕಾರ್ಟ್ ಪ್ರತಿ ವರ್ಷ ದೀಪಾವಳಿಯ ಒಂದು ತಿಂಗಳ ಮೊದಲು ದೊಡ್ಡ ಸೇಲ್ ಅನ್ನು ಆಯೋಜಿಸುತ್ತದೆ ಎಂಬುದು ಗಮನಿಸಬೇಕಾದ ವಿಷಯ.
ಟೀಸರ್‌ನಲ್ಲಿ ಉಲ್ಲೇಖ ಮಾಡಿದಂತೆ ಐಫೋನ್‌ಗಳಿಗೆ ಈ ಸೇಲ್‌ನಲ್ಲಿ ಬಾರೀ ರೀಯಾಯಿತಿ ಇರಲಿದೆ ಎನ್ನಲಾಗಿದೆ. ಐಫೋನ್ 14 ಬಗ್ಗೆ ಉಲ್ಲೇಖಿಸದಿದ್ದರೂ, ಆಪಲ್ ಡೀಲ್ ವಿಭಾಗದಲ್ಲಿ ಐಫೋನ್ 13 ಅನ್ನು ಫೋನ್ ಅನ್ನು ತೋರಿಸಲಾಗಿದೆ. ಈ ಮೂಲಕ ಗ್ರಾಹಕರು ಐಫೋನ್‌ಗಳನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಪ್ರತಿ ವರ್ಷವೂ ಸಹ ಈ ಸೇಲ್‌ನಲ್ಲಿ ಐಫೋನ್‌ಗಳಿಗೆ ವಿಶೇಷ ಬೇಡಿಕೆ ಇದ್ದೇ ಇರುತ್ತದೆ.
ಇನ್ನು ಈ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಟೀಸರ್ ಪೇಜ್‌ನಲ್ಲಿ ನಿಖರವಾದ ಡೀಲ್‌ಗಳನ್ನು ಬಹಿರಂಗಪಡಿಸುವುದಿಲ್ಲ. ಆದರೆ, ರಿಯಾಯಿತಿಗಳನ್ನು ಸ್ವೀಕರಿಸುವ ಫೋನ್‌ಗಳ ಹೆಸರನ್ನು ಮಾತ್ರ ಖಚಿತಪಡಿಸಲಾಗುತ್ತದೆ. ಹಾಗೆಯೇ ಪ್ರತಿ ಸ್ಮಾರ್ಟ್‌ಫೋನ್ ಬ್ರಾಂಡ್ ಡೀಲ್ ಅನ್ನು ವೆಬ್‌ಸೈಟ್‌ನಲ್ಲಿ ಯಾವಾಗ ಪ್ರದರ್ಶಿಸಲಾಗುತ್ತದೆ ಎಂಬ ದಿನಾಂಕವನ್ನು ಆಧರಿಸಿ ಸುಮಾರು 10 ದಿನಗಳ ನಂತರ ಎಲ್ಲಾ ಮಾಹಿತಿಯನ್ನು ಬಹಿರಂಗ ಮಾಡಲಾಗುತ್ತದೆ.
ಈ ಪೇಜ್‌ನಲ್ಲಿ ಉಲ್ಲೇಖ ಮಾಡಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಮತ್ತು ಐಫೋನ್‌ಗಳು ಸೇರಿವೆ. ಜೊತೆಗೆ ಸ್ಯಾಮ್‌ಸಂಗ್ ಮತ್ತು ರಿಯಲ್‌ಮಿ ಫೋನ್ ಡೀಲ್‌ಗಳು ಕ್ರಮವಾಗಿ ಅಕ್ಟೋಬರ್ 3 ಮತ್ತು ಅಕ್ಟೋಬರ್ 6 ರಂದು ಲೈವ್ ಆಗುತ್ತವೆ ಎಂದು ತಿಳಿದುಬಂದಿದೆ. ಜೊತೆಗೆ ರೆಡ್ಮಿ ಫೋನ್ ಖರೀದಿ ಮಾಡಲು ಗ್ರಾಹಕರು ಅಕ್ಟೋಬರ್ 7 ರವರೆಗೆ ಕಾಯಬೇಕಾಗಿದೆ. ಮತ್ತು ಒಪ್ಪೋ ಡೀಲ್‌ಗಳನ್ನು ಅಕ್ಟೋಬರ್ 8 ರಂದು ನಡೆಸಲು ಫ್ಲಿಪ್‌ಕಾರ್ಟ್ ಮುಂದಾಗಿದ್ದು, ಅದೇ ದಿನ ಪೊಕೊ ಫೋನ್‌ಗಳ ಮೇಲೂ ಆಫರ್ ನೀಡಲಾಗುತ್ತದೆ.
