Just In
- 10 hrs ago
2023ರಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- 10 hrs ago
Ooredoo ಸಂಸ್ಥೆಯಿಂದ ಮೈಕ್ರೋಸಾಫ್ಟ್ ಟೀಮ್ಸ್ ಫೋನ್ ಬಗ್ಗೆ ಘೋಷಣೆ; ಯಾರಿಗೆ ಉಪಯೋಗ!?
- 12 hrs ago
ಇನ್ಸ್ಟಾಗ್ರಾಮ್ನಲ್ಲಿ ನೂತನ ಸೌಲಭ್ಯ!; ಟೀನೇಜರ್ಸ್ಗೆ ಸಖತ್ ಅನುಕೂಲ!
- 12 hrs ago
ಇನ್ಫಿನಿಕ್ಸ್ ನೋಟ್ 12i ಲಾಂಚ್ ಡೇಟ್ ಬಹಿರಂಗ! ಫೀಚರ್ಸ್ ಹೇಗಿದೆ?
Don't Miss
- Sports
ನೆಟ್ಸ್ನಲ್ಲಿ ಬೌಲಿಂಗ್ ಆರಂಭಿಸಿದ ಬುಮ್ರಾ : ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆ?
- Movies
ಅಭಿಷೇಕ್ ಅಂಬರೀಶ್ ಮದ್ದೂರಿನಿಂದ ಸ್ಪರ್ಧೆ ಮಾಡೋದು ನಿಜವೇ? ಏನಂದ್ರು ಮರಿ ರೆಬೆಲ್?
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ಫಿನಿಕ್ಸ್ ಫೋನ್‌ಗಳು ಇದೀಗ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ!..ಮಾಹಿತಿ ಇಲ್ಲಿದೆ!
ಬಹುನಿರೀಕ್ಷಿತ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2022 ಇದೇ ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗುವ ಆಗುವ ನಿರೀಕ್ಷೆಯಿದೆ. ಇನ್ನು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಸೇಲ್ ಶುರುವಾಗುವ 24 ಗಂಟೆಗಳ ಮೊದಲು ಆಫರ್ ತೆರೆದಿರುತ್ತದೆ. ಹಾಗೆಯೇ ಫ್ಲಿಪ್‌ಕಾರ್ಟ್ ತಾಣದಲ್ಲಿ ಇನ್ಫಿನಿಕ್ಸ್ ಸಂಸ್ಥೆಯು ಆಕರ್ಷಕ ಡಿಸ್ಕೌಂಟ್ ಗಳನ್ನು ಲಭ್ಯವಾಗಿದೆ. ಇತ್ತೀಚಿಗೆ ಬಿಡುಗಡೆ ಆಗಿರುವ ಕೆಲವು ಫೋನ್‌ಗಳು ಸಹ ರಿಯಾಯಿತಿ ದರದಲ್ಲಿ ಸಿಗಲಿವೆ.

ಹೌದು, ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಇನ್ಫಿನಿಕ್ಸ್ ಫೋನ್‌ಗಳು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ. ಇನ್ಫಿನಿಕ್ಸ್ ಫೋನ್‌ಗಳ ಡಿಸ್ಕೌಂಟ್ ಸೇಲ್ ಇದೀಗ ಲೈವ್ ಆಗಿದೆ. ಈ ಮಾರಾಟದಲ್ಲಿ ಇನ್ಫಿನಿಕ್ಸ್ ಹಾಟ್, ಸ್ಮಾರ್ಟ್ ಮತ್ತು ನೋಟ್ ಸರಣಿಯ ಫೋನ್‌ಗಳು ಬೊಂಬಾಟ್ ಡಿಸ್ಕೌಂಟ್ ಬೆಲೆಯಲ್ಲಿ ದೊರೆಯಲಿವೆ. ಇನ್ಫಿನಿಕ್ಸ್ ಸ್ಮಾರ್ಟ್ 6 ಮತ್ತು ಇನ್ಫಿನಿಕ್ಸ್ ಹಾಟ್ 12 ಪ್ಲೇ ಫೋನ್‌ಗಳು ಹೆಚ್ಚಿನ ರಿಯಾಯಿತಿಯಲ್ಲಿ ಕಾಣಿಸಿಕೊಂಡಿವೆ.

