ಫ್ಲಿಪ್‌ಕಾರ್ಟ್ ನಿಂದ ಬಿಗ್ ಬಿಲಿಯನ್ ಡೇಸ್ ಸೇಲ್ ಘೋಷಣೆ!
ಜನಪ್ರಿಯ ಸೇಲ್‌ಗಳ ಮೂಲಕ ಆನ್‌ಲೈನ್ ಗ್ರಾಹಕರ ಮನಗೆದ್ದಿರುವ ಫ್ಲಿಪ್‌ಕಾರ್ಟ್ ಇದೀಗ ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕರ ಮರಳಿದೆ. ಸದ್ಯ ಫ್ಲಿಪ್‌ಕಾರ್ಟ್ ಬಿಗ್‌ಬಿಲಿಯನ್ ಡೇಸ್ ಸೇಲ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಈ ಸೇಲ್ ದಿನಾಂಕಗಳನ್ನು ಇನ್ನು ಬಹಿರಂಗಪಡಿಸಿಲ್ಲ. ಹಿಂದಿನ ಸೇಲ್‌ಗಳನ್ನು ಗಮನಿಸಿದರೆ ಫ್ಲಿಪ್‌ಕಾರ್ಟ್ ಸಾಮಾನ್ಯವಾಗಿ ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ಕೇವಲ ಹಬ್ಬದ ಸೀಸನ್‌ನಲ್ಲಿ ನಡೆಸುತ್ತದೆ. ಅಂದರೆ ಈ ವರ್ಷವೂ ಸೆಪ್ಟೆಂಬರ್ ಅಂತ್ಯದಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಸೇಲ್ ಆರಂಭವಾಗುವ ಸಾಧ್ಯತೆ ಇದೆ.

ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ಘೋಷಿಸಿದೆ. ಆದರಿ ಸೇಲ್‌ನ ದಿನಾಂಕವನ್ನು ಇನ್ನು ಘೋಷಣೆ ಮಾಡಿಲ್ಲ. ಇನ್ನು ಬಿಗ್ ಬಿಲಿಯನ್ ಡೇಸ್ ಸೇಲ್ 2021 ಟೀಸರ್ ನಲ್ಲಿ ಹೆಚ್ಚುವರಿ ರಿಯಾಯಿತಿ ನೀಡಲು ಫ್ಲಿಪ್ ಕಾರ್ಟ್ ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ ಎಂದು ತಿಳಿಸಿದೆ. ಇದಲ್ಲದೆ ಹೆಚ್ಚುವರಿಯಾಗಿ, ಗ್ರಾಹಕರು ಪೇಟಿಎಂ ಮೂಲಕ ಶಾಪಿಂಗ್‌ನಲ್ಲಿ ಖಚಿತವಾದ ಕ್ಯಾಶ್‌ಬ್ಯಾಕ್ ಪಡೆಯಬಹುದು ಅನ್ನೊದನ್ನ ಫ್ಲಿಪ್‌ಕಾರ್ಟ್ ಬಹಿರಂಗಪಡಿಸಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಯಾವೆಲ್ಲಾ ಡಿಸ್ಕೌಂಟ್ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ನು ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್ ಟೈಂನಲ್ಲಿ ಫ್ಲಿಪ್‌ಕಾರ್ಟ್ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು, ಒಪ್ಪೋ ಸ್ಮಾರ್ಟ್‌ಫೋನ್‌ಗಳು, ವಿವೋ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್ 12 ಸರಣಿ, ಐಫೋನ್ ಎಕ್ಸ್‌ಆರ್, ಕೈಗೆಟುಕುವ ಐಫೋನ್ ಎಸ್‌ಇ 2020 ಸೇರಿದಂತೆ ಹಲವಾರು ಡಿವೈಸ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡುವುದಾಗಿ ಘೊಷಣೆ ಮಾಡಿದೆ. ಆದರೆ ಸ್ಮಾರ್ಟ್‌ಫೋನ್‌ಗಳಲ್ಲಿ ನಿರ್ದಿಷ್ಟವಾಗಿ ಏನೆಲ್ಲಾ ಡೀಲ್‌ಗಳನ್ನು ಇರಲಿದೆ ಅನ್ನೊದನ್ನ ಇನ್ನು ಬಹಿರಂಗಪಡಿಸಿಲ್ಲ.