ಉಳಿದಂತೆ ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೂ 50 ರಿಂದ 80 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಮೂಲಕ ಯಾರೆಲ್ಲಾ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ವಾಚ್ ಖರೀದಿ ಮಾಡಲು ಈಗ ಮುಂದಾಗಿದ್ದೀರೋ ಅವರು ಕೆಲವು ದಿನಗಳವರೆಗೆ ಕಾದರೆ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಇಯರ್‌ಫೋನ್‌ಗಳ ಮೇಲೂ ಆಫರ್ ನೀಡಲಾಗುತ್ತದೆ.
ಅಂದರೆ ಇಯರ್‌ಫೋನ್‌ಗಳ ಬೆಲೆ 499 ರೂ.ಗಳಿಂದ ಆರಂಭ ಆಗಲಿದ್ದು, ಕೀಬೋರ್ಡ್‌ಗಳು ಕೇವಲ 99 ರೂ.ಗಳಿಂದ ಪ್ರಾರಂಭವಾಗುತ್ತವೆ. ವೈಡ್‌ಸ್ಕ್ರೀನ್ ಮಾನಿಟರ್‌ಗಳು 70 ಪ್ರತಿಶತದಷ್ಟು ರಿಯಾಯಿತಿಯ ಕೊಡುಗೆಯನ್ನು ಹೊಂದಿರಲಿದ್ದು, ಪ್ರಿಂಟರ್‌ಗಳು 60 ಪ್ರತಿಶತದವರೆಗೆ ಪಡೆಯುತ್ತವೆ. ಈ ಮೂಲಕ ಯಾವುದೇ ಡಿವೈಸ್ ಖರೀದಿ ಮಾಡಿದರೂ ಸಹ ಹೆಚ್ಚಿನ ಹಣ ಉಳಿತಾಯ ಪಕ್ಕಾ.

ಇದರೊಂದಿಗೆ ಸ್ಮಾರ್ಟ್‌ಟಿವಿ ಮೇಲೆ ಭರ್ಜರಿ ರಿಯಾಯಿತಿ ಸಿಲಿದೆ ಎಂದು ಹೇಳಲಾಗಿದೆ. ಅಂದರೆ ಫ್ಲಿಪ್‌ಕಾರ್ಟ್ 80 ಪ್ರತಿಶತದಷ್ಟು ರಿಯಾಯಿತಿಯನ್ನು ಸ್ಮಾರ್ಟ್‌ಟಿವಿಗಳಿಗೆ ನೀಡಲು ಯೋಜಿಸಿದೆ. ಈ ಟಿವಿ ವಿಭಾಗದಲ್ಲಿ ಆಫರ್ ಬೆಲೆಗೆ ಕೆಲವು ಜನಪ್ರಿಯ 4K ಸ್ಮಾರ್ಟ್ ಟಿವಿಗಳು ಸಹ ಲಭ್ಯ ಇವೆ. ಇದು ಶೇಕಡಾ 75 ರಷ್ಟು ರಿಯಾಯಿತಿ ಪಡೆದುಕೊಳ್ಳಲಿವೆ ಎಂದು ಮಾಹಿತಿ ತಿಳಿದುಬಂದಿದೆ.


Click it and Unblock the Notifications








