Flipkart: ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್: ಐಫೋನ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್!
ಫ್ಲಿಪ್‌ಕಾರ್ಟ್ (Flipkart) ಆಗಾಗ್ಗೆ ವಿಶೇಷವಾದ ಸೇಲ್‌ಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಲೇ ಇದ್ದು, ಇದೀಗ ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್ (Flipkart Big Dussehra Sale) ಆಯೋಜನೆ ಮಾಡಿದೆ. ಈ ಮೂಲಕ ಪ್ರೀಮಿಯಂ ಫೋನ್ ಸೇರಿದಂತೆ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಡಿಸ್ಕೌಂಟ್ ಅನ್ನು ಘೋಷಣೆ ಮಾಡಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್ ನಲ್ಲಿ ಐಫೋನ್ 14, ಸ್ಯಾಮ್‌ಸಂಗ್ ಗ್ಯಾಲಕ್ಸಿ F54, ಮೊಟೊರೊಲಾ ಎಡ್ಜ್ 40, ಪೊಕೊ C51 (iPhone 14, Samsung Galaxy F54, Motorola Edge 40, Poco C51) ಸೇರಿದಂತೆ ಇತರ ಸ್ಮಾರ್ಟ್‌ಫೋನ್‌ಗಳಲ್ಲಿ ಬೃಹತ್ ರಿಯಾಯಿತಿ ನೀಡಲಾಗಿದೆ. ಈ ವಿಶೇಷ ಸೇಲ್ ಅಕ್ಟೋಬರ್ 29 ರವರೆಗೆ ಇರುತ್ತದೆ. ಹಾಗಿದ್ರೆ, ಯಾವ ಫೋನ್‌ಗೆ ಏನೆಲ್ಲಾ ಆಫರ್ ಇದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್: ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ತನ್ನ ಸೈಟ್‌ನಲ್ಲಿ ದೀಪಾವಳಿಯ ಪೂರ್ವ ಮಾರಾಟದ ಈವೆಂಟ್ ಅನ್ನು ನಡೆಸಿದ ಕೆಲವೇ ದಿನಗಳಲ್ಲಿ ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್ ಅನ್ನು ಆರಂಭಿಸಿದೆ. ಅಮೆಜಾನ್ ಸಾಮಾನ್ಯವಾಗಿ ದೀಪಾವಳಿ ಸೇಲ್ ಒಂದು ತಿಂಗಳವರೆಗೆ ನಡೆಸುತ್ತದೆ. ಆದರೆ ಫ್ಲಿಪ್‌ಕಾರ್ಟ್ ದೀಪಾವಳಿಯ ಮೊದಲು ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಇದೇ ರೀತಿಯ ವ್ಯವಹಾರಗಳೊಂದಿಗೆ ವಿವಿಧ ಮಧ್ಯಂತರ ವಿಶೇಷ ಸೇಲ್ ಅನ್ನು ಆಯೋಜನೆ ಮಾಡುತ್ತದೆ.
ಈ ಸೇಲ್‌ನಲ್ಲಿ ಐಫೋನ್ 14 ಫೋನ್ ಅನ್ನು 56,999ರೂ.ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯ ಇದೆ. ಈ ಫೋನ್‌ನ ಮೂಲ ಬೆಲೆ 69,900ರೂ.ಗಳಾಗಿದೆ. ಇದರೊಂದಿಗೆ 10 % ಬ್ಯಾಂಕ್ ಕೊಡುಗೆಗಳೊಂದಿಗೆ ಇದನ್ನು ಖರೀದಿ ಮಾಡಬಹುದಾಗಿದ್ದು, ಇನ್ನೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟೆ ಅಲ್ಲದೆ ಭಾರತದಲ್ಲಿ 29,999 ರೂ.ಗಳಿಗೆ ಘೋಷಿಸಲಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ F54 ಫೋನ್ ಅನ್ನು 24,999ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿ ಮಾಡಬಹುದು.