ಕಂಪನಿಯು ಸ್ಮಾರ್ಟ್‌ಫೋನ್‌ಗಳ ಮೇಲೆ 5,000 ರೂ. ವರೆಗೆ ಘೋಷಿಸಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ 10% ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಅಲ್ಲದೆ, ಖರೀದಿದಾರರು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ನೋ-ಕಾಸ್ಟ್ EMI ಆಯ್ಕೆಗಳನ್ನು ಪಡೆಯಬಹುದು. ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಇನ್ಫಿನಿಕ್ಸ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್
ಇನ್ಫಿನಿಕ್ಸ್ ಸ್ಮಾರ್ಟ್ 6 ಮತ್ತು ಇನ್ಫಿನಿಕ್ಸ್ ಹಾಟ್ 12 ಪ್ಲೇ ಫೋನ್‌ಗಳು ಈಗ ಕೊಡುಗೆಯಲ್ಲಿ 8,000 ರೂ ಕ್ಕಿಂತ ಕಡಿಮೆ ಲಭ್ಯ. ಹಾಗೆಯೇ ಇನ್ಫಿನಿಕ್ಸ್ ಹಾಟ್ 12 ಪ್ರೊ 6GB ರೂಪಾಂತರವು 10,000 ರೂ. ಕ್ಕಿಂತ ಕಡಿಮೆ ಲಭ್ಯವಿದೆ. ಜೊತೆಗೆ ನೋಟ್ ಸರಣಿಯ ಇನ್ಫಿನಿಕ್ಸ್ ಹಾಟ್ 12 ಪ್ರೊ, ಇನ್ಫಿನಿಕ್ಸ್ ಹಾಟ್ 12 ಪ್ರೊ 5G ಮತ್ತು ಇನ್ಫಿನಿಕ್ಸ್ ಹಾಟ್ 12 ಫೋನ್‌ಗಳು ಎಲ್ಲಾ 13,000 ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯ.

ಇನ್ಫಿನಿಕ್ಸ್ ನೋಟ್ 12 ಪ್ರೊ: ಡಿಸ್‌ಪ್ಲೇ ರಚನೆ
ಇನ್ಫಿನಿಕ್ಸ್ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ HD+ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 20:9 ರಚನೆಯ ಅನುಪಾತವನ್ನು ಹೊಂದಿದ್ದು, 393 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ಡ್ರಾಪ್ ನಾಚ್ ಹೊಂದಿರುವ ಬೆಜೆಲ್-ಲೆಸ್ ಡಿಸ್‌ಪ್ಲೇ ಆಗಿದೆ.

ಇನ್ಫಿನಿಕ್ಸ್ ನೋಟ್ 12 ಪ್ರೊ: ಪ್ರೊಸೆಸರ್ ಬಲ
ಇನ್ಫಿನಿಕ್ಸ್ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಬಲವನ್ನು ಪಡೆದಿದೆ. ಎಸ್‌ಡಿ ಕಾರ್ಡ್ ಮೂಲಕ 2TB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ.

ಇನ್ಫಿನಿಕ್ಸ್ ನೋಟ್ 12 ಪ್ರೊ: ಕ್ಯಾಮೆರಾ ಸೆನ್ಸಾರ್
ಇನ್ಫಿನಿಕ್ಸ್ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಡೆಪ್ತ್ ಲೆನ್ಸ್ ಮತ್ತು ಹಿಂಭಾಗದಲ್ಲಿ AI ಲೆನ್ಸ್ ಕೂಡ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಇನ್ಫಿನಿಕ್ಸ್ ನೋಟ್ 12 ಪ್ರೊ: ಬ್ಯಾಟರಿ ಬ್ಯಾಕ್‌ಅಪ್
ಇನ್ಫಿನಿಕ್ಸ್ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್ ಬೆಂಬಲಿಸುವ 5,000 mAh ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈ ಫೈ ಯನ್ನು ಬೆಂಬಲಿಸಲಿದೆ. ಇದಲ್ಲದೆ DTS ತಂತ್ರಜ್ಞಾನದಿಂದ ವರ್ಧಿತ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ ಗೇಮಿಂಗ್ ಅನುಭವಕ್ಕಾಗಿ 4D ಕಂಪನದೊಂದಿಗೆ ಲೀನಿಯರ್ ಮೋಟಾರ್ ಟ್ಯಾಕ್ಟೈಲ್ ಸಿಸ್ಟಮ್ ಸಹ ಇದೆ. ಹಾಗೆಯೇ ಈ ಫೋನ್ 164.39 x 76.52 x 7.8mm ಅಳತೆ ಹೊಂದಿದ್ದು, 192 ಗ್ರಾಂ ತೂಕವನ್ನು ಪಡೆದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470