ಗೂಗಲ್ ಪಿಕ್ಸಲ್ 6a ಮತ್ತು ಐಫೋನ್ 13 ಗೆ ಲಭ್ಯವಿರುವ ಡಿಸ್ಕೌಂಟ್ ತಿಳಿದ್ರೆ, ಶಾಕ್ ಆಗ್ತೀರಾ!
ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ನಲ್ಲಿ 'ಬಿಗ್ ದೀಪಾವಳಿ ಸೇಲ್' (Big Diwali Sale) ಸದ್ಯ ಲೈವ್ ಇದೆ. ಈ ಸೇಲ್ ಕೆಲವೊಂದು ಆಯ್ದ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ದೊರೆಯಿದೆ. ಮುಖ್ಯವಾಗಿ ಗೂಗಲ್ ಪಿಕ್ಸಲ್ 6a ಮತ್ತು ಐಫೋನ್ 13 ಸ್ಮಾರ್ಟ್‌ಫೋನ್‌ಗಳು ಗಮನಾರ್ಹ ಡಿಸ್ಕೌಂಟ್ ಪಡೆದಿದ್ದು, ಶಾಪಿಂಗ್ ಪ್ರಿಯರನ್ನು ಹಿಂತಿರುಗಿ ನೋಡುವಂತೆ ಮಾಡಿದೆ.

ಹೌದು, ದೀಪಾವಳಿ ಪ್ರಯುಕ್ತ ಫ್ಲಿಪ್‌ಕಾರ್ಟ್ ಆಯೋಜಿಸಿರುವ 'ಬಿಗ್ ದೀಪಾವಳಿ ಸೇಲ್' (Big Diwali Sale) ಚಾಲ್ತಿ ಇದ್ದು, ಇದೇ ಅಕ್ಟೋಬರ್ 23 ರಂದು ಮುಕ್ತಾಯವಾಗಿದೆ. ಈ ಮಾರಾಟದಲ್ಲಿ ಗೂಗಲ್ ಸಂಸ್ಥೆಯ ಗೂಗಲ್ ಪಿಕ್ಸಲ್ 6a (Google Pixel 6a) ಹಾಗೂ ಆಪಲ್ ಐಫೋನ್ 13 (iPhone 13) ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್ ಕೊಡುಗೆ ಸೇರಿದಂತೆ ಕ್ರಮವಾಗಿ 17,299ರೂ. ಮತ್ತು 43,090ರೂ. ಗಳಲ್ಲಿ ಖರೀದಿಸಬಹುದಾಗಿದೆ.

ಆಪಲ್ ಐಫೋನ್ 13 59,990ರೂ. ಪ್ರೈಸ್‌ನಲ್ಲಿ ಕಾಣಿಸಿಕೊಂಡಿದ್ದು, 16,900ರೂ. ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆ ಲಭ್ಯವಾಗಲಿದ್ದು, 43,090ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅದೇ ರೀತಿ ಗೂಗಲ್ ಪಿಕ್ಸಲ್ 6a ಫೋನಿಗೂ 16,900ರೂ. ವರೆಗೂ ಎಕ್ಸ್‌ಚೇಂಜ್ ಕೊಡುಗೆ ಇದ್ದು, 17,299ರೂ. ಗಳಿಗೆ ಖರೀದಿಸಬಹುದು. ಹಾಗಾದರೇ ಈ ಎರಡು ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪಿಕ್ಸೆಲ್ 6a: ಡಿಸ್‌ಪ್ಲೇ ರಚನೆ
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಒಳಗೊಂಡ 6.1 ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಹೊಂದಿದೆ. ಇದು ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ಸ್ ಅನ್ನು ಹೊಂದಿದೆ.

ಪಿಕ್ಸೆಲ್ 6a: ಪ್ರೊಸೆಸರ್
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು ಟೈಟಾನ್ M2 ಸೆಕ್ಯುರಿಟಿ ಕೊಪ್ರೊಸೆಸರ್ ಹೊಂದಿದೆ. ಇದು ಮಾಲಿ G78 MP20 ಸಪೋರ್ಟ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಪ್ರೊಸೆಸರ್ ಗೂಗಲ್ ಪಿಕ್ಸೆಲ್ 6 ಮತ್ತು ಗೂಗಲ್ ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೂ ಕೂಡ ಪವರ್ ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.

ಪಿಕ್ಸೆಲ್ 6a: ಕ್ಯಾಮೆರಾ
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಮ್ಯಾಜಿಕ್ ಎರೇಸರ್ ಮತ್ತು ನೈಟ್‌ಸೈಟ್‌ನಂತಹ ಹಲವಾರು ಸಾಫ್ಟ್‌ವೇರ್ ಆಧಾರಿತ ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಪಿಕ್ಸೆಲ್ 6a: ಬ್ಯಾಟರಿ
ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ 4,306mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದು ಅಡಾಪ್ಟಿವ್ ಬ್ಯಾಟರಿಯಾಗಿದ್ದು, ಎಕ್ಸ್‌ಟ್ರೀಮ್ ಬ್ಯಾಟರಿ ಸೇವರ್ ಮೋಡ್‌ನಲ್ಲಿರುವಾಗ 24 ಗಂಟೆಗಳು ಮತ್ತು 72 ಗಂಟೆಗಳವರೆಗೆ ಬ್ಯಾಕ್‌ಅಪ್ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

ಐಫೋನ್ 13 ಫೋನ್ ಫೀಚರ್ಸ್
ಐಫೋನ್ 13 ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ.


Click it and Unblock the Notifications