ಇದರೊಂದಿಗೆ ಪಿಕ್ಸೆಲ್ 7a ಸ್ಮಾರ್ಟ್‌ಫೋನ್‌ಗೂ (Pixel 7a smartphone) ಭಾರೀ ರಿಯಾಯಿತಿ ನೀಡಲಾಗಿದೆ. ಜನರು ಇದನ್ನು ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್‌ನಲ್ಲಿ 35,999 ರೂಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ಬೆಲೆ 43,999ರೂ.ಗಳಾಗಿದೆ. ಈ ಮೂಲಕ ಖರೀದಿದಾರರು 8,000ರೂ. ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರೊಟ್ಟಿಗೆ ಮೊಟೊರೊಲಾ ಎಡ್ಜ್ 40 (Motorola Edge 40) ಅನ್ನು 26,999 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದ್ದು. ಮೊಟೊರೊಲಾ ಎಡ್ಜ್ 40 ನಿಯೋವನ್ನು 22,999ರೂ.ಗೆ ಹಾಗೂ ನಥಿಂಗ್ ಫೋನ್ (2) ಅನ್ನು 39,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಹಾಗೆಯೇ ಪೊಕೊ X5 ಪ್ರೊ (Poco X5 Pro) ಸ್ಮಾರ್ಟ್‌ಫೋನ್ ಅನ್ನು 18,499ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ರೆಡ್ಮಿ ನೋಟ್ 12 ಪ್ರೊ (Redmi Note 12 Pro) ಫೋನ್ 21,999 ರೂಗಳಲ್ಲಿ ಖರೀದಿಗೆ ಲಭ್ಯ ಇದೆ. ಅಷ್ಟೇ ಅಲ್ಲದೆ 10,000ಕ್ಕಿಂತ ಕಡಿಮೆ ಬಜೆಟ್ ಹೊಂದಿರುವವರು ಪೊಕೊ C51 (Poco C51) ಅನ್ನು ಈ ವೇಳೆ ಅಗ್ಗದ ಬೆಲೆಗೆ ಖರೀದಿ ಮಾಡಬಹುದು. ಅಂದರೆ ಈ ಫೋನ್ 5,999 ರೂಗಳಿಗೆ ಲಭ್ಯವಿದೆ. ಈ ಬಜೆಟ್ ಫೋನ್ ಆರಂಭದಲ್ಲಿ 8,499ರೂ.ಗೆ ಖರೀದಿಗೆ ಲಭ್ಯ ಇತ್ತು.

ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಈಗಾಗಲೇ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳಿಗೂ ಬಹಳಷ್ಟು ಡಿಸ್ಕೌಂಟ್ ನೀಡಲಾಗಿದ್ದು, ಇದರಿಂದ ಗ್ರಾಹಕರು ಅವರ ಅನುಕೂಲಕ್ಕೆ ತಕ್ಕಂತ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಅಂದರೆ ಪಿಕ್ಸೆಲ್ 7a (Pixel 7a) ಉತ್ತಮ ಕ್ಯಾಮರಾ ಕಾರ್ಯಕ್ಷಮತೆಯನ್ನು ಬಯಸುವವರಿಗೆ ಯೋಗ್ಯವಾದ ಫೋನ್ ಆಗಿದೆ. ಜೊತೆಗೆ ಮೊಟೊರೊಲಾ ಎಡ್ಜ್ 40 ತನ್ನ ಬೆಲೆ ಶ್ರೇಣಿಯಲ್ಲಿ ಉತ್ತಮ ವಿನ್ಯಾಸ ಮತ್ತು ವಿಶೇಷತೆಯೊಂದಿಗೆ ಆಲ್ ರೌಂಡರ್ ಫೋನ್ ಆಗಿದೆ. ಸ್ಯಾಮ್‌ಸಂಗ್ ಮತ್ತು ಐಫೋನ್ ಅಭಿಮಾನಿಗಳು ತಮ್ಮ ನೆಚ್ಚಿನ ಫೋನ್ ಅನ್ನು ಈ ವೇಳೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








