Home
ಸುದ್ದಿಜಾಲ

Motorola smartphones: ಮೊಟೊರೊಲಾದ ಈ ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ಮಟ್ಟದ ಆಫರ್!

ಫ್ಲಿಪ್‌ಕಾರ್ಟ್‌(Flipkart) ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳಿಗೆ ತನ್ನ ವಿಶೇಷ ಸೇಲ್‌ಗಳಲ್ಲಿ ಭಾರೀ ಆಫರ್ ನೀಡಿದೆ. ಈ ನಡುವೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ (Flipkart Big Diwali Sale) ಮೂಲಕ ಸಾಕಷ್ಟು ಡಿವೈಸ್‌ಗಳಿಗೆ ಆಫರ್ ನೀಡಲಾಗಿದ್ದು, ಅದರಲ್ಲಿ ಮೊಟೊರೊಲಾದ ಫೋನ್‌ಗಳು ಇನ್ನೂ ಹೆಚ್ಚಿನ ಡಿಸ್ಕೌಂಟ್‌ ಪಡೆದಿವೆ.

ಹೌದು, ನವರಾತ್ರಿ ಮತ್ತು ದಸರಾ ಸೇಲ್‌ ನಂತರ ಮತ್ತು ಅಕ್ಟೋಬರ್ ಪೂರ್ತಿ ನಡೆದ ಬಿಗ್ ಬಿಲಿಯನ್ ಡೇಸ್ ಸೇಲ್ ಬಳಿಕ ಈಗ ಫ್ಲಿಪ್‌ಕಾರ್ಟ್‌ ತನ್ನ ವಿಶೇಷ ದೀಪಾವಳಿ ಸೇಲ್‌ ಅನ್ನು ಘೋಷಿಸಿದೆ. ಈಗಾಗಲೇ ಪ್ರಾರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ ನವೆಂಬರ್ 11 ರವರೆಗೆ ಮುಂದುವರಿಯುತ್ತದೆ. ಈ ಸೇಲ್‌ ಸಮಯದಲ್ಲಿ ಎಂದಿನಂತೆ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಪಿಸಿಗಳು, ಟ್ಯಾಬ್ಲೆಟ್‌ಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ನಡುವೆ ಯಾವೆಲ್ಲಾ ಮೊಟೊ ಫೋನ್‌ಗಳಿಗೆ ರಿಯಾಯಿತಿ ಇದೆ ಎಂದು ತಿಳಿಯೋಣ ಬನ್ನಿ.

ಮೊಟೊರೊಲಾದ ಈ ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ಮಟ್ಟದ ಆಫರ್!

ಮೊಟೊರೊಲಾ ಎಡ್ಜ್‌ 40 ನಿಯೋ: ಈ ಸ್ಮಾರ್ಟ್‌ಫೋನ್‌ (Motorola Edge 40 Neo) ಅನ್ನು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ 8GB RAM+128GB ಮತ್ತು 12GB RAM+256GB ಇಂಟರ್ನಲ್ ಸ್ಟೋರೇಜ್ ಫೋನ್‌ಗಳನ್ನು ಕ್ರಮವಾಗಿ 22,999ರೂ. ಮತ್ತು 24,999 ರೂ. ನಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7030 ಚಿಪ್‌ಸೆಟ್ ಬಲ, 6.55 ಇಂಚಿನ ಫುಲ್‌ ಪ್ಲಸ್ POLED ಕರ್ವ್ಡ್ ಡಿಸ್‌ಪ್ಲೇ ಮೂಲಕ ವಿಶೇಷ ಎನಿಸಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ ಪ್ಯಾಕ್ ಮಾಡುತ್ತದೆ.

ಮೊಟೊರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್‌ಫೋನ್‌ನ (Motorola Edge 40 Smartphone) 8GB RAM + 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಗೆ ಡಿಸ್ಕೌಂಟ್‌ ನೀಡಲಾಗಿದ್ದು, ಈ ಫೋನ್‌ ಅನ್ನು ನೀವು 26,99ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 34,999 ರೂ.ಗಳಾಗಿದೆ. ಆದರೆ 22 % ರಷ್ಟು ನೇರ ರಿಯಾಯಿತಿಯನ್ನು ನೀಡಲಾಗಿರುವುದರಿಂದ ಈ ಬೆಲೆ ಲಭ್ಯ. ಈ ಫೋನ್ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, 50 ಮೆಗಾಪಿಕ್ಸೆಲ್‌ ಒಳಗೊಂಡ ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಚಿಪ್‌ಸೆಟ್ ಬಲ ಪಡೆದಿದೆ.

ಮೊಟೊರೊಲಾದ ಈ ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ಮಟ್ಟದ ಆಫರ್!

ಮೊಟೊ G84 5G: ಈ ಫೋನ್‌ನ (Moto G84 5G) 12GB + 256GB ಇಂಟರ್‌ ಸ್ಟೋರೇಜ್‌ ಆಯ್ಕೆಗೆ 18,999 ರೂ.ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್‌ ಒಳಗೊಂಡ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹಾಗೂ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್‌ ಮಾಡಲಾಗಿದೆ.

ಮೊಟೊ G54 5G ಸ್ಮಾರ್ಟ್‌ಫೋನ್: ಈ ಫೋನ್ (Moto G54 5G smartphone) ಸಹ ಆಫರ್ ಬೆಲೆಗೆ ಲಭ್ಯ ಇದೆ. ಅಂದರೆ 8GB RAM+128GB ಮತ್ತು 12GB RAM + 256GB ಇಂಟರ್‌ ಸ್ಟೋರೇಜ್‌ನ ಫೋನ್‌ಗಳು ಕ್ರಮವಾಗಿ 13,999ರೂ. ಮತ್ತು 15,999ರೂ.ಗಳಿಗೆ ಲಭ್ಯ ಇವೆ. ಈ ಫೋನ್ 120Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ, ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಚಿಪ್‌ಸೆಟ್ ಬಲ ಪಡೆದುಕೊಂಡಿದೆ.

ಮೊಟೊರೊಲಾದ ಈ ಫೋನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ಮಟ್ಟದ ಆಫರ್!

ಇದರೊಂದಿಗೆ ಮೊಟೊ G14 ಮತ್ತು ಮೊಟೊ E13 (Moto G14, Moto E13) ನಂತಹ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲೂ ರಿಯಾಯಿತಿಗಳು ನೀಡಲಾಗಿದೆ. ಈ ಮೊಟೊದ G14 ಸ್ಮಾರ್ಟ್‌ಫೋನ್‌ನ 4GB RAM + 128GB ಇಂಟರ್ನಲ್ ಸ್ಟೋರೇಜ್ ಫೋನ್‌ಗೆ 8,499 ರೂ. ಗಳನ್ನು ನಿಗದಿ ಮಾಡಲಾಗಿದ್ದು, ಮೊಟೊ E13 ಸ್ಮಾರ್ಟ್‌ಫೋನ್‌ನ 8GB RAM + 128GB ಸ್ಟೋರೇಜ್ ಆಯ್ಕೆಗೆ 7,499 ರೂ.ಗಳನ್ನು ನಿಗದಿ ಮಾಡಲಾಗಿದೆ. ಇದರಿಂದ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

Best Mobiles in India

English summary
Flipkart Big Diwali Sale Offers on Motorola Edge 40 Neo, Motorola Edge 40 Smartphone, Moto G84 5G, Moto G54 5G Smartphone, Moto G14, Moto E13 Phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+