ಇದಲ್ಲದೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಆಡಿಯೋ ಆಕ್ಸಿಸರೀಸ್, ಕೈಗಡಿಯಾರಗಳು, ಲ್ಯಾಪ್‌ಟಾಪ್‌ಗಳು, ಸೌಂಡ್‌ಬಾರ್‌ಗಳು, ಆರೋಗ್ಯ ರಕ್ಷಣಾ ಸಾಧನಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ ಅನ್ನೊದು ಬಹಿರಂಗವಾಗಿದೆ. ಜೊತೆಗೆ ಹಲವು ಬ್ರಾಂಡ್‌ಗಳು, ಕಿಚನ್ ಪ್ರಾಡಕ್ಟ್‌ಗಳು, ಗೃಹೋಪಯೋಗಿ ವಸ್ತುಗಳು, ರೆಫ್ರಿಜರೇಟರ್‌ಗಳು ಮತ್ತು ಹೆಚ್ಚಿನವುಗಳಿಂದ ಸ್ಮಾರ್ಟ್ ಟಿವಿಗಳ ಮೇಲೆ 80% ರಿಯಾಯಿತಿಯನ್ನು ನೀಡೋದು ಕನ್ಫರ್ಮ್ ಆಗಿದೆ. ಇನ್ನು ಫ್ಲಿಪ್‌ಕಾರ್ಟ್ ಪಲ್ಸ್ ಆಕ್ಸಿಮೀಟರ್, ಬಿಪಿ ಯಂತ್ರಗಳು ಮತ್ತು ಹೆಚ್ಚಿನವುಗಳಂತಹ ಆರೋಗ್ಯ ರಕ್ಷಣಾ ಸಾಧನಗಳ ಮೇಲೆ 80% ರಿಯಾಯಿತಿ ನೀಡಲಿದೆ.

ಐಫೋನ್‌ಗಳಿಗೆ ಬಿಗ್ ಡಿಸ್ಕೌಂಟ್
ಇನ್ನು ಈ ಭಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಫೋನ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡುವುದಾಗಿ ಫ್ಲಿಪ್‌ಕಾಟ್ ಹೇಳಿದೆ. ಇವುಗಳಲ್ಲಿ ಐಫೋನ್ 12, ಐಫೋನ್ ಎಸ್‌ಇ, ಐಫೋನ್ ಎಕ್ಸ್‌ಆರ್ ಗಳ ಮೇಲೆ ಬಿಗ್ ಡಿಸ್ಕೌಂಟ್ ದೊರೆಯಲಿದೆ. ಹಾಗೆಯೇ ಐಫೋನ್ 12 ಮಿನಿ, ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಈಗ ಕ್ರಮವಾಗಿ ರೂ 59,999, ರೂ 66,999, ರೂ 1,15,900 ಮತ್ತು ರೂ 1,25,900 ಬೆಲೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಈ ಬಾರಿಯ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಹಲವು ಹೊಸ ಬ್ರಾಂಡ್‌ಗಳು ಲಾಂಚ್ ಆಗುವ ಸಾದ್ಯತೆ ಕೂಡ ಇದೆ. ಇದರಲ್ಲಿ ರಿಯಲ್‌ಮಿ 4K ಗೂಗಲ್ ಟಿವಿ ಸ್ಟಿಕ್ ಕೂಡ ಸೇರಿದೆ. ಇದು ರಿಯಲ್‌ಮಿ ಬ್ರಾಂಡ್‌ನ ಮೊದಲ ಸ್ಟ್ರೀಮಿಂಗ್ ಡಿವೈಸ್ ಆಗಿದೆ. ಇದಲ್ಲದೆ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಫೈರ್-ಬೋಲ್ಟ್ ತನ್ನ ಮ್ಯಾಕ್ಸ್ ಸ್ಮಾರ್ಟ್ ವಾಚ್ ಬಿಡುಗಡೆ ಮಾಡುವುದನ್ನು ದೃಡಪಡಿಸಿದೆ. ಇನ್ನು ಈ ಸ್ಮಾರ್ಟ್‌ವಾಚ್ 1.78-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಹಾಗೆಯೇ ಎಂಎಸ್‌ಐ ತನ್ನ ಜಿಎಫ್ 63 ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಲ್ಯಾಪ್‌ಟಾಪ್ 10 ನೇ ತಲೆಮಾರಿನ ಇಂಟೆಲ್ ಕೋರ್ ಐ5 ಹೊಂದಿರಲಿದೆ. ಇದರ ಬೆಲೆ 83,990ರೂ. ಆಗಿದೆ.


Click it and Unblock the Notifications